ರಂಗಸ್ಥಳದಲ್ಲಿಯೇ ಕುಸಿದು ಬಿದ್ದು ಕಟೀಲು ಯಕ್ಷಗಾನ ಕಲಾವಿದ ಸಾವು ; ಶಿಶುಪಾಲನ ವಧೆಗೂ ಮುನ್ನ ಮರಣ !

23-12-22 01:59 pm       HK News Desk   ಕರಾವಳಿ

ಯಕ್ಷಗಾನ ನಡೆಯುತ್ತಿದ್ದಾಗಲೇ ರಂಗಸ್ಥಳದಲ್ಲಿ ಹಿರಿಯ ಕಲಾವಿದರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಟೀಲಿನಲ್ಲಿ ನಡೆದಿದೆ.

ಮಂಗಳೂರು, ಡಿ.23: ಯಕ್ಷಗಾನ ನಡೆಯುತ್ತಿದ್ದಾಗಲೇ ರಂಗಸ್ಥಳದಲ್ಲಿ ಹಿರಿಯ ಕಲಾವಿದರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಟೀಲಿನಲ್ಲಿ ನಡೆದಿದೆ. ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು (58) ಗುರುವಾರ ರಾತ್ರಿ ಕಟೀಲಿನಲ್ಲಿ  ನಡೆಯುತ್ತಿದ್ದ ಯಕ್ಷಗಾನದ ಸಂದರ್ಭ ರಂಗಸ್ಥಳದಲ್ಲೇ ಕುಸಿದು ಬಿದ್ದು ಸಾವು ಕಂಡಿದ್ದಾರೆ.

ಕಟೀಲಿನ ಸರಸ್ವತೀ ಸದನದಲ್ಲಿ ಕಟೀಲು ದೇವಸ್ಥಾನದ ನಾಲ್ಕನೇ ಮೇಳದ ಯಕ್ಷಗಾನ ಬಯಲಾಟ ಗುರುವಾರ ರಾತ್ರಿ ನಡೆಯುತ್ತಿತ್ತು. ತ್ರಿಜನ್ಮ ಮೋಕ್ಷ ಪ್ರಸಂಗದಲ್ಲಿ ಗುರುವಪ್ಪ ಬಾಯಾರು ಅವರು ಶಿಶುಪಾಲನ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಕೊನೆಯ ಭಾಗದಲ್ಲಿ ಶಿಶುಪಾಲನ ವಧೆ ನಡೆಯಬೇಕಿತ್ತು.  ಕೃಷ್ಣ ಇನ್ನಿತರ ವೇಷಧಾರಿಗಳು ರಣರಂಗಕ್ಕೆ ರೆಡಿಯಾಗಿದ್ದರು. ಅಲ್ಲಿ ವರೆಗೂ ರಂಗಸ್ಥಳದಲ್ಲಿ ಬಿಸಿ ಎಬ್ಬಿಸಿದ್ದ ಗುರುವಪ್ಪ ಬಾಯಾರು ತನ್ನ ಮಾತು ಮುಗಿಸಿ ಬದಿಯಲ್ಲಿ ನಿಂತಿದ್ದರು.

ಅಷ್ಟರಲ್ಲಿಯೇ ಶಿಶುಪಾಲನ ಪಾತ್ರಧಾರಿ ಗುರುವಪ್ಪ ಬಾಯಾರು ರಂಗಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ನೋಡ ನೋಡುತ್ತಲೇ ಎತ್ತರದ ರಂಗಸ್ಥಳದಿಂದ ಕುಸಿದು ಹೊರಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ.

Guruvappa Bayaru (58), an artiste of Sri Durgaparameshwari Yakshagana troupe, breathed his last on Thursday December 22 night during the performance of Yakshagana play due to cardiac arrest.