ಬ್ರೇಕಿಂಗ್ ನ್ಯೂಸ್
24-10-26 12:19 pm HK News Staffer ಕರಾವಳಿ
ಬಂಟ್ವಾಳ, ಅ.24 : ತುಳುನಾಡಿನ ದೈವಾರಾಧನೆ ಮತ್ತು ಪಾರಂಪರಿಕ ಜಾನಪದ ಕಲೆಗೆ ಮತ್ತೊಂದು ಗೌರವ ಲಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಜತ್ತೂರು ಗ್ರಾಮದ ಕಾಂಚನ ಕುಡ್ತಡ್ಕ ನಿವಾಸಿ, ಪ್ರಸಿದ್ಧ ದೈವನರ್ತಕ ಸುಬ್ಬಣ್ಣ ಪಂಡಿತರು ಕರ್ನಾಟಕ ಜಾನಪದ ಅಕಾಡೆಮಿಯ 2026-27ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸುಮಾರು ನಾಲ್ಕೂವರೆ ದಶಕಗಳಿಂದ ದೈವಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಸಾಧನೆಗೆ ರಾಜ್ಯಮಟ್ಟದ ಮನ್ನಣೆ ದೊರೆತಿದೆ.
20ನೇ ವಯಸ್ಸಿನಿಂದಲೇ ದೈವನರ್ತನ ಸೇವೆ
ಸುಬ್ಬಣ್ಣ ಪಂಡಿತರು ತಮ್ಮ 20ನೇ ವಯಸ್ಸಿನಿಂದ ಕಲ್ಲುರ್ಟಿ, ಗುಳಿಗ ಸೇರಿದಂತೆ ವಿವಿಧ ದೈವಗಳಿಗೆ ನರ್ತನ ಸೇವೆ ಸಲ್ಲಿಸಲು ಆರಂಭಿಸಿದರು. ತಂದೆ ದುಗ್ಗಣ್ಣ ಪಂಡಿತರ ನಿಧನದ ಬಳಿಕ ಶಿರಾಡಿ, ಬಸ್ತಿನಾಯ್ಕ, ರಕ್ತೇಶ್ವರಿ ಸೇರಿದಂತೆ ಹಲವು ಪ್ರಧಾನ ದೈವಗಳ ಕೋಲ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಚಿರಪರಿಚಿತರಾಗಿರುವ ಇವರು, ಬೆಳ್ತಂಗಡಿಯ ಮುಗೇರಡ್ಕ, ಬಜತ್ತೂರಿನ ಪಡ್ಪು, ಮಣಿಕ್ಕಳ, ನಾಗೋಜಿ, ಕಣಿಯ ಹಾಗೂ ನೆಕ್ಕಿಲಾಡಿ ಸೇರಿದಂತೆ ವಿವಿಧ ಪ್ರದೇಶಗಳ ನೇಮೋತ್ಸವಗಳಲ್ಲಿ ನರ್ತನ ಸೇವೆ ಸಲ್ಲಿಸಿದ್ದಾರೆ.
ತುಳುನಾಡಿನ ಗಡಿ ದಾಟಿದ ದೈವಸೇವೆ
ಸುಬ್ಬಣ್ಣ ಪಂಡಿತರ ಸೇವೆ ಕರಾವಳಿಗೆ ಮಾತ್ರ ಸೀಮಿತವಾಗಿಲ್ಲ. ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯುವ ನೇಮೋತ್ಸವದಲ್ಲಿ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳಿಗೆ ಹಲವು ವರ್ಷಗಳಿಂದ ನರ್ತನ ಸೇವೆ ಸಲ್ಲಿಸುತ್ತಿದ್ದಾರೆ. ಸಕಲೇಶಪುರ ಭಾಗದಲ್ಲಿಯೂ ದೈವಸೇವೆ ನಡೆಸುವ ಮೂಲಕ ತುಳುನಾಡಿನ ಸಾಂಪ್ರದಾಯಿಕ ಜಾನಪದ ಕಲೆಯನ್ನು ಮಲೆನಾಡಿನ ಭಾಗಗಳಿಗೂ ಪರಿಚಯಿಸಿದ್ದಾರೆ.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲ ಪ್ರಸಾದ್ ಮತ್ತು ರಿಜಿಸ್ಟ್ರಾರ್ ಶೃತಿ ಎಂ. ಅವರು ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಆಯ್ಕೆಯಾದ 30 ಮಂದಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹25,000 ನಗದು ಬಹುಮಾನ, ಫಲತಾಂಬೂಲ, ಸ್ಮರಣಿಕೆ ಹಾಗೂ ಶಾಲು ಹೊದಿಸಿ ಗೌರವಿಸಲಾಗುತ್ತದೆ.
24-10-26 12:22 pm
HK News Staffer
ಸ್ಟಿಂಗ್ ಆಪರೇಶನ್ ಹಿಂದಿರುವವರು ಯಾರೆಂಬ ಸತ್ಯ ಗೊತ್...
23-10-26 08:34 pm
ಮಾಧ್ಯಮದ ಮುಖ್ಯಸ್ಥನ ಜೊತೆಗಿದ್ದ ವಿಕ್ಕಿ ಎಂಬ ವ್ಯಕ್ತ...
23-10-26 05:47 pm
ಬ್ಲ್ಯಾಕ್ಮೇಲ್ ಉದ್ದೇಶದಿಂದ ಸ್ಟಿಂಗ್ ಮಾಡಿದ್ದಾರೆ...
23-10-26 03:56 pm
ಬಿಲ್ ಬಾಕಿಯಿದ್ದರೂ ಮೃತದೇಹ ತಡೆಹಿಡಿಯುವಂತಿಲ್ಲ: ಖಾಸ...
23-10-26 02:53 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
24-10-26 12:19 pm
HK News Staffer
Soujanya Case, SIT: ಸೌಜನ್ಯಾ ಕೊಲೆ ಪ್ರಕರಣದ ಮರು...
23-10-26 05:48 pm
19 ಗಂಟೆ 29 ನಿಮಿಷಗಳ ಸಾಧನೆ: 2,000 ಮೆಹಂದಿ ಕೋನ್ ತ...
23-10-26 02:56 pm
Builder Donald Pinto Fraud: ಮಾರ್ನಮಿಕಟ್ಟೆ ಸರ್ಕ...
22-10-26 09:37 pm
ರೆಸ್ಲರ್ ‘ಗ್ರೇಟ್ ಖಲಿ’ ನೋಡಲು ಹುಚ್ಚೆದ್ದು ಸೇರಿದ ಅ...
21-10-26 09:20 pm
24-10-26 12:51 pm
HK News Staffer
ಪುಲಿಕೇಶಿ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ ;...
23-10-26 05:48 pm
B Care Company, Madhumita Kaur: ಇನ್ಶೂರೆನ್ಸ್ ಪ...
22-10-26 03:21 pm
ಮೂಡುಬಿದಿರೆಯಲ್ಲಿ ಕರುಣಾಜನಕ ದುರಂತ ; ಮಗನನ್ನು ರಕ್ಷ...
22-10-26 01:03 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm