ಬ್ರೇಕಿಂಗ್ ನ್ಯೂಸ್
01-12-22 04:58 pm Mangalore Correspondent ಕರಾವಳಿ
ಮಂಗಳೂರು, ಡಿ.1: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್ ಸುಟ್ಟ ಗಾಯಗಳಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದು, ವೈದ್ಯರ ಸೂಚನೆಯಂತೆ ಪೊಲೀಸರು ಆತನನ್ನು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಒಂದಷ್ಟು ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಪಡೆದುಕೊಂಡಿದ್ದಾರೆ. ಪೊಲೀಸರ ಪ್ರಶ್ನೆಗಳಿಗೆ ಶಾರೀಕ್ ಸಕಾರಾತ್ಮಕವಾಗಿಯೇ ಉತ್ತರ ನೀಡಿದ್ದಾನೆ.
ಈ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದು, ಸುಟ್ಟ ಗಾಯಗಳಿಗೆ ಚಿಕಿತ್ಸೆ ಮುಂದುವರಿದಿದೆ. ಆದರೆ ಒಂದಷ್ಟು ಚೇತರಿಕೆ ಕಂಡಿರುವುದರಿಂದ ಆರೋಪಿಯನ್ನು ವಿಚಾರಣೆ ನಡೆಸಲು ವೈದ್ಯರು ಅನುಮತಿ ನೀಡಿದ್ದಾರೆ. ಹಾಗಾಗಿ ಕೆಲವೊಂದಷ್ಟು ಮಾಹಿತಿಗಳನ್ನು ಸಂಗ್ರಹ ಮಾಡಿದ್ದಾರೆ. ಸದ್ಯಕ್ಕೆ ಡಿಜಿಪಿ ಸೂಚನೆಯಂತೆ, ದೇಶದ್ರೋಹ ಕಾಯ್ದೆಯಡಿ ದಾಖಲಾಗಿರುವುದರಿಂದ ಪ್ರಕರಣವನ್ನು ಎನ್ಐಎಗೆ ಹಸ್ತಾಂತರ ಮಾಡಲಾಗಿದೆ. ಮುಂದಿನ ತನಿಖೆಯನ್ನು ಎನ್ಐಎ ಏಜನ್ಸಿಯವರೇ ಮಾಡಲಿದ್ದಾರೆ. ಅವರಿಗೆ ಬೇಕಾದ ಪೊಲೀಸ್ ಸಿಬಂದಿ ನೆರವನ್ನು ನಾವು ನೀಡುತ್ತೇವೆ ಎಂದು ಹೇಳಿದ್ದಾರೆ.
ಈ ನಡುವೆ, ಎನ್ಐಎ ಅಧಿಕಾರಿಗಳು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ, ಪ್ರಕರಣದ ಬೆಳವಣಿಗೆ ಕುರಿತು ತನಿಖಾ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ, ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿರುವ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರು ಕೂಡ ಸುಟ್ಟ ಗಾಯಗಳಿಂದ ಚೇತರಿಕೆ ಕಂಡಿದ್ದು, ಐಸಿಯು ಘಟಕದಿಂದ ಬೇರೆ ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಸುಟ್ಟ ಗಾಯ ಆಗಿರುವುದರಿಂದ ಪ್ರತ್ಯೇಕವಾಗಿರಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಶಾರೀಕ್ ಗೆ ಇನ್ನೆಷ್ಟು ದಿನ ಚಿಕಿತ್ಸೆ ಬೇಕಾಗಬಹುದು ಎಂಬ ಪ್ರಶ್ನೆಗೆ, ಅದು ಹೇಳಕ್ಕೆ ಬರೋದಿಲ್ಲ, ವೈದ್ಯರು ಹೇಳಬೇಕಷ್ಟೆ. 40 ಶೇ. ದೇಹದ ಭಾಗಗಳು ಸುಟ್ಟು ಹೋಗಿರುವುದರಿಂದ ಒಳಭಾಗದಲ್ಲಿ ಕಂಡಿಶನ್ ಹೇಳಕ್ಕಾಗಲ್ಲ. ಸದ್ಯಕ್ಕೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಹೇಳಿದರು. ನ.19ರಂದು ಮಂಗಳೂರಿನ ನಾಗುರಿಯಲ್ಲಿ ಆಟೋದಲ್ಲಿ ಚಲಿಸುತ್ತಿದ್ದಾಗಲೇ ಕುಕ್ಕರ್ ಬಾಂಬ್ ಸ್ಫೋಟ ನಡೆದಿತ್ತು. ಆಟೋ ಚಾಲಕ ಮತ್ತು ಅದರಲ್ಲಿದ್ದ ಪ್ರಯಾಣಿಕ ಗಾಯಗೊಂಡಿದ್ದ. ಬಳಿಕ ನಡೆದ ತನಿಖೆಯಲ್ಲಿ ಪ್ರಯಾಣಿಕನಾಗಿ ಇದ್ದಿದ್ದು ಮೊಹಮ್ಮದ್ ಶಾರೀಕ್ ಅನ್ನುವುದು ತಿಳಿದುಬಂದಿತ್ತು.
Mangalore bomb blast accused sharik health improved investigation begun.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm