ಸರ್ಕಾರಿ ಶಾಲೆಗಳ ದತ್ತು ; ಸಲಹೆ ಪರಿಗಣಿಸದ ಶಾಸಕರು, ಸಿಎಂ ಬೊಮ್ಮಾಯಿ ಊರಲ್ಲೇ ದತ್ತು ಕೆಲಸ ಆಗಿಲ್ಲ! ಕುಲಪತಿ ಹುದ್ದೆಗೆ ಹತ್ತು ಕೋಟಿ ! ಅಲವತ್ತುಕೊಂಡ ಶಿಕ್ಷಣ ಸಲಹೆಗಾರ 

27-01-23 06:01 pm       Mangalore Correspondent   ಕರಾವಳಿ

ಸರಕಾರಿ ಪ್ರಾಥಮಿಕ ಶಾಲೆಗಳ ಸುಧಾರಣೆ ನಿಟ್ಟಿನಲ್ಲಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು ಸೇರಿದಂತೆ 18 ಅಂಶಗಳ ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ಮಾಡಲಾಗಿತ್ತು.

ಮಂಗಳೂರು, ಜ.27: ಸರಕಾರಿ ಪ್ರಾಥಮಿಕ ಶಾಲೆಗಳ ಸುಧಾರಣೆ ನಿಟ್ಟಿನಲ್ಲಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು ಸೇರಿದಂತೆ 18 ಅಂಶಗಳ ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ಮಾಡಲಾಗಿತ್ತು. ಪ್ರತೀ ವಿಧಾನಸಭೆ ಕ್ಷೇತ್ರದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ತಮ್ಮ ವ್ಯಾಪ್ತಿಯ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಸೂಚಿಸಲಾಗಿತ್ತು. ಆದರೆ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಯಾವೊಬ್ಬ ಶಾಸಕನೂ ಸೂಕ್ತವಾಗಿ ಸ್ಪಂದಿಸಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಊರಲ್ಲೇ ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ನಡೆದಿಲ್ಲ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ (ಸಂಪುಟ ದರ್ಜೆ ಮಾನ್ಯತೆ) ಪ್ರೊ.ಎಂ‌.ಆರ್ ದೊರೈಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ತಾವು ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಅಧ್ಯಯನ ವರದಿಯ ಪ್ರತಿಯನ್ನು ಮಾಧ್ಯಮಕ್ಕೆ ಕೊಟ್ಟು ಅದರಲ್ಲಿ ಶಿಫಾರಸು ಮಾಡಿರುವ 18 ಅಂಶಗಳನ್ನು ಸರ್ಕಾರ ಜಾರಿಗೊಳಿಸಿಲ್ಲ. ಶಾಲೆಗಳ ದತ್ತು ಪಡೆಯಬೇಕೆಂಬ ಸಲಹೆಯನ್ನೂ ಹೆಚ್ಚಿನ ಶಾಸಕರು ಸ್ವೀಕರಿಸಿಲ್ಲ. ಅಪವಾದ ಎನ್ನುವ ಕಾರಣಕ್ಕೆ ಅಬಕಾರಿ ಸಚಿವ ಗೋಪಾಲಯ್ಯ ತನ್ನ ಮಹಾಲಕ್ಷ್ಮಿಪುರಂ ವಿಧಾನಸಭೆ ಕ್ಷೇತ್ರದಲ್ಲಿ 11 ಶಾಲೆಗಳನ್ನು ಸಿಎಸ್ ಆರ್ ನಿಧಿ ಮತ್ತು ಸರ್ಕಾರದ ಸವಲತ್ತನ್ನು ಬಳಸಿ ಒಟ್ಟು 45 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ವಿ.ಸೋಮಣ್ಣ 11 ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಆರ್ ಆರ್ ನಗರ ಕ್ಷೇತ್ರದಲ್ಲಿ ಸಚಿವ ಮುನಿರತ್ನ 16 ಶಾಲೆಗಳನ್ನು 22 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಬಿಟಿಎ‌ಂ ಲೇಔಟ್ ಭಾಗದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ 23 ಶಾಲೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ‌ಹಳಿಯಾಳ ಕ್ಷೇತ್ರದ ಆರ್ ವಿ ದೇಶಪಾಂಡೆ ಕ್ಷೇತ್ರದಲ್ಲಿರುವ ಎಲ್ಲ ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದಾರೆ. ದೇಶಪಾಂಡೆ ಕೈಗಾರಿಕೆ ಮಂತ್ರಿಯಾಗಿದ್ದಾಗ ಕಂಪನಿಗಳ ಸಿಎಸ್ಆರ್ ನಿಧಿಯನ್ನು ಪಡೆದು ಶಾಲೆಗಳನ್ನು ಉತ್ತಮ ಪಡಿಸಿದ್ದಾರೆ. ಆದರೆ ಉಳಿದ ಬಹುತೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ತನ್ನ ಸಲಹೆ ಹೊರತಾಗಿಯೂ ಸರ್ಕಾರಿ ಶಾಲೆಗಳ ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿಲ್ಲ ಎಂದರು. 

Election for 7 Karnataka Legislative Council seats on June 3 | Deccan Herald

ಈಗಲೂ ಕಾಲ ಮಿಂಚಿಲ್ಲ. ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಇದೆ. ಶಾಸಕರು ತಮ್ಮ ವ್ಯಾಪ್ತಿಯ ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಬೇಕು. ಚುನಾವಣೆ ಪ್ರಚಾರಕ್ಕೆ ಬರುವ ಶಾಸಕರಲ್ಲಿ ಈ ಬಗ್ಗೆ ಜನರು ಪ್ರಶ್ನೆ ಮಾಡಬೇಕು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಯಾವ ರೀತಿ ಖರ್ಚು ಮಾಡಿದ್ದೀರಿ, ಕಳೆದ ಬಜೆಟ್ ವೇಳೆ ಮಾಡಿದ ಘೋಷಣೆ ಕಾರ್ಯರೂಪಕ್ಕೆ ಬಂದಿದೆಯೇ ಎಂದು ಕೇಳಬೇಕಾಗಿದೆ ಎಂದರು. ತೆಲಂಗಾಣ ಸರ್ಕಾರ ಪ್ರಾಥಮಿಕ ಸರಕಾರಿ ಶಾಲೆಗಳ ಸುಧಾರಣೆಗೆ ಏಳು ಸಾವಿರ ಕೋಟಿ ಕೊಟ್ಟಿದೆ. ಅಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ನಮ್ಮಲ್ಲಿ 48 ಸಾವಿರ ಪ್ರಾಥಮಿಕ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ಕನಿಷ್ಠ ಹತ್ತು ಸಾವಿರ ಕೋಟಿ ಅನುದಾನ ನೀಡಬೇಕೆಂದು ಕೇಳಿದ್ದೇನೆ ಎಂದರು. 

ಕುಲಪತಿ ಹುದ್ದೆಗೆ ಹತ್ತು ಕೋಟಿ ! 

ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳಾಗಲು ಹತ್ತು ಕೋಟಿ ಕೊಟ್ಟು ಬರುತ್ತಾರೆ. ಕುಲಪತಿ ಹುದ್ದೆಗೆ ಶಿಫಾರಸು ಮಾಡುವುದು ಸರ್ಚ್ ಕಮಿಟಿ. ಆದರೆ ಈ ಹುದ್ದೆಗೆ ಸರಕಾರಕ್ಕೆ ಶಿಫಾರಸು ಮಾಡುವ ಮಂದಿ ಸರ್ಚ್ ಕಮಿಟಿಯಲ್ಲಿ ಸದಸ್ಯರಾಗಿರುವ ಕುಲಪತಿಗಳೇ ಆಗಿರುತ್ತಾರೆ. ಹೀಗಾಗಿ ಈ ಸರ್ಚ್ ಕಮಿಟಿಗೆ ಶಿಕ್ಷಣ ಇಲಾಖೆ ಹೊರತಾದವರು ಸದಸ್ಯರಾಗಬೇಕೆಂದು ಶಿಫಾರಸು ಮಾಡಿದ್ದೆ. ಕುಲಪತಿಗಳೇ ಆ ಹುದ್ದೆಗೆ ಶಿಫಾರಸು ಮಾಡಿದರೆ ಮತ್ತೊಂದು ಕಡೆಗೆ ಹೋಗಲು ತಮ್ಮ ಹೆಸರನ್ನೇ ಪ್ರಭಾವ ಬೀರುತ್ತಾರೆ ಎಂದು ದೊರೆಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

Ready to resign if BJP high command asks me to, but will work as Karnataka  CM till then: B S Yediyurappa | India News,The Indian Express

Cabinet expansion rumours gain momentum as Basavaraj Bommai leaves for Delhi

ಬೆಂಗಳೂರಿನಂತಹ ನಗರಗಳಲ್ಲಿ ಸಾವಿರಕ್ಕೂ ಹೆಚ್ಚು ಐಟಿ ಇಂಡಸ್ಟ್ರಿಗಳಿವೆ. ಪ್ರತಿ ಕೈಗಾರಿಕೆಯೂ ತಮ್ಮ ಲಾಭದ ಎರಡು ಶೇಕಡಾವನ್ನು ಸಿಎಸ್ ಆರ್ ನಿಧಿಯೆಂದು ವ್ಯಯ ಮಾಡಬೇಕಾಗುತ್ತದೆ. ಐಟಿ ಕಂಪನಿಗಳು ಹೆಚ್ಚು ಲಾಭದ ಕೇಂದ್ರಗಳಾಗಿದ್ದು ಶಾಸಕರು ಅದನ್ನು ಬಳಸಿಕೊಂಡು ಸರಕಾರಿ ಶಾಲೆಯನ್ನು ಅಭಿವೃದ್ಧಿ ಮಾಡಬಹುದು. ರಾಮಲಿಂಗಾರೆಡ್ಡಿ ಕೆಲವು ಶಾಲೆಗಳಲ್ಲಿ ಈಜು ಕೊಳವನ್ನೂ ನಿರ್ಮಿಸಿದ್ದಾರೆ. ಆದರೆ ಹೆಚ್ಚಿನ ಶಾಸಕರು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ ಎಂದರು. ಯಡಿಯೂರಪ್ಪ, ಬೊಮ್ಮಾಯಿ ಈ ಕೆಲಸ ಮಾಡಿದ್ದಾರೆಯೇ ಎಂದು ಕೇಳಿದ್ದಕ್ಕೆ, ಯಡಿಯೂರಪ್ಪ ಒಂದಷ್ಟು ಕೆಲಸ ಮಾಡಿದ್ದಾರೆ. ಬೊಮ್ಮಾಯಿ ಕ್ಷೇತ್ರದಲ್ಲಿ ಅಂಥ ಕೆಲಸ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದರು. ಕರಾವಳಿ ಭಾಗದ ಶಾಸಕರು ಸರಕಾರಿ ಶಾಲೆ ದತ್ತು ಪಡೆದಿದ್ದಾರೆಯೇ ಎಂಬ ಪ್ರಶ್ನೆಗೆ, ಮಾಹಿತಿ ಇಲ್ಲ ಎಂದರು. 

SARVA SHIKSHA ABHIYAN – KARNATAKA TENDER NOTIFICATION E-Procurement Process  FOR PRINTING AND SUPPLY OF Kannada Medium Chinnar

ಮಂಗಳೂರು ವಿವಿಯು ಹತ್ತು ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದು ಅದರ ಉದ್ಘಾಟನೆ ಜ.28ರಂದು ನಡೆಯಲಿದೆ ಎಂದರು. ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, ಶಿಕ್ಷಕರಿಲ್ಲದೆ ಅಭಿವೃದ್ಧಿ, ದತ್ತು ಪಡೆದರೇನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಕ್ಕೆ, 15 ಸಾವಿರ ಶಿಕ್ಷಕರ ನೇಮಕ ಆಗ್ತಾ ಇದೆ ಎಂದರು. ದೊರೆಸ್ವಾಮಿ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದು ವಿವಿಯ ವತಿಯಿಂದ 4.31 ಕೋಟಿ ವೆಚ್ಚದಲ್ಲಿ ಹತ್ತು ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದಾಗಿ ತಿಳಿಸಿದರು. ಶಿಕ್ಷಣ ಸುಧಾರಣೆ ಕುರಿತ ಅಂಕಿಅಂಶಗಳ ಬಗ್ಗೆ ಮಾಹಿತಿ ಕೇಳಿದಾಗ ತಡವರಿಸಿದ ದೊರೆಸ್ವಾಮಿ, ಪತ್ರಕರ್ತರ ಮುಂದೆ ನಗೆಪಾಟಲಿಗೀಡಾದರು. ಅಧ್ಯಯನ ವರದಿಗೆ ಸರಕಾರದಿಂದ ಅನುದಾನ ಪಡೆದಿಲ್ಲವೇ ಎಂದು ಕೇಳಿದ್ದಕ್ಕೆ ಒಂದು ರೂಪಾಯಿ ಅನುದಾನ ಪಡೆದಿಲ್ಲ. ಸ್ವಂತ ಖರ್ಚಿನಿಂದ ಮಾಡಿದ್ದೇನೆ. ಸಮಿತಿಯಲ್ಲಿ ಕುಲಪತಿಗಳಾಗಿ ನಿವೃತ್ತರಾದವರನ್ನೇ ತಜ್ಞರನ್ನಾಗಿ ನೇಮಕ ಮಾಡಿಕೊಂಡಿದ್ದೇನೆ ಎಂದರು.

Mangalore educator Doreswamy slams CM Bommai over adoption of government schools. Says CM nor the BJP mlas never concentrated over those issues. Before elections CM Bommai must seriously take up this issue he slammed.