ಇನೋವಾ ಕಾರು ಪಲ್ಟಿ ; ಮದುವೆಗೆ ಹೊರಟಿದ್ದ ತಾಯಿ, ಮಗು ದುರಂತ ಸಾವು ! 

12-12-22 06:52 pm       Mangalore Correspondent   ಕರಾವಳಿ

ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು ಪಲ್ಟಿಯಾಗಿ ತಾಯಿ - ಮಗು ಮೃತಪಟ್ಟ ಘಟನೆ ಕೇರಳದ ಗಡಿಭಾಗ ಜಾಲ್ಸೂರಿನ ಪರಪ್ಪೆ ಎಂಬಲ್ಲಿ ನಡೆದಿದೆ.‌

ಸುಳ್ಯ, ಡಿ.12 : ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು ಪಲ್ಟಿಯಾಗಿ ತಾಯಿ - ಮಗು ಮೃತಪಟ್ಟ ಘಟನೆ ಕೇರಳದ ಗಡಿಭಾಗ ಜಾಲ್ಸೂರಿನ ಪರಪ್ಪೆ ಎಂಬಲ್ಲಿ ನಡೆದಿದೆ.‌

ಕಾರಿನಲ್ಲಿ ತಾಯಿ, ಮಗು ಮದುವೆಗೆ ಹೋಗುತ್ತಿದ್ದಾಗ ಕಾರು ಪಲ್ಟಿಯಾಗಿ ಬಿದ್ದಿದೆ. ಪಲ್ಟಿಯಾಗಿ ಮರಕ್ಕೆ ಡಿಕ್ಕಿಯಾಗಿದ್ದರಿಂದ ಸುಳ್ಯದ ನಾವೂರು ಬೋರುಗುಡ್ಡೆ ನಿವಾಸಿ ಅಬ್ದುಲ್ಲಾ ಎಂಬವರ ಪುತ್ರಿ ಶಾಹಿನಾ (28) ಹಾಗೂ ಅವರ ಮಗು ಶಝಾ (3) ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಕಾರಿನಲ್ಲಿದ್ದ ಇತರ ನಾಲ್ವರು ತೀವ್ರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಗಾಯಗೊಂಡಿದ್ದ ತಾಯಿ, ಮಗುವನ್ನು ಮೊದಲಿಗೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Innova car topples after accident, mother son killed on spot in Sullia.