ಬ್ರೇಕಿಂಗ್ ನ್ಯೂಸ್
16-12-22 02:17 pm Mangalore Correspondent ಕರಾವಳಿ
ಬೆಳ್ತಂಗಡಿ, ಡಿ.16: ಈ ಹಿಂದೆ ಆಗಿರುವ ಐದು ಶಾಸಕರನ್ನು ನೋಡಿದ್ದೇನೆ. ಈಗಿನ ಹರೀಶ್ ಪೂಂಜಾ ರೀತಿಯ ಶಾಸಕನನ್ನು ನೋಡಿಲ್ಲ. ಒಂದು ದೇವಸ್ಥಾನಕ್ಕೆ ಕಾಂಗ್ರೆಸ್ ವ್ಯಕ್ತಿ ಬರಬಾರದು, ಇನ್ನೊಬ್ಬ ಬರಬಾರದು ಎಂದು ಹುಕುಂ ಜಾರಿ ಮಾಡುವ ಜಾಯಮಾನ ನಾವು ನೋಡಿಲ್ಲ. ದೇವಸ್ಥಾನ ಅಂದಮೇಲೆ ಚಪ್ಪಲಿ ತೆಗೆದಿಟ್ಟು ಒಳಗೆ ಹೋಗುತ್ತೇವೆ. ಯಾಕಂದ್ರೆ, ಪಕ್ಷ, ಜಾತಿ ಎಲ್ಲವನ್ನೂ ಬದಿಗಿಟ್ಟು ನಿಷ್ಕಲ್ಮಶವಾಗಿ ದೇವರ ಬಳಿಗೆ ಹೋಗುವುದು. ಅಲ್ಲಿ ಜಾತಿ, ಧರ್ಮ, ಪಕ್ಷ ಭೇದ ಇರುವುದಿಲ್ಲ. ಇರಬಾರದು.
ಹೀಗೆಂದು ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ವೇಣೂರಿನ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ಅಸಮಾಧಾನ ಹೇಳಿಕೊಂಡಿದ್ದಾರೆ. ಶಾಸಕ ಹರೀಶ್ ಪೂಂಜಾ ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರನ್ನು ದೇವಸ್ಥಾನ ಕಾರ್ಯಗಳಿಂದ ದೂರವಿಡುವ ಸಲುವಾಗಿ ಪ್ರತಿ ಬಾರಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಈ ರೀತಿಯ ನಡೆಯನ್ನು ವಿರೋಧಿಸುವ ಸಲುವಾಗಿ ನಾವು ಹಿಂದು ಹಿತರಕ್ಷಣಾ ಸಮಿತಿ ರಚಿಸಿದ್ದೇವೆ. ಈ ರೀತಿಯ ನಡೆಯನ್ನು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಲ್ಲಿ ಪ್ರಶ್ನೆ ಮಾಡಲು ಬರುವುದಿಲ್ಲ. ಹೀಗಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮದ ರಂಗದ ಮುಂದೆ ಬಂದಿದ್ದೇವೆ ಎಂದು ಜಯರಾಮ ಶೆಟ್ಟಿ ಮತ್ತು ಅವರ ತಂಡ ಸುದ್ದಿಗೋಷ್ಟಿ ನಡೆಸಿ ಹೇಳಿದ್ದಾರೆ.
ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಕಾರ್ಯ ನಡೆಸುತ್ತಿದ್ದೇವೆ. ಹೀಗಾಗಿ ವಿವಿಧ ಕಾಮಗಾರಿಗಳನ್ನು ನಡೆಸಲು ಹಲವಾರು ವ್ಯಕ್ತಿಗಳ ಬಳಿ ಸಹಾಯ ಕೇಳಲು ಹೋಗಿದ್ದೇವೆ. ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷರು ಶಾಸಕರೇ ಆಗಿದ್ದಾರೆ. ಆದರೆ, ಈ ನಡುವೆ ಕೆಲವರ ಸಲಹೆಯಂತೆ ರಕ್ಷಿತ್ ಶಿವರಾಂ ಬಳಿಯೂ ಹೋಗಿದ್ದೆವು. ದೇವಸ್ಥಾನದ ಮುಂದಿನ ಇಂಟರ್ಲಾಕ್ ವ್ಯವಸ್ಥೆಯನ್ನು ಮಾಡಿಸಲು ಕೇಳಿಕೊಂಡಿದ್ದೆವು. ಅದಕ್ಕೆ ರಕ್ಷಿತ್ ಶಿವರಾಂ ಒಪ್ಪಿಗೆಯನ್ನೂ ನೀಡಿದ್ದರು. ಆನಂತರ, ನಮ್ಮ ಕಾರ್ಯಕರ್ತರಿಂದ ಮಾಹಿತಿ ಪಡೆದ ಶಾಸಕರು, ರಕ್ಷಿತ್ ಶಿವರಾಂ ಹೆಸರನ್ನು ಬ್ರಹ್ಮಕಲಶ ಆಮಂತ್ರಣದಲ್ಲಿ ಹಾಕಬಾರದು, ಆತನ ಹಣವನ್ನೂ ಪಡೆಯಬಾರದು. ನೀಡಿದ್ದ ಹಣವನ್ನು ಮರಳಿ ಕೊಡಿ ಎಂದು ಹೇಳಿ, ಆ ಹಣವನ್ನು ನಾನೇ ವ್ಯವಸ್ಥೆ ಮಾಡುತ್ತೇನೆಂದು ಹೇಳಿದ್ದಾರೆ. ಆನಂತರ, ರಕ್ಷಿತ್ ಶಿವರಾಂ ಬಳಿ ನಿಮ್ಮ ಹಣವನ್ನು ಮುಂದಿನ ಬಾರಿ ಸಭಾಂಗಣ ನಿರ್ಮಾಣ ಕಾರ್ಯಕ್ಕೆ ಬಳಸಿಕೊಳ್ಳುತ್ತೇವೆಂದು ನಮ್ಮವರು ಹೇಳಿ ಬಂದಿದ್ದಾರೆ.
ಆದರೆ ಈ ರೀತಿಯ ನಡೆ ಒಂದು ಸಮಾಜದಲ್ಲಿ ನಡೆಯಬಾರದು. ಹಿಂದೆ ವಸಂತ ಬಂಗೇರ ಇದ್ದಾಗಲೂ ರಥೋತ್ಸವ ಮಾಡಿದ್ದಾರೆ. ಅವರು ಬಂದು, ಇವರನ್ನು ಕರೆಯಬಾರದು, ಅವರ ಹೆಸರನ್ನು ಹಾಕಬಾರದು ಎಂದಿಲ್ಲ. ಹಿಂದೆ ಪ್ರಭಾಕರ ಬಂಗೇರ ಬಿಜೆಪಿ ಶಾಸಕ ಆಗಿದ್ದರೂ ಇಂಥ ರಾಜಕೀಯ ಮಾಡಿಲ್ಲ. ಆಡಳಿತ ಪಕ್ಷದಲ್ಲಿದ್ದವರು ಜನರ ನಡವಳಿಕೆ, ಪಕ್ಷ ನೋಡಿ ಗುರುತಿಸುವುದು ಸರಿಯಲ್ಲ. 32 ವರ್ಷಗಳಿಂದ ನಾನು ವೇಣೂರು ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರನಾಗಿದ್ದೇನೆ. ಇವರನ್ನು ಬಿಟ್ಟು ಹಿಂದಿನ ನಾಲ್ಕು ಶಾಸಕರನ್ನು ನೋಡಿದ್ದೇನೆ. ಈ ರೀತಿ ಪಕ್ಷಭೇದ ಮಾಡಿದ್ದನ್ನು ನೋಡಿಲ್ಲ. ಎಂದು ಜಯರಾಮ ಶೆಟ್ಟಿ ಹೇಳಿದ್ದಾರೆ.
ಶಾಸಕರು ಹೇಳಿದ ಮಾತ್ರಕ್ಕೆ ನೀವು ಯಾಕೆ ಅದನ್ನು ಕೇಳಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ದೇವಸ್ಥಾನಕ್ಕೆ ಸರಕಾರದ ಅನುದಾನದ ಅಗತ್ಯವಿತ್ತು. ಶಾಸಕರು ಅನುದಾನ ಬಿಡುಗಡೆ ಮಾಡುವುದರಿಂದ ನಮಗೆ ಅವರ ಮಾತನ್ನು ಸಾರಾಸಗಟಾಗಿ ನಿರಾಕರಿಸಲು ಸಾಧ್ಯವಾಗಲಿಲ್ಲ. ಆ ರೀತಿಯ ನಡೆಗೆ ಅಸಮ್ಮತಿ ಇದ್ದರೂ, ನೀವು ಹೇಳಿದಾಗೆ ಎಂದು ಹೇಳಿದ್ದೆವು. ಆನಂತರ ನಮ್ಮ ಸಮಿತಿಯವರೇ ಮುಖ ಮುಚ್ಚಿಕೊಂಡು ರಕ್ಷಿತ್ ಶಿವರಾಂ ಬಳಿ ಹೇಳಿ ಬಂದಿದ್ದರು ಎಂದು ಉತ್ತರಿಸಿದರು. ಆದರೆ ಈ ವಿಚಾರ ಬೇರೆ ರೀತಿಯಲ್ಲಿ ಸುದ್ದಿಯಾಗುತ್ತಿದೆ, ರಕ್ಷಿತ್ ಹಣ ಕೊಡಲು ಒಪ್ಪದ್ದಕ್ಕೆ ಶಾಸಕರು ಹಣ ಕೊಟ್ಟಿದ್ದಂತೆ ಎಂದೆಲ್ಲ ಹೇಳತೊಡಗಿದ್ದಾರೆ. ರಕ್ಷಿತ್ ಬಳಿಗೆ ನಾವು ಐದು ಜನ ಹೋಗಿದ್ದೆವು. ಅದಕ್ಕೆ ನಾನೂ ಸಾಕ್ಷಿಯಿದ್ದೇನೆ. ಇದಕ್ಕಾಗಿ ಸತ್ಯ ವಿಚಾರ ಜನರಿಗೆ ತಿಳಿಯಬೇಕೆಂದು ನಾವು ಮಾಧ್ಯಮಕ್ಕೆ ಬಂದಿರುವುದು. ಈ ರೀತಿ ಮುಂದೆ ನಡೆಯಲು ಬಿಡುವುದಿಲ್ಲ ಎಂದರು.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ನಾವು ಮೂರು ವರ್ಷಗಳಿಂದ ದುಡಿಯುತ್ತಿದ್ದೇವೆ. ಆದರೆ, ಶಾಸಕರು ಬಂದು ಬ್ರಹ್ಮಕಲಶ ಸಮಿತಿಯನ್ನು ಬಿಜೆಪಿ ಬೂತ್ ಕಮಿಟಿಯ ರೀತಿ ಮಾಡಿದ್ದಾರೆ. ಬಿಜೆಪಿ ಪರ ಇರುವವರನ್ನು ಮಾತ್ರ ಗುರುತಿಸಿ ಹಾಕಿದ್ದಾರೆ. ನಮ್ಮನ್ನು ಮೂಲೆಗುಂಪು ಮಾಡಿದ್ದಾರೆ. ಪ್ರತೀ ದೇವಸ್ಥಾನದಲ್ಲಿಯೂ ಇದೇ ರೀತಿ ಮಾಡುತ್ತಿದ್ದಾರೆ ಎಂದು ಇನ್ನೊಬ್ಬರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಇದೇ ರೀತಿ ವೇಣೂರಿನ ಮುದ್ದಾಡಿಯ ಮಾರವಂಡಿ ಕೊಡಮಣಿತ್ತಾಯ ದೈವಸ್ಥಾನದ ಜಾತ್ರೆ ನಡೆದಿತ್ತು. ಆ ಸಂದರ್ಭದಲ್ಲಿಯೂ ರಕ್ಷಿತ್ ಶಿವರಾಂ ಅವರನ್ನು ಕರೆದಲ್ಲಿ ನಾನು ಬರುವುದಿಲ್ಲ ಎಂದು ಶಾಸಕರು ಹೇಳಿದ್ದರು. ಆನಂತರ, ಆ ರೀತಿ ಮಾಡುವುದು ಸರಿಯಲ್ಲ ಎಂದು ನಾವು ನಿರಾಕರಣೆ ಮಾಡಿದ್ದೆವು. ಇವರು ಕೆಲವರು ಸೇರಿ ಪ್ರತಿಭಟನೆ ನಡೆಸುತ್ತೇವೆಂದು ಬೆದರಿಕೆ ಹಾಕಿದ್ದರು. ಆನಂತರ, ರಕ್ಷಿತ್ ಶಿವರಾಂ ವೇದಿಕೆಗೂ ಬಂದಿದ್ದರು. ವೇದಿಕೆಯಲ್ಲಿ ಮಾತನಾಡುವುದಕ್ಕೂ ಅವಕಾಶ ನೀಡಿದ್ದೆವು. ಅದಕ್ಕೆ ಶಾಸಕರು ನಾನು ಯಾವುದೇ ಅನುದಾನ ಕೊಡುವುದಿಲ್ಲ ಎಂದು ಹೇಳಿದ್ದರು. ಆದರೆ ಇಂಥ ಸ್ಥಿತಿ ಮುಂದೆ ಯಾವತ್ತೂ ನಡೆಯಬಾರದು ಎಂದು ದೈವಸ್ಥಾನದ ಕಮಿಟಿಯ ಸದಸ್ಯರ ಪ್ರಭಾಕರ ಹೇಳಿದರು.
I have seen five MLAs who have been elected in the past. I haven't seen an MLA like Harish Poonja today. We have never seen a Congress man coming to one temple and another not to come. After the temple, we take off our slippers and go inside. Because, leaving aside party and caste, one goes to God flawlessly. There will be no caste, creed or party distinction.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm