ಡ್ರಗ್ಸ್ ಜಾಲ ; ಮಂಗಳೂರಿನ ಮಾನ ಹರಾಜು ಹಾಕಿದ ವೈದ್ಯರು ಸೇವೆಯಿಂದ ವಜಾ, ವೈದ್ಯಕೀಯ ವಿದ್ಯಾರ್ಥಿಗಳು ಸಸ್ಪೆಂಡ್ 

20-01-23 06:37 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ವೈದ್ಯರೇ ಡ್ರಗ್ಸ್ ಜಾಲದಲ್ಲಿ ಸಿಲುಕಿರುವುದು ಇಡೀ ವೈದ್ಯ ಸಮುದಾಯದ ಮಾನ ಹರಾಜು ಹಾಕಿಸಿತ್ತು. ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪೊಲೀಸರ ಬಲೆಗೆ ಸಿಲುಕುತ್ತಲೇ ಮೆಡಿಕಲ್ ಕಾಲೇಜು ಎಚ್ಚತ್ತುಕೊಂಡಿದೆ.

ಮಂಗಳೂರು, ಜ.20 : ಮಂಗಳೂರಿನಲ್ಲಿ ವೈದ್ಯರೇ ಡ್ರಗ್ಸ್ ಜಾಲದಲ್ಲಿ ಸಿಲುಕಿರುವುದು ಇಡೀ ವೈದ್ಯ ಸಮುದಾಯದ ಮಾನ ಹರಾಜು ಹಾಕಿಸಿತ್ತು. ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪೊಲೀಸರ ಬಲೆಗೆ ಸಿಲುಕುತ್ತಲೇ ಮೆಡಿಕಲ್ ಕಾಲೇಜು ಎಚ್ಚತ್ತುಕೊಂಡಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ಇಬ್ಬರು ವೈದ್ಯರನ್ನು ಸೇವೆಯಿಂದ ವಜಾ ಮಾಡಿದ್ದು ಏಳು ಮಂದಿ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿದೆ. 

ಡ್ರಗ್ಸ್ ಪ್ರಕರಣದಲ್ಲಿ ಬೆನ್ನು ಬಿದ್ದಿದ್ದ ಮಂಗಳೂರು ಪೊಲೀಸರು ಜನವರಿ‌ 11ರಂದು ವೈದ್ಯಕೀಯ ಕಾಲೇಜುಗಳಲ್ಲಿ ಹರಡಿಕೊಂಡಿದ್ದ ಡ್ರಗ್ಸ್ ಜಾಲವನ್ನು ಭೇದಿಸಿದ್ದರು. ಇಬ್ಬರು ವೈದ್ಯರು ಸೇರಿ ಒಟ್ಟು 13 ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಇವರೆಲ್ಲ ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದು ಎಲ್ಲರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇದೀಗ ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದ ಕೆಎಂಸಿ ಮೆಡಿಕಲ್ ಕಾಲೇಜಿನ ಇಬ್ಬರು ವೈದ್ಯರಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಗೇಟ್ ಪಾಸ್ ನೀಡಿದ್ದು ಅವರ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ಜೊತೆಗೆ ಇದೇ ಕೆಎಂಸಿ ಕಾಲೇಜಿನ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. 

Mangalore Medical college drugs supply, 10 medical students including two  doctors arrested by CCB police | ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಭಾರೀ ಡ್ರಗ್ಸ್  ಜಾಲ ; ಇಬ್ಬರು ವೈದ್ಯರು ಸೇರಿ ಹತ್ತು ಮಂದಿ ...

ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆ ವೈದ್ಯಾಧಿಕಾರಿ ಆಗಿದ್ದ ಡಾ.ಸಮೀರ್, ಮಣಿಪಾಲ ಕೆಎಂಸಿ ಆಸ್ಪತ್ರೆ ಮೆಡಿಕಲ್ ಸರ್ಜನ್ ಡಾ.ಮಣಿಮಾರನ್ ಮುತ್ತು(28) ಸೇವೆಯಿಂದ ವಜಾಗೊಂಡಿದ್ದಾರೆ. ಇದಲ್ಲದೆ, ದಂತ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಇಂಗ್ಲೆಂಡ್ ಮೂಲದ ಪ್ರಜೆ ಡಾ‌.ಕಿಶೋರಿಲಾಲ್, ಇತರೇ ವಿಭಾಗದ ವಿದ್ಯಾರ್ಥಿಗಳಾದ ಡಾ‌‌.ನದೀಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ(26), ಡಾ.ರಿಯಾ ಚಡ್ಡ(22), ಡಾ.ಇರಾ ಬಾಸಿನ(23), ಡಾ.ಕ್ಷಿತಿಜ್ ಗುಪ್ತ(25), ಡಾ.ಹರ್ಷಕುಮಾರ್ ವಿ.ಎಸ್‌. ಸಸ್ಪೆಂಡ್ ಆಗಿದ್ದಾರೆ. 

Mangalore medical college drugs supply, Three more including two medical  students arrested | ಮಂಗಳೂರಿನಲ್ಲಿ ಡ್ರಗ್ಸ್ ಜಾಲ ; ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು  ಸೇರಿ ಮತ್ತೆ ಮೂವರ ಸೆರೆ | Headline Karanataka

ಈ ಬಗ್ಗೆ ಸ್ವತಃ ಕೆಎಂಸಿ‌ ಆಸ್ಪತ್ರೆಯ ಡೀನ್ ಉನ್ನಿಕೃಷ್ಣನ್ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ, ಕ್ರಮ ಕೈಗೊಂಡಿರುವ ಬಗ್ಗೆ ಕಮಿಷನರ್ ಶಶಿಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ತನಿಖೆಗೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಕೆಎಂಸಿ ಆಸ್ಪತ್ರೆಯ ಕಡೆಯಿಂದ ನೀಡಲಾಗುವುದು ಎಂದು ಡೀನ್ ಸ್ಪಷ್ಟಪಡಿಸಿದ್ದಾರೆ. ಕಾಲೇಜು‌ ಆಡಳಿತ‌ ಮಂಡಳಿಯ ಈ ನಿರ್ಧಾರ ಪೊಲೀಸರ‌ ಮುಂದಿನ ತನಿಖೆಗೂ ಸಹಕಾರಿಯಾಗಲಿದೆ. ಈ ಜಾಲದ ಹಿಂದೆ ಇನ್ನೂ‌ ಸಾಕಷ್ಟು ಮಂದಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಇದ್ದಾರೆ. ಅದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಕಮೀಷನರ್ ತಿಳಿಸಿದ್ದಾರೆ.

ಡ್ರಗ್ಸ್ ಜಾಲ ; ಮಂಗಳೂರಿನಲ್ಲಿ ಮತ್ತಿಬ್ಬರು ವೈದ್ಯ ವಿದ್ಯಾರ್ಥಿಗಳ ಬಂಧನ 

ಮಂಗಳೂರಿನಲ್ಲಿ ಡ್ರಗ್ಸ್ ಜಾಲ ; ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಸೇರಿ ಮತ್ತೆ ಮೂವರ ಸೆರೆ 

ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಭಾರೀ ಡ್ರಗ್ಸ್ ಜಾಲ ; ಇಬ್ಬರು ವೈದ್ಯರು ಸೇರಿ ಹತ್ತು ಮಂದಿ ಎಂಬಿಬಿಎಸ್, ಬಿಡಿಎಸ್ ವಿದ್ಯಾರ್ಥಿಗಳ ಬಂಧನ 

Of the persons arrested by police in a drug case, 7 medical students and 2 doctors involved have been suspended. Mangaluru police commissioner, on Friday, told media that the private medical college and hospital in the city where the accused were studying or working has suspended them.