ಮುಸ್ಲಿಂ ಕಾಲೇಜು ; ಹಿಂದುಗಳಿಗೆ ಶಿಕ್ಷಣ ಸಂಸ್ಥೆ ತೆರೆಯಲು ಅವಕಾಶ ಕೊಡುತ್ತಾರೆಯೇ ? ಹಿಂದು ಮಹಾಸಭಾ ಪ್ರಶ್ನೆ

30-11-22 09:54 pm       Mangalore Correspondent   ಕರಾವಳಿ

ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ವಿದ್ಯಾಸಂಸ್ಥೆಗಳನ್ನು ತೆರೆಯಲು ಅವಕಾಶ ಕೊಟ್ಟು ಅವುಗಳಿಗೆ ಅನುದಾನ ಒದಗಿಸಲು ಮುಂದಾಗುವ ಮೂಲಕ ಬಿ.ಜೆ.ಪಿ. ತನ್ನ ಅಸಲಿ ಮುಖವನ್ನು ಬಯಲು ಮಾಡಿಕೊಂಡಿದೆ ಎಂದು ಹಿಂದು ಮಹಾಸಭಾದ ಕರ್ನಾಟಕ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಲೇವಡಿ ಮಾಡಿದ್ದಾರೆ. 

ಮಂಗಳೂರು, ನ.30: ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ವಿದ್ಯಾಸಂಸ್ಥೆಗಳನ್ನು ತೆರೆಯಲು ಅವಕಾಶ ಕೊಟ್ಟು ಅವುಗಳಿಗೆ ಅನುದಾನ ಒದಗಿಸಲು ಮುಂದಾಗುವ ಮೂಲಕ ಬಿ.ಜೆ.ಪಿ. ತನ್ನ ಅಸಲಿ ಮುಖವನ್ನು ಬಯಲು ಮಾಡಿಕೊಂಡಿದೆ ಎಂದು ಹಿಂದು ಮಹಾಸಭಾದ ಕರ್ನಾಟಕ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಲೇವಡಿ ಮಾಡಿದ್ದಾರೆ. 

ರಾಜ್ಯದ ಬಿಜೆಪಿ ಸರಕಾರ ಮುಸ್ಲಿಂ ವಿದ್ಯಾರ್ಥಿಗಳಿಗಾಗಿಯೇ ವಿದ್ಯಾಸಂಸ್ಥೆ ತೆರೆಯಲು ಮುಂದಾಗಿರುವಾಗ ಹಿಂದೂಗಳಿಗೆಂದೇ ಯಾಕೆ ಪ್ರತ್ಯೇಕ ವಿದ್ಯಾಸಂಸ್ಥೆ ತೆರೆಯಬಾರದು ಎಂದು ಪವಿತ್ರನ್ ಪ್ರಶ್ನೆ ಮಾಡಿದ್ದಾರೆ. ಈ ದೇಶದಲ್ಲಿ ಹಿಂದುಗಳಿಗೆ ಪ್ರತ್ಯೇಕ ಶಿಕ್ಷಣ ಸಂಸ್ಥೆ ತೆರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ಹಿಂದುಗಳ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಹಿಂದುಗಳ ಶಿಕ್ಷಣ ಸಂಸ್ಥೆ ತೆರೆಯುವ ಯಾವುದೇ ಗೋಜಿಗೆ ಹೋಗಿಲ್ಲ. ಹಿಂದೆ ಇದ್ದ ಗುರುಕುಲ ಪದ್ಧತಿ ಪ್ರಕಾರದ ಶಿಕ್ಷಣಕ್ಕೆ ಇವರು ಅನುಮತಿ ಕೊಡಲ್ಲ. ಆದರೆ ಮುಸ್ಲಿಮರಿಗೆ ಪ್ರತ್ಯೇಕ ಶಿಕ್ಷಣ ಸಂಸ್ಥೆ ತೆರೆಯಲು ಅನುದಾನ ಕೊಡುತ್ತದೆ. ರಾಜ್ಯದಲ್ಲಿ ಪ್ರತಿ ಶಿಕ್ಷಣ ಸಂಸ್ಥೆಗೆ ತಲಾ ಎರಡೂವರೆ ಕೋಟಿ ಅಂದರೆ ಹತ್ತಯ ಸಂಸ್ಥೆಗಳಿಗೆ ಸುಮಾರು 30 ಕೋಟಿ ರೂ. ಅನುದಾನ ಕೊಡಲು ಮುಂದಾಗಿದೆ. ಇದನ್ನು ಖಂಡಿಸುತ್ತೇನೆ. ಬಿಜೆಪಿ ಚುನಾವಣೆ ಕಾಲದಲ್ಲಿ ಮುಸ್ಲಿಮರ ಓಲೈಕೆಗೆ ತೊಡಗಿರುವುದನ್ನು ತೋರಿಸಿದೆ ಎಂದಿದ್ದಾರೆ. 

No hijab demand for years, PFI movement part of larger conspiracy, SC told  | India News,The Indian Express

ಈ ರೀತಿ ಮಾಡಿದರೆ ಹಿಜಾಬ್ ವಿರುದ್ಧ ಮಾಡಿದ ಹೋರಾಟಕ್ಕೆ ಏನು ಬೆಲೆ ಬಂದಂತಾಯಿತು, ಇದು ಹಿಂದೂ ವಿರೋಧಿ ನೀತಿಯಲ್ಲವೇ, ಈ ಕೆಲಸವನ್ನು ಕಾಂಗ್ರೆಸ್ ಅಥವಾ ಬೇರೆ ಯಾವುದೇ ಪಕ್ಷದವರು ಮಾಡಿದ್ದರೆ ಬಿ.ಜೆ.ಪಿ. ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿರಲಿಲ್ಲವೇ ಎಂದು ಸರಣಿ ಪ್ರಶ್ನೆಗಳನ್ನು ಪವಿತ್ರನ್ ಕೇಳಿದ್ದಾರೆ. 

Gujarat's Maldhari community calls for boycotting BJP in upcoming polls -  India Today

ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ರಾಜ್ಯಾಧ್ಯಕ್ಷ ಪವಿತ್ರನ್, ಇಂತಹ ಬೇಜವಾಬ್ದಾರಿ ನಿಲುವನ್ನು ತೋರಿಸುತ್ತಿರುವ ಬಿಜೆಪಿ ಬೋಗಸ್ ಜನರ ಪಕ್ಷವಾಗಿದೆ‌ ಎನ್ನುವುದನ್ನು ತೋರಿಸಿದೆ. ಹಿಂದೆ ಭ್ರಷ್ಟ ಜನರ ಪಕ್ಷವಾಗಿತ್ತು. ಈಗ ಬೋಗಸ್ ಜನರ ಪಕ್ಷವಾಗಿದೆ ಎಂದು ಜರೆದಿದ್ದಾರೆ.

The BHARATIYA Janata Party (BJP) has decided to open separate educational institutions for the Muslim community and provide them with grants. Hindu Mahasabha's Karnataka state president Rajesh Pavithran said the party has exposed its true face.