ಬ್ರೇಕಿಂಗ್ ನ್ಯೂಸ್
08-03-23 12:47 pm Mangalore Correspondent ಕರಾವಳಿ
ಮಂಗಳೂರು, ಮಾ.8: ಉಡುಪಿ ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ಕೊಟ್ಟಿದ್ದರು ಅನ್ನುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆ ವಿವಾದಕ್ಕೀಡಾಗಿದೆ. ಇತ್ತೀಚೆಗೆ ಮೂಡುಬಿದ್ರೆಯ ನೂರಾನಿ ಮಸೀದಿಯ ಕಾರ್ಯಕ್ರಮದಲ್ಲಿ ಮತ ಸೌಹಾರ್ದ ವಿಚಾರದಲ್ಲಿ ಮಿಥುನ್ ರೈ ಮಾಡಿದ್ದ ಭಾಷಣದ ತುಣುಕು ವೈರಲ್ ಆಗಿದ್ದು, ಕೃಷ್ಣ ಮಠಕ್ಕೂ ಮುಸ್ಲಿಂ ರಾಜರೇ ಭೂಮಿ ಕೊಟ್ಟಿದ್ದರು, ಅದು ಈ ನಾಡಿನ ಸೌಹಾರ್ದ, ಸಾಮರಸ್ಯದ ಪ್ರತೀಕ ಎಂದಿದ್ದು ಕೆಲವರ ವಿರೋಧಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಿಥುನ್ ರೈ ಬಳಿ ಮಾಹಿತಿ ಕೇಳಿದಾಗ, ನಾನೇನು ಇತಿಹಾಸಕಾರ ಅಲ್ಲ. ಆ ರೀತಿ ಹೇಳಿಕೆ ನೀಡಿದ್ದು ಹೌದು. ಅದನ್ನು ನಿರಾಕರಣೆ ಮಾಡುವುದಿಲ್ಲ. ಈ ಹಿಂದೆ ಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಇಫ್ತಾರ್ ಸೌಹಾರ್ದ ಕೂಟ ಏರ್ಪಡಿಸಿದ್ದಾಗ ಆ ರೀತಿ ಹೇಳಿಕೆ ನೀಡಿದ್ದರು. ಕೃಷ್ಣ ಮಠಕ್ಕೆ ಮುಸ್ಲಿಂ ರಾಜರೇ ಭೂಮಿ ಕೊಟ್ಟಿದ್ದರು, ಆ ಜಾಗದಲ್ಲಿ ಮಠವನ್ನು ಕಟ್ಟಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಅದು ಪತ್ರಿಕೆಯಲ್ಲಿ ಬಂದಿರುವ ದಾಖಲೆಯೂ ನನ್ನಲ್ಲಿದೆ. ನಾನು ಅವರ ಹೇಳಿಕೆಯನ್ನು ಆಧರಿಸಿ ಮಾತನಾಡಿದ್ದೇನೆ ಹೊರತು ನನ್ನ ಸ್ವಂತ ಅಭಿಪ್ರಾಯ ಅಲ್ಲ ಎಂದು ಹೇಳಿದ್ದಾರೆ.
ಆದರೆ, ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ಕೊಟ್ಟಿರುವ ಯಾವುದೇ ಉದಾಹರಣೆ ಇಲ್ಲ ಎನ್ನುವುದು ಇದನ್ನು ವಿವಾದ ಎಬ್ಬಿಸುತ್ತಿರುವವರ ಅಹವಾಲು. ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಉಂಬಳಿ ಕೊಟ್ಟಿರುವ ಯಾವುದೇ ದಾಖಲೆ ಇಲ್ಲ ಎಂದು ಅಲ್ಲಿನ ಭಕ್ತರು ಹೇಳುತ್ತಾರೆ. ಇದೇ ವಿಚಾರದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದು, ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಉಂಬಳಿ ಕೊಟ್ಟಿರುವ ದಾಖಲೆ ಇಲ್ಲ. ಪಕ್ಕದಲ್ಲಿರುವ ಉಡುಪಿಯ ಜಾಮಿಯಾ ಮಸೀದಿಗೆ ಮುಸ್ಲಿಂ ರಾಜರು ಜಾಗ ಕೊಟ್ಟಿರಬಹುದು. ಮಿಥುನ್ ರೈ ಮತ ಗಳಿಸುವುದಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಿರಬಹುದು. ಯಾವ ಆಧಾರದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಇವೆಲ್ಲ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಮಿಥುನ್ ರೈ ಹಿಂದು- ಮುಸ್ಲಿಮರ ಸೌಹಾರ್ದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು. ಬಪ್ಪನಾಡಿನಲ್ಲಿ ಹಿಂದು – ಮುಸ್ಲಿಂ ಸೌಹಾರ್ದ ಇದೆ, ಹಾಗೆಯೇ ಉಡುಪಿ ಕೃಷ್ಣ ಮಠದಲ್ಲೂ ಅದೇ ರೀತಿಯ ಬಾಂಧವ್ಯ ಇದೆ. ತುಳುವಿನ ಪಾಡ್ದನದಲ್ಲೂ ಬಾಂಧವ್ಯ ಸಾರುವ ಉಲ್ಲೇಖಗಳಿವೆ. ಈಗಿನ ಕಾಲದಲ್ಲಿ ಮಾತ್ರ ಅವೆಲ್ಲವನ್ನೂ ಮರೆಮಾಚಿ ಹಿಂದು- ಮುಸ್ಲಿಂ ದ್ವೇಷ ಕಾರುವ ರೀತಿ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
#Udupi #SriKrishnaMatha controversy, #congress leader #MithunRai says temple land was gifted by #Muslim king pic.twitter.com/4YMGjYy3Sd
— Headline Karnataka (@hknewsonline) March 8, 2023
Udupi Sri Krishna Matha controversy, congress leader Mithun Rai says temple land was gifted by Muslim king. Pejawar Seer Sri Vishwesha Theertha himself has quoted it he added.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 01:08 pm
Mangalore Correspondent
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
08-02-25 06:21 pm
HK News Desk
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am
Mangalore crime, blackmail Temple priest: ಅರ್...
06-02-25 09:32 pm