ಪಿಲಿಕುಳ ಜೈವಿಕ ಉದ್ಯಾನದಲ್ಲಿ ಹುಲಿ ಸಾವು ; ಎರಡು ಹುಲಿಗಳ ಕಚ್ಚಾಟದಿಂದ ಸಾವನ್ನಪ್ಪಿದ್ದಾಗಿ ಮಾಹಿತಿ 

07-06-23 02:04 pm       Mangalore Correspondent   ಕರಾವಳಿ

ವಾಮಂಜೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿದ್ದ ಹುಲಿಯೊಂದು ದಿಢೀರ್ ಸಾವನ್ನಪ್ಪಿದ ಘಟನೆ ನಡೆದಿದೆ. ನೇತ್ರಾವತಿ ಹೆಸರಿನ 15 ವರ್ಷ ಪ್ರಾಯದ ಹೆಣ್ಣು ಹುಲಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಗಿ ಪಿಲಿಕುಳ ಉದ್ಯಾನವನದ ನಿರ್ದೇಶಕ ಜಯಕರ ಭಂಡಾರಿ ತಿಳಿಸಿದ್ದಾರೆ.

ಮಂಗಳೂರು, ಜೂನ್ 7: ವಾಮಂಜೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿದ್ದ ಹುಲಿಯೊಂದು ದಿಢೀರ್ ಸಾವನ್ನಪ್ಪಿದ ಘಟನೆ ನಡೆದಿದೆ. ನೇತ್ರಾವತಿ ಹೆಸರಿನ 15 ವರ್ಷ ಪ್ರಾಯದ ಹೆಣ್ಣು ಹುಲಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಗಿ ಪಿಲಿಕುಳ ಉದ್ಯಾನವನದ ನಿರ್ದೇಶಕ ಜಯಕರ ಭಂಡಾರಿ ತಿಳಿಸಿದ್ದಾರೆ.

ಪಿಲಿಕುಳದ ಅಧಿಕಾರಿಗಳ ಮಾಹಿತಿ ಪ್ರಕಾರ, ಜೂನ್ 4ರಂದು ರೇವಾ ಹೆಸರಿನ ಆರು ವರ್ಷ ಪ್ರಾಯದ ಗಂಡು ಹುಲಿ ಬೆದೆಗೆ ಬಂದು ಹೆಣ್ಣು ಹುಲಿಯೊಂದಿಗೆ ಮಿಲನಕ್ಕೆ ಮುಂದಾಗಿತ್ತು. ಇದನ್ನು ವಿರೋಧಿಸಿ ಹೆಣ್ಣು ಹುಲಿ, ಗಂಡು ಹುಲಿಯ ಮೇಲೆ ದಾಳಿ ನಡೆಸಿತ್ತು. ಈ ವೇಳೆ, ಎರಡು ಹುಲಿಗಳ ನಡುವೆ ಕಚ್ಚಾಟ ನಡೆದು ಹೆಣ್ಣು ಹುಲಿ ಗಾಯಗೊಂಡಿತ್ತು. ಆನಂತರ, ಹುಲಿಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ 9.30ರ ಸುಮಾರಿಗೆ ಸಾವು ಕಂಡಿದೆ ಎಂದು ಭಂಡಾರಿ ತಿಳಿಸಿದ್ದಾರೆ.

Mangaluru: Tigers fight in Pilikula;  A tiger is dead

ನೇತ್ರಾವತಿ ಮತ್ತು ರೇವಾ ಹುಲಿಗಳು ಪಿಲಿಕುಳ ಉದ್ಯಾನವನದಲ್ಲಿಯೇ ಜನಿಸಿದ ಹುಲಿಗಳಾಗಿದ್ದು ಸದ್ಯಕ್ಕೆ ಪಿಲಿಕುಳದಲ್ಲಿ ಎಂಟು ಹುಲಿಗಳಿವೆ. ಕಚ್ಚಾಟದಿಂದ ಎರಡೂ ಹುಲಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಅಲ್ಲಿನ ಸಿಬಂದಿ ತಿಳಿಸಿದ್ದಾರೆ. ಆಂತರಿಕ ಗಾಯ ಮತ್ತು ಕಾರಣಗಳನ್ನು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಾಗುವುದು ಎಂದು ಜಯಕರ ಭಂಡಾರಿ ತಿಳಿಸಿದ್ದಾರೆ. ಗಂಡು ಹುಲಿ ರೇವಾನಿಗೂ ಗಾಯಗಳಾಗಿದ್ದು, ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಹುಲಿಗಳ ಕಚ್ಚಾಟದಿಂದಲೇ ಸಾವು ಆಗಿದೆಯೇ, ಬಿಸಿಲಿನ ಹೆಚ್ಚಳ ಅಥವಾ ಆಹಾರದ ಕೊರತೆಯಿಂದ ಸಾವು ಸಂಭವಿಸಿದೆಯೇ ಎನ್ನುವ ಕುರಿತಾಗಿಯೂ ಶಂಕೆಗಳಿವೆ.

Tiger killed in tiger battle at Pilikula in Mangalore.