ಬ್ರೇಕಿಂಗ್ ನ್ಯೂಸ್
02-07-26 01:56 pm HK News Staffer ದೇಶ - ವಿದೇಶ
ಅಹ್ಮದಾಬಾದ್, ಜುಲೈ 2: ಹಿಂದೂ ಧರ್ಮದ ಅಡಿಯಲ್ಲಿ ವಿವಾಹಕ್ಕೆ ಕೇವಲ ವಿವಾಹ ನೋಂದಣಿ ಪ್ರಮಾಣಪತ್ರ ಇದ್ದರೆ ಸಾಕಾಗುವುದಿಲ್ಲ. ಸಪ್ತಪದಿ ಸೇರಿದಂತೆ ಅಗತ್ಯ ಧಾರ್ಮಿಕ ವಿಧಿ-ವಿಧಾನಗಳು ನಡೆದಿದ್ದರೆ ಮಾತ್ರ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ಸಿಗುತ್ತದೆ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬ್ರಿಟನ್‌ನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ವಿವಾಹವನ್ನು ಅಮಾನ್ಯ ಎಂದು ಘೋಷಿಸುವಂತೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವೋರಾ ಮತ್ತು ನ್ಯಾ.ವಚಾನಿ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ವೇಳೆ, ಪ್ರತಿವಾದಿ ಮಹಿಳೆಯು ಯಾವುದೇ ವಿವಾಹ ವಿಧಿ ವಿಧಾನಗಳು ನಡೆದಿಲ್ಲ ಎಂದು ಸ್ವತಃ ನ್ಯಾಯಾಲಯದ ಎದುರು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇವಲ ವಿವಾಹ ನೋಂದಣಿ ಪ್ರಮಾಣಪತ್ರದ ಆಧಾರದ ಮೇಲೆ ವಿವಾಹ ಮಾನ್ಯವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಾಲಯವು ಹಿಂದೂ ವಿವಾಹ ಕಾಯಿದೆ-1955 ಅನ್ನು ಉಲ್ಲೇಖಿಸಿದ್ದು, ಹಿಂದೂ ವಿವಾಹವು ಆಯಾ ಕುಟುಂಬ ಅಥವಾ ಸಮುದಾಯದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಬೇಕು ಎಂದು ಅಭಿಪ್ರಾಯ ಪಟ್ಟಿದೆ. ವಿಶೇಷವಾಗಿ ಸಪ್ತಪದಿ, ಇನ್ನಿತರ ಅಗತ್ಯ ಆಚರಣೆಗಳು ನಡೆದಾಗ ಮಾತ್ರ ವಿವಾಹಕ್ಕೆ ಧಾರ್ಮಿಕ, ಸಾಮಾಜಿಕ ಹಾಗೂ ಕಾನೂನುಬದ್ದ ಮಾನ್ಯತೆ ದೊರೆಯುತ್ತದೆ ಎಂದು ನ್ಯಾಯಪೀಠ ಹೇಳಿದೆ.
"ಹಿಂದು ಪದ್ಧತಿಯಲ್ಲಿ ವಿವಾಹ ಎನ್ನುವುದು ಕೇವಲ ಹಾಡು, ನೃತ್ಯಗಳ ಕಾರ್ಯಕ್ರಮವಲ್ಲ, ಅದು ಪವಿತ್ರ ಸಂಸ್ಕಾರ ಮತ್ತು ಜೀವಮಾನದ ಬಾಂಧವ್ಯವಾಗಿದೆ. ಯುವಜನರು ವಿವಾಹದ ಪಾವಿತ್ರ್ಯ ಹಾಗೂ ಅದರ ಜವಾಬ್ದಾರಿಯನ್ನು ಅರಿತು ವೈವಾಹಿಕ ಜೀವನಕ್ಕೆ ಕಾಲಿಡಬೇಕು,''ಎಂದು ನ್ಯಾಯಪೀಠ ಕಿವಿಮಾತು ತಿಳಿಸಿದೆ. ಲಂಡನ್ ನಲ್ಲಿ ನೆಲೆಸಿರುವ ಕೌಶಲ್ ಸೋನಾರ್ ಎಂಬವರು ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ವಿವಾಹವನ್ನು ಅಮಾನ್ಯ ಎಂದು ಘೋಷಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.
ಅಹಮದಾಬಾದ್‌ನಲ್ಲಿ ವಾಸಿಸುವ ಮಹಿಳೆಯೊಬ್ಬರು ತನ್ನನ್ನು ವಿವಾಹ ಆಗಿರುವ ಬಗ್ಗೆ ಪ್ರಮಾಣ ಪತ್ರದೊಂದಿಗೆ ತಮ್ಮ ಕುಟುಂಬವನ್ನು ಸಂಪರ್ಕಿಸಿದ ಬಳಿಕವೇ ವಿವಾಹದ ಬಗ್ಗೆ ತನಗೆ ತಿಳಿಯಿತು ಎಂದು ಅರ್ಜಿದಾರ ಕೌಶಲ್ ಸೋನಾರ್ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಪ್ರತಿವಾದಿ ಮಹಿಳೆಯೂ ವ್ಯಾಜ್ಯ ಕೌಟುಂಬಿಕ ನ್ಯಾಯಾಲಯದಲ್ಲಿದ್ದಾಗ ಯಾವುದೇ ವಿವಾಹ ವಿಧಿ ವಿಧಾನಗಳು ನಡೆದಿಲ್ಲ ಹಾಗೂ ಇಬ್ಬರೂ ಪತಿ-ಪತ್ನಿಯಾಗಿ ಎಂದಿಗೂ ಜೀವನ ನಡೆಸಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದರು. ಇಂತಹ ಒಪ್ಪಿಗೆಯಿದ್ದರೂ ಕೌಟುಂಬಿಕ ನ್ಯಾಯಾಲಯ ಕೌಶಲ್ ಸೋನಾರ್ ಅರ್ಜಿಯನ್ನು ವಜಾಗೊಳಿಸಿತ್ತು. ಕೌಟುಂಬಿಕ ನ್ಯಾಯಾಲಯದ ಈ ನಡೆಯನ್ನು ತಪ್ಪು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
24-08-26 11:05 am
HK News Staffer
ಹೊಳೆನರಸೀಪುರ ; ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ ಮ...
23-08-26 05:20 pm
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am