ಬ್ರೇಕಿಂಗ್ ನ್ಯೂಸ್
20-12-22 01:57 pm Mangalore Correspondent ಕರಾವಳಿ
ಮಂಗಳೂರು, ಡಿ.20: ನಗರದ ಬಂಟ್ಸ್ ಹಾಸ್ಟೆಲ್ ವೃತ್ತದಲ್ಲಿ ಕಳೆದೊಂದು ವಾರದಿಂದ ಡ್ರೈನೇಜ್ ನೀರು ಹೊರ ಚಿಮ್ಮುತ್ತಿದ್ದು, ರಸ್ತೆಯಲ್ಲೆಲ್ಲ ಟಾಯ್ಲೆಟ್ ನೀರು ಹರಿಯುತ್ತಿದೆ. ಹೀಗಿದ್ದರೂ, ಚಿಮ್ಮುತ್ತಿರುವ ಡ್ರೈನೇಜ್ ನೀರನ್ನು ನಿಲ್ಲಿಸಲು ಮಹಾನಗರ ಪಾಲಿಕೆಯ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಮರದ ಬೇರಿನಿಂದಾಗಿ ಡ್ರೈನೇಜ್ ಪೈಪ್ ಒಡೆದಿದೆ ಎಂದು ಪಾಲಿಕೆಯವರು ಸಬೂಬು ಹೇಳುತ್ತಿದ್ದರು.
ವಾರ ಕಾಲ ಡ್ರೈನೇಜ್ ನೀರಿನಲ್ಲಿ ಜನರನ್ನು ತೋಯಿಸಿದ ಬಳಿಕ ಇದೀಗ ಅಲ್ಲಿದ್ದ ಮರಕ್ಕೆ ಕೊಡಲಿ ಹಾಕಿದ್ದಾರೆ. ಪೈ ಸೇಲ್ಸ್ ಕಟ್ಟಡದ ಬಳಿಯಿದ್ದ ಮರವನ್ನು ತೆರವು ಮಾಡಿದ್ದಾರೆ. ಆದರೂ ಡ್ರೈನೇಜ್ ನೀರು ಮಾತ್ರ ನಿಂತಿಲ್ಲ. ರಸ್ತೆಯಲ್ಲಿ ಗಬ್ಬು ನಾತ ಬೀರುವ ಟಾಯ್ಲೆಟ್ ನೀರು ಮಳೆ ನೀರಿನಂತೆ ಹರಿಯುತ್ತಿದ್ದು, ವಾಹನ ಪ್ರಯಾಣಿಕರು ನೀರನ್ನು ಹಾರಿಸುತ್ತಲೇ ಚಲಾಯಿಸುತ್ತಿದ್ದಾರೆ. ಸಾರ್ವಜನಿಕರು, ಆಸುಪಾಸಿನ ಶಾಲೆಗಳ ಮಕ್ಕಳು ಅದೇ ನೀರಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ.
ಈ ಬಗ್ಗೆ ಆ ಭಾಗದ ಕಾರ್ಪೊರೇಟರ್ ವಿನಯರಾಜ್ ಬಳಿ ಕೇಳಿದರೆ, ಅದರ ಕೆಲಸ ಆಗ್ತಾ ಇದೆ, ಮರದ ಬೇರು ಬಂದು ಡ್ರೈನೇಜ್ ಒಡೆದಿದೆ ಎನ್ನುತ್ತಿದ್ದಾರೆ. ನಿನ್ನೆ ಮರವನ್ನು ಕಡಿದು ಹಾಕಿದ್ರಲ್ಲಾ, ರಾತ್ರಿ ವೇಳೆ ಗುಂಡಿ ತೆಗೆದು ಡ್ರೈನೇಜ್ ನೀರನ್ನು ನಿಲ್ಲಿಸಬಹುದಿತ್ತಲ್ಲಾ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ ಉಡಾಫೆ ಮಾತನಾಡಿ ಫೋನ್ ಕಟ್ ಮಾಡಿದರು. ಪಕ್ಕದ ಕೊಡಿಯಾಲಬೈಲ್ ವಾರ್ಡಿನ ಸುಧೀರ್ ಶೆಟ್ಟಿ ಬಳಿ ಹೇಳಿದರೆ, ನನಗೆ ವಿಷಯವೇ ಗೊತ್ತಿಲ್ಲ ಎನ್ನುತ್ತಿದ್ದಾರೆ. ಅಲ್ಲಿಂದ ಹೋಗುತ್ತಿಲ್ಲವೇ ಎಂದಿದ್ದಕ್ಕೆ ನಾನು ನೇರವಾಗಿ ಹೈವೇಗೆ ಹೋಗುವುದು, ಅದು ವಿನಯರಾಜ್ ಗೆ ಬರ್ತದೆ, ನಂಗೆ ಬರಲ್ಲ ಎಂದರು. ನೀವು ಆಡಳಿತ ಪಕ್ಷದವರು, ಜವಾಬ್ದಾರಿ ಇದ್ದವರಲ್ಲವೇ.. ಒಂದು ಡ್ರೈನೇಜ್ ಪೈಪ್ ಒಡೆದಿದ್ದನ್ನು ನಿಲ್ಸಕ್ಕಾಗಲ್ಲವೇ ಎಂದಿದ್ದಕ್ಕೆ, ಯುಜಿಡಿ ಇಂಜಿನಿಯರ್ ಗೆ ಕಾನ್ಫರೆನ್ಸ್ ಕಾಲ್ ಹಾಕಿದರು.
40 ವರ್ಷ ಹಳೆಯ ಮಣ್ಣಿನ ಪೈಪ್ ಒಳಗಿದೆ, ಅದು ಮರದ ಬೇರಿನಿಂದಾಗಿ ಒಡೆದು ಹೋಗಿದೆ ಎಂದರು ಇಂಜಿನಿಯರ್. ಮೊನ್ನೆ ಮೊನ್ನೆ ಸ್ಮಾರ್ಟ್ ಸಿಟಿಯೆಂದು ಬಂಟ್ಸ್ ಹಾಸ್ಟೆಲ್ ರಸ್ತೆಯನ್ನು ಕಡಿದು ಡ್ರೈನೇಜ್ ಪೈಪ್ ಕೆಲಸ ಮಾಡಿಸಿದ್ರಲ್ಲಾ ಎಂದು ಕೇಳಿದ್ದಕ್ಕೆ, ಅದು ಒಂದು ಭಾಗದ ಕೆಲಸ ಆಗಿದೆ, ಜ್ಯೋತಿಯಿಂದ ಬಂಟ್ಸ್ ಹಾಸ್ಟೆಲ್ ರಸ್ತೆಯ ಕೆಲಸ ಆಗಿಲ್ಲ ಎಂದರು. ಈಗ ಡ್ರೈನೇಜ್ ನೀರು ನಿಲ್ಲಿಸಲು ಎಷ್ಟು ದಿನ ಬೇಕು ಎಂದಿದ್ದಕ್ಕೆ, ಕನಿಷ್ಠ ಇನ್ನೊಂದು ವಾರ ಬೇಕು ಎಂದರು. ಡ್ರೈನೇಜ್ ನೀರು ರಸ್ತೆಗೆ ಹರಿಯುತ್ತಿದೆ, ಈಗಲೇ ಒಂದು ವಾರ ಆಯ್ತು. ನಿಮಗೆ ಡ್ರೈನೇಜ್ ನೀರನ್ನು ನಿಲ್ಸಕ್ಕಾಗಿಲ್ಲ, ನೀವು ಯಾಕಿರೋದು ಮತ್ತೆ ಎಂದು ಕೇಳಿದ್ದಕ್ಕೆ ಉತ್ತರ ಇಲ್ಲ.
ಇದೇ ವಿಚಾರದ ಬಗ್ಗೆ ಮಂಗಳೂರು ಪಾಲಿಕೆ ಮೇಯರ್ ಜಯಾನಂದ ಅಂಚನ್ ಬಳಿ ಕೇಳಿದರೆ, ನಿನ್ನೆಯಷ್ಟೇ ವಿಷಯ ಗೊತ್ತಾಗಿದೆ. ಇವತ್ತೇ ಸರಿಪಡಿಸುತ್ತೇನೆ. ಮರವನ್ನು ಫಾರೆಸ್ಟ್ ಪರ್ಮಿಶನ್ ತೆಗೆದು ಕಟ್ ಮಾಡಲಾಗಿದೆ ಎಂದರು. ಮರವನ್ನು ಸೋಮವಾರ ಸಂಜೆಯೇ ಬುಡದಿಂದ ಕತ್ತರಿಸಲಾಗಿತ್ತು. ಡ್ರೈನೇಜ್ ನೀರು ಒಸರುವುದನ್ನು ನಿಲ್ಲಿಸಬೇಕು ಎಂಬ ಕಾಳಜಿ ಇರುತ್ತಿದ್ದರೆ, ರಾತ್ರಿಯೇ ಕಾಮಗಾರಿ ನಡೆಸಿ ಏನಾದ್ರೂ ಮಾಡುತ್ತಿದ್ದರು.
ಡ್ರೈನೇಜ್ ಹೆಸರಲ್ಲಿ ಸುರಿದ ಕೋಟಿಗಳೆಷ್ಟು ?
ಸ್ಮಾರ್ಟ್ ಸಿಟಿಗೂ ಮೊದಲೇ ಮಂಗಳೂರಿನ ಡ್ರೈನೇಜ್ ಕಾಮಗಾರಿಗಾಗಿ ಕಳೆದ ಬಾರಿ ಜೆಆರ್ ಲೋಬೊ ಶಾಸಕರಾಗಿದ್ದಾಗ 350 ಕೋಟಿ ಸುರಿಯಲಾಗಿತ್ತು. ಈಗ ಸ್ಮಾರ್ಟ್ ಸಿಟಿ ಹೆಸರಲ್ಲಿ ಮತ್ತೊಂದಷ್ಟು ಕೋಟಿ ಸುರಿಯಲಾಗುತ್ತಿದೆ. ನಾಲ್ಕು ವರ್ಷಗಳಿಂದ ಮಂಗಳೂರಿನ ಕಾಂಕ್ರೀಟ್ ರಸ್ತೆಗಳನ್ನು ಕಡಿದು ಡ್ರೈನೇಜ್ ಪೈಪ್ ಲೈನ್ ಮಾಡಲಾಗ್ತಿದೆ. ಕೋಟ್ಯಂತರ ಅನುದಾನದ ಹೆಸರಲ್ಲಿ ರಾಜಕಾರಣಿಗಳು, ಅಧಿಕಾರಿಗಳು ತಿಂದು ತೇಗುತ್ತಿದ್ದಾರೆ. ಇಷ್ಟೆಲ್ಲ ಕೋಟಿ ಸುರಿದಿದ್ದರೂ, ಪಾಲಿಕೆಯ ಇಂಜಿನಿಯರ್ 40 ವರ್ಷ ಹಳೆಯ ಪೈಪ್ ಲೈನೇ ಇದೆ ಎನ್ನುತ್ತಿದ್ದಾರೆ. ರಸ್ತೆಯಲ್ಲಿ ರಾಡಿಯೆದ್ದರೂ, ಅಧಿಕಾರಸ್ಥರಿಗೆ ಕ್ಯಾರ್ ಇಲ್ಲದಾಗಿದೆ. ಡ್ರೈನೇಜ್ ಲೀಕ್ ಆಗುವುದಕ್ಕೆ ಮರ ಸಮಸ್ಯೆ ಆಗಿರಲ್ಲ. ಅದರ ಬೇರು ಸಮಸ್ಯೆ ಆಗಿರಬಹುದು. ಅದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಇಷ್ಟೆಲ್ಲ ಕಾಂಕ್ರೀಟ್ ಕಾಮಗಾರಿ ಆಗ್ತಿರೋವಾಗ ಇವರಿಗೆ ಹಳೆಕಾಲದ ಪೈಪ್ ಲೈನ್ ಬದಲಿಸಲು ಆಗಿಲ್ಲವೆಂದ್ರೆ ಅದಕ್ಕೆ ಮರವನ್ನು ದೂರಿ ಪ್ರಯೋಜನ ಇಲ್ಲ. ಈಗ ಯಾರದ್ದೋ ಹಿತಾಸಕ್ತಿ ಕಾಯಲು ಮರಕ್ಕೆ ಕೊಡಲಿ ಹಾಕಿದ್ದಾರೆ, ಅಷ್ಟೇ.
Mangalore Smart city blunder, Drainage water out on road casing havoc to pedestrians and riders at bunts hostel
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm