ಅಗೆದಿಟ್ಟ ಗುಂಡಿಗೆ ಬಿದ್ದ ಮಹಿಳೆ ; ಏರ್ಟೆಲ್ ಕಂಪನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪಾಲಿಕೆ ಸೂಚನೆ 

21-12-22 10:33 pm       Mangalore Correspondent   ಕರಾವಳಿ

ನಗರದ ಜ್ಯೋತಿ ವೃತ್ತದಿಂದ ಮಿಲಾಗ್ರಿಸ್ ಕಡೆಗೆ ಸಾಗುವ ರಸ್ತೆಯ ಫುಟ್ ಪಾತ್ ನಲ್ಲಿ ಅಗೆದಿಟ್ಟ ಗುಂಡಿಗೆ ಬಿದ್ದು ಮಹಿಳೆ ಗಾಯಗೊಂಡ ಪ್ರಕರಣದಲ್ಲಿ ತೀವ್ರ ಮುಜುಗರಕ್ಕೀಡಾದ ಮಹಾನಗರ ಪಾಲಿಕೆ, ಘಟನೆ ಸಂಬಂಧಿಸಿ ಗುಂಡಿ ತೆಗೆದಿಟ್ಟು ನಿರ್ಲಕ್ಷ್ಯ ವಹಿಸಿದ ಏರ್ಟೆಲ್ ಕಂಪನಿ ವಿರುದ್ಧ ಬಂದರು ಠಾಣೆಗೆ ದೂರು ನೀಡಿದೆ. 

ಮಂಗಳೂರು, ಡಿ.21 : ನಗರದ ಜ್ಯೋತಿ ವೃತ್ತದಿಂದ ಮಿಲಾಗ್ರಿಸ್ ಕಡೆಗೆ ಸಾಗುವ ರಸ್ತೆಯ ಫುಟ್ ಪಾತ್ ನಲ್ಲಿ ಅಗೆದಿಟ್ಟ ಗುಂಡಿಗೆ ಬಿದ್ದು ಮಹಿಳೆ ಗಾಯಗೊಂಡ ಪ್ರಕರಣದಲ್ಲಿ ತೀವ್ರ ಮುಜುಗರಕ್ಕೀಡಾದ ಮಹಾನಗರ ಪಾಲಿಕೆ, ಘಟನೆ ಸಂಬಂಧಿಸಿ ಗುಂಡಿ ತೆಗೆದಿಟ್ಟು ನಿರ್ಲಕ್ಷ್ಯ ವಹಿಸಿದ ಏರ್ಟೆಲ್ ಕಂಪನಿ ವಿರುದ್ಧ ಬಂದರು ಠಾಣೆಗೆ ದೂರು ನೀಡಿದೆ. 

ಈ ಬಗ್ಗೆ ಮಹಾನಗರ ಪಾಲಿಕೆಯಿಂದ ಬಂದರು ಠಾಣಾಧಿಕಾರಿಗೆ ದೂರು ಪತ್ರ ಬರೆಯಲಾಗಿದ್ದು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿದೆ. ಡಿ.19ರಂದು ಮಧ್ಯಾಹ್ನ ರಸ್ತೆ ಬದಿ ನಡೆದು ಹೋಗುತ್ತಿದ್ದ ವೃದ್ಧ ಮಹಿಳೆ‌ ಅಗೆದಿಟ್ಟ ಗುಂಡಿಗೆ ಬಿದ್ದು ಗಾಯಗೊಂಡಿದ್ದರು. ಈ ಕುರಿತ ಫೋಟೊ ವೈರಲ್ ಆಗಿದ್ದು ಮತ್ತು ಸ್ಮಾರ್ಟ್ ಸಿಟಿಯ ಕರ್ಮಕಾಂಡ ಎನ್ನುವ ರೀತಿ ಸುದ್ದಿ ಬಿತ್ತರಗೊಂಡಿದ್ದರಿಂದ ಮಂಗಳೂರಿನ ಜನಪ್ರತಿನಿಧಿಗಳು ಮತ್ತು ಮಹಾನಗರ ಪಾಲಿಕೆಗೆ ಮುಜುಗರ ಆಗಿತ್ತು. 

ಘಟನೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯವರು ಬಂದರು ಠಾಣೆಗೆ ಪತ್ರ ಬರೆದು ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ಅಲ್ಲದೆ, ಭೂಗತ ಕೇಬಲ್‌ಗಳನ್ನು ಸರಿಪಡಿಸಲು ಪಾದಚಾರಿ ಮಾರ್ಗವನ್ನು ಅಗೆದು ಏರ್‌ಟೆಲ್ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಕಂಪನಿಯು ಕಾಮಗಾರಿ ನಡೆಸುವುದಕ್ಕೆ ಸ್ಥಳೀಯಾಡಳಿತ ಸಂಸ್ಥೆಯ ಅನುಮತಿ ಪಡೆದಿಲ್ಲ ಅಥವಾ ನಿವಾಸಿಗಳನ್ನು ಎಚ್ಚರಿಸಲು ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನೂ ತೆಗೆದುಕೊಂಡಿಲ್ಲ. ಮೇಲಾಗಿ ದುರಸ್ತಿ ಕಾರ್ಯ ನಡೆದರೂ ಗುಂಡಿ ಮುಚ್ಚದ ಕಾರಣ ಮಹಿಳೆಯೊಬ್ಬರು ಗುಂಡಿಗೆ ಬಿದ್ದು ಗಾಯಗೊಳ್ಳಲು ಕಾರಣವಾಗಿದೆ ಎಂದು ಈ ಕುರಿತು ಬರೆದಿರುವ ದೂರು ಪತ್ರದಲ್ಲಿ ತಿಳಿಸಿದೆ.

Telecom giant Airtel is facing a criminal case in Karnataka's Mangaluru for digging a pit without permission and failing to close it after its work was finished. Mangaluru city's civic body, the MCC - Mangaluru City Corporation - filed the case on Tuesday after a woman fell into the pit and sustained injuries.