ಸುರತ್ಕಲ್ ಟೋಲ್ ಗೇಟ್ ಅಕ್ರಮ ; ಸಾರಿಗೆ ಸಚಿವ ಗಡ್ಕರಿಗೆ ಬರೆದ ಪತ್ರದಲ್ಲಿ ಶಾಸಕ ಭಟ್ ಉಲ್ಲೇಖ, 90 ಕಿಮೀ ಅಂತರದಲ್ಲಿ ನಾಲ್ಕು ಟೋಲ್ ಗೇಟ್, ಹೆದ್ದಾರಿ ಪ್ರಾಧಿಕಾರಕ್ಕೆ ತರಾಟೆ !  

02-12-22 09:26 pm       Mangalore Correspondent   ಕರಾವಳಿ

​​​​​​ಸುರತ್ಕಲ್ ಟೋಲ್ ಗೇಟ್ ಅಕ್ರಮವೆಂದು ಕಳೆದ ಐದಾರು ವರ್ಷಗಳಿಂದ ಜನರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದರು. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಈ ಭಾಗದ ಶಾಸಕರು, ಸಂಸದರು ಮಾತ್ರ ಒಪ್ಪಿಕೊಂಡಿರಲಿಲ್ಲ.

ಮಂಗಳೂರು, ಡಿ.2: ಸುರತ್ಕಲ್ ಟೋಲ್ ಗೇಟ್ ಅಕ್ರಮವೆಂದು ಕಳೆದ ಐದಾರು ವರ್ಷಗಳಿಂದ ಜನರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದರು. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಈ ಭಾಗದ ಶಾಸಕರು, ಸಂಸದರು ಮಾತ್ರ ಒಪ್ಪಿಕೊಂಡಿರಲಿಲ್ಲ. ಇದೀಗ ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಬರೆದ ಪತ್ರದಲ್ಲಿ ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿ ಕಾರ್ಯಾಚರಿಸುತ್ತಿತ್ತು ಎನ್ನುವುದನ್ನು ಉಲ್ಲೇಖ ಮಾಡಿದ್ದಾರೆ. ಶಾಸಕ ಭಟ್, ಸಚಿವರಿಗೆ ಬರೆದ ಪತ್ರದ ಸಾರಾಂಶ ಇಂತಿದೆ.

ಕಳೆದ ಏಳು ವರ್ಷಗಳಿಂದ ಸುರತ್ಕಲ್ ಟೋಲ್ ಗೇಟ್ ಅಕ್ರವಾಗಿಯೇ ನಡೆದುಕೊಂಡು ಬಂದಿತ್ತು. ಹೆದ್ದಾರಿ ಪ್ರಾಧಿಕಾರದವರು ಹೆಜಮಾಡಿ ಟೋಲ್ ಗೇಟ್ ಆರಂಭಿಸಿದ ಬಳಿಕ ಇಲ್ಲಿನ ಸುರತ್ಕಲ್ ಟೋಲ್ ಗೇಟ್ ತೆರವು ಮಾಡುವುದಾಗಿ ಹೇಳಿದ್ದರು. ಆದರೆ ಮೂರು ವರ್ಷಗಳ ಹಿಂದೆ ಹೆಜಮಾಡಿ ಟೋಲ್ ಪ್ಲಾಜಾ ಆರಂಭಗೊಂಡಿದ್ದರೂ, ಸುರತ್ಕಲ್ ಟೋಲ್ ಗೇಟ್ ತೆರವು ಮಾಡಿರಲಿಲ್ಲ.

ಸಾರ್ವಜನಿಕರ ವಿರೋಧದ ನಡುವೆಯೂ ಕಳೆದ ಆರು ವರ್ಷಗಳಿಂದ ಸುರತ್ಕಲ್ ಟೋಲ್ ಗೇಟ್ ಮತ್ತು ಹೆಜಮಾಡಿಯಲ್ಲಿ ಅಕ್ರಮವಾಗಿ ಹತ್ತು ಕಿಮೀ ಅಂತರದಲ್ಲಿ ಎರಡೆರಡು ಕಡೆ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಆರು ವರ್ಷಗಳಿಂದ ಜನರು ಪ್ರತಿಭಟನೆ, ಧರಣಿ ನಡೆಸಿದರೂ, ಈ ಬಗ್ಗೆ ಹೆದ್ದಾರಿ ಅಧಿಕಾರಿಗಳು ಕ್ಯಾರ್ ಮಾಡಿರಲಿಲ್ಲ. ಈ ನಡುವೆ, ಕಳೆದ ಸಂಸತ್ತಿನ ಅಧಿವೇಶನದಲ್ಲಿ ತಾವು 60 ಕಿಮೀ ಒಳಗಿನ ಟೋಲ್ ಗೇಟ್ ಮುಚ್ಚುತ್ತೇವೆ ಎಂದು ಹೇಳಿಕೆ ನೀಡಿದ್ದರೂ, ಅದು ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಕಾರ್ಯರೂಪಕ್ಕೆ ಬಂದಿಲ್ಲ ಅನ್ನುವುದು ಖೇದಕರ.

Surathkal and Hejamadi toll gates to be merged within this month: NHAI  project director | Deccan Herald

ಈಗ ಸಾರ್ವಜನಿಕರ ಕಡೆಯಿಂದ ವ್ಯಾಪಕ ಪ್ರತಿರೋಧ ಬಂದಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುರತ್ಕಲ್ ಟೋಲ್ ಗೇಟನ್ನು ರದ್ದುಗೊಳಿಸಿ, ಅಲ್ಲಿನ ಶುಲ್ಕವನ್ನು ಹತ್ತು ಕಿಮೀ ದೂರದ ಹೆಜಮಾಡಿಯಲ್ಲಿ ವಸೂಲಿ ಮಾಡಲಾಗುವುದೆಂದು ಆದೇಶ ಮಾಡಿದೆ. ಈ ರೀತಿಯ ಆದೇಶದಿಂದ ಉಡುಪಿ ಜಿಲ್ಲೆಯ ಟ್ಯಾಕ್ಸಿ ಮತ್ತಿತರ ವಾಹನ ಪ್ರಯಾಣಿಕರು ತೀವ್ರ ತೊಂದರೆಗೆ ಈಡಾಗುತ್ತಾರೆ. ಸುರತ್ಕಲ್ ಟೋಲ್ ಗೇಟ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದರೆ, ಹೆಜಮಾಡಿ ಟೋಲ್ ಗೇಟ್ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಎರಡೂ ಪ್ರತ್ಯೇಕ ರಸ್ತೆಗಳಾಗಿದ್ದು, ಬೇರೆಯದ್ದೇ ಕಂಪನಿಗಳು ಕಾಮಗಾರಿ ಕೈಗೊಂಡಿದ್ದವು.

Hejamadi Toll Plaza Charges & Contact Details - travelfare.in

ಹೀಗಿದ್ದರೂ, ಕೇವಲ 90 ಕಿಮೀ ಅಂತರ ಇರುವ ಒಂದೇ ಹೆದ್ದಾರಿಯಲ್ಲಿ ಸಾಸ್ತಾನ, ಹೆಜಮಾಡಿ, ಸುರತ್ಕಲ್ ಮತ್ತು ತಲಪಾಡಿಯಲ್ಲಿ ನಾಲ್ಕು ಕಡೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಈಗ ಸುರತ್ಕಲ್ ಟೋಲ್ ಗೇಟನ್ನು ಜನರ ಒತ್ತಾಯಕ್ಕೆ ಮಣಿದು ರದ್ದು ಮಾಡಲು ನಿರ್ಣಯಕ್ಕೆ ಬರಲಾಗಿದೆ. ಆದರೆ ಅಲ್ಲಿನ ಶುಲ್ಕವನ್ನು ಹೆಜಮಾಡಿಗೆ ವಿಲೀನಗೊಳಿಸಿ, ದುಪ್ಪಟ್ಟು ವಸೂಲಿಗೆ ನಿಂತಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಜನರು ದಂಗೆ ಏಳುವ ಸ್ಥಿತಿ ಉಂಟಾಗಿದೆ. ಅದರಲ್ಲೂ ಪ್ರಮುಖವಾಗಿ ಉಡುಪಿ ಭಾಗದ ಟ್ಯಾಕ್ಸಿ ವಾಹನಗಳ ಚಾಲಕರು ತೊಂದರೆಗೀಡಾಗಿದ್ದು, ಹೆಜಮಾಡಿ ಟೋಲ್ ಕಳೆದು ಅರ್ಧಕ್ಕೆ ಸಾಗುವುದಿದ್ದರೂ ಪೂರ್ತಿ ಹಣ ಕಟ್ಟಬೇಕಾದ ಸ್ಥಿತಿಯಿಂದ ಆಕ್ರೋಶಕ್ಕೆ ಈಡಾಗಿದ್ದಾರೆ. ಈ ರೀತಿಯ ಅವೈಜ್ಞಾನಿಕ ಮತ್ತು ಜನವಿರೋಧಿ ನೀತಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.

Union Minister Nitin Gadkari lays foundation stone for highway projects in  West Bengal - BusinessToday

ಹೆದ್ದಾರಿ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಪರಿಣಾಮಕಾರಿ ಹೆಜ್ಜೆಗಳನ್ನು ಇಟ್ಟಿರುವ ತಾವು, ಸುರತ್ಕಲ್ ಟೋಲ್ ಗೇಟ್ ಕುರಿತಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರವನ್ನು ರದ್ದುಪಡಿಸಿ ಈ ಸಮಸ್ಯೆಗೆ ಇತಿಶ್ರೀ ಹಾಕಬೇಕೆಂದು ಕೇಳಿಕೊಳ್ಳುತ್ತೇನೆಂದು ರಘುಪತಿ ಭಟ್, ದೆಹಲಿಯಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ನೀಡಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

Nalin Kumar Kateel alleges 'foreign hand' in Udaipur tailor's murder |  Deccan Herald

ಪ್ರಮುಖವಾಗಿ ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿ ನಡೆದುಕೊಂಡು ಬಂದಿರುವುದು ಎನ್ನುವುದನ್ನು ಸ್ಪಷ್ಟವಾಗಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಆಮೂಲಕ ಕರಾವಳಿಯಲ್ಲಿ ಟೋಲ್ ಗೇಟನ್ನು ಸಮರ್ಥನೆ ಮಾಡಿಕೊಂಡು ಬಂದಿದ್ದ ಸಂಸದ ನಳಿನ್ ಕುಮಾರ್ ಮತ್ತು ಕೆಲವು ಶಾಸಕರಿಗೆ ರಘುಪತಿ ಬಟ್ ಟಾಂಗ್ ನೀಡಿದ್ದಾರೆ. ಅದರ ಜೊತೆಗೆ, ಕೇವಲ 90 ಕಿಮೀ ಅಂತರದಲ್ಲಿ ನಾಲ್ಕು ಟೋಲ್ ಗೇಟ್ ಹಾಕಿ ಹೆದ್ದಾರಿ ಪ್ರಾಧಿಕಾರ ಜನರನ್ನು ಲೂಟಿ ಮಾಡುತ್ತಿರುವುದನ್ನು ಉಲ್ಲೇಖ ಮಾಡಿದ್ದಾರೆ. 60 ಕಿಮೀ ಒಳಗಿನ ಟೋಲ್ ಗೇಟನ್ನು ರದ್ದುಗೊಳಿಸುವ ನಿಮ್ಮ ಭರವಸೆ ಇನ್ನೂ ಈಡೇರಿಲ್ಲ ಅನ್ನುವುದನ್ನು ಪರೋಕ್ಷವಾಗಿ ಸಚಿವರ ಗಮನಕ್ಕೆ ತಂದಿದ್ದಾರೆ.

Surathkal toll gate illegal mla raghupathi bhat mentioned in letter to minister nithin gadkari.