ಅಪಘಾತದಲ್ಲಿ ಮೆಡಿಕಲ್ ವಿದ್ಯಾರ್ಥಿ ಸಾವು ; ಮೃತದೇಹ ನೋಡಲು ದೌಡಾಯಿಸಿದ ಹೈಕೋರ್ಟ್ ನ್ಯಾಯಾಧೀಶ 

13-12-22 12:01 pm       Mangalore Correspondent   ಕರಾವಳಿ

ನಿನ್ನೆ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ವೈದ್ಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು ಅಪಘಾತದಿಂದ ಶಾಕ್ ಆಗಿರುವ ಆತನ ಮಾವ, ಹೈಕೋರ್ಟ್ ನ್ಯಾಯಾಧೀಶ ದೇರಳಕಟ್ಟೆಗೆ ಆಗಮಿಸಿದ್ದಾರೆ.  

ಉಳ್ಳಾಲ, ಡಿ.13 : ನಿನ್ನೆ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ವೈದ್ಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು ಅಪಘಾತದಿಂದ ಶಾಕ್ ಆಗಿರುವ ಆತನ ಮಾವ, ಹೈಕೋರ್ಟ್ ನ್ಯಾಯಾಧೀಶ ದೇರಳಕಟ್ಟೆಗೆ ಆಗಮಿಸಿದ್ದಾರೆ.  

ಹೈಕೋರ್ಟ್ ನ್ಯಾಯಾಧೀಶ ರಂಗಸ್ವಾಮಿ ನಟರಾಜ್ ಅವರ ಸೋದರಳಿಯ, ಬೆಂಗಳೂರು ರಾಮಯ್ಯ ರೋಡ್ ನಿವಾಸಿ ಸಿದ್ಧರಾಜು ಅವರ ಪುತ್ರ ನಿಶಾಂತ್ ಎ.ಎಸ್ (23) ವೈದ್ಯಕೀಯ ವಿದ್ಯಾರ್ಥಿಯಾಗಿದ್ದು ನಿನ್ನೆ ರಾತ್ರಿ ಅಂಬ್ಲಮೊಗರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈತನ ಜೊತೆಗೆ ಸಹ ಸವಾರನಾಗಿದ್ದ ಮತ್ತೋರ್ವ ವಿದ್ಯಾರ್ಥಿ ಶಾಕಿಬ್ (23) ಗಂಭೀರ ಗಾಯಗೊಂಡಿದ್ದಾನೆ. 

ನಿಶಾಂತ್ ಮತ್ತು ಶಾಕಿಬ್ ಇಬ್ಬರೂ ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ದ್ವಿತೀಯ ವರ್ಷದ ಇಂಟನ್೯ಶಿಪ್ ನಡೆಸುತ್ತಿದ್ದರು. ನಿನ್ನೆ ರಾತ್ರಿ ಅಂಬ್ಲಮೊಗರಿನ ಮಜಲ್ ಬೈಲ್ ರಸ್ತೆಯಿಂದ ಬೈಕಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೋ ಅಥವಾ ಯಾವುದೋ ವಾಹನ ಡಿಕ್ಕಿ ಹೊಡೆದಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

ಇಬ್ಬರು ವಿದ್ಯಾರ್ಥಿಗಳು ಕುತ್ತಾರಿನ ಫ್ಲ್ಯಾಟ್ ಒಂದರಲ್ಲಿ ವಾಸವಿದ್ದರು. ಅಪಘಾತ ನಡೆದ ಕೆಲಹೊತ್ತಿನಲ್ಲಿ ಸ್ಥಳೀಯರು ಸೇರಿ ಮಧ್ಯರಾತ್ರಿ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ್ದರು.
ಅಪಘಾತ ನಡೆದ ಸ್ಥಳ ಮತ್ತು ಆಸ್ಪತ್ರೆಗೆ ಹೈಕೋರ್ಟ್ ನ್ಯಾಯಾಧೀಶ ರಂಗಸ್ವಾಮಿ ನಟರಾಜ್ ಭೇಟಿ ನೀಡಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A medical student, who was riding a two wheeler, died on the spot while pillion rider got injured in an accident that occurred at late night on Monday December 12 near Madaka Kwatraguthu in Kuthar. The deceased is identified as Nishanth (22), son of a retired teacher Siddaraju, resident of Yashwantpur Bengaluru.