ಬ್ರೇಕಿಂಗ್ ನ್ಯೂಸ್
23-12-22 04:58 pm Mangalore Correspondent ಕರಾವಳಿ
ಮಂಗಳೂರು, ಡಿ.23: ಕಸ್ತೂರಿ ರಂಗನ್ ವರದಿಯನ್ನು ಕೈಬಿಡಲಾಗಿದೆ ಎಂದು ರಾಜ್ಯ ಸರಕಾರ ಸುಮ್ಮನೆ ಹೇಳುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ನಾಯಕರು ರಾಜಕೀಯ ಕಾರಣಕ್ಕೆ ಹೇಳಿಕೆ ನೀಡುತ್ತಿದ್ದಾರೆ. ವಾಸ್ತವದಲ್ಲಿ ಕಸ್ತೂರಿ ರಂಗನ್ ಕರಡು ವರದಿ ಜಾರಿಯಲ್ಲಿದೆ. ಅದನ್ನು ಡಬಲ್ ಇಂಜಿನ್ ಸರಕಾರದಲ್ಲಿ ಸಂಪೂರ್ಣ ಹಿಂಪಡೆಯುವ ಕೆಲಸ ಆಗಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಅರಣ್ಯ ಸಂರಕ್ಷಣೆ ಉದ್ದೇಶದಿಂದ ಕಸ್ತೂರಿ ರಂಗನ್ ವರದಿಯನ್ನು ರೆಡಿ ಮಾಡಲಾಗಿತ್ತು. ಆದರೆ ವರದಿಯ ಡ್ರಾಫ್ಟ್ ನೋಟಿಫಿಕೇಶನ್ ಆದಾಗ ಅದಕ್ಕೆ ಜನವಿರೋಧ ಬಂದಿತ್ತು. ಬಹಳಷ್ಟು ಕಡೆಗಳಲ್ಲಿ ಪ್ರತಿಭಟನೆಗಳಾಗಿದ್ದವು. ಆಗ ಬಿಜೆಪಿಯವರು ಕೂಡ ಪ್ರತಿಭಟನೆ ಮಾಡಿದ್ದರು. ಅದಕ್ಕೆ ಸ್ಪಂದಿಸಿ, ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದು ಬೇಡವೆಂದು ಹೇಳಿ ವರದಿ ಕೈಬಿಡುವಂತೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದೆವು. ಆದರೆ ನಾವು ಪತ್ರ ಕಳುಹಿಸಿದ್ದರೂ, ಕೇಂದ್ರ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ.
ಕಸ್ತೂರಿ ರಂಗನ್ ಒಂದು ರಾಜ್ಯಕ್ಕೆ ಸೀಮಿತ ವಿಷಯವಲ್ಲ. ಕೇರಳ, ಕರ್ನಾಟಕ, ಮಹಾರಾಷ್ಟ್ರ ಹೀಗೆ ಹಲವು ರಾಜ್ಯಗಳು ವ್ಯಾಪ್ತಿಗೆ ಬರುತ್ತವೆ. ಆಯಾ ಭಾಗದ ಜನವಸತಿ ಪ್ರದೇಶಗಳು ವರದಿ ವ್ಯಾಪ್ತಿಗೆ ಬರುವುದರಿಂದ ಜನರು ವಿರೋಧ ವ್ಯಕ್ತಪಡಿಸಿದ್ದರು. ಹಾಗಿದ್ದರೂ, ಅದನ್ನು ಹಿಂಪಡೆಯುವ ಗೋಜಿಗೆ ಕೇಂದ್ರ ಮುಂದಾಗಿಲ್ಲ. ಈಗಲೂ ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ನಾಯಕರು ಕೇವಲ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಕಾರಣಕ್ಕೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ರಮಾನಾಥ ರೈ ಹೇಳಿದರು.
ಎತ್ತಿನಹೊಳೆ ನಾವೇ ಮಾಡಿದ್ದು ಅಂತಿದ್ದಾರೆ
ಇದೇ ವೇಳೆ, ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಎತ್ತಿನಹೊಳೆ ಯೋಜನೆಗೆ ತೊಂದರೆಯಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, ಎತ್ತಿನಹೊಳೆ ಯೋಜನೆಯ ವಿರುದ್ಧ ಆಗ ಪ್ರತಿಭಟನೆ ಮಾಡಿದವರು ಈಗ ನಾವೇ ಮಾಡಿದ್ದು ಅಂತ ರಾಜಕೀಯ ಲಾಭಕ್ಕಾಗಿ ಕೋಲಾರದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಆಗ ನಾನು ಉಸ್ತುವಾರಿ ಸಚಿವನಾಗಿದ್ದಾಗ, ಎತ್ತಿನಹೊಳೆ ವಿರುದ್ಧ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ಕೆಲವು ಪತ್ರಕರ್ತರು ಕೂಡ ಸುದ್ದಿಗೋಷ್ಟಿಯಿಂದ ಬಹಿಷ್ಕರಿಸಿ ಹೊರ ನಡೆದಿದ್ದರು. ರಾಜ್ಯ ಸರಕಾರದ ಪ್ರಮುಖ ಯೋಜನೆಯಾಗಿದ್ದರಿಂದ ನಾನು ವಿರೋಧ ಮಾತನಾಡಿಲ್ಲ. ಈಗಲೂ ವಿರೋಧಿಸಿ ಮಾತನಾಡುವುದಿಲ್ಲ. ಆದರೆ ಬಿಜೆಪಿಯವರು, ಈಗಿನ ಸಂಸದ ನಳಿನ್ ಕುಮಾರ್ ಎತ್ತಿನಹೊಳೆ ವಿರುದ್ಧ ಕರಸೇವೆ ಮಾಡುತ್ತೇನೆಂದು ಪಾದಯಾತ್ರೆ ಮಾಡಿದ್ದರು. ಈಗ, ಅವರೇ ಕೋಲಾರದಲ್ಲಿ ಅದು ಕಾಂಗ್ರೆಸ್ ಮಾಡಿದ್ದಲ್ಲ, ನಾವೇ ಮಾಡಿದ್ದು ಅಂತ ಹೇಳುತ್ತಿದ್ದಾರೆ. ಇವರಿಗೆಲ್ಲ ನಾಚಿಕೆಯಾಗಬೇಕು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಯನ್ನು ಸಿದ್ದರಾಮಯ್ಯ ಸರಕಾರ ಅನುಷ್ಟಾನಕ್ಕೆ ತಂದಿದ್ದು. ಆ ಸಂದರ್ಭದಲ್ಲಿ ಕರಾವಳಿ ಜನರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಕ್ಕೆ, ಪಶ್ಚಿಮ ವಾಹಿನಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಅದಕ್ಕಾಗಿ ಸಿದ್ದರಾಮಯ್ಯ ಸರಕಾರ ಪ್ರತ್ಯೇಕ ಅನುದಾನವನ್ನೂ ಘೋಷಿಸಿದ್ದರು ಎಂದರು. ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಉಮೇಶ್ ದಂಡಕೇರಿ, ಶಾಲೆಟ್ ಪಿಂಟೋ, ಅಪ್ಪಿ ಲೀಲಾಧರ್ ಮತ್ತಿತರರಿದ್ದರು.
Former Minister and KPCC Vice President Ramanath Rai challenged the government to scrap the Kasturirangan report on Western Ghats.
03-04-25 09:44 pm
Bangalore Correspondent
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
03-04-25 11:10 pm
HK News Desk
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
03-04-25 10:14 pm
Dinesh Nayak, Mangaluru Correspondent
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm