ಬ್ರೇಕಿಂಗ್ ನ್ಯೂಸ್
17-01-23 05:50 pm Mangalore Correspondent ಕರಾವಳಿ
ಮಂಗಳೂರು, ಜ.17: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ 4750 ಕೋಟಿ ರೂ. ಅನುದಾನ ಬಂದಿದೆ. ದೇಶದಲ್ಲಿ ಇತರ ಯಾವುದೇ ಮಹಾನಗರ ಪಾಲಿಕೆಗೂ ಇಷ್ಟು ದೊಡ್ದ ಮೊತ್ತ ಎರಡು ವರ್ಷದಲ್ಲಿ ಪೂರೈಕೆಯಾಗಿದ್ದಿಲ್ಲ. 25 ವರ್ಷಗಳ ಮುನ್ನೋಟ ಇಟ್ಟುಕೊಂಡು ಮಂಗಳೂರಿನ ಸಮಗ್ರ ಚಿತ್ರಣ ಬದಲಿಸುವ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿದ್ದೇನೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ನಗರ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಜೊತೆ ಸಂವಾದ ನಡೆಸಿದ ಶಾಸಕ ಕಾಮತ್, 2023ರ ಮಾರ್ಚ್ ವೇಳೆಗೆ ಎಲ್ಲ ಕಾಮಗಾರಿಯನ್ನೂ ಮುಗಿಸಲು ಪ್ಲಾನ್ ಹಾಕಿದ್ದೇವೆ. ನೀರಿನ ಪೈಪ್ ಲೈನ್ ಮರು ಜೋಡಣೆಗೆ 792 ಕೋಟಿ ಅನುದಾನ ತಂದಿದ್ದು, ಮಂಗಳೂರು ನಗರದಲ್ಲಿರುವ ಇಡೀ ಪೈಪ್ ಲೈನ್ ವ್ಯವಸ್ಥೆಯನ್ನು ಹೊಸತಾಗಿ ಮಾಡಲಾಗುವುದು. 2050ರ ವೇಳೆಯ ಜನಸಂಖ್ಯೆ ಗುರಿ ಇಟ್ಟುಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಹತ್ತು ಕಡೆ ಹೊಸತಾಗಿ ಟ್ಯಾಂಕ್ ಗಳನ್ನು ಕಟ್ಟಬೇಕಾಗಿದೆ. ನೀರಿನ ಪೈಪ್ ಲೈನ್ ಹಾಕಬೇಕಾಗಿದ್ದರಿಂದ ಹಳೆಯ ಕಾಂಕ್ರೀಟ್ ರಸ್ತೆಗಳನ್ನು ಅನಿವಾರ್ಯವಾಗಿ ಒಡೆಯಬೇಕಾಗುತ್ತದೆ ಎಂದರು. ಹೊಸ ವ್ಯವಸ್ಥೆಯಲ್ಲಿ ಎಲ್ಲಿ ಸೋರಿಕೆ ಆಗ್ತದೆ, ನೇತ್ರಾವತಿಯಿಂದ ಬರುವ ನೀರಿನ ಪೈಪ್ ಲೈನಲ್ಲಿ ಎಲ್ಲೆಲ್ಲಿ ಸೋರಿಕೆ ಇದೆ ಅನ್ನುವುದನ್ನು ಪತ್ತೆಹಚ್ಚುವ ತಾಂತ್ರಿಕತೆ ಇರುತ್ತದೆ ಎಂದರು.
ಸ್ಮಾರ್ಟ್ ಸಿಟಿ ಎಂಟು ವಾರ್ಡ್ ಗಳಿಗೆ ಮಾತ್ರ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಸ್ಮಾರ್ಟ್ ಸಿಟಿ ಅನುದಾನ ಒಂದು ಸಾವಿರ ಕೋಟಿಯಿದ್ದು, ಮಂಗಳೂರಿನ ಒಟ್ಟು ಅಭಿವೃದ್ಧಿ ದೃಷ್ಟಿಯಿಂದ ವ್ಯಯಿಸಲಾಗಿದೆ. ಮಹಾನಗರ ಪಾಲಿಕೆಯ ಕೇವಲ ಎಂಟು ವಾರ್ಡ್ ಗಳಿಗೆ ಮಾತ್ರ ಸ್ಮಾರ್ಟ್ ಸಿಟಿ ಅನುದಾನ ಇದೆ. ವಿನಯರಾಜ್ ಪ್ರತಿನಿಧಿಸುವ ಕೋರ್ಟ್ ವಾರ್ಡ್ ನಲ್ಲಿ ಡ್ರೈನೇಜ್ ಸೇರಿ 90 ಶೇಕಡಾ ಕಾಮಗಾರಿ ಸ್ಮಾರ್ಟ್ ಸಿಟಿ ನಿಧಿಯಲ್ಲಿ ಮಾಡಲಾಗುತ್ತಿದೆ. ಉಳಿದಂತೆ, ಬಂದರು, ಕಾರ್ ಸ್ಟ್ರೀಟ್ ನಲ್ಲಿ 75 ಶೇಕಡಾ ರಸ್ತೆ ಕಾಂಕ್ರೀಟ್ ಕೆಲಸ ಇದೇ ನಿಧಿಯಲ್ಲಿ ಆಗ್ತಿದೆ. ವಾರ್ಡ್ ನಂಬರ್ 40, 46, 56, 57, 58 ಹೀಗೆ ಎಂಟು ವಾರ್ಡ್ ಗಳಲ್ಲಿ ಸ್ಮಾರ್ಟ್ ಸಿಟಿ ಕೆಲಸ ಆಗುವುದು ಬಿಟ್ಟರೆ, ಮಹಾನಗರ ಪಾಲಿಕೆಯ ಇತರ ಕಡೆ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿಲ್ಲ. ಕದ್ರಿ ಪಾರ್ಕ್, ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳ, ಫಿಶರೀಸ್ ಕಾಲೇಜಿನಲ್ಲಿ ಕಟ್ಟಡ, ನೇತ್ರಾವತಿ ನದಿಯಿಂದ ಸುಲ್ತಾನ್ ಬತ್ತೇರಿ ವರೆಗೆ ರಿವರ್ ಫ್ರಂಟ್ ಎನ್ನುವ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗೆ 200 ಕೋಟಿ, ಸುಲ್ತಾನ್ ಬತ್ತೇರಿಯಲ್ಲಿ ತೂಗು ಸೇತುವೆಗೆ 80 ಕೋಟಿ, ಪಂಪ್ವೆಲ್ – ಪಡೀಲ್ ರಸ್ತೆಗೆ 26 ಕೋಟಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇರಿಸಲಾಗಿದೆ.
ಪಿಪಿಪಿ ಮಾಡೆಲಲ್ಲಿ ಸೆಂಟ್ರಲ್ ಮಾರುಕಟ್ಟೆ
ಹಂಪನಕಟ್ಟೆಯಲ್ಲಿ ಸೆಂಟ್ರಲ್ ಮಾರುಕಟ್ಟೆಯನ್ನು ಸರಕಾರದ ಅನುದಾನ ಇಲ್ಲದೆ, ಪಿಪಿಪಿ ಮಾಡೆಲ್ನಲ್ಲಿ 145 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಗುತ್ತಿಗೆದಾರರೇ ಹಣ ವ್ಯಯಿಸಿ ಮಾರುಕಟ್ಟೆ ಕಟ್ಟಡ ನಿರ್ಮಿಸಲಿದ್ದು, ಒಟ್ಟು ಲಭ್ಯವಾಗುವ ನಾಲ್ಕು ಲಕ್ಷ ಚದರಡಿ ವಿಸ್ತೀರ್ಣದ ಕಟ್ಟಡವನ್ನು ತಲಾ ಎರಡು ಲಕ್ಷದಂತೆ ಬಾಡಿಗೆ ಕೊಡಲು ಒಪ್ಪಂದ ಆಗಿದೆ. ಎರಡು ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಪಾಲಿಕೆಯಿಂದ ಕಡಿಮೆ ವೆಚ್ಚದಲ್ಲಿ ವ್ಯಾಪಾರಿಗಳಿಗೆ ನೀಡಲಾಗುವುದು. ಉಳಿದ ಎರಡು ಲಕ್ಷ ಚದರಡಿ ಕಟ್ಟಡವನ್ನು ಗುತ್ತಿಗೆದಾರರು 30 ವರ್ಷಕ್ಕೆ ಬಾಡಿಗೆ ಕೊಟ್ಟು ಆದಾಯ ಪಡೆಯಲು ಅವಕಾಶ ಇದೆ. ಇದರಿಂದ ಕಟ್ಟಡಕ್ಕಾದ ವೆಚ್ಚವನ್ನು ಪಡೆಯಬಹುದು. ಇದೇ ರೀತಿ, ಹಂಪನಕಟ್ಟೆಯಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಶಾಸಕ ಕಾಮತ್ ಹೇಳಿದರು.
ಉರ್ವಾ ಮಾರುಕಟ್ಟೆಗೆ ವ್ಯಾಪಾರಿಗಳು ಬರುತ್ತಿಲ್ಲ
ಉರ್ವಾದಲ್ಲಿ ಮಾರುಕಟ್ಟೆ ರೆಡಿಯಾಗಿದ್ದರೂ, ಉದ್ಘಾಟನೆಯಾಗದಿರುವುದನ್ನು ಪ್ರಶ್ನಿಸಿದ್ದಕ್ಕೆ, ಉರ್ವಾ ಮಾರುಕಟ್ಟೆಯನ್ನು ಮುಡಾದಿಂದ ಸಾಲ ಪಡೆದು 14 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಅಲ್ಲಿನ ಬಾಡಿಗೆ ದರಕ್ಕೆ ಮೀನು ವ್ಯಾಪಾರಿಗಳು ಬರಲು ಕೇಳುತ್ತಿಲ್ಲ. ಕೋಳಿ, ಮಾಂಸದ ವ್ಯಾಪಾರಿಗಳು ಕೂಡ ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಎಂಟು ಬಾರಿ ಮಾತುಕತೆ ನಡೆಸಿದ್ದು, ಮೀನು ವ್ಯಾಪಾರಿಗಳನ್ನು ಮನವೊಲಿಸಲಾಗಿದೆ. ಕೋಳಿ ಮಾಂಸದ ಸ್ಟಾಲ್ ಹಾಕುವುದಕ್ಕೆ ಮಾರುಕಟ್ಟೆ ಕಟ್ಟಡದ ಮೇಲ್ಭಾಗದಲ್ಲಿ ಬಾಡಿಗೆ ಪಡೆಯುವವರು ವಿರೋಧಿಸುತ್ತಿದ್ದಾರೆ. ಇದರಿಂದಾಗಿ ಸ್ವಲ್ಪ ವಿಳಂಬವಾಗಿದ್ದು, ಮಾರುಕಟ್ಟೆಯನ್ನು ಹೈಟೆಕ್ ಮಾಡಿದರೂ ಕಷ್ಟ ಅನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದರು.
ಡೀಮ್ಡ್ ಅರಣ್ಯದಲ್ಲಿ ವಸತಿ ಯೋಜನೆ ತಪ್ಪು
ಶಕ್ತಿನಗರದ ವಸತಿ ಯೋಜನೆಯಲ್ಲಿ 920 ಮಂದಿಗೆ ಹಿಂದಿನ ಶಾಸಕರು ಹಕ್ಕುಪತ್ರ ಕೊಟ್ಟಿದ್ದರು. ಡೀಮ್ಡ್ ಫಾರೆಸ್ಟ್ ಇರುವ ಅರಣ್ಯವನ್ನು ತೋರಿಸಿ, ಹಕ್ಕುಪತ್ರ ಕೊಟ್ಟಿದ್ದು ದೊಡ್ಡ ಬೋಗಸ್. ಯಾವುದೇ ಕಾರಣಕ್ಕೂ ಡೀಮ್ಡ್ ಫಾರೆಸ್ಟ್ ಅರಣ್ಯದಲ್ಲಿ ವಸತಿ ಇನ್ನಿತರ ಕಟ್ಟಡ ಮಾಡುವಂತಿಲ್ಲ ಎಂಬ ನಿಯಮ ಇದೆ. ಇದು ಗೊತ್ತಿದ್ದರೂ, ಹಿಂದಿನ ಶಾಸಕ ಲೋಬೊ ಅದೇ ಜಾಗದಲ್ಲಿ ವಸತಿ ಯೋಜನೆ ಇರಿಸಿ ಹಕ್ಕುಪತ್ರ ನೀಡಿದ್ದರು. ನನ್ನಲ್ಲಿ ಜನರು ಹಕ್ಕುಪತ್ರ ತೋರಿಸಿ, ಮನೆ ಕೊಡುತ್ತಿಲ್ಲ ಯಾಕೆಂದು ಪ್ರಶ್ನೆ ಮಾಡಿದ್ದರು. ಇದರಿಂದ ಏನೇನೋ ಆರೋಪ ಎದುರಿಸುವಂತಾಯ್ತು. ಇದನ್ನೇ ಸವಾಲಾಗಿ ಸ್ವೀಕರಿಸಿ ಡೀಮ್ಡ್ ಫಾರೆಸ್ಟ್ ಹತ್ತು ಎಕರೆ ಬದಲಿಗೆ 20 ಎಕರೆ ಕಂದಾಯ ಭೂಮಿ ಕೊಟ್ಟು ಅರಣ್ಯ ಬೆಳೆಸಲು 75 ಲಕ್ಷ ಕೊಟ್ಟಿದ್ದೇವೆ. ಇದಕ್ಕೆ ಕೇಂದ್ರದ ಪರಿಸರ ಇಲಾಖೆಯಿಂದ ಕಷ್ಟಪಟ್ಟು ಅನುಮತಿ ಪಡೆದಿದ್ದೇನೆ. ವಸತಿ ಯೋಜನೆಗೆ ಹಿಂದೆ ಇರಿಸಿದ್ದ 60 ಲಕ್ಷ ಸಾಲುವುದಿಲ್ಲ ಎಂಬ ನೆಲೆಯಲ್ಲಿ ಕನಿಷ್ಠ ನೂರು ಕೋಟಿ ಬೇಕಾದೀತು ಎನ್ನುವ ಕಾರಣಕ್ಕೆ ಸಚಿವ ಸಂಪುಟ ಅನುಮತಿಗಾಗಿ ಇಟ್ಟಿದ್ದೇನೆ. ಅದಕ್ಕೆ ಸದ್ಯದಲ್ಲೇ ಸಂಪುಟದ ಅನುಮತಿ ಸಿಗಲಿದೆ. ಜೊತೆಗೆ, ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ 10 ಕೋಟಿ ಅನುದಾನವನ್ನೂ ಕೇಳಿದ್ದೇನೆ. ಖಾಲಿ ಗುಡ್ಡ ಆಗಿರುವುದರಿಂದ ಆ ಜಾಗಕ್ಕೆ ರಸ್ತೆ ಸೌಕರ್ಯ, ಚರಂಡಿ ವ್ಯವಸ್ಥೆಯನ್ನೂ ಮಾಡಬೇಕಾಗಿದೆ ಎಂದು ಹೇಳಿದರು.
ಪಾಲಿಕೆ ಆದಾಯ ಹೆಚ್ಚಿಸುವ ಗುರಿ
ಮಂಗಳೂರು ಮಹಾನಗರ ಪಾಲಿಕೆಗೆ ವಾರ್ಷಿಕ 250 ಕೋಟಿ ಆದಾಯ ಬರ್ತದೆ. ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ಹಾಕಲಾಗಿದೆ. ಸೆಲ್ಫ್ ಅಸೆಸ್ಮೆಂಟ್, ಟ್ರೇಡ್ ಲೈಸನ್ಸ್, ಇ-ಖಾತಾ ಪಡೆಯುವುದನ್ನು ಆನ್ ಲೈನ್ ಮಾಡಿದ್ದೇವೆ. ನೀರಿನ ಬಿಲ್ ಕಡಿಮೆಗೊಳಿಸಿದ್ದು, ಅದನ್ನೂ ಆನ್ಲೈನ್ ಮಾಡುತ್ತೇವೆ. ಜಾಹೀರಾತು ಹೋರ್ಡಿಂಗ್ ಹಾಕುವುದನ್ನೂ ಆನ್ಲೈನ್ ಮಾಡಲಾಗುವುದು. 30-40 ವರ್ಷಗಳಲ್ಲಿ ಆಡಳಿತ ನಡೆಸಿದವರು ಮಾಡಲಾಗದ್ದನ್ನು ನಾವು ಮಾಡುತ್ತಿದ್ದೇವೆ. ನಗರದ ಕೆಪಿಟಿ ವೃತ್ತದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಫ್ಲೈ ಓವರ್ ನಿರ್ಮಿಸುತ್ತಿದ್ದು, ಫೆಬ್ರವರಿಯಲ್ಲಿ ಟೆಂಡರ್ ಆಗಲಿದೆ. ನಂತೂರು ವೃತ್ತದ ಅಂಡರ್ ಪಾಸ್ ಕಾಮಗಾರಿಗೆ ಕೋರ್ಟ್ ಸ್ಟೇ ಇದ್ದು, ಅದನ್ನು ಮಾತುಕತೆ ನಡೆಸಿ ತೆರವು ಮಾಡಲಾಗುವುದು ಎಂದರು.
ನಗರ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವುದಕ್ಕೂ ಸರಕಾರಿ ಭೂಮಿ ಇಲ್ಲ. ಹೀಗಾಗಿ ಖಾಸಗಿ ವ್ಯಕ್ತಿಗಳಿಂದ ಎರಡೂವರೆ ಎಕ್ರೆಗಿಂತ ಹೆಚ್ಚಿರುವ ಭೂಮಿಯನ್ನು ಪಡೆಯಲು ಆಫರ್ ಮಾಡಿದ್ದೇವೆ. ಸರಿಪಲ್ಲ ಕಣ್ಣಗುಡ್ಡೆಯಲ್ಲಿ ವ್ಯಕ್ತಿಯೊಬ್ಬರು ಆರು ಎಕರೆ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಐದಾರು ಕಡೆಯಿಂದ ಸ್ಪಂದನೆ ಬಂದಿದೆ ಎಂದು ಹೇಳಿದರು.
City south MLA Vedavyas Kamath said, “Rs 4750 crore funds have been brought until now for development work in Mangaluru in my tenure with the support of central and state government.” Addressing media at ‘Meet the Press’ event here on Tuesday January 17, Kamath said, “In the last four-and-a-half years of my tenure, I have worked sincerely and relentlessly for the transformation of Mangaluru. I have faced certain challenges. So far Rs 4,750 crore funds have been brought for Mangaluru’s development with the help of central and state government.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm