ಸಿಗದ ವಿದ್ಯಾರ್ಥಿ ವೇತನ, ಪದವಿ ಫಲಿತಾಂಶ ವಿಳಂಬ ; ಎನ್ಎಸ್ ಯುಐ ಕಾರ್ಯಕರ್ತರ ಪ್ರತಿಭಟನೆ 

17-12-22 11:08 pm       Mangalore Correspondent   ಕರಾವಳಿ

ವಿದ್ಯಾರ್ಥಿ ವೇತನ, ಪದವಿ ಫಲಿತಾಂಶ ಪ್ರಕಟ ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ಎನ್‌.ಎಸ್‌. ಯು.ಐ. ರಾಜ್ಯ ಮಟ್ಟದಲ್ಲಿ ಕಾಲೇಜು ಬಂದ್‌ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಮಂಗಳೂರು, ಡಿ.17 : ವಿದ್ಯಾರ್ಥಿ ವೇತನ, ಪದವಿ ಫಲಿತಾಂಶ ಪ್ರಕಟ ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ಎನ್‌.ಎಸ್‌. ಯು.ಐ. ರಾಜ್ಯ ಮಟ್ಟದಲ್ಲಿ ಕಾಲೇಜು ಬಂದ್‌ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಎನ್‌.ಎಸ್‌.ಯು.ಐ. ಅಧ್ಯಕ್ಷ ಸವಾದ್‌ ಸುಳ್ಯ, ಪದವಿ ಪರೀಕ್ಷೆ ಮುಗಿದು ಆರೇಳು ತಿಂಗಳು ಕಳೆದರೂ ಮಂಗಳೂರು ವಿವಿಯಲ್ಲಿ ಫಲಿತಾಂಶ ಪ್ರಕಟವಾಗಿಲ್ಲ. ಇದರಿಂದಾಗಿ ಮುಂದಿನ ಸೆಮಿಸ್ಟರ್‌ ಕಲಿಕೆಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸರಕಾರ ಘೋಷಿಸಿರುವ ಉಚಿತ ಬಸ್‌ ಪಾಸ್‌ ಇನ್ನೂ ಜಾರಿಯಾಗಿಲ್ಲ. ಈಗ ಅವೈಜ್ಞಾನಿಕವಾಗಿ ಎನ್‌ಇಪಿ ನೀತಿಯನ್ನು ಜಾರಿಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಂಗಳೂರು ವಿ.ವಿ. ಒಂದು ವರ್ಷದಿಂದ ಫಲಿತಾಂಶ ಪ್ರಕಟಿಸಿಲ್ಲ. ಉನ್ನತ ವ್ಯಾಸಂಗಕ್ಕೆ ಹೋಗುವವರಿಗೆ ಇದರಿಂದ ಸಮಸ್ಯೆಯಾಗಿದೆ. ಗೊಂದಲ ಬಗೆಹರಿಯುವ ಮುನ್ನವೇ ಎನ್‌ಇಪಿ ಜಾರಿಯಾಗುತ್ತಿದೆ ಎಂದು ಹೇಳಿದರು. 

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಬೇಕು. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪಿಸಬೇಕು. ಸಮರ್ಪಕ ವಾಗಿ “ಅರಿವು ಸಾಲ’ ಕಲ್ಪಿಸಬೇಕು. ಕೇಂದ್ರ ಸರಕಾರ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿದೆ. ಹಲವು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನೇ ನಂಬಿ ವಿದ್ಯಾರ್ಜನೆ ಮಾಡುತ್ತಾರೆ. ತತ್‌ಕ್ಷಣ ವಿದ್ಯಾರ್ಥಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು. ಎನ್‌.ಎಸ್‌.ಯು.ಐ. ಮುಖಂಡರಾದ ಸುಹಾನ್‌ ಆಳ್ವ, ಶ್ವಾನ್‌ ಸಿರಿ, ಸಫಾನ್‌ ಕುದ್ರೋಳಿ, ಸಿರಾಜ್‌ ಗುದ್ರು, ಓಂಶ್ರೀ, ಸಾಹಿಲ್‌, ನಿಖೀಲ್‌ ಶೆಟ್ಟಿ, ಅಝೀಮ್‌, ಅಹಾ°ಫ್‌, ಪ್ರಜ್ವಲ್‌, ಆತೂಫ್‌ ಇದ್ದರು.

NSUI activist statewide protest against negligence of degree student result in Mangalore.