ಬ್ರೇಕಿಂಗ್ ನ್ಯೂಸ್
02-07-26 10:53 pm HK News Desk ಕರಾವಳಿ
ಉಳ್ಳಾಲ, ಜು.02 ಭಾರೀ ಮಳೆಗೆ ತೊಕ್ಕೊಟ್ಟು ಸಮೀಪದ ಕೆರೆಬೈಲ್ ಎಂಬಲ್ಲಿ ಖಾಸಗಿ ಎಸ್ಟೇಟ್ ಆವರಣ ಗೋಡೆ ಕುಸಿದ ಪರಿಣಾಮ ಒಂದು ಮನೆ ನೆಲಸಮವಾಗಿದ್ದು, ಸ್ಥಳದಲ್ಲಿ ಹದಿನಾಲ್ಕು ಮನೆಗಳು ಅಪಾಯದಲ್ಲಿವೆ. ಸಂತ್ರಸ್ತ ಕುಟುಂಬಗಳಿಗೆ ಸ್ಥಳೀಯ ಶಾಸಕ ಮತ್ತು ಆರೋಗ್ಯ ಸಚಿವ ಯು.ಟಿ.ಖಾದರ್ ತಲಾ ಹತ್ತು ಸಾವಿರ ರೂ. ವೈಯಕ್ತಿಕ ಸಹಾಯಧನ ನೀಡಿದ್ದಾರೆ.
ಬುಧವಾರ ಸಂಜೆ ಸಚಿವ ಖಾದರ್ ಅವರು ಜಿಲ್ಲಾಧಿಕಾರಿಗಳ ಜತೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಎಸ್ಟೇಟ್ ಮಾಲಕರು ನೀಡುತ್ತಿರುವ ಉಪಟಳಗಳ ಬಗ್ಗೆ ಸ್ಥಳೀಯರು ಸಚಿವರಲ್ಲಿ ದೂರುಗಳ ಸರಮಾಲೆಯನ್ನೇ ಹೇಳಿದ್ದರು. ಹೀಗಾಗಿ ಹದಿನಾಲ್ಕು ಮನೆಗಳ ಕುಟುಂಬ ಸದಸ್ಯರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದರು. ಸಂತ್ರಸ್ತ ಕುಟುಂಬಸ್ಥರಿಗೆ ವೈಯಕ್ತಿಕ ನೆಲೆಯಲ್ಲಿ ಒಂದು ತಿಂಗಳ ಮನೆ ಬಾಡಿಗೆ ಮತ್ತು ತಲಾ ಹತ್ತು ಸಾವಿರ ರೂ. ಸಹಾಯಧನ ನೀಡುವುದಾಗಿ ಖಾದರ್ ಘೋಷಿಸಿದ್ದರು.
ಇದರಂತೆ, ಎನ್‌ಎಸ್‌ಯುಐ ಕ್ಷೇತ್ರ ಕಾರ್ಯದರ್ಶಿ ಯು.ಟಿ.ಫರೀದ್ ಗುರುವಾರ ಬೆಳಗ್ಗೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹದಿನಾಲ್ಕು ಮನೆಗಳ ಸಂತ್ರಸ್ತ ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂ. ಸಹಾಯಧನ ವಿತರಿಸಿದ್ದಾರೆ. ಈ ವೇಳೆ ಮಾತನಾಡಿದ ಫರೀದ್ ಅವರು ಈಗಾಗಲೇ ಘಟನೆ ಕುರಿತು ಜಿಲ್ಲಾಧಿಕಾರಿಯವರ ಜೊತೆ ಚರ್ಚಿಸಲಾಗಿದ್ದು, ಸಂತ್ರಸ್ತರಿಗೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸುವ ಪ್ರಯತ್ನಗಳಾಗುತ್ತಿವೆ. ಎಸ್ಟೇಟ್ ತಡೆಗೋಡೆಯ ಸುರಕ್ಷತೆಯ ಬಗ್ಗೆ ಎನ್‌ಐಟಿಕೆ ಇಂಜಿನಿಯರ್‌ಗಳು ವರದಿ ನೀಡಿದ ಬಳಿಕವಷ್ಟೇ ಸಂತ್ರಸ್ತರು ಮತ್ತೆ ತಮ್ಮ ಮನೆಗಳಿಗೆ ಮರಳಬಹುದೆಂದರು.





ಸಚಿವ ಖಾದರ್ ಆಪ್ತ ಸಹಾಯಕ ಪ್ರಕಾಶ್ ಪಿಂಟೋ ಮಾತನಾಡಿ ಸಚಿವರು ಬುಧವಾರ ರಾತ್ರಿಯೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಸಂತ್ರಸ್ತ ಹದಿನಾಲ್ಕು ಕುಟುಂಬಗಳಿಗೆ ಉತ್ತಮ ವಸತಿ ವ್ಯವಸ್ಥೆ ಮಾಡಿಕೊಟ್ಟು, ಘಟನೆಗೆ ಕಾರಣರಾದ ಎಸ್ಟೇಟ್ ಮಾಲಕರಿಂದ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅನುಮತಿ ಇಲ್ಲದೆ ಆವರಣ ಗೋಡೆ ನಿರ್ಮಿಸಲು ಅವಕಾಶ ಕೊಟ್ಟ ಉಳ್ಳಾಲ ನಗರಸಭೆಯ ಇಂಜಿನಿಯರ್ ತುಳಸಿಯ ವಿರುದ್ಧ ಕ್ರಮ ಜರುಗಲಿದ್ದು, ಅವರು ಅಮಾನತುಗೊಳ್ಳುವ ಸಾಧ್ಯತೆಯಿದೆಯೆಂದರು.
ಬಿಜೆಪಿ ಮಹಾಶಕ್ತಿ ಕೇಂದ್ರದ ನಾರಾಯಣ ಬಿ ಮಾತನಾಡಿ ವರುಷದ ಹಿಂದೆಯೇ ಆವರಣ ಗೋಡೆ ವಾಲಿ ನಿಂತಿದ್ದರೂ ಸಹ ದೀರ್ಘ ಅವಧಿಯಲ್ಲಿ ಖಾಸಗಿ ಎಸ್ಟೇಟ್ ಮಾಲಕರು ಯಾವುದೇ ಮುಂಜಾಗ್ರತಾ ಕ್ರಮ ವಹಿಸಿಲ್ಲ. ಮೊದಲ ಮಳೆಯಲ್ಲೇ ಈ ರೀತಿ ಅವಾಂತರ ಸೃಷ್ಟಿಯಾಗಿದ್ದು, ಜಿಲ್ಲಾಧಿಕಾರಿಯವರೇ ಇಲ್ಲಿನ ಪರಿಸ್ಥಿತಿಯನ್ನ ಕಂಡು ದಂಗಾಗಿದ್ದಾರೆ. ಮನೆಯನ್ನ ಕಳಕೊಂಡ ಕಿಶೋರ್ ಅವರಿಗೆ ಪುನರ್ವಸತಿ ಕಲ್ಪಿಸಿ, ಆವರಣ ಗೋಡೆಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕೆಂದು ಆಗ್ರಹಿಸಿದರು.
ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಸಫ್ವಾನ್ ಕೆರೆಬೈಲ್, ಉಳ್ಳಾಲ ನಗರಸಭೆ ಮಾಜಿ ಕೌನ್ಸಿಲರ್ ರಾಜೇಶ್ ಯು.ಬಿ ಮೊದಲಾದವರು ಉಪಸ್ಥಿತರಿದ್ದರು.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm