ಬ್ರೇಕಿಂಗ್ ನ್ಯೂಸ್
24-01-23 05:15 pm Mangalore Correspondent ಕರಾವಳಿ
ಮಂಗಳೂರು, ಜ.24: ಇತ್ತೀಚೆಗೆ ಗಾಂಜಾ, ಡ್ರಗ್ಸ್ ಪ್ರಕರಣದಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಿ ಜೈಲಿಗಟ್ಟಿದ್ದ ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರಿನ ಹಿರಿಯ ವಕೀಲ ಮನೋರಾಜ್ ರಾಜೀವ ಮತ್ತು ಖ್ಯಾತ ಫಾರೆನ್ಸಿಕ್ ತಜ್ಞ ಡಾ.ಮಹಾಬಲೇಶ್ ಶೆಟ್ಟಿ ಸುದ್ದಿಗೋಷ್ಟಿ ನಡೆಸಿ, ಪೊಲೀಸ್ ಕಮಿಷನರ್ ಶಶಿಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳನ್ನು ಗಾಂಜಾ ಸೇವನೆ ಮಾಡ್ತಾರೆಂದು ಡ್ರಗ್ ಪೆಡ್ಲರ್ ಅಂತ ತೋರಿಸಿ ಅರೆಸ್ಟ್ ಮಾಡಿದ್ದಾರೆ. ವೈದ್ಯರನ್ನು ಡ್ರಗ್ ಪಾಸಿಟಿವ್ ಬಂತೆಂದು ಡ್ರಗ್ ಪೆಡ್ಲರ್ ಅಂತ ತೋರಿಸಿ ಅರೆಸ್ಟ್ ಮಾಡಿದ್ದಾರೆ. ಯಾವುದೇ ಡ್ರಗ್ ಪ್ರಕರಣದಲ್ಲಿ ಸ್ಕ್ರೀನಿಂಗಲ್ಲಿ ಪಾಸಿಟಿವ್ ಬಂದರೂ, 24 ಗಂಟೆಯಲ್ಲಿ ಎಫ್ಎಸ್ಎಲ್ ವರದಿ ಪಡೆಯಬೇಕು. ಅಲ್ಲಿಯೂ ಪಾಸಿಟಿವ್ ಬಂದರೆ ಮಾತ್ರ ಸೇವನೆಯ ಕಾರಣಕ್ಕೆ ಅರೆಸ್ಟ್ ಮಾಡಬಹುದು. ಹಾಗಿದ್ದರೂ, ಅವರನ್ನು ಮಾಧ್ಯಮಕ್ಕೆ ತೋರಿಸುವ ಹಾಗಿಲ್ಲ. ಹರೆಯದ ವಿದ್ಯಾರ್ಥಿಗಳಾಗಿದ್ದರೆ, ಅವರನ್ನು ರಿಹಾಬಿಲಿಟೇಶನ್ ಕೇಂದ್ರಕ್ಕೆ ಹಾಕಿ ಚಿಕಿತ್ಸೆ ಕೊಡಬೇಕೆಂದಿದೆ. ಆದರೆ ಮಂಗಳೂರಿನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ದಾರೆ.
22-23 ವಯಸ್ಸಿನ ಹುಡುಗರು, ಹುಡುಗಿಯರನ್ನು ಅರೆಸ್ಟ್ ಮಾಡಿದ್ದಾರೆ. ಅವರ ಫೋಟೋ, ವಿಡಿಯೋ ತೋರಿಸಿ ಮಾನಹಾನಿ ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲಿ ಯಾವುದೋ ಕಾರಣಕ್ಕೆ ಗಾಂಜಾ ಸೇವನೆ ಮಾಡಿದ್ದರೆ, ಅದು ಅಪರಾಧ ಅಲ್ಲ. ಅದಕ್ಕೆ ಮಾನಸಿಕ ಸಮಸ್ಯೆ ಕಾರಣ. ಯಾವುದೋ ಕಾರಣಕ್ಕೆ ಅಡಿಕ್ಟ್ ಆಗಿರಬಹುದು. ಹಾಗಂತ, ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಿಸಿದ್ದು, ಅವರನ್ನು ಕ್ರಿಮಿನಲ್ ಗಳಾಗಲು ಪ್ರೇರಣೆ ನೀಡಿದಂತಾಗಿಲ್ಲವೇ.. ವ್ಯವಸ್ಥೆಯ ವಿರುದ್ಧ ಸಿಟ್ಟುಗೊಂಡು ನಕ್ಸಲರಾಗಲು ಪ್ರೇರಣೆ ನೀಡಿದ್ದಲ್ಲವೇ ಎಂದು ಮಂಗಳೂರು ಬಾರ್ ಕೌನ್ಸಿಲ್ ಉಪಾಧ್ಯಕ್ಷರೂ ಆಗಿರುವ ಖ್ಯಾತ ವಕೀಲ ಮನೋರಾಜ್ ರಾಜೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೋರಾಜ್ ರಾಜೀವ ಈ ಹಿಂದೆ ಎಂಟು ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸಿದ್ದು ಜಿಲ್ಲೆಯಲ್ಲಿ ಖ್ಯಾತಿ ಹೊಂದಿದ್ದಾರೆ. ವಿದ್ಯಾರ್ಥಿಗಳನ್ನು ಡ್ರಗ್ಸ್ ಪ್ರಕರಣದಲ್ಲಿ ಅಪರಾಧಿಗಳ ರೀತಿ ತೋರಿಸಿದ್ದ ಘಟನೆ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತ ಕೇಸು ದಾಖಲಿಸಿ ತನಿಖೆ ನಡೆಸಬೇಕು. ಅಗತ್ಯ ಬಿದ್ದರೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದವರು ಆಗ್ರಹಿಸಿದ್ದಾರೆ. ಇಲ್ಲದೇ ಇದ್ದರೆ, ಈ ಬಗ್ಗೆ ನಾವೇ ಹೈಕೋರ್ಟಿಗೆ ರಿಟ್ ಪಿಟಿಶನ್ ಹಾಕುವುದಾಗಿ ತಿಳಿಸಿದ್ದಾರೆ.
ಮಂಗಳೂರಿಗೆ ಕಳಂಕ ಮೆತ್ತಿಸಿದ ಕಮಿಷನರ್
ಇದಲ್ಲದೆ, 23 ಸಾವಿರಕ್ಕೂ ಹೆಚ್ಚು ಡ್ರಗ್ಸ್ ಪ್ರಕರಣಗಳಲ್ಲಿ ಕೇರಳ, ಕರ್ನಾಟಕ, ಸಿಬಿಐ ಮತ್ತು ಎನ್ಐಎ ತನಿಖಾ ಏಜನ್ಸಿಗಳಿಗೆ ಅಧಿಕೃತ ಫಾರೆನ್ಸಿಕ್ ಎಕ್ಸ್ ಪರ್ಟ್ ಆಗಿರುವ ಮಂಗಳೂರಿನ ಡಾ.ಮಹಾಬಲೇಶ ಶೆಟ್ಟಿ ಕೂಡ ಪೊಲೀಸ್ ಆಯುಕ್ತ ಶಶಿಕುಮಾರ್ ನಡೆಯನ್ನು ಖಂಡಿಸಿದ್ದಾರೆ. ಎನ್ ಡಿಪಿಎಸ್ ಕಾಯ್ದೆಯಡಿ ಗಾಂಜಾ ಸೇವನೆ ಮಾಡಿದ್ದಕ್ಕೆ ಐದು ಸಾವಿರ ದಂಡ, ಕೇವಲ ಆರು ತಿಂಗಳ ಶಿಕ್ಷೆ. ಅದರಲ್ಲೂ ಗಾಂಜಾ ಎಲೆ, ದಂಟು ಸೇವನೆ ಮಾಡಿದರೆ, ಈ ಕಾಯ್ದೆಯಡಿ ಬರಲ್ಲ. ಗಾಂಜಾ ಹೂವು ಸೇವಿಸಿದರೆ ಮಾತ್ರ ಈ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಪೊಲೀಸರು ವಿದ್ಯಾರ್ಥಿಗಳನ್ನು ಕರೆತಂದು ಸ್ಕ್ರೀನಿಂಗ್ ಪರೀಕ್ಷೆ ನಡೆಸಿ, ಪಾಸಿಟಿವ್ ಬಂದ ಮಾತ್ರಕ್ಕೆ ಅರೆಸ್ಟ್ ಮಾಡುವ ಅಗತ್ಯ ಏನಿತ್ತು.. ಅವರನ್ನು ದೊಡ್ಡ ಅಪರಾಧಿಗಳೆಂದು ಬಿಂಬಿಸಿ ವಿಡಿಯೋ, ಫೋಟೋ ಹಾಕಿಸಿ ಮಾನ ಕಳೆದಿದ್ದಾರೆ. ಇದರಿಂದ ಸಮಾಜಕ್ಕೆ ಏನು ಸಂದೇಶ ಕೊಟ್ಟಂತಾಗುತ್ತದೆ. ಸಾಲ ಮಾಡಿ ಮೆಡಿಕಲ್, ಇಂಜಿನಿಯರಿಂಗ್ ಓದಲು ಬರುವ ವಿದ್ಯಾರ್ಥಿಗಳ ಭವಿಷ್ಯ ಏನಾಗಬೇಕು. ವೈದ್ಯರನ್ನು ಗಾಂಜಾ ಪೆಡ್ಲರ್ ಅಂತ ತೋರಿಸಿ ಮಂಗಳೂರಿನ ಹೆಸರಿಗೆ ಕಳಂಕ ಹೊರಿಸಿದ್ದೀರಿ.. ಶಿಕ್ಷಣ ಕಾಶಿಯೆಂದು ಹೆಸರಿರುವ ಮಂಗಳೂರಿನ ಹೆಸರು ಕೆಡಿಸುವ ಕೆಲಸ ಮಾಡಿದ್ದೀರಿ. ಐಪಿಎಸ್ ಅಧಿಕಾರಿಯಾಗಿ ಕಾನೂನು ಪಾಲನೆ ಮಾಡೋದು ಬಿಟ್ಟು ನಗರಕ್ಕೆ ಕಳಂಕ ತರಲು ಹೊರಟಿದ್ದೀರಿ ಎಂದು ಡಾ.ಮಹಾಬಲೇಶ್ ಶೆಟ್ಟಿ ಹರಿಹಾಯ್ದಿದ್ದಾರೆ.
ಎಜುಕೇಶನ್ ಹಬ್, ಬ್ರಾಂಡ್ ಮಂಗಳೂರು ಅನ್ನುವ ಹೆಸರಿಗೆ ಕಳಂಕ ಬಂದಿದೆ. ಕೇರಳ, ಉತ್ತರ ಭಾರತದಿಂದ ಕೆಲವರು ಮಂಗಳೂರಿನ ವೈದ್ಯರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಯಾರೋ ಒಬ್ಬ ಡ್ರಗ್ ಸೇವನೆ ಮಾಡಿದರೆ, ಅದಕ್ಕೆ ಇಡೀ ವೈದ್ಯ ಸಂಕುಲ ಜವಾಬ್ದಾರಿಯೇ. ಒಬ್ಬ ವೈದ್ಯ ಅನ್ನುವುದನ್ನು ತೋರಿಸಿ, ಸಮಾಜಕ್ಕೆ ನೆಗೆಟಿವ್ ಸಂದೇಶ ಕೊಡುವ ಅಗತ್ಯ ಏನಿದೆ. ಶಿಕ್ಷಣ ಸಂಸ್ಥೆಯ ಇಮೇಜ್ ಹೋದರೆ ಆ ಭಾಗದ ಹೊಟೇಲ್, ಆಟೋ ಚಾಲಕರು, ಅಂಗಡಿವಾಲಾರು ಎಲ್ಲರಿಗೂ ಪೆಟ್ಟು ಬೀಳುತ್ತದೆ. ಡ್ರಗ್ಸ್ ಪ್ರಕರಣದಲ್ಲಿ ಆತ ಸೇವನೆ ಮಾಡಿದ್ದು ದೃಢ ಪಟ್ಟರೂ, ಅರೆಸ್ಟ್ ಮಾಡುವ ಅಗತ್ಯ ಇರುವುದಿಲ್ಲ. ಪದೇ ಪದೇ ಸಿಕ್ಕಿಬಿದ್ದರೆ ಮಾತ್ರ ಅರೆಸ್ಟ್ ಮಾಡಬೇಕು. ಆನಂತರ, ಸೂಕ್ತ ಚಿಕಿತ್ಸೆ ಕೊಡಬೇಕು. ಅದು ಬಿಟ್ಟು ಇವರು ವೈದ್ಯರು, ಮೆಡಿಕಲ್ ಕಾಲೇಜು ಸ್ಟೂಡೆಂಟ್ಸ್ ಅಂತ ಹೇಳಿ ಅವರನ್ನು ಡ್ರಗ್ ಪೆಡ್ಲರ್ ಅಂತ ತೋರಿಸಿ ಮಾನ ಕಳೆದಿದ್ದಾರೆ. ಇದರಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಬೇಜಾವಾಬ್ದಾರಿ ನಡೆ ತೋರಿದ್ದಾರೆ.
ಶಾಸಕ, ಸಂಸದರಿಗೆ ಹೊಣೆಗಾರಿಕೆ ಇಲ್ಲವೇ ?
ಎನ್ ಡಿಪಿಎಸ್ ಸೆಕ್ಷನ್ 27ಎ ಅಡಿಯಲ್ಲಿ ಕೊಕೇನ್, ಚರಸ್ ಬರುತ್ತದೆ, ಇಲ್ಲಿ 27ಬಿ ಅಡಿ ಗಾಂಜಾ ಹೂವು ಸೇವನೆ ಮಾತ್ರ ಬರುತ್ತದೆ. ಗಾಂಜಾ ಗಿಡದ ಎಲೆ, ದಂಟು ಸೇವನೆ ಈ ಕಾಯ್ದೆಯಡಿ ಬರೋದಿಲ್ಲ. ಆದರೆ ವಿದ್ಯಾರ್ಥಿಗಳ ಮೇಲೆ 27ಬಿ ಕೇಸು ಹಾಕಿದ್ದಾರೆ. ಇದು ಕೋರ್ಟಿನಲ್ಲಿ ಬಿದ್ದು ಹೋಗುತ್ತದೆ. ಆದರೆ ಇವರನ್ನು 15 ದಿನ ಜೈಲಿಗೆ ಹಾಕಿ, ಮಾನಸಿಕವಾಗಿ, ನೈತಿಕವಾಗಿ ಕುಗ್ಗಿಸಿದ್ದರಿಂದ ವೈದ್ಯರ, ವಿದ್ಯಾರ್ಥಿಗಳ ಭವಿಷ್ಯ ಏನಾಗಬೇಕು. ವ್ಯವಸ್ಥೆಯ ಲೋಪದಿಂದಾಗಿ ಅವರು ಸಂತ್ರಸ್ತ ಆಗಿರಬಹುದು. ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಬಾರದೆಂದು ಭಾರತದ ಕಾನೂನು ಹೇಳುತ್ತದೆ. ಮಂಗಳೂರು ಹೇಗೂ ಕೋಮು ದ್ವೇಷಕ್ಕೆ ಹೆಸರಾಗಿದೆ, ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣಕ್ಕೆ ಬರುವುದನ್ನು ಕಡಿಮೆ ಮಾಡಿದ್ದಾರೆ. ಈಗ ಡ್ರಗ್ ಹಬ್ ಆಗಿ ಮಾಡುತ್ತಿದ್ದೀರಿ. ಇಷ್ಟಕ್ಕೂ ಮಂಗಳೂರು ನಗರಕ್ಕೆ ಎಲ್ಲಿಂದ ಗಾಂಜಾ, ಡ್ರಗ್ಸ್ ಪೂರೈಕೆಯಾಗುತ್ತದೆ, ಯಾರು ಇದರ ಹಿಂದೆ ಇದ್ದಾರೆ ಎಂಬುದನ್ನು ಪತ್ತೆ ಮಾಡಿದ್ದೀರಾ.. ಇಂಥ ಹೊಣೆಗೇಡಿ ಕೆಲಸದ ಬಗ್ಗೆ ಶಾಸಕ, ಸಂಸದರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಕೆಲವು ವಿದ್ಯಾರ್ಥಿಗಳು ತಮ್ಮ ಯೂರಿನ್ ಪಡೆದು ಪೊಲೀಸರೇ ಟೆಸ್ಟ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಇದರಿಂದ ಚೈನ್ ಆಫ್ ಕಸ್ಟಡಿ ನಿರ್ವಹಣೆ ಮಾಡಿದಂತಾಗುತ್ತಾ.. ವೈದ್ಯರ ಮುಂದೆಯೇ ಯೂರಿನ್ ಪಡೆದು ಟೆಸ್ಟ್ ಮಾಡಿಸುವ ಕೆಲಸ ಯಾಕೆ ಮಾಡಿಲ್ಲ. ಬಂಧನ ಆದವರಲ್ಲಿ ಕೆಲವರು ರ್ಯಾಂಕ್ ಸ್ಟೂಡೆಂಟ್ ಆಗಿದ್ದರು. ಅವರ ಫೋಟೋ, ಹೆಸರು ಹೈದ್ರಾಬಾದ್, ದೆಹಲಿ ಮೀಡಿಯಾದಲ್ಲಿ ಬಂದಿದೆ. ಅವರ ಕುಟುಂಬಸ್ಥರ ಸ್ಥಿತಿ ಏನಾಗಬೇಕು. ಬೆಂಗಳೂರಿನಲ್ಲಿ ದಿನಕ್ಕೆ ಒಂದು ಸಾವಿರ ಮಂದಿಯ ಡ್ರಗ್ ಟೆಸ್ಟ್ ಆಗತ್ತೆ. ಕನಿಷ್ಠ 400 ಮಂದಿಯ ಪಾಸಿಟಿವ್ ಬರತ್ತೆ. ಅವರನ್ನೆಲ್ಲ ಫೋಟೋ, ವಿಡಿಯೋ ತೋರಿಸಿ ಮಾನ ಕಳೆಯುತ್ತಾರೆಯೇ ಎಂದು ಮಹಾಬಲೇಶ ಶೆಟ್ಟಿ ಪ್ರಶ್ನಿಸಿದರು.
After the medical studenrs and students of private medical colleges were arrested in alleged drug abuse cases, Manoraj Rajeeva (immediate past district government pleader), advocate and vice president of Mangaluru Bar Association alleged that the Police Commissioner Shashi Kumar, investigation agency in the case have failed to investigate the case in the right manner. He said, “We are not in favour of the drug peddlers or consumers. Have the law enforcing agency applied their mind in the right way while registering the case and sending the accused behind the bars? Has the probe been conducted in the right spirit and fairly? Have the law-enforcing agency exercised their duty judiciously?
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm