ಬ್ರೇಕಿಂಗ್ ನ್ಯೂಸ್
20-12-22 06:17 pm Mangalore Correspondent ಕರಾವಳಿ
ಸುಳ್ಯ, ಡಿ.20 : ಜುವೆಲ್ಲರಿ ಉದ್ಯಮಿ ನವೀನ್ ಗೌಡ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆ ಠಾಣೆಯಲ್ಲಿ ಕಾಂಗ್ರೆಸ್ ನಾಯಕಿ ದಿವ್ಯಪ್ರಭ ಚಿಲ್ತಡ್ಕ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಡಿ.19ರಂದು ಮಧ್ಯಾಹ್ನ ಆಂಬ್ಯುಲೆನ್ಸ್ ಸಹಿತ ಇತರೇ ವಾಹನಗಳಲ್ಲಿ ಬಂದ ತಂಡವೊಂದು ಬೆಳ್ಳಾರೆ ಬಳಿಯ ತನ್ನ ಮನೆಯಲ್ಲಿದ್ದ ನವೀನ್ ಗೌಡ ಅವರನ್ನು ಬಲವಂತವಾಗಿ ಅಂಬ್ಯುಲೆನ್ಸ್ ನಲ್ಲಿ ಹಾಕಿ ಎಳೆದೊಯ್ದಿತ್ತು. ಈ ವೇಳೆ, ತಡೆಯಲು ಬಂದಿದ್ದ ನವೀನ್ ತಾಯಿ ಮತ್ತು ಅತ್ತಿಗೆಯ ಮೇಲೆ ಹಲ್ಲೆಗೂ ಯತ್ನಿಸಲಾಗಿತ್ತು.
ನವೀನ್ ಅವರ ತಾಯಿ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ್ ಅವರ ತಂದೆ ಮಾಧವ ಗೌಡ, ನವಿನ್ ಪತ್ನಿ ಸ್ಪಂದನಾ, ಆಕೆಯ ತಾಯಿ ದಿವ್ಯಪ್ರಭ ಚಿಲ್ತಡ್ಕ, ಪರುಶುರಾಮ್, ಸ್ಪರ್ಶಿತ್ ಹಾಗೂ ನವೀನ್ ರೈ ತಂಬಿನಮಕ್ಕಿ ಪ್ರಕರಣದ ಆರೋಪಿಗಳು.
ನವೀನ್ ಕುಮಾರ್ ಹಾಗೂ ಆತನ ಪತ್ನಿ ಸ್ಪಂದನಾ ಮಧ್ಯೆ ಮೂರು ತಿಂಗಳಿನಿಂದ ವೈಮನಸ್ಸು ಉಂಟಾಗಿದ್ದು ಪತ್ನಿ ತವರು ಮನೆಗೆ ಹೋಗಿದ್ದರು. ಕಳೆದ ಅಕ್ಟೋಬರ್ ನಲ್ಲಿ ಈಕೆ ಬೆಳ್ಳಾರೆಯ ಲಾಡ್ಜ್ ನಲ್ಲಿ ಎಸ್ಐ ಜೊತೆಗೆ ಸಿಕ್ಕಿಬಿದ್ದ ಬಳಿಕ ಗಂಡ ನವೀನ್, ಇನ್ಮುಂದೆ ತನ್ನ ಮನೆಗೆ ಬರಬಾರದೆಂದು ಸೂಚಿಸಿದ್ದರು. ಇದೇ ವಿಚಾರದಲ್ಲಿ ಎರಡು ಕುಟುಂಬದ ಮಧ್ಯೆ ಕಲಹ ಉಂಟಾಗಿತ್ತು. ಇತ್ತೀಚೆಗೆ ಮಾತುಕತೆ ನಡೆದಿದ್ದು ನವೀನ್ ತನಗೆ ಪತ್ನಿ ಬೇಡವೆಂದು ಹೇಳಿದ್ದರು ಎನ್ನಲಾಗಿದೆ. ಆದರೆ ಡಿ.18 ರಂದು ಸ್ಪಂದನಾ ಆಕೆಯ ಹೆತ್ತವರ ಜೊತೆ ನವೀನ್ ಮನೆಗೆ ಬಂದಿದ್ದು ಜಟಾಪಟಿ ನಡೆದಿತ್ತು. ಅಂದು ರಾತ್ರಿ ತನ್ನ ಮನೆಗೆ ಬರಕೂಡದು ಎಂದು ನವೀನ್ ಮನೆಗೆ ಬಾಗಿಲು ಹಾಕಿದ್ದರೆ, ಪತ್ನಿ ಮನೆಯ ಹೊರಗೆ ಮಲಗಿದ್ದರು ಎನ್ನಲಾಗಿದೆ. ಹೀಗಾಗಿ ಡಿ.19 ರಂದು ಸ್ಪಂದನಾ ಅವರ ತಾಯಿ, ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ, ತಂದೆ ಪರಶುರಾಮ, ತಮ್ಮ ಸ್ಪರ್ಶಿತ್ ಸೇರಿದಂತೆ ಏಳೆಂಟು ಮಂದಿ ನವೀನ್ ಮನೆಗೆ ಬಂದಿದ್ದರು. ಬೆಳ್ಳಾರೆ ಗ್ರಾಮದ ಕಾವಿನಮೂಲೆ ಎಂಬಲ್ಲಿನ ತನ್ನ ಮನೆ ಅಂಗಳದಲ್ಲಿ ನಿಂತಿದ್ದ ನವೀನ್ ಅವರನ್ನು ಆಂಬುಲೆನ್ಸ್ ವಾಹನದಲ್ಲಿ ಬಲವಂತ ಕುಳ್ಳಿರಿಸಿ ಅಪಹರಿಸಿದ್ದರು. ಆಂಬುಲೆನ್ಸಲ್ಲಿ ಹೋಗುತ್ತಿದ್ದಾಗ ಬಲ ಕಳೆದುಕೊಳ್ಳುವ ರೀತಿ ಇಂಜೆಕ್ಷನ್ ನೀಡಿದ್ದಾರೆಂದು ಆರೋಪಿಸಲಾಗಿದೆ.
ಇದೇ ವೇಳೆ, ತಡೆಯಲು ಹೋದ ತಾಯಿ ನೀರಜಾಕ್ಷಿ ಮತ್ತು ಅವರ ಹಿರಿಯ ಸೊಸೆ ಪ್ರಜ್ಞಾ ಪಿ.ಎಸ್ ಅವರನ್ನು ಆರೋಪಿಗಳು ಅಂಗಳದಲ್ಲಿ ಎಳೆದಾಡಿ ಕಾಲಿನಿಂದ ತುಳಿದು ರಂಪಾಟ ಮಾಡಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡಿದ್ದ ನೀರಜಾಕ್ಷಿ ಮತ್ತು ಪ್ರಜ್ಞಾ ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ, ಕೊಡಗಿನ ಸುಂಟಿಕೊಪ್ಪದಲ್ಲಿ ನವೀನ್ ಅವರನ್ನು ಅಪಹರಿಸಿ ಒಯ್ಯುತ್ತಿದ್ದ ಆಂಬುಲೆನ್ಸನ್ನು ಸ್ಥಳೀಯರು ಅಡ್ಡಗಟ್ಟಿ ಅಲ್ಲಿನ ಪೊಲೀಸರಿಗೆ ಒಪ್ಪಿಸಿದ್ದರು. ಘಟನೆ ಬಗ್ಗೆ ನವೀನ್ ಗೌಡ ತಾಯಿ ನೀರಜಾಕ್ಷಿ ಪೊಲೀಸ್ ದೂರು ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೀನ್ ಗೌಡ ಬೆಳ್ಳಾರೆಯಲ್ಲಿ ಕಾಮಧೇನು ಎಂಬ ಜುವೆಲ್ಲರಿ ಹೊಂದಿದ್ದಾರೆ. ಈತನ ಅತ್ತೆಯಾಗಿರುವ ದಿವ್ಯಪ್ರಭ ಚಿಲ್ತಡ್ಕ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರ ಕುಟುಂಬದ ಕಲಹ ಈಗ ಬೀದಿಗೆ ಬಂದಿದ್ದು ಜನರಿಗೆ ಮನರಂಜನೆ ನೀಡುವಂತಾಗಿದೆ.
Jewelry businessman navin gouda kidnap case sullia police registered case against congress ticket aspirant divyaprabha and others.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm