ಬ್ರೇಕಿಂಗ್ ನ್ಯೂಸ್
29-11-22 04:36 pm Mangalore Correspondent ಕರಾವಳಿ
ಮಂಗಳೂರು, ನ.29: ಬಾಂಬ್ ಸ್ಫೋಟದ ನೆಪದಲ್ಲಿ ಇಲ್ಲಸಲ್ಲದ ಸುದ್ದಿ ಹಬ್ಬಿಸುವುದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಸುದ್ದಿ ವಾಹಿನಿ, ಪತ್ರಿಕೆ, ವಾಟ್ಸಪ್, ಫೇಸ್ಬುಕ್ ಗಳಲ್ಲಿ ವದಂತಿ ರೀತಿಯ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಪ್ರಕರಣದ ಬಗ್ಗೆ ಪೊಲೀಸ್ ಕಮಿಷನರ್ ಅಥವಾ ಇನ್ನಾವುದೇ ಅಧಿಕೃತ ವ್ಯಕ್ತಿ ಹೇಳದ ಹೊರತು ಅರೆಬರೆ ಸುದ್ದಿಗಳನ್ನು ಹಬ್ಬಿಸುವುದು ಎಷ್ಟು ಸರಿ. ಇದರ ಬಗ್ಗೆ ಜಿಲ್ಲಾಡಳಿತ, ರಾಜ್ಯ ಸರಕಾರ ಕ್ರಮ ಕೈಗೊಳ್ಳದೇ ಇರುವುದು ಏನನ್ನು ಸೂಚಿಸುತ್ತದೆ. ಹಾಗಾಗಿ ಜನರು ಸುದ್ದಿ ಮಾಧ್ಯಮಗಳನ್ನು ನಂಬದ ಸ್ಥಿತಿ ಬಂದಿದೆ ಎಂದು ಮಾಜಿ ಶಾಸಕ ಜೆ.ಆರ್ ಲೋಬೊ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಯಾವುದೇ ವ್ಯಕ್ತಿ ಬಾಂಬ್ ಸ್ಫೋಟ ನಡೆಸಿದರೂ, ಆತನ ಸಮುದಾಯವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಸಮಾಜದ್ರೋಹಿ ಕೃತ್ಯವನ್ನು ಹಿಂದು, ಮುಸ್ಲಿಂ, ಕ್ರಿಸ್ತಿಯನ್ ಎಲ್ಲರೂ ಮಾಡುತ್ತಾರೆ. ಯಾವುದೇ ಒಂದು ಸಮುದಾಯದವರು ಮಾಡುವುದಲ್ಲ. ಆದರೆ ಮೊಹಮ್ಮದ್ ಶಾರೀಕ್ ಬಗ್ಗೆ ದಿನಕ್ಕೊಂದು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ದಿನಕ್ಕೊಂದು ದೇವಸ್ಥಾನ ಟಾರ್ಗೆಟ್, ಸ್ಯಾಟಲೈಟ್ ಫೋನ್, ಇನ್ನೊಂದು ಟಾರ್ಗೆಟ್ ಅಂತ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈಮೂಲಕ ಜನರಲ್ಲಿ ಭಯ ತುಂಬುವ ಕೆಲಸ ಆಗುತ್ತಿದೆ. ಈ ಬಗ್ಗೆ ಪೊಲೀಸ್ ಕಮಿಷನರಲ್ಲಿ ಕೇಳಿದರೆ ನಾವು ಯಾವುದೇ ಮಾಹಿತಿ ನೀಡಿಲ್ಲ ಅಂತಾರೆ. ಹಾಗಿದ್ದರೆ, ಇಲ್ಲಿ ಪುಕಾರು ಹಬ್ಬಿಸುವ ಕೆಲಸ ಮಾಡುತ್ತಿರುವುದು ಯಾರು ಎಂದು ಪ್ರಶ್ನೆ ಮಾಡಿದರು.
ಮೊಹಮ್ಮದ್ ಶಾರೀಕ್ ಎರಡು ವರ್ಷಗಳ ಹಿಂದೆ ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿಬಿದ್ದಾಗ ಗೂಂಡಾ ಕಾಯ್ದೆ ಹೇರಿ ಒಳಗೆ ತಳ್ಳುತ್ತಿದ್ದರೆ ಬಾಂಬ್ ಸ್ಫೋಟ ಆಗುತ್ತಿರಲಿಲ್ಲ. ಯಾರ್ಯಾರನ್ನೋ ಗೂಂಡಾ ಕಾಯ್ದೆಯಲ್ಲಿ ಜೈಲಿಗೆ ತಳ್ಳುತ್ತಾರೆ, ಮೊನ್ನೆ ಹೆಣ್ಣಿನ ಫೋಟೊಗೆ ಚಿರತೆಯ ಮುಖ ಹಾಕಿದ್ದಕ್ಕೆ ಒಬ್ಬರನ್ನು ಬಂಧನ ಮಾಡಿದ್ದರು. ಈಗ ವಾಟ್ಸಪ್ ಸೇರಿ ಸುದ್ದಿ ಮಾಧ್ಯಮಗಳಲ್ಲಿ ಸಮಾಜದ ಸ್ವಾಸ್ಥ್ಯ ಕದಡುವ ಸುದ್ದಿಗಳನ್ನು ಪ್ರಸಾರ ಮಾಡಿದಾಗ ಏಕ್ಷನ್ ತಗೊಳ್ಳಲು ಸಾಧ್ಯವಿಲ್ಲವೇ.. ಇಂತಹ ಬೆಳವಣಿಗೆಯ ಕಾರಣ ಮಂಗಳೂರಿನ ಸಾಮಾಜಿಕ ಸ್ಥಿತಿ ಹಾಳಾಗುತ್ತಿದೆ. ಮಂಗಳೂರಿಗೆ ಹೂಡಿಕೆ ಮಾಡಲು ಯಾವುದೇ ಕಂಪನಿಗಳು ಬರುತ್ತಿಲ್ಲ. ಇದರಿಂದಾಗಿ ಜನರ ಆರ್ಥಿಕ ಸ್ಥಿತಿಗೆ ಪೆಟ್ಟು ಬೀಳುತ್ತಿದೆ.
ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಕಂಪನಿಗಳು ಹೂಡಿಕೆಗೆ ಮುಂದೆ ಬಂದಿವೆ. ಯಾಕೆ ಕಂಪನಿಗಳು ಹೂಡಿಕೆಗೆ ಮುಂದಾಗುತ್ತಿಲ್ಲ ಎನ್ನುವ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು. ಕಾಲೇಜಿನ ಪ್ರೊಫೆಸರ್ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ಹೇಳುವುದಾದರೆ ಇಲ್ಲಿನ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ. ಯಾಕೆ ಆ ಪ್ರೊಫೆಸರ್ ವಿರುದ್ಧ ಸರಕಾರ ಕ್ರಮ ಕೈಗೊಂಡಿಲ್ಲ. ಮೊನ್ನೆ ನಂತೂರಿನಲ್ಲಿ ಕ್ಲಾಸ್ ಮೇಟ್ ಜೊತೆಗೆ ಕುಳಿತಿದ್ದ ಯುವಕನಿಗೆ ಗುಂಪು ಸೇರಿ ಹಲ್ಲೆ ನಡೆಸಿದ್ದಾರೆ. ಇದು ಯಾವ ರೀತಿಯ ಹಿಂಸೆಯ ನಡೆ. ಕಾಲೇಜು ಹುಡುಗ- ಹುಡುಗಿಯರು ಜೊತೆಗೆ ಕುಳಿತು ಪ್ರಯಾಣಿಸುವುದೇ ತಪ್ಪಾಗುತ್ತಾ.. ಎಂದು ಪ್ರಶ್ನೆ ಮಾಡಿದರು.
ಸಮಾಜದ ಸ್ವಾಸ್ಥ್ಯ ಹಾಳುಗೆಡಹುವ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ಕರಾವಳಿ ಮುಂದೊಂದು ದಿನ ಮರುಭೂಮಿ ಆದೀತು ಎಂದು ಹೇಳಿದ ಲೋಬೊ, ನಮಗೆ ಈ ಸರಕಾರದ ಮೇಲೆ, ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಪತ್ರಿಕೆ, ಸುದ್ದಿ ಮಾಧ್ಯಮಗಳ ಸುದ್ದಿಯನ್ನು ಜನರಿಗೆ ಸಂಶಯಾಸ್ಪದ ಎಂದು ಕಂಡರೆ ನಂಬುವುದು ಬೇಡ. ಅದರ ಬಗ್ಗೆ ಜನರು ತಲೆಕೆಡಿಸಿಕೊಳ್ಳುವುದು ಬೇಡ. ಯಾರದ್ದೋ ಟಿಆರ್ ಪಿ ಜಾಸ್ತಿ ಮಾಡಲು, ಪತ್ರಿಕೆಯ ಪ್ರಚಾರಕ್ಕಾಗಿ ಇಂಥದ್ದು ಮಾಡುತ್ತಾರಂದ್ರೆ ಅವನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಬಿಜೆಪಿಯವರಿಗೆ ಒಂದು ಸಮುದಾಯವನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟುವುದು ಚಟ. ಚುನಾವಣೆ ಕಾಲದಲ್ಲಿ ಇಂಥಹದ್ದು ಜಾಸ್ತಿಯಾಗುತ್ತದೆ.
ಉತ್ತರ ಕನ್ನಡದ ಪರೇಶ್ ಮೇಸ್ತ ಪ್ರಕರಣದಲ್ಲಿ ಬಿಜೆಪಿಯವರು ಯಾವ ರೀತಿ ನಡೆದುಕೊಂಡಿದ್ದರು, ಆನಂತರ ಸುರತ್ಕಲ್, ಬಂಟ್ವಾಳದಲ್ಲಿ ಕೊಲೆಯಾದ ಸಂದರ್ಭದಲ್ಲಿ ಬಿಜೆಪಿ ನಾಯಕರು ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನುವುದು ನಮಗೆ ಗೊತ್ತಿದೆ. ಆದರೆ ಪರೇಶ್ ಮೇಸ್ತ ಪ್ರಕರಣದಲ್ಲಿ ಸಿಬಿಐ ತನಿಖಾ ಸಂಸ್ಥೆ ಸಹಜ ಸಾವು ಅನ್ನುವ ವರದಿ ಕೊಟ್ಟಿರುವುದು ಬಿಜೆಪಿಯ ಮನಸ್ಥಿತಿಗೆ ನೀಡಿದ ತಪರಾಕಿ. ಬಿಜೆಪಿಯ ಈ ರೀತಿಯ ನಡೆಗಳೇ ಜನರಲ್ಲಿ ಭ್ರಮನಿರಸನ ಉಂಟು ಮಾಡಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಳ್ಳಿಗೆ ತಾರನಾಥ ಶೆಟ್ಟಿ, ಶಶಿಧರ ಹೆಗ್ಡೆ, ಸಂತೋಷ್ ಶೆಟ್ಟಿ, ಸುಧೀರ್ ಟಿಕೆ, ಶಾಲೆಟ್ ಪಿಂಟೋ, ಅಪ್ಪಿ ಮತ್ತಿತರರಿದ್ದರು.
Spreading fake news on the pretext of bomb blast will damage the health of the society. Rumor-like news is being spread on news channel, newspaper, WhatsApp, Facebook. It is okay to spread half-written news unless the Commissioner of Police or any other official person tells about the case. What does it indicate that the district administration and the state government are not taking action in this regard. Former MLA J.R. Lobo said that people do not trust the news media.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm