ಬ್ರೇಕಿಂಗ್ ನ್ಯೂಸ್
22-05-23 09:18 pm Mangalore Correspondent ಕರಾವಳಿ
ಮಂಗಳೂರು, ಮೇ 22 : ಎಂಆರ್ ಪಿಎಲ್ ಮತ್ತೆ 50 ಹುದ್ದೆಗಳಿಗೆ ನೇಮಕಾತಿ ನಡೆಸಲು ಮುಂದಾಗಿದ್ದು ಈ ಬಾರಿಯಾದರೂ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಈ ಬಗ್ಗೆ ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಕೇಂದ್ರಕ್ಕೆ ಮನವರಿಕೆ ಮಾಡಿ ಉದ್ಯೋಗ ದೊರಕಿಸುವ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಆಗ್ರಹ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಎಂಆರ್ ಪಿಎಲ್ 50 ಹುದ್ದೆಗಳ ಭರ್ತಿಗೆ ದೇಶವ್ಯಾಪಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಹೇಳಿಕೊಂಡಿದೆ. ಆದರೆ ಸ್ಥಳೀಯರಿಗೆ, ರಾಜ್ಯದವರಿಗೆ ಉದ್ಯೋಗದಲ್ಲಿ ಎಂಆರ್ ಪಿಎಲ್ ಆದ್ಯತೆ ನೀಡುತ್ತಿಲ್ಲ. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾಗಿದ್ದರೂ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕಾಗಿದೆ. ಎಂಆರ್ ಪಿಎಲ್ ಸ್ಥಾಪನೆ ಸಂದರ್ಭದಲ್ಲಿ ಸಾವಿರಾರು ಮಂದಿ ಆಸ್ತಿ ಕಳಕೊಂಡಿದ್ದಾರೆ. ಅವರಿಗೆ ಉದ್ಯೋಗ ನೀಡುತ್ತೇವೆಂದು ನೀಡಿದ್ದ ಭರವಸೆ ಈಡೇರಿಲ್ಲ. ಕಳೆದ ಬಾರಿ 283 ಉದ್ಯೋಗ ಆಯ್ಕೆ ಸಂದರ್ಭದಲ್ಲಿ ಕರ್ನಾಟಕದ ಕೇವಲ ಏಳೆಂಟು ಮಂದಿ ಆಯ್ಕೆಯಾಗಿದ್ದರು. ಉಳಿದ ಉದ್ಯೋಗ ಉತ್ತರ ಭಾರತೀಯರಿಗೆ ಸಿಕ್ಕಿದ್ದವು.
ಈ ಬಾರಿ ಆ ರೀತಿಯಾಗಲು ನಾವು ಬಿಡುವುದಿಲ್ಲ. ರಾಜ್ಯ ಸರಕಾರದ ಮೂಲಕ ಒತ್ತಡ ಹೇರುತ್ತೇವೆ. ಆದರೆ ಕೇಂದ್ರದ ಸಂಸ್ಥೆಯಾಗಿರುವುದರಿಂದ ಇಲ್ಲಿನ ಬಿಜೆಪಿ ಸಂಸದರು ಈ ಬಗ್ಗೆ ಒತ್ತಡ ಹೇರಬೇಕು. ಸರೋಜಿನಿ ಮಹಿಷಿ ವರದಿಯ ಪ್ರಕಾರ, ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂದಿದೆ. ಅದನ್ನು ಎಂಆರ್ ಪಿಎಲ್ ಉದ್ಯೋಗದಲ್ಲಿಯೂ ಅಳವಡಿಕೆ ಮಾಡಬೇಕು ಎಂದು ಐವಾನ್ ಆಗ್ರಹಿಸಿದರು.
ಎಸ್ಇಝೆಡ್ ವ್ಯಾಪ್ತಿಯ ಜೆಬಿಎಫ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ 76 ನಿರ್ವಸಿತ ಅಭ್ಯರ್ಥಿಗಳಿಗೆ 30 ತಿಂಗಳಿನಿಂದ ಸಂಬಳ ಇಲ್ಲದೆ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ನಾಲ್ಕನೇ ಹಂತದ ವಿಸ್ತರಣೆಯಲ್ಲಿ ಮನೆ ಕಳಕೊಂಡ 450 ಕುಟುಂಬಗಳಿಗೆ ಉದ್ಯೋಗದ ಭರವಸೆ ನೀಡಿದ್ದರೂ, ಆರು ವರ್ಷಗಳಿಂದ ಸಾಧ್ಯವಾಗಿಲ್ಲ. 2006ರಲ್ಲಿ ಎಸ್ಇಝೆಡ್ ಭೂಮಿ ಕಳಕೊಂಡ 250 ಕುಟುಂಬಗಳ ಸದಸ್ಯರಿಗೆ ಇನ್ನೂ ಉದ್ಯೋಗ ಲಭಿಸಿಲ್ಲ. ಇವರ ಅಹವಾಲು ಕೇಳಬೇಕಾದ ಸ್ಥಳೀಯ ಶಾಸಕರು, ಸಂಸದರು ಮೌನ ವಹಿಸಿದ್ದಾರೆ. ಇದಕ್ಕಾಗಿ ಕೂಡಲೇ ಆನ್ಲೈನ್ ಅರ್ಜಿ ಸಲ್ಲಿಕೆ ರದ್ದುಪಡಿಸಿ ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡಬೇಕು. ಡಿಪ್ಲೊಮಾ, ಪದವೀಧರರು, ಇಂಜಿನಿಯರಿಂಗ್ ಆದವರು ನಮ್ಮ ರಾಜ್ಯದಲ್ಲಿ ಸಾವಿರಾರು ಮಂದಿ ಇದ್ದಾರೆ. ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಕಾಂಗ್ರೆಸ್ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.
ಬಿಜೆಪಿಯವರಿಗೇಕೆ ಗ್ಯಾರಂಟಿ ಚಿಂತೆ ?
ಈಗ ಬಿಜೆಪಿಯವರು ಕಾಂಗ್ರೆಸಿನ ಗ್ಯಾರಂಟಿ ಜಾರಿಗೆ ತರಲು ತುದಿಗಾಲಲ್ಲಿ ನಿಂತಿದ್ದಾರೆ. ಗ್ಯಾರಂಟಿ ಜಾರಿ ಸಾಧ್ಯವಿಲ್ಲ ಎಂದು ಕಸದ ಬುಟ್ಟಿಗೆ ಹಾಕಿದ ಬಿಜೆಪಿಗರು, ಈಗ ಜಾರಿ ಯಾವಾಗ ಎಂದು ಕೇಳುತ್ತಿದ್ದಾರೆ. ನಾವು ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಗ್ಯಾರಂಟಿ ಭರವಸೆಗಳಿಗೆ ಅನುಮೋದನೆ ಕೊಟ್ಟು ಆದೇಶ ಮಾಡಿದ್ದೇವೆ. ಮನೆಯೊಡತಿ ಅಂದರೆ ಯಾರು ಅನ್ನೋದನ್ನು ಗುರುತಿಸಬೇಕಲ್ಲ. ರೈತರಿಗೆ 2 ಸಾವಿರ ಕೊಟ್ಟಾಗ ಅವರನ್ನು ಐಡೆಂಟಿಫೈ ಮಾಡದೇ ಹಾಗೆ ಕೊಟ್ಟರಾ... ಯಾವ ಮನೆಗೆ ಎಷ್ಟು ಕೊಡಬೇಕು, ಯಾರಿಗೆ ಸಿಗಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅದರ ಬಗ್ಗೆ ಬಿಜೆಪಿಯವರಿಗೆ ಚಿಂತೆ ಯಾಕೆ.. ಈಗ ಬಿಜೆಪಿಯವರು ಗೊಂದಲದಲ್ಲಿದ್ದಾರೆ. ನಾವು ಹೇಳಿದ್ದನ್ನು ಮಾಡುತ್ತೇವೆ, ಇವರು ಬೊಕ್ಕಸ ಲೂಟಿ ಹೊಡೆದಿದ್ದಾರೆ. ನಾವು ಹಣ ಹೊಂದಿಸಿ, ಗ್ಯಾರಂಟಿ ಭರವಸೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಐವಾನ್ ಡಿಸೋಜ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಅಶ್ರಫ್, ಭಾಸ್ಕರ್, ಸುಧೀರ್ ಶೆಟ್ಟಿ, ಮುಸ್ತಫಾ ಉಪಸ್ಥಿತರಿದ್ದರು.
Congress to intensify protest if jobs not reserverd for Mangaloreans in MRPL says Ivan Dsouza. Ivan said residents of the region, who have given their land and parted with their resources, are entitled to jobs in MRPL
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm