ಬ್ರೇಕಿಂಗ್ ನ್ಯೂಸ್
01-05-23 06:06 pm Mangalore Correspondent ಕರಾವಳಿ
ಮಂಗಳೂರು, ಮೇ 1 : ಹಿಂದು, ಮುಸ್ಲಿಂ ಮತಗಳನ್ನು ಒಡೆದು ಧ್ರುವೀಕರಣ ಮಾಡೋದೇ ಬಿಜೆಪಿ ಅಜೆಂಡಾ. ನಮ್ಮದು ಏನು ಹೇಳಿದ್ದೇವೋ, ಅದು ಮಾಡ್ತೀವಿ. ಇವರು ಏನಾದ್ರೂ ಹೇಳಿದ್ದನ್ನು ಮಾಡಿದ್ದಾರೆಯೇ. ಈಗ ಸಿಲಿಂಡರ್ ಕೊಡ್ತೀವಿ ಎನ್ನುತ್ತಿದ್ದಾರೆ. ಇವರು ಕೊಡಲ್ಲ ಎಂದು ರಾಜ್ಯಸಭೆ ಸದಸ್ಯ, ಎಐಸಿಸಿ ಜನರಲ್ ಸೆಕ್ರೆಟರಿ ಜೈರಾಮ್ ರಮೇಶ್ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಇವರದ್ದು ಡಬಲ್ ಇಂಜಿನ್ ಅಂತ ಹೇಳುತ್ತಾರೆ. ಇವರ ಇಂಜಿನ್ ಬೆಂಗಳೂರಿನಲ್ಲಿ ಇರಲ್ಲ. ದೆಹಲಿಯಲ್ಲಿ ಇರತ್ತೆ. ದೆಹಲಿಯಲ್ಲಿ ಡಬಲ್ ಇಂಜಿನ್ ಇಟ್ಕೊಂಡರೆ ರಾಜ್ಯಕ್ಕೇನು ಲಾಭ ಇದೆ. ಇವರಿಂದ ರಾಜ್ಯಕ್ಕೆ ಏನಾದ್ರೂ ಲಾಭ ಆಗಿದೆಯಾ ಎಂದು ಕೇಳಿದರು.
ಸಹಕಾರಿ ಸಂಘಗಳನ್ನು ಪೂರ್ತಿಯಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅದನ್ನು ಕೇಂದ್ರದ ಗೃಹ ಸಚಿವರ ಕೈಕೆಳಗೆ ತರಲಾಗಿದೆ. ದೇಶಾದ್ಯಂತ ಲಕ್ಷಾಂತರ ಸಹಕಾರಿ ಸಂಘಗಳಿದ್ದು ಹಳ್ಳಿಗಳ ದೇಶದಲ್ಲಿ ಇವೇ ಜೀವಾಳ. ಆದರೆ ಇವನ್ನೆಲ್ಲ ಒಂದು ಕಂಟ್ರೋಲ್ ಗೆ ತಂದಿದ್ದಾರೆ. ರಾಜ್ಯಕ್ಕೆ ಸಂವಿಧಾನ ಪ್ರಕಾರ, 94 ಪರ್ಸೆಂಟ್ ಆದಾಯ ಬರುತ್ತೆ. ಅದನ್ನು ಜಿಎಸ್ಟಿ ಹೆಸರಲ್ಲಿ ವಿಭಜಿಸಿದ್ದಾರೆ.
ಐದು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಆಯಾಯ ಭಾಗಕ್ಕೆ ವಿಶೇಷ ಒತ್ತು ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಪೂರ್ಣ ಬಹುಮತ ಸಿಗುತ್ತೆ ಅನ್ನುವ ವಿಶ್ವಾಸ ಇದೆ. ಆದರೆ ಮತದಾರರು ಪೂರ್ಣ ರೀತಿಯ ಬಹುಮತ ಕೊಡಿಸಬೇಕೆಂದು ಪ್ರಾರ್ಥಿಸುತ್ತೇನೆ ಎಂದರು.
ಗ್ಯಾರಂಟಿ ಘೋಷಣೆ ಬಗ್ಗೆ ಬಿಜೆಪಿ ಲೇವಡಿ ಕುರಿತ ಪ್ರಶ್ನೆಗೆ, ರಾಜಸ್ಥಾನದಲ್ಲಿ ಏನೆಲ್ಲ ಕೊಟ್ಟಿದ್ದೇವೆ ಅಂತ ಎಲ್ಲರಿಗೂ ಗೊತ್ತಿದೆ. ಅಲ್ಲಿ ರೈತರಿಗೆ ಉಚಿತ ವಿದ್ಯುತ್ ಇನ್ನಿತರ ಭರವಸೆಗಳನ್ನು ಈಡೇರಿಸಿದ್ದೇವೆ. ಅವೆಲ್ಲ ಪಬ್ಲಿಕ್ ಡೊಮೈನಲ್ಲಿ ಸಿಗತ್ತೆ. ಮುಚ್ಚಿಡುವಂಥದ್ದೇನೂ ಇಲ್ಲ ಎಂದರು. ರಾಜ್ಯದಲ್ಲಿ ಬಿಜೆಪಿಯ ನಾಲ್ಕು ಬಿ ಟೀಮ್ ಇದೆ. ಆಮ್ ಆದ್ಮಿ, ಒವೈಸಿಯ ಎಂವೈಐಎಂ, ಎಸ್ಡಿಪಿಐ ಇವೆಲ್ಲದಕ್ಕೂ ಆಕ್ಸಿಜನ್ ಕೊಡುತ್ತಿರುವುದೇ ಬಿಜೆಪಿ ಎಂದರು.
Jairam Ramesh slams BJP in Mangalore, says no work was done in state. Speaking on Karnataka Assembly elections 2023 scheduled on May 10, Congress General Secretary in-charge Communications Jairam Ramesh on May 1 said that BJP itself has not done any work for development in the state. However, Congress wants to show what it promised, it delivered in other state and shall do so in Karnataka too.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm