ವರಾಹ ರೂಪಂ ಹಾಡಿಗಿಲ್ಲ ಅಡೆತಡೆ ; ತಕರಾರು ಎತ್ತಿದ್ದ ಎರಡೂ ಅರ್ಜಿ ವಜಾ, ಅಗ್ಗದ ಪ್ರಚಾರಕ್ಕೆ ಹೋದವರಿಗೆ ತಪರಾಕಿ, ಇಷ್ಟಕ್ಕೂ ಕೋರ್ಟಿನಲ್ಲಿ ಆಗಿದ್ದೇನು ?   

03-12-22 10:15 pm       Mangalore Correspondent   ಕರಾವಳಿ

ದೇಶಾದ್ಯಂತ ಸದ್ದು ಮಾಡಿರುವ ಕಾಂತಾರ ಚಿತ್ರದ ಅದ್ದೂರಿ ಹಾಡು ವರಾಹರೂಪಂ ಕಡೆಗೂ ಕೋರ್ಟ್ ಹೋರಾಟದಲ್ಲಿ ಗೆದ್ದುಬಿಟ್ಟಿದೆ.

ಮಂಗಳೂರು, ಡಿ.3: ದೇಶಾದ್ಯಂತ ಸದ್ದು ಮಾಡಿರುವ ಕಾಂತಾರ ಚಿತ್ರದ ಅದ್ದೂರಿ ಹಾಡು ವರಾಹರೂಪಂ ಕಡೆಗೂ ಕೋರ್ಟ್ ಹೋರಾಟದಲ್ಲಿ ಗೆದ್ದುಬಿಟ್ಟಿದೆ. ಇದರ ಬೆನ್ನಲ್ಲೇ ಹೊಂಬಾಳೆ ಫಿಲಂಸ್ ತಂಡವು ಹಳೆಯ ವರಾಹರೂಪಂ ಹಾಡನ್ನೇ ಒಟಿಟಿ ವೇದಿಕೆ, ಸಿನಿಮಾ ಸೇರಿದಂತೆ ಎಲ್ಲ ಕಡೆಯಲ್ಲೂ ಮತ್ತೆ ಯಥಾಸ್ಥಿತಿ ಎನ್ನುವ ರೀತಿ ಹಾಕಿಕೊಂಡಿದೆ. ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ತುಳುನಾಡಿನ ದೈವಗಳ ಕಾರಣಿಕ ಗೆದ್ದಿದೆ ಎಂದು ಟ್ವೀಟ್ ಮಾಡಿ ಹರ್ಷ ಹಂಚಿಕೊಂಡಿದ್ದಾರೆ.

ಇಷ್ಟಕ್ಕೂ ಕೋರ್ಟಿನಲ್ಲಿ ಆಗಿದ್ದೇನು ?

ವಾರದ ಹಿಂದಷ್ಟೇ ಕೋಜಿಕ್ಕೋಡ್ ಕೋರ್ಟಿನಲ್ಲಿ ಹಾಕಿದ್ದ ತಕರಾರು ಅರ್ಜಿಯನ್ನು ವಜಾ ಮಾಡಲಾಗಿತ್ತು. ಅಷ್ಟರಲ್ಲೇ ಹಾಡಿನ ಬಗ್ಗೆ ಕ್ಯಾತೆ ತೆಗೆದಿದ್ದ ತೈಕ್ಕುಡಂ ಬ್ರಿಡ್ಜ್ ತಂಡಕ್ಕೆ ಕಪಾಳಮೋಕ್ಷ ಆಗಿತ್ತು. ಆದರೆ ಅಲ್ಲಿನ ಕೋರ್ಟ್ ನೀಡಿದ್ದ ಆದೇಶದಲ್ಲಿ ಒಂದು ಟೆಕ್ನಿಕಲ್ ಪಾಯಿಂಟ್ ಇತ್ತು. ಎರಡು ಕೋಟಿ ಬೇಡಿಕೆ ಇಟ್ಟಿದ್ದರಿಂದ ಇದು ಸಿವಿಲ್ ಕೋರ್ಟಿಗೆ ಬರುವುದಿಲ್ಲ. ಸೂಕ್ತ ಕೋರ್ಟಿಗೆ ಹೋಗಿ ಎನ್ನುವ ಆದೇಶ ಮಾಡಿ, ಅರ್ಜಿಯನ್ನು ವಜಾ ಮಾಡಲಾಗಿತ್ತು. ಕಾನೂನು ರೀತ್ಯ ಆಯಾ ಜಿಲ್ಲೆಯಲ್ಲಿರುವ ಕಮರ್ಷಿಯಲ್ ಕೋರ್ಟಿಗೆ ತೈಕ್ಕುಡಂ ತಂಡ ಅರ್ಜಿ ಹಾಕಬೇಕಿತ್ತು. ಆದರೆ ಆ ತಂಡಕ್ಕೆ ತಕರಾರು ಮಾಡುವುದೇ ಉದ್ದೇಶ ಇದ್ದುದರಿಂದ ನೇರವಾಗಿ ಹೈಕೋರ್ಟಿನಲ್ಲಿ ಅಪೀಲು ಮಾಡಿತ್ತು.

District Court Kozhikode | Kozhikode Mananchira | Government Services Courts  | Kozhikode Directory

ಹೊಂಬಾಳೆ ಫಿಲಂಸ್ ತಂಡ ಮೊದಲೇ ಕೇವಿಯಟ್ ಹಾಕಿದ್ದರಿಂದ ಹೈಕೋರ್ಟ್ ಪ್ರತಿವಾದಿಗೆ ನೋಟಿಸ್ ಕೊಡದೆ ನೇರವಾಗಿ ತಡೆಯಾಜ್ಞೆ ನೀಡುವುದಕ್ಕೆ ಬರುವುದಿಲ್ಲ. ಆದರೆ ಶುಕ್ರವಾರ ಹೈಕೋರ್ಟಿನ ನ್ಯಾಯಾಧೀಶರು, ಕೇವಿಯಟ್ ಅರ್ಜಿ ಇರುವ ಮಾಹಿತಿ ಇಲ್ಲದೆ ಒಮ್ಮೆಗೆ ತಡೆಯಾಜ್ಞೆ ಮನವಿಯನ್ನು ಮಾನ್ಯ ಮಾಡಿದ್ದರು. ಶುಕ್ರವಾರ ಮಧ್ಯಾಹ್ನವೇ ಹೊಂಬಾಳೆ ಫಿಲಂಸ್ ತಂಡದ ವಕೀಲರು ಕೋರ್ಟಿನಲ್ಲಿ ಕೇವಿಯಟ್ ಇರುವುದನ್ನು ಮತ್ತು ತೈಕ್ಕುಡಂ ತಂಡಕ್ಕೆ ಕಮರ್ಷಿಯಲ್ ಕೋರ್ಟಿಗೆ ಹೋಗಲು ಕೋಜಿಕ್ಕೋಡ್ ಜಿಲ್ಲಾ ಕೋರ್ಟ್ ಸೂಚಿಸಿದ್ದರ ಬಗ್ಗೆ ಮನವರಿಕೆ ಮಾಡಿದ್ದರು. ಆನಂತರ, ನ್ಯಾಯಾಧೀಶರು ಕೂಡಲೇ ತಡೆಯಾಜ್ಞೆಯ ಆದೇಶವನ್ನು ಬದಲಿಸಿ, ಅರ್ಜಿ ವಜಾಗೊಳಿಸಿದ್ದರು. ಅಲ್ಲಿಗೆ ಹೈಕೋರ್ಟ್ ಅರ್ಜಿಯ ತಕರಾರು ಮುಗಿದು ಹೋಗಿತ್ತು. ಆದರೆ ಸುದ್ದಿ ಮಾಧ್ಯಮಗಳಲ್ಲಿ ಹೈಕೋರ್ಟ್ ತಡೆ ಎನ್ನುವುದೇ ಹೈಲೈಟ್ ಆಗಿತ್ತು.

ಪಾಲಕ್ಕಾಡ್ ಕೋರ್ಟಿನಲ್ಲೂ ಅರ್ಜಿ ವಜಾ

ಈ ನಡುವೆ, ಪಾಲಕ್ಕಾಡ್ ಕೋರ್ಟಿನಲ್ಲಿ ಮಾತೃಭೂಮಿ ಸಂಸ್ಥೆಯವರು ವರಾಹರೂಪಂ ಹಾಡಿನ ವಿರುದ್ಧ ತಡೆಯಾಜ್ಞೆ ತಂದಿದ್ದರು. ತಿಂಗಳ ಹಿಂದೆ ನೀಡಿದ್ದ ಈ ಮಧ್ಯಂತರ ತಡೆಯಾಜ್ಞೆಯೂ ಶನಿವಾರಕ್ಕೆ (ಡಿ.3) ತೆರವಾಗಿದೆ. ಅಲ್ಲಿಗೆ ವರಾಹಂ ರೂಹಂ ಹಾಡಿಗೆ ಇದ್ದ ಎಲ್ಲ ಅಡೆತಡೆಯೂ ನಿವಾರಣೆ ಆದಂತಾಗಿದೆ. ತೈಕ್ಕುಡಂ ಬ್ರಿಡ್ಜ್ ತಂಡ ನಿರ್ಮಿಸಿದ್ದ ಆಲ್ಬಂ ಹಾಡನ್ನು ಮಾತೃಭೂಮಿ ಸಂಸ್ಥೆಗೆ ಮಾರಾಟ ಮಾಡಲಾಗಿತ್ತು. ಇತ್ತ ಕೋಜಿಕ್ಕೋಡ್ ನಲ್ಲಿ ತೈಕ್ಕುಡಂ ತಂಡ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಮಾತೃಭೂಮಿ ಸಂಸ್ಥೆ ಕೂಡ ಪಾಲಕ್ಕಾಡ್ ಕೋರ್ಟಿನಲ್ಲಿ ಪ್ರಶ್ನೆ ಮಾಡಿತ್ತು. ಇಂತಹ ಪ್ರಕರಣದಲ್ಲಿ ಕೋರ್ಟ್, ಒಮ್ಮೆಗೆ ಮಧ್ಯಂತರ ತಡೆಯಾಜ್ಞೆ ನೀಡುವುದು ವಾಡಿಕೆ. ಅದೇ ರೀತಿಯ ಆದೇಶವನ್ನು ಎರಡೂ ಕಡೆ ಕೋರ್ಟ್ ಕೊಟ್ಟಿತ್ತು.

Why are you ashamed of PM's photo on vaccination certificate, Kerala HC  asks petitioner

ಹಣಕಾಸು ವಿಚಾರದಲ್ಲಿ ತಕರಾರು ಎತ್ತುವುದಕ್ಕೆ, ಹಣದ ಬೇಡಿಕೆ ಇಡುವುದಕ್ಕೆ ಕೋರ್ಟಿಗೆ ಇಂತಿಷ್ಟು ಇಡುಗಂಟು ಇಡಬೇಕೆಂಬ ನಿಯಮ ಇದೆ. ಆ ಪ್ರಕಾರ ಎರಡು ಕೋಟಿ ಹಣದ ಬೇಡಿಕೆ ಇಡುವ ಸಂದರ್ಭದಲ್ಲಿ 20 ಪರ್ಸೆಂಟ್ ಹಣವನ್ನು ಕೋರ್ಟಿಗೆ ಕಟ್ಟಬೇಕಾಗುತ್ತದೆ. ಅಲ್ಲದೆ, ಆ ರೀತಿಯ ಅರ್ಜಿಯನ್ನು ಪ್ರತಿ ಜಿಲ್ಲೆಯಲ್ಲಿರುವ ಕಮರ್ಷಿಯಲ್ ಕೋರ್ಟಿನಲ್ಲಿಯೇ ಸಲ್ಲಿಸ ಬೇಕಾಗುತ್ತದೆ. ಆದರೆ ತೈಕ್ಕುಡಂ ಬ್ರಿಡ್ಜ್ ತಂಡವು ಕಾನೂನು ಪ್ರಕಾರ ಹೋಗದೆ ಅಗ್ಗದ ಪ್ರಚಾರಕ್ಕಾಗಿ ಸಿವಿಲ್ ಕೋರ್ಟಿನಲ್ಲಿ ಪ್ರಶ್ನೆ ಮಾಡಿ, ಹೈಲೈಟ್ ಆಗಿದೆ.

Kantara - Varaha Roopam(Lyric Video)| Sai Vignesh | Rishab Shetty |  Ajaneesh Loknath | Hombale Films - YouTube

ಆ ಹಾಡೇ ಬೇರೆ, ಈ ಹಾಡೇ ಬೇರೆ..!

ನಿಜಕ್ಕಾದರೆ ತೈಕ್ಕುಡಂ ಆಲ್ಬಂ ಹಾಡೇ ಬೇರೆ, ವರಾಹಂ ರೂಪಂ ಹಾಡೇ ಬೇರೆ. ಎರಡೂ ಹಾಡಿನಲ್ಲಿ ಇರುವ ಸಾಹಿತ್ಯ ಮತ್ತು ರಾಗವೂ ಬೇರೆ. ಹಾಗಿರುವಾಗ ಅಲ್ಲಿ ಕೃತಿ ಚೌರ್ಯ ಆಗಿದೆ ಎನ್ನುವುದರಲ್ಲಿ ಅರ್ಥವೇ ಇರುವುದಿಲ್ಲ. ಆದರೆ, ತೈಕ್ಕುಡಂ ತಂಡವು ವರಾಹರೂಪಂ ಹಾಡಿನಲ್ಲಿ ತಾವು ಬಳಸಿದ್ದ ಸಂಗೀತ ಉಪಕರಣಗಳನ್ನೇ ಬಳಸಿದ್ದಾರೆ ಅನ್ನುವ ಆಕ್ಷೇಪ ತೆಗೆದಿದ್ದರು. ಅದಕ್ಕಾಗಿ ಮೊದಲು ತಾವೇನು ಹಣದ ಬೇಡಿಕೆ ಇಡುವುದಿಲ್ಲ. ಕನಿಷ್ಠ ನಮ್ಮ ಹೆಸರನ್ನು ಉಲ್ಲೇಖ ಮಾಡಿ ಎಂದು ಕೇಳಿದ್ದರು. ಆದರೆ ಚಿತ್ರ ತಂಡವು ಹೆಸರು ಉಲ್ಲೇಖಿಸಲು ಕೇಳದೇ ಇದ್ದಾಗ, ಎರಡು ಕೋಟಿ ಹಣದ ಬೇಡಿಕೆ ಇಟ್ಟಿದ್ದರು. ಆದರೆ ಈಗ ಅರ್ಜಿಯೇ ವಜಾ ಆಗಿದೆ. ಅಲ್ಲದೆ, ಚಿತ್ರತಂಡವು ತಮ್ಮ ಹಾಡೇ ಬೇರೆ, ಅವರ ಹಾಡೇ ಬೇರೆ ಎನ್ನುವುದನ್ನೂ ಕೋರ್ಟಿನಲ್ಲಿ ಸಾಬೀತು ಪಡಿಸಿದೆ.

In relation to the copyright dispute regarding "Varaharoopam" song in the Kannada superhit movie "Kantara", the Palakkad District Court on Saturday returned the plaint filed by Mathrubhumi Printing and Publishing Company Ltd(MPPCL) against the film's producer Hombale Films citing lack of jurisdiction. The Palakkad District Court observed that the suit has to be filed before Kozhikode District Court as the registered office of MPPCL was in Kozhikode.