ಧರ್ಮಸ್ಥಳ ಟಾರ್ಗೆಟ್, ಸ್ಯಾಟಲೈಟ್ ಫೋನ್ ವದಂತಿಗೆ ಎಸ್ಪಿ ಸ್ಪಷ್ಟನೆ ; ಅಂತದ್ದೇನೂ ಇಲ್ಲಾರೀ, ಆನೆ ಓಡಿಸಲು ಗ್ರಾಮಸ್ಥರು ಪಟಾಕಿ ಇಟ್ಟಿದ್ರು ಅಷ್ಟೇ !

27-11-22 04:45 pm       Mangalore Correspondent   ಕರಾವಳಿ

ಧರ್ಮಸ್ಥಳ ಟಾರ್ಗೆಟ್, ಅಲ್ಲೇ ಸನಿಹದಲ್ಲಿ ಸ್ಯಾಟಲೈಟ್ ಫೋನ್ ರಿಂಗ್ ಅನ್ನೋ ರಂಗು ರಂಗಾದ ಸುದ್ದಿ ಕೇಳಿ ಪೊಲೀಸರೇ ಬೆರಗಾಗಿದ್ದಾರೆ. ಅದೇನೂ ಇಲ್ಲಾರೀ, ಸುಮ್ನೆ ಅಂತ ಸ್ವತಃ ದಕ್ಷಿಣ ಕನ್ನಡ ಎಸ್ಪಿ ಸಾಹೇಬ್ರೆ ಹಲುಬಿದ್ದಾರೆ.

ಮಂಗಳೂರು, ನ.27: ಧರ್ಮಸ್ಥಳ ಟಾರ್ಗೆಟ್, ಅಲ್ಲೇ ಸನಿಹದಲ್ಲಿ ಸ್ಯಾಟಲೈಟ್ ಫೋನ್ ರಿಂಗ್ ಅನ್ನೋ ರಂಗು ರಂಗಾದ ಸುದ್ದಿ ಕೇಳಿ ಪೊಲೀಸರೇ ಬೆರಗಾಗಿದ್ದಾರೆ. ಅದೇನೂ ಇಲ್ಲಾರೀ, ಸುಮ್ನೆ ಅಂತ ಸ್ವತಃ ದಕ್ಷಿಣ ಕನ್ನಡ ಎಸ್ಪಿ ಸಾಹೇಬ್ರೆ ಹಲುಬಿದ್ದಾರೆ.

ಹೌದು.. ಪುಣ್ಯಕ್ಷೇತ್ರ ಧರ್ಮಸ್ಥಳ ಉಗ್ರರ ಟಾರ್ಗೆಟ್ ಎಂಬ ಟಿವಿ ಸುದ್ದಿ ಕೇಳಿದ ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ ಸೋವವಾಣೆ ಸ್ಪಷ್ಟನೆ ಕೊಟ್ಟಿದ್ದಾರೆ. ಧರ್ಮಸ್ಥಳ ಠಾಣೆಯ ವ್ಯಾಪ್ತಿಯಲ್ಲಿ ಯಾವುದೇ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವ ಬಗ್ಗೆ ಯಾವುದೇ ಮಾಹಿತಿ ನಮಗಿಲ್ಲ. ಅದೇ ರೀತಿ ಧರ್ಮಸ್ಥಳ ಉಗ್ರರ ಟಾರ್ಗೆಟ್ ಅನ್ನೋದು ಕೂಡ ನಮಗೆ ತಿಳಿಯದ ಮಾಹಿತಿ. ನಮಗೆ ಯಾವುದೇ ಅಧಿಕೃತ ಏಜನ್ಸಿಗಳಿಂದ ಅಂತಹ ಸುದ್ದಿ ಬಂದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Explosion Cartoon png download - 2152*1614 - Free Transparent Bomb png  Download. - CleanPNG / KissPNG

Dharmasthala Sri Manjunatha Swamy Temple | Famous temple in india

ಕಕ್ಕಿಂಜೆ ಭಾಗದಲ್ಲಿ ಸ್ಯಾಟಲೈಟ್ ಫೋನ್ ರಿಂಗ್, ಬ್ಲಾಸ್ಟ್ ಆಗಿರುವ ಸದ್ದು ಕೇಳಿದೆ ಎಂಬ ವದಂತಿಗಳಿಗೆ ಪಟಾಕಿ ಕಾರಣ ಇದ್ದಿರಬಹುದು ಎಂದು ಎಸ್ಪಿ ಸೋನವಾಣೆ ಹೇಳಿದ್ದಾರೆ. ಆ ಭಾಗದಲ್ಲಿ ಕಾಡಾನೆ ಓಡಿಸಲು ಸ್ಥಳೀಯರು ಪಟಾಕಿ ಸಿಡಿಸುತ್ತಾರೆ. ಅದರಿಂದ ಹೊಗೆ ಎದ್ದಿರುವ ಸಾಧ್ಯತೆಯಿದೆ. ಅದನ್ನು ಬಾಂಬ್ ಸ್ಫೋಟದ ಟ್ರಯಲ್ ಎನ್ನುವ ರೀತಿ ಬಿಂಬಿಸಬೇಡಿ ಎಂದು ಹೇಳಿದ್ದಾರೆ.

Kadri Manjunath Temple - Wikipedia

ಎರಡು ದಿನಗಳ ಹಿಂದೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎನ್ನುವ ಅಪರಿಚಿತ ಹೆಸರಿನಲ್ಲಿ ನಾವೇ ಬಾಂಬ್ ಸ್ಫೋಟಿಸಿದ್ದಾಗಿ ಕರಪತ್ರ ವೈರಲ್ ಆಗಿತ್ತು. ಅದರಲ್ಲಿ ಕದ್ರಿ ದೇವಸ್ಥಾನ ಟಾರ್ಗೆಟ್ ಇತ್ತು ಎಂಬುದಾಗಿ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದವು. ಆನಂತರ, ಸ್ಯಾಟಲೈಟ್ ಫೋನ್ ರಿಂಗ್ ಆಗಿರುವುದು ಮತ್ತು ಅದು ಉಗ್ರರ ಜಾಡು ಅನ್ನುವ ಸುದ್ದಿಗಳು ಹಬ್ಬಿದ್ದವು. ಉಡುಪಿ ಕೃಷ್ಣ ಮಠ, ಮಂದಾರ್ತಿ ದೇವಸ್ಥಾನ, ಆನಂತರ ಧರ್ಮಸ್ಥಳ ಟಾರ್ಗೆಟ್ ಅನ್ನುವ ಸುದ್ದಿಗಳೂ ಕೇಳಿಬಂದಿದ್ದವು. ಇದೀಗ ಇವೆಲ್ಲ ಸುದ್ದಿಗಳ ಹಿನ್ನೆಲೆಯಲ್ಲಿ ಜನರು ಗೊಂದಲಕ್ಕೆ ಒಳಗಾಗಬಾರದು ಅನ್ನುವ ದೃಷ್ಟಿಯಿಂದ ಎಸ್ಪಿ ಸೋನವಾಣೆ, ಧರ್ಮಸ್ಥಳದಲ್ಲಿ ಅಂತಹ ಯಾವುದೇ ಸಂಶಯಾಸ್ಪದ ನಡೆಗಳು ಕಂಡುಬಂದಿಲ್ಲ ಎಂದು ಹೇಳಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Mangalore Satellite phone signals and bomb blast trail at Dharmasthala, SP Says it was crackers to avoid elephants. No trail bomb blast was made nor satellite phone signals have been detected near Dharmasthala forest range clarifies SP.