ಸುಯೆಜ್ ಸಂಸ್ಥೆಯ ವತಿಯಿಂದ ನೀರಿನ ಮಿತಬಳಕೆಗಾಗಿ ಜಾಗೃತಿ ; ಕೆನರಾ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಥ್

08-12-22 10:13 pm       Mangalore Correspondent   ಕರಾವಳಿ

ವಿಶ್ವ ಜಲನಷ್ಟ ದಿನದ ಅಂಗವಾಗಿ ಸುಯೆಜ್ ಸಂಸ್ಥೆ, ಇಜಿಎಸ್ ಇಂಡಿಯಾ ಪ್ರೈ. ಲಿಮಿಟೆಡ್ ಹಾಗೂ ಕೆನರಾ ಪ್ರೌಢಶಾಲೆ ಉರ್ವಾ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲನಷ್ಟ ದಿನದ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.

ಮಂಗಳೂರು, ಡಿ.8: ವಿಶ್ವ ಜಲನಷ್ಟ ದಿನದ ಅಂಗವಾಗಿ ಸುಯೆಜ್ ಸಂಸ್ಥೆ, ಇಜಿಎಸ್ ಇಂಡಿಯಾ ಪ್ರೈ. ಲಿಮಿಟೆಡ್ ಹಾಗೂ ಕೆನರಾ ಪ್ರೌಢಶಾಲೆ ಉರ್ವಾ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲನಷ್ಟ ದಿನದ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.

ಉರ್ವ ಕೆನರಾ ಪ್ರೌಢಶಾಲೆಯಿಂದ ಮಹಾನಗರ ಪಾಲಿಕೆಯ ಕಚೇರಿ ವರೆಗೆ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು. ದೈನಂದಿನ ಅಭ್ಯಾಸಗಳಲ್ಲಿ ಜನರು ಸಣ್ಣ ಸಣ್ಣ ಬದಲಾವಣೆಗಳ ಮೂಲಕ ಜಲಜಾಗೃತಿ ಮೂಡಿಸಬಹುದು ಎಂಬ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡಿದರು.

ಒಂದು ಅಧ್ಯಯನದ ಪ್ರಕಾರ, ಜಗತ್ತಿನಲ್ಲಿ ಪ್ರತಿದಿನ ಸುಮಾರು 346 ಶತಕೋಟಿ ಲೀಟರ್ ನಷ್ಟು ನೀರು ಪೂರೈಕೆ ಜಾಲಗಳಿಂದ ನಷ್ಟಗೊಳ್ಳುತ್ತದೆ. ಈ ನಷ್ಟವನ್ನು 30 ಶೇಕಡಾದಷ್ಟು ಉಳಿಸಿದರೂ, ಸುಮಾರು 800 ಮಿಲಿಯನ್ ಜನರಿಗೆ ಉಚಿತ ನೀರು ಒದಗಿಸಬಹುದಾಗಿದೆ. ಇಂಟರ್ನ್ಯಾಶನಲ್ ವಾಟರ್ ಅಸೋಸಿಯೇಶನ್ ಎಂಬ ಸಂಸ್ಥೆಯು ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ನೀರಿನ ನಷ್ಟದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಜಲನಷ್ಟ ದಿನವನ್ನು ಆಚರಣೆ ಮಾಡುತ್ತಿದೆ. ಸುಯೆಜ್ ಸಂಸ್ಥೆಯ ವತಿಯಿಂದ ಜಲಜಾಗೃತಿ ಉದ್ದೇಶದಿಂದ ವಿದ್ಯಾರ್ಥಿಗಳ ಮೂಲಕ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

Mangalore SUEZ organises world water loss day awareness around city with Canara school to bring awareness on usage of water.