ಮಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಕೇರಳ ಲಿಂಕ್ ; ಡ್ರಗ್ಸ್, ಗೋಲ್ಡ್ ಸ್ಮಗ್ಲಿಂಗ್ ಜಾಲದಿಂದ ಹಣಕಾಸು ನೆರವು

01-12-22 01:32 pm       Mangalore Correspondent   ಕರಾವಳಿ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಮಂಗಳೂರು ಪೊಲೀಸರು ಎನ್ಐಎ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ, ಆರೋಪಿ ಮೊಹಮ್ಮದ್ ಶಾರೀಕ್ ಗೆ ಕೇರಳ ಕನೆಕ್ಷನ್ ಇರುವ ಬಗ್ಗೆ ಪ್ರಬಲ ಶಂಕೆ ಮೂಡಿದ್ದು, ಎನ್ಐಎ ಅಧಿಕಾರಿಗಳು ತನಿಖೆಯನ್ನು ಕೇರಳಕ್ಕೆ ವಿಸ್ತರಿಸಿದ್ದಾರೆ.

ಮಂಗಳೂರು, ಡಿ.1: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಮಂಗಳೂರು ಪೊಲೀಸರು ಎನ್ಐಎ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ, ಆರೋಪಿ ಮೊಹಮ್ಮದ್ ಶಾರೀಕ್ ಗೆ ಕೇರಳ ಕನೆಕ್ಷನ್ ಇರುವ ಬಗ್ಗೆ ಪ್ರಬಲ ಶಂಕೆ ಮೂಡಿದ್ದು, ಎನ್ಐಎ ಅಧಿಕಾರಿಗಳು ತನಿಖೆಯನ್ನು ಕೇರಳಕ್ಕೆ ವಿಸ್ತರಿಸಿದ್ದಾರೆ.

ಎನ್ಐಎ ಕೊಚ್ಚಿ ಘಟಕದ ಅಧಿಕಾರಿಗಳು ಮಂಗಳೂರು ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಕೇರಳದಲ್ಲಿ ತನಿಖೆ ನಡೆಸುತ್ತಿದ್ದಾರೆಂಬ ಮಾಹಿತಿಗಳಿವೆ. ಮೊಹಮ್ಮದ್ ಶಾರೀಕ್ ಮೈಸೂರಿಗೆ ಬರುವುದಕ್ಕೂ ಮುನ್ನ ಕೇರಳದ ಕೊಚ್ಚಿ ಬಳಿಯ ಆಲುವಾದಲ್ಲಿ ನೆಲೆಸಿದ್ದ. ಅಲ್ಲಿದ್ದಾಗಲೇ ದಕ್ಷಿಣ ಭಾರತದ ವಿವಿಧ ಕಡೆಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಲಾಗಿತ್ತು. ಕೊಯಮತ್ತೂರು, ಮಂಗಳೂರು, ಹುಬ್ಬಳ್ಳಿ ಹೀಗೆ ಎರಡನೇ ಹಂತದ ನಗರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ಹಾಕಲಾಗಿತ್ತು ಎನ್ನುವ ಮಾಹಿತಿಗಳಿವೆ. ಮೊಹಮ್ಮದ್ ಶಾರೀಕ್ ಕೃತ್ಯಕ್ಕೆ ಕೇರಳದಲ್ಲಿ ಎಲ್ಲ ರೀತಿಯ ಬೆಂಬಲ ಸಿಕ್ಕಿದ್ದು, ಪ್ರಬಲ ಜಾಲವೊಂದು ಆತನಿಗೆ ಸಪೋರ್ಟ್ ಮಾಡಿತ್ತು ಅನ್ನುವ ಮಾಹಿತಿಯಿದೆ.

Six foreigners held with 200 kg of drugs in Kochi

drug - Kerala gold smuggling case: ED ties case to Bangalore drugs bust -  Telegraph India

ಕೇರಳದಲ್ಲಿ ಪ್ರಬಲವಾಗಿ ಡ್ರಗ್ಸ್ ಮತ್ತು ಗೋಲ್ಡ್ ಸ್ಮಗ್ಲಿಂಗ್ ಜಾಲಗಳಿದ್ದು, ಅದರಲ್ಲಿ ಹೆಚ್ಚಿನವರು ಒಂದೇ ಸಮುದಾಯದ ಮಂದಿ ತೊಡಗಿಸಿಕೊಂಡಿದ್ದಾರೆ. ಇಂಥ ಸಮಾಜವಿರೋಧಿ ಕೃತ್ಯಗಳಿಂದ ಬರುವ ಹಣದ ಒಂದಂಶ ವಿಧ್ವಂಸಕ ಕೃತ್ಯಗಳ ಯೋಜನೆಗೆ ವಿನಿಯೋಗ ಆಗುತ್ತಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ತನಿಖೆಗೆ ಮುಂದಾಗಿದೆ. ಈ ಬಗ್ಗೆ ಕರ್ನಾಟಕದ ಗಡಿಭಾಗ ಕಾಸರಗೋಡು, ಕಣ್ಣೂರಿನಲ್ಲಿ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೊಹಮ್ಮದ್ ಶಾರೀಕ್ ಸ್ವತಃ ಡ್ರಗ್ಸ್ ರಾಕೆಟ್ನಲ್ಲಿ ತೊಡಗಿಕೊಂಡಿದ್ದ ಅನ್ನುವ ಮಾಹಿತಿ ಇರುವುದರಿಂದ ಪೊಲೀಸರು ಈ ಸುಳಿವು ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

NIA conducts raids at more than 50 locations in north India to crackdown on  gangsters - India Today

Why Karnataka Government Wants to Ban SDPI?

ಇದಲ್ಲದೆ, ಈ ತಂಡಕ್ಕೆ ಕೇರಳದಲ್ಲಿ ರಾಜಕೀಯ ಬೆಂಬಲವೂ ಇದೆಯೇ ಎನ್ನುವ ಬಗ್ಗೆಯೂ ತನಿಖೆ ಸಾಗಿದೆ. ಕೇರಳದಲ್ಲಿ ಎಸ್ಡಿಪಿಐ ಮತ್ತು ಮುಸ್ಲಿಂ ಲೀಗ್ ಪ್ರಬಲವಾಗಿದ್ದು, ರಾಜಕೀಯ ಪಕ್ಷಗಳಾಗಿ ಗುರುತಿಸಿಕೊಂಡಿವೆ. ಮುಸ್ಲಿಮರನ್ನು ಪ್ರತಿನಿಧಿಸುವ ಈ ಪಕ್ಷಗಳ ನಾಯಕರು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದಾರೆಯೇ ಎನ್ನುವ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಶಾರೀಕ್ ಹತ್ತಿರದ ಸಂಪರ್ಕ ಇದ್ದವರೆಲ್ಲ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಹೀಗಾಗಿ ಹುಡುಕಾಟ ಸಮಸ್ಯೆಯಾಗಿದೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆದರೆ ಯಾವುದೇ ಅಧಿಕೃತ ಮಾಹಿತಿಯನ್ನು ಪೊಲೀಸರಾಗಲೀ, ಎನ್ಐಎ ಆಗಲೀ ಬಿಟ್ಟುಕೊಟ್ಟಿಲ್ಲ.

Mangaluru blast: Cooker bomb had capacity to blow up bus, reveals probe

ಮಂಗಳೂರಿನ ನಾಗುರಿಯಲ್ಲಿ ನ.19ರಂದು ಬಾಂಬ್ ಸ್ಫೋಟ ಘಟನೆ ನಡೆದಿದ್ದು, ಆರೋಪಿ ಮೊಹಮ್ಮದ್ ಶಾರೀಕ್ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದು ತಿಂಗಳ ಚಿಕಿತ್ಸೆಯ ಬಳಿಕವೇ ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

The investigators probing the Mangaluru cooker blast case have turned their focus towards detecting the Kerala connections with the suspected terrorist Mohammad Shariq, sources said on Thursday. The sleuths of National Investigation Agency (NIA) and the Cyber Crime Unit officers have already reached Kerala and launched a hunt for breaking the nexus of suspected terrorist Mohammad Shariq, sources said.