ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೇರಿ ಹಿಂದುಗಳನ್ನೇ ದಮನಿಸುತ್ತಿದ್ದಾರೆ, ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ; ರಾಜೇಶ್ ಪವಿತ್ರನ್ 

27-12-22 12:47 pm       Mangalore Correspondent   ಕರಾವಳಿ

ಹಿಂದುತ್ವದ ಹೆಸರಲ್ಲಿ ಅಧಿಕಾರ ಪಡೆದು ಹಿಂದುಗಳನ್ನೇ ಜೈಲಿಗಟ್ಟುತ್ತಿದ್ದಾರೆ. ಇವರಿಗೆ ಮುಂದಿನ ಚುನಾವಣೆಯಲ್ಲಿ ಹಿಂದು ಮಹಾಸಭಾ ತಕ್ಕ ಉತ್ತರ ನೀಡಲಿದೆ. ಈ ಬಾರಿ ಚುನಾವಣೆಗೆ 224 ಕ್ಷೇತ್ರಕ್ಕೂ ಅಭ್ಯರ್ಥಿ ಇಳಿಸಲಾಗುವುದು ಎಂದು ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದಾರೆ. 

ಮಂಗಳೂರು, ಡಿ.27 : ಹಿಂದುತ್ವದ ಹೆಸರಲ್ಲಿ ಅಧಿಕಾರ ಪಡೆದು ಹಿಂದುಗಳನ್ನೇ ಜೈಲಿಗಟ್ಟುತ್ತಿದ್ದಾರೆ. ಇವರಿಗೆ ಮುಂದಿನ ಚುನಾವಣೆಯಲ್ಲಿ ಹಿಂದು ಮಹಾಸಭಾ ತಕ್ಕ ಉತ್ತರ ನೀಡಲಿದೆ. ಈ ಬಾರಿ ಚುನಾವಣೆಗೆ 224 ಕ್ಷೇತ್ರಕ್ಕೂ ಅಭ್ಯರ್ಥಿ ಇಳಿಸಲಾಗುವುದು ಎಂದು ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದಾರೆ. 

ಬಿಜೆಪಿ ಸರಕಾರ ಹಿಂದು ನಾಯಕರ ಮೇಲೆ ಸುಳ್ಳು ಕೇಸು ಹಾಕಿ ದಮನಿಸುತ್ತಿದೆ. ದಮನ ಪ್ರಯತ್ನಕ್ಕೆ ಸೊಪ್ಪು ಹಾಕಲ್ಲ, ಬಿಜೆಪಿ, ಕಾಂಗ್ರೆಸ್ ಬರೋ ಮೊದಲೇ ಹಿಂದು ಮಹಾಸಭಾ ಇದೆ. ನಿನ್ನೆ ಮೊನ್ನೆ ಬಂದವರು ಹಿಂದು ಮಹಾಸಭಾ ಬಗ್ಗೆ ಮಾತಾಡುತ್ತಿದ್ದಾರೆ. ಮೊನ್ನೆ ಸುಲಿಗೆ, ಬೆದರಿಕೆ ಎಂದು ಸುಳ್ಳು ಕೇಸು ಹಾಕಿ ನನ್ನನ್ನು ಬಂಧಿಸಲು ಪ್ರಯತ್ನ ಪಟ್ಟರು. ಆದರೆ ನ್ಯಾಯಾಲಯ ಪೊಲೀಸರಿಗೆ ಛೀಮಾರಿ ಹಾಕಿ, ಅಲ್ಲಿಂದಲೇ ಬಿಟ್ಟು ಕಳಿಸಿತು. ಇವರು ತಮ್ಮ ವಿರುದ್ಧ ಧ್ವನಿ ಎತ್ತುವವರನ್ನು ದಮನಿಸಲು ನೋಡುತ್ತಿದ್ದಾರೆ.‌ ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ. ಬೇರೆ ಬೇರೆ ಪಕ್ಷ, ಸಂಘಟನೆಗಳಿಂದ ಪ್ರಮುಖರು ಹಿಂದು ಮಹಾಸಭಾ ಸೇರುತ್ತಿದ್ದಾರೆ.‌

ಜನವರಿಯಲ್ಲಿ ಬೆಂಗಳೂರಿನಲ್ಲಿ ಸಮಾವೇಶ ನಡೆಸಲಿದ್ದು ಬಿಜೆಪಿ ಹಿರಿಯ ಸಂಸದ ಸುಬ್ರಹ್ಮಣ್ಯ ಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಇಡೀ ರಾಜ್ಯದಲ್ಲಿ ಅಭ್ಯರ್ಥಿಗಳನ್ನು ಇಳಿಸಲು ಯೋಜನೆ ಹಾಕಿದ್ದೇವೆ. ಹಿಂದುಗಳ ರಕ್ಷಣೆಗಾಗಿ ನಾವು ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು. 

ಪ್ರಮೋದ್ ಮುತಾಲಿಕ್ ಕಾರ್ಕಳದಲ್ಲಿ ಸ್ಪರ್ಧಿಸುವುದಕ್ಕೆ ಬೆಂಬಲ ನೀಡುತ್ತೀರಾ ಎಂಬ ಪ್ರಶ್ನೆಗೆ, ಈ ಬಗ್ಗೆ ಅವರು ನಮ್ಮನ್ನು ಸಂಪರ್ಕಿಸಿಲ್ಲ. ಬೆಂಬಲ ಕೇಳಿದರೆ ನೀಡುತ್ತೇವೆ ಎಂದರು. ನಾವು ಜೊತೆಯಾಗಿ ಸಮಾನ ಮನಸ್ಕರು ಸೇರಿ ಕೇಸರಿ ಒಕ್ಕೂಟ ಮಾಡಬೇಕೆಂಬ ಯೋಜನೆ ಇದೆ ಎಂದು ಹೇಳಿದರು. ಜನಾರ್ದನ ರೆಡ್ಡಿ ಹೊಸ ಪಕ್ಷ ಮಾಡಿದ್ದಾರೆ, ಸಂಪರ್ಕ ಇದೆಯೇ ಎಂದು ಕೇಳಿದ್ದಕ್ಕೆ, ಅವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಮಾತುಕತೆ ಬಳಿಕ ಅಂತಿಮಗೊಳಿಸುತ್ತೇವೆ. ರೈತ ಸಂಘದಲ್ಲಿದ್ದವರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸಿದ್ದೇವೆ.‌ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿ ಹಾಕುತ್ತೇವೆ ಎಂದರು.‌ ಸುದ್ದಿಗೋಷ್ಟಿಯಲ್ಲಿ ಕಿರಣ್ ಶೆಟ್ಟಿ, ರಾಜೇಶ್ ಪೂಜಾರಿ, ಧರ್ಮೇಂದ್ರ ಇದ್ದರು.

Mangalore Hindu Mahasabha will show its power in the coming elections says state President Rajesh Pavithran. In the name of Hindutva BJP leaders are fixing Hindu Leaders in fake cases and sending them to Jail. We will surely show them our power this election he challenged holding a press meet here in the city.