ಬ್ರೇಕಿಂಗ್ ನ್ಯೂಸ್
04-04-23 07:11 pm Giridhar Shetty, Mangaluru ಕರಾವಳಿ
ಉಡುಪಿ, ಎ.4: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ ಘೋಷಿಸುತ್ತಲೇ ಉಡುಪಿ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಪ್ರತಿ ಕ್ಷೇತ್ರದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮಾಹಿತಿ ಪ್ರಕಾರ, ಉಡುಪಿ ಜಿಲ್ಲೆಯಲ್ಲಿ ನಾಲ್ವರು ಹಾಲಿ ಶಾಸಕರಿಗೆ ಕೊಕ್ ಸಿಗಲಿದ್ದು ಅವರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸಲು ಬಿಜೆಪಿ ಕೋರ್ ಕಮಿಟಿಯಲ್ಲಿ ಚರ್ಚೆಯಾಗಿದೆ.
ಮೂಲಗಳ ಪ್ರಕಾರ, ಉಡುಪಿಯಲ್ಲಿ ಯಶಪಾಲ್ ಸುವರ್ಣ, ಕಾಪು ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರದಲ್ಲಿ ಕಿರಣ್ ಕೊಡ್ಗಿ, ಬೈಂದೂರಿನಲ್ಲಿ ಆರೆಸ್ಸೆಸ್ ಹಿನ್ನೆಲೆಯ ಗುರುರಾಜ್ ಗಂಟಿಹೊಳೆ ಹೆಸರು ಬಹುತೇಕ ಫೈನಲ್ ಆಗಿದೆ ಎನ್ನಲಾಗುತ್ತಿದೆ. ಕಾರ್ಕಳದಲ್ಲಿ ಶಾಸಕ ಸುನಿಲ್ ಕುಮಾರ್ ಅವರನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಇದರಂತೆ, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಥಾನ ಕಳಕೊಳ್ಳಲಿದ್ದಾರೆ. ಹಾಲಿ ಇಬ್ಬರು ಶಾಸಕರು ಬಂಟ ಸಮುದಾಯದವರಿದ್ದರೆ, ಒಬ್ಬರು ಬ್ರಾಹ್ಮಣ, ಒಬ್ಬರು ಬಿಲ್ಲವ ಮತ್ತು ಇನ್ನೊಬ್ಬರು ಮೊಗವೀರ ಸಮುದಾಯಕ್ಕೆಂದು ಜಾತಿವಾರು ವಿಭಜನೆ ಇದೆ. ಕುಂದಾಪುರ ಮತ್ತು ಬೈಂದೂರಿನಲ್ಲಿ ಬಂಟ ಸಮುದಾಯ ಪ್ರಬಲ ಆಗಿರುವುದರಿಂದ ಆ ಕ್ಷೇತ್ರಗಳನ್ನು ಶ್ರೀನಿವಾಸ ಶೆಟ್ಟಿ ಮತ್ತು ಸುಕುಮಾರ ಶೆಟ್ಟಿಗೆ ಕೊಡಲಾಗಿತ್ತು.
ಅದೇ ಪ್ರಕಾರ, ಈ ಬಾರಿಯೂ ಬಂಟ ಸಮುದಾಯಕ್ಕೆ ಎರಡು ಸೀಟು ಕೊಡುವ ಬಗ್ಗೆ ಚಿಂತನೆ ನಡೆದಿದೆ. ಗುರ್ಮೆ ಸುರೇಶ್ ಶೆಟ್ಟಿ ಮತ್ತು ಗುರುರಾಜ್ ಗಂಟಿಹೊಳೆ ಬಂಟ ಸಮುದಾಯಕ್ಕೆ ಸೇರಿದವರು. ಮೊಗವೀರ ಸಮುದಾಯದ ಯಶಪಾಲ್ ಸುವರ್ಣ, ಬಿಲ್ಲವ ಸಮುದಾಯದ ಸುನಿಲ್ ಕುಮಾರ್, ಬ್ರಾಹ್ಮಣ ಕೋಟಾಕ್ಕೆ ರಘುಪತಿ ಭಟ್ ಬದಲು ಕುಂದಾಪುರದಲ್ಲಿ ಕಿರಣ್ ಕೊಡ್ಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾಹಿತಿಗಳಿವೆ. ಮಾಜಿ ಸಹಕಾರಿ ಧುರೀಣ, 3ನೇ ಹಣಕಾಸು ಆಯೋಗದ ಅಧ್ಯಕ್ಷ ದಿ. ಎ.ಜಿ.ಕೊಡ್ಗಿ ಅವರ ಪುತ್ರನಾಗಿರುವ ಕಿರಣ್ ಕೊಡ್ಗಿ ಕುಂದಾಪುರ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷರಾಗಿದ್ದಾರೆ.
ಆರೆಸ್ಸೆಸ್ ಹಿನ್ನೆಲೆಯ ಗುರುರಾಜ್ ಗಂಟಿಹೊಳೆ
ಹೊಸಮುಖದ ನಾಲ್ವರಲ್ಲಿ ಅಚ್ಚರಿಯ ಹೆಸರು ಗುರುರಾಜ್ ಗಂಟಿಹೊಳೆ ಅವರದ್ದು. ಇವರು ಬೈಂದೂರಿನ ಗಂಟಿಹೊಳೆ ಎಂಬ ಊರಿನವರಾಗಿದ್ದು, ವಿದ್ಯಾರ್ಥಿ ಜೀವನದ ಬಳಿಕ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತನಾಗಿದ್ದರು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಪೂರ್ಣಾವಧಿ ಪ್ರಚಾರಕ್ ಆಗಿದ್ದರು. 2013ರಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ರಾಜಕೀಯ ರಂಗಕ್ಕೆ ಎಂಟ್ರಿ ಪಡೆದಿದ್ದರು. ಆನಂತರ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಜೊತೆಗೆ ಸಮಾಜ ಸೇವಕರಾಗಿ ಗುರುತಿಸಿದ್ದಾರೆ. ಈಶಾನ್ಯ ರಾಜ್ಯಗಳ ನೂರಾರು ಬಡ ಮಕ್ಕಳನ್ನು ಬೈಂದೂರಿಗೆ ಕರೆತಂದು ಅವರಿಗೆ ಉತ್ತಮ ಶಿಕ್ಷಣ ಸಿಗುವಂತೆ ಮಾಡಿದ್ದಾರೆ. ಜೊತೆಗೆ, ಹುಟ್ಟೂರು ಗಂಟಿಹೊಳೆ ಮತ್ತು ಕುಮಟಾದಲ್ಲಿ ಉದ್ಯಮ ಹೊಂದಿದ್ದು ಹಲವಾರು ಯುವಕರಿಗೆ ಉದ್ಯೋಗ ದೊರಕಿಸಿದ್ದಾರೆ. ಬೈಂದೂರಿನ ಮಟ್ಟಿಗೆ ಸದ್ದಿಲ್ಲದೆ ಹೆಸರು ಮಾಡಿರುವ ಗುರುರಾಜ್ ಅವರಿಗೆ ಟಿಕೆಟ್ ಸಿಕ್ಕಲ್ಲಿ ಗೆಲುವು ಖಚಿತ ಎನ್ನುವ ಮಾತು ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿದೆ. ಇವರು ಇಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಹೊಂದಿದ್ದಾರೆ.
ಹೆಸರಾಂತ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ
ಕಾಪು ಕ್ಷೇತ್ರಕ್ಕೆ ಹೆಸರು ಕೇಳಿಬರುತ್ತಿರುವ ಗುರ್ಮೆ ಸುರೇಶ್ ಶೆಟ್ಟಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ ಹೊಟೇಲ್ ಉದ್ಯಮ ಹೊಂದಿದ್ದಾರೆ. ಗುರ್ಮೆ ಫೌಂಡೇಶನ್ ಅಧ್ಯಕ್ಷರಾಗಿದ್ದು, ಅದರ ಹೆಸರಲ್ಲಿ ಸಾಮಾಜಿಕ ಕಾರ್ಯ ನಡೆಸುತ್ತಿದ್ದಾರೆ. ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾಗಿದ್ದು ಸಮುದಾಯದ ನೂರಾರು ಬಡವರಿಗೆ ಹಣಕಾಸು ನೆರವು ಒದಗಿಸಿದ್ದಾರೆ. ಕಾಪು ತಾಲೂಕಿನ ಶಿರ್ವ ಕಳತ್ತೂರು ನಿವಾಸಿಯಾಗಿದ್ದು, ಕಾಪು ಮತ್ತು ಉಡುಪಿ ಕ್ಷೇತ್ರದಲ್ಲಿ ಪ್ರಭಾವ ಹೊಂದಿದ್ದಾರೆ. ಈ ಬಾರಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಲು ಭಾರೀ ಕಸರತ್ತು ನಡೆಸಿದ್ದಾರೆ.
ಕುಂದಾಪುರದಲ್ಲಿ ಹಾಲಾಡಿಯದ್ದೇ ಪ್ರಾಬಲ್ಯ
ಕುಂದಾಪುರ ಕ್ಷೇತ್ರದ ಮಟ್ಟಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಾಬಲ್ಯ ಬಿಜೆಪಿ ಪಕ್ಷಕ್ಕಿಂತ ಹೆಚ್ಚಿನದ್ದು. ಅದಕ್ಕಾಗಿಯೇ ಹಾಲಾಡಿ ಕುಂದಾಪುರದ ವಾಜಪೇಯಿ ಎಂದು ಹೆಸರಾಗಿದ್ದರು. 2018ರಲ್ಲಿ ಹಾಲಾಡಿ 1.3 ಲಕ್ಷ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಪಡೆದಿದ್ದು ಕೇವಲ 40 ಲಕ್ಷ ಮತ. 2013ರಲ್ಲಿ ಬಿಜೆಪಿ ಬಿಟ್ಟು ಪಕ್ಷೇತರ ಸ್ಪರ್ಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ 83 ಸಾವಿರ ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಗಳಿಸಿದ್ದು ಕೇವಲ 14 ಸಾವಿರ ಮತ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 39 ಸಾವಿರ ಮತಗಳನ್ನು ಪಡೆದಿದ್ದರು. ಇವೆರಡು ಚುನಾವಣೆ ನೋಡಿದರೆ, ಹಾಲಾಡಿಯವರ ವೈಯಕ್ತಿಕ ವರ್ಚಸ್ಸು, ಪ್ರಾಬಲ್ಯ ಅರಿವಿಗೆ ಬರುತ್ತದೆ. ರಾಜಕೀಯ ಗುರು ಎಜಿ ಕೊಡ್ಗಿಯವರಂತೆ ಪ್ರಾಮಾಣಿಕ ರಾಜಕಾರಣ ಮಾಡಿದ್ದಕ್ಕೆ ಕ್ಷೇತ್ರದ ಜನ ಪ್ರಚಾರಕ್ಕೆ ಬರದಿದ್ದರೂ, ಅತ್ಯಧಿಕ ಮತಗಳಿಂದ ಅವರನ್ನು ಗೆಲ್ಲಿಸುತ್ತಿದ್ದರು. ಈ ಬಾರಿ ಕಿರಣ್ ಕೊಡ್ಗಿಯವರನ್ನು ಹಾಲಾಡಿ ಅವರೇ ಸೂಚಿಸಿರುವುದರಿಂದ ಬಿಜೆಪಿ ಅವರ ಸಲಹೆ ಬಿಟ್ಟು ಬೇರೆ ಅಭ್ಯರ್ಥಿಗೆ ಟಿಕೆಟ್ ಕೊಡುವಂತಿಲ್ಲ ಎನ್ನುವ ಸ್ಥಿತಿಯಿದೆ.
Udupi kapu BJP ticket chances to Suresh Shetty Gurme, kiran for Kundapur, Byndoor ticket for Gururaj. Four familiar MLA faces is the urge of losing ticket this time after the final discussion of RSS. Political report by Headline Karnataka.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 02:51 pm
HK News Desk
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm