ಶಿರಾಡಿ ಘಾಟ್ ಅವ್ಯವಸ್ಥೆ ; ಕಾರಣ ಕೇಳಿ ವಾರದೊಳಗೆ ಅಧಿಕಾರಿಗಳ ಸಭೆ ಕರೆಯುತ್ತೇನೆ ; ಮುಖ್ಯಮಂತ್ರಿ ಬೊಮ್ಮಾಯಿ 

10-12-22 09:38 pm       Mangalore Correspondent   ಕರಾವಳಿ

ಶಿರಾಡಿ ಘಾಟ್ ರಸ್ತೆ ಅವ್ಯವಸ್ಥೆ ಬಗ್ಗೆ ವಾರದೊಳಗೆ ಹೆದ್ದಾರಿ ಅಧಿಕಾರಿಗಳ ಸಭೆ ಕರೆಯುತ್ತೇನೆ. ಯಾಕೆ ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದು ಕೇಳುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಮಂಗಳೂರು, ಡಿ.10: ಶಿರಾಡಿ ಘಾಟ್ ರಸ್ತೆ ಅವ್ಯವಸ್ಥೆ ಬಗ್ಗೆ ವಾರದೊಳಗೆ ಹೆದ್ದಾರಿ ಅಧಿಕಾರಿಗಳ ಸಭೆ ಕರೆಯುತ್ತೇನೆ. ಯಾಕೆ ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದು ಕೇಳುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ದುರಸ್ತಿ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಕೆಲಸಗಳು ಇನ್ನೂ ನಡೆಯುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿದೆ.‌ ವಾರದೊಳಗೆ ಈ ಬಗ್ಗೆ ವಿಶೇಷ ಸಭೆ ಕರೆಯುತ್ತೇನೆ. ಘಾಟ್ ರಸ್ತೆ ದುರಸ್ತಿ ಆಗದ ಕಾರಣ ತಿಳಿಯುತ್ತೇನೆ. ಶಿರಾಡಿ ಘಾಟ್ ದುರಸ್ತಿಗೆ ಮೂರು ಹಂತದ ಪ್ರಕ್ರಿಯೆಗಳ ಮಾತುಕತೆಯಾಗುತ್ತಿದೆ. ತಾತ್ಕಾಲಿಕ ಡಾಂಬರೀಕರಣ, ವೈಟ್ ಟಾಪಿಂಗ್, ಸುರಂಗ ಮಾಡುವ ಪ್ರಕ್ರಿಯೆ ಮಾತುಕತೆಯಲ್ಲಿದೆ. ಈ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ಮಾಡುತ್ತೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. 

Karnataka-Maharashtra border row: CM Basavaraj Bommai speaks to Amit Shah;  Centre likely to meet both CMs next week | Mint

maharashtra karnataka border news, bus service suspended in Maharashtra  Karnataka due to tension, buses targeted by protesters due to border row – maharashtra  karnataka temporarily suspended its bus service amid border row

BJP Ended 'Appeasement Politics' In Gujarat: Amit Shah

Villages From Maharashtra May Be Merged Into Karnataka Where Elections Is  Due': Uddhav Thackeray

ಮಹಾರಾಷ್ಟ್ರ-ಕರ್ನಾಟಕ ಗಡಿ ಬಿಕ್ಕಟ್ಟಿನ ಕುರಿತ ಪ್ರಶ್ನೆಗೆ, ಸದ್ಯಕ್ಕೆ ಗಡಿಯಲ್ಲಿ ಎಲ್ಲಾ ಬಸ್ ಗಳ ಓಡಾಟ ನಡೆಯುತ್ತಿದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಹಲವು ಸೂಚನೆ ನೀಡಿದ್ದೇವೆ.‌ ಡಿ.14ರಂದು ಕೇಂದ್ರ ಗೃಹಮಂತ್ರಿಗಳು ಎರಡು ರಾಜ್ಯದ ಸಿಎಂಗಳ ಸಭೆ ಕರೆದಿದ್ದಾರೆ. ಮುಂದಿನ ಸೋಮವಾರ ಕೇಂದ್ರ ಗೃಹ ಸಚಿವರನ್ನು ರಾಜ್ಯದ ಸಂಸದರು ಭೇಟಿಯಾಗಿ ಪರಿಸ್ಥಿತಿಯ ವಿವರ ನೀಡಲಿದ್ದಾರೆ. ಕರ್ನಾಟಕದ ಹಿತ ಮತ್ತು ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತ ಕಾಯೋದು ಸರ್ಕಾರದ ಆದ್ಯತೆಯಾಗಿದೆ.‌

ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಸಮಾವೇಶ ಮಾಡಲು ಪ್ರಯತ್ನ ಮಾಡುತ್ತಾರೆ. ಪ್ರತೀ ಬಾರಿಯೂ ಅವಕಾಶ ಕೊಡೋದಿಲ್ಲ, ಈ ಬಾರಿಯೂ ಅವಕಾಶ ಕೊಡೋದಿಲ್ಲ ಎಂದು ಬೊಮ್ಮಾಯಿ ಹೇಳಿದರು. 

15 strict measures taken by government to prevent terrorist attacks | India  News – India TV

ಪದೇ ಪದೇ ಉಗ್ರರ ಉಪಟಳ ಆಗ್ತಾ ಇದೆ, ಏನು ಕ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ, ರಾಜ್ಯದಲ್ಲಿ ಉಗ್ರರ ನಿಯಂತ್ರಣಕ್ಕೆ ದಿಟ್ಟ ಕ್ರಮ ಕೈಗೊಂಡಿದ್ದೇವೆ. ಹದಿಮೂರು ಸ್ಲೀಪರ್ ಸೆಲ್ ಗಳನ್ನು ಗುರುತಿಸಿ ಶಂಕಿತರನ್ನು ಜೈಲಿಗೆ ಕಳುಹಿಸಿದ್ದೇವೆ. ತಮಿಳುನಾಡಿನಲ್ಲಿ ಕಾರ್ಯಾಚರಣೆ ಮಾಡಲು ಯತ್ನಿಸಿದವರನ್ನೂ ಸೆರೆ ಹಿಡಿದಿದ್ದೇವೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಅವರಿಗೆ ವಿದೇಶಗಳಿಂದ ಸಂಪರ್ಕ ಇರುವುದನ್ನೂ ಪತ್ತೆಹಚ್ಚಿ ಆ ಬಗ್ಗೆ ಕೇಂದ್ರಕ್ಕೆ ವರದಿ ಕಳುಹಿಸುತ್ತೇವೆ. ಉಗ್ರರ ಲಿಂಕ್ ಬಗ್ಗೆ ಸಮಗ್ರ ಮಾಹಿತಿ ಪಡೆದು ರಾಜ್ಯ ಮತ್ತು ಕೇಂದ್ರದ ತನಿಖಾ ಏಜನ್ಸಿಗಳು ಒಟ್ಟಿಗೆ ಕೆಲಸ ಮಾಡುತ್ತವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

A special meeting will be held with the officials of the National Highways Authority of India within a week to provide a permanent solution to the Shiradi Ghat Road, said Chief Minister Basavaraj Bommai.Talking to reporters here on Saturday, he said the meeting will discuss asphalting, white topping and tunnel within a week and come out with a solution.