ಡ್ರಗ್ಸ್ ಮಾಯಾ ಲೋಕ ; ಮತ್ತೆರಡು ಆಸ್ಪತ್ರೆಗಳ ಇಬ್ಬರು ವೈದ್ಯರ ಬಂಧನ, ಕೆಎಂಸಿ ಕಾಲೇಜಿನ ಏಳು ವಿದ್ಯಾರ್ಥಿಗಳು ಸೆರೆ 

21-01-23 01:43 pm       Mangalore Correspondent   ಕರಾವಳಿ

ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಡ್ರಗ್ಸ್ ಜಾಲದ ಪ್ರಕರಣದಲ್ಲಿ ಪೊಲೀಸರು ಮತ್ತೆ ಅಲರ್ಟ್ ಆಗಿದ್ದಾರೆ. ಪ್ರಕರಣದಲ್ಲಿ ಮತ್ತೆ ಇಬ್ಬರು ವೈದ್ಯರು ಮತ್ತು ಏಳು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. 

ಮಂಗಳೂರು, ಜ.21 : ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಡ್ರಗ್ಸ್ ಜಾಲದ ಪ್ರಕರಣದಲ್ಲಿ ಪೊಲೀಸರು ಮತ್ತೆ ಅಲರ್ಟ್ ಆಗಿದ್ದಾರೆ. ಪ್ರಕರಣದಲ್ಲಿ ಮತ್ತೆ ಇಬ್ಬರು ವೈದ್ಯರು ಮತ್ತು ಏಳು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. 

ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯ ಸಿದ್ದಾರ್ಥ್ ಪಾವಸ್ಕರ್(29) ಮತ್ತು ದುರ್ಗಾ ಸಂಜೀವಿನಿ ಆಸ್ಪತ್ರೆಯ ವೈದ್ಯ ಡಾ.ಸುಧೀಂದ್ರ(34) ಬಂಧನ ಆಗಿದ್ದಾರೆ. ಅಲ್ಲದೆ, ಮಂಗಳೂರಿನ ಕೆಎಂಸಿ ಮೆಡಿಕಲ್ ಕಾಲೇಜಿನ ಏಳು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ವಿದುಶ್ ಕುಮಾರ್(27), ದೆಹಲಿಯ ಶರಣ್ಯ(23), ಕೇರಳ ಮೂಲದ ಸೂರ್ಯಜಿತ್ ದೇವ್(20), ಕೇರಳ ಮೂಲದ ಆಯೇಷಾ ಮಹಮ್ಮದ್(23), ತೆಲಂಗಾಣ ಮೂಲದ ಪ್ರಣಯ್ ನಟರಾಜ್(24), ಚೈತನ್ಯಾ(23), ಉತ್ತರ ಪ್ರದೇಶದ ಇಶ್ ಮಿದ್ದ(24) ಬಂಧಿತ ವೈದ್ಯಕೀಯ ವಿದ್ಯಾರ್ಥಿಗಳು. 

ಏಳು ಮಂದಿ ವಿದ್ಯಾರ್ಥಿಗಳು ಕೂಡ ಮಂಗಳೂರಿನ ಕೆ.ಎಂ.ಸಿ ಮೆಡಿಕಲ್ ಕಾಲೇಜಿನವರು. ನಿನ್ನೆಯಷ್ಟೇ ಕೆಎಂಸಿ ಆಸ್ಪತ್ರೆ ಆಡಳಿತವು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ವೈದ್ಯರನ್ನು ಕೆಲಸದಿಂದ ವಜಾ ಮಾಡಿತ್ತು. ಅಲ್ಲದೆ, ಏಳು ಮಂದಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿತ್ತು. ಇದೀಗ ಮತ್ತೆ ಅದೇ ಮೆಡಿಕಲ್ ಕಾಲೇಜಿನ ಮತ್ತೆ ಏಳು ಮಂದಿ ಸೆರೆಯಾಗಿದ್ದಾರೆ.‌ 

ಇದೀಗ ಮಂಗಳೂರಿನ ಡ್ರಗ್ಸ್ ಜಾಲದ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಡ್ರಗ್ಸ್ ಜಾಲ ; ಮಂಗಳೂರಿನ ಮಾನ ಹರಾಜು ಹಾಕಿದ ವೈದ್ಯರು ಸೇವೆಯಿಂದ ವಜಾ, ವೈದ್ಯಕೀಯ ವಿದ್ಯಾರ್ಥಿಗಳು ಸಸ್ಪೆಂಡ್ 

ಡ್ರಗ್ಸ್ ಜಾಲ ; ಮಂಗಳೂರಿನಲ್ಲಿ ಮತ್ತಿಬ್ಬರು ವೈದ್ಯ ವಿದ್ಯಾರ್ಥಿಗಳ ಬಂಧನ 

ಮಂಗಳೂರಿನಲ್ಲಿ ಡ್ರಗ್ಸ್ ಜಾಲ ; ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಸೇರಿ ಮತ್ತೆ ಮೂವರ ಸೆರೆ 

ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಭಾರೀ ಡ್ರಗ್ಸ್ ಜಾಲ ; ಇಬ್ಬರು ವೈದ್ಯರು ಸೇರಿ ಹತ್ತು ಮಂದಿ ಎಂಬಿಬಿಎಸ್, ಬಿಡಿಎಸ್ ವಿದ್ಯಾರ್ಥಿಗಳ ಬಂಧನ 

Mangalore Medical college drugs, two more doctors arrested from two hospitals, seven students from kmc arrested.