ಡಿ.1ರಿಂದ ಸುರತ್ಕಲ್ ಟೋಲ್ ತೆರವು ; ದ.ಕ. ಜಿಲ್ಲಾಧಿಕಾರಿ ಅಧಿಕೃತ ಆದೇಶ, ಹೆಜಮಾಡಿಯಲ್ಲಿ ಡಬಲ್ ಶುಲ್ಕದ ಬಗ್ಗೆ ಮೌನ!

28-11-22 10:21 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ಕಡೆಗೂ ಅಲ್ಲಿಂದ ತೆರವುಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಅದರಂತೆ, ಡಿ.1ರ ಬಳಿಕ ಸುರತ್ಕಲ್ ಟೋಲ್ ಅಲ್ಲಿ ಇರುವುದಿಲ್ಲ.

ಮಂಗಳೂರು, ನ.28: ಸುರತ್ಕಲ್ ಟೋಲ್ ಗೇಟ್ ಕಡೆಗೂ ಅಲ್ಲಿಂದ ತೆರವುಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಅದರಂತೆ, ಡಿ.1ರ ಬಳಿಕ ಸುರತ್ಕಲ್ ಟೋಲ್ ಅಲ್ಲಿ ಇರುವುದಿಲ್ಲ. ಬದಲಿಗೆ, ಹೆಜಮಾಡಿಯ ಟೋಲ್ ಗೇಟ್ ನಲ್ಲಿ ವಿಲೀನಗೊಳ್ಳಲಿದ್ದು ಅಲ್ಲಿನ ಶುಲ್ಕ ಡಬಲ್ ಗಿಂತಲೂ ಹೆಚ್ಚಾಗಲಿದೆ.  

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೋಟಿಫಿಕೇಶನ್ ಆಧರಿಸಿ ಜಿಲ್ಲಾಡಳಿತ ವಿಲೀನ ಮತ್ತು ಸುರತ್ಕಲ್ ಟೋಲ್ ಗೇಟ್ ತೆರವಿನ ಬಗ್ಗೆ ಆದೇಶ ಹೊರಡಿಸಿದೆ. ಅಲ್ಲದೆ, ಹೆದ್ದಾರಿ ಪ್ರಾಧಿಕಾರದ ನೋಟಿಫಿಕೇಶನ್ ರೀತಿಯಲ್ಲೇ ಹೆಜಮಾಡಿಯಲ್ಲಿ ಸುರತ್ಕಲ್ ಟೋಲನ್ನು ಪಡೆಯುವಂತೆ ನವಯುಗ ಸಂಸ್ಥೆಗೆ ಸೂಚನೆ ನೀಡಿದ್ದಾರೆ. ಇದಲ್ಲದೆ, ಹೆದ್ದಾರಿ ಪ್ರಾಧಿಕಾರದ ಕೋರಿಕೆಯಂತೆ ಹೆಜಮಾಡಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸುವುದಕ್ಕೂ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

Surathkal Toll Plaza Charges & Contact Details - travelfare.in

ಸುರತ್ಕಲ್ ಟೋಲ್ ಗೇಟ್ ತೆರವಿಗಾಗಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನಾ ಧರಣಿ ನಡೆಯುತ್ತಿದೆ. ಕಳೆದ ಅ.28ರಂದು ಟೋಲ್ ಗೇಟ್ ಗೆ ಮುತ್ತಿಗೆ ಹಾಕಿ ಭಾರೀ ಪ್ರತಿಭಟನೆ ನಡೆದಿತ್ತು. ಪೊಲೀಸರ ಸರ್ಪಗಾವಲು ಮಧ್ಯೆಯೂ ಟೋಲ್ ಗೇಟನ್ನು ಬಲವಂತದಿಂದ ತೆರವು ಮಾಡಲು ಜನರು ಯತ್ನಿಸಿದ್ದರು. ಬಳಿಕ ಪೊಲೀಸರು ಸೇರಿದ್ದ ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರನ್ನು ಬಂಧಿಸಿದ್ದರು. ಆನಂತರ, ಸ್ಥಳದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗಿದ್ದು ಒಂದು ತಿಂಗಳನ್ನು ಪೂರೈಸಿದೆ. ಈ ನಡುವೆ ಶಾಸಕರು, ಸಂಸದರು ಸುರತ್ಕಲ್ ಟೋಲ್ ತೆರವುಗೊಳಿಸುವ ಬಗ್ಗೆ ಹೇಳಿಕೆ ನೀಡಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ವಿಲೀನಗೊಳಿಸಿ ಆದೇಶ ಹೊರಡಿಸಿದ್ದರು. ಇದರಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳಿಗೆ ತೀವ್ರ ಮುಖಭಂಗ ಆಗಿತ್ತು.

ಇದೀಗ ಹೆದ್ದಾರಿ ಪ್ರಾಧಿಕಾರದ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಹೆಜಮಾಡಿಯಲ್ಲಿ ಟೋಲ್ ಡಬಲ್ ಸಂಗ್ರಹ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನಾ ಧರಣಿ ಅಲ್ಲಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.

Mangalore DC orders for removal of the illegal Surathkal toll, double collection at Hejamady toll. But DC has not clarified anything about the double toll that will be collected at Hejamady hereafter.