ಬ್ರೇಕಿಂಗ್ ನ್ಯೂಸ್
29-06-23 10:49 pm Mangalore Correspondent ಕರಾವಳಿ
ಮಂಗಳೂರು, ಜೂನ್ 29: ಬಿಜೆಪಿ ನಾಯಕರು ಕಾಂಗ್ರೆಸಿನ ಗ್ಯಾರಂಟಿ ಸ್ಕೀಮನ್ನು ಟೀಕಿಸುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ನಾಯಕರ ಗಟ್ಸ್ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಈಗ ಕಾಂಗ್ರೆಸ್ ಸರಕಾರ ಗಟ್ಸ್ ತೋರಿಸಿದ್ದು, ಬಿಜೆಪಿ ನಾಯಕರು ಗಟ್ಸ್ ಇದ್ದರೆ ತಮ್ಮ ಕಾರ್ಯಕರ್ತರಿಗೆ ಕಾಂಗ್ರೆಸಿನ ಗ್ಯಾರಂಟಿ ಸ್ಕೀಮನ್ನು ಪಡೆಯದಂತೆ ಕರೆ ಕೊಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪ್ರಧಾನಿ ಮೋದಿಯವರು ಕಾಂಗ್ರೆಸ್ ಗ್ಯಾರಂಟಿ ಸ್ಕೀಮ್ ಜಾರಿಗೆ ತಂದರೆ ದೇಶ ದಿವಾಳಿಯಾಗತ್ತೆ ಎಂದಿದ್ದರು. ಆದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಲಾಡ್ ಲೀ ಬಹಾನ್ ಯೋಜನಾ ಹೆಸರಲ್ಲಿ ಮಹಿಳೆಯರ ಖಾತೆಗಳಿಗೆ 1 ಸಾವಿರ ರೂ. ಹಾಕುವ ಯೋಜನೆ ಜಾರಿಗೆ ತಂದಿತ್ತು. ಅದರಿಂದ ದೇಶ ದಿವಾಳಿ ಆಗಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಅದನ್ನು ಯಥಾವತ್ ಜಾರಿಗೆ ತರುತ್ತಿದ್ದೇವೆ. ರಾಜ್ಯದ ಬಡವರಿಗೆ ಇದರಿಂದ ಪ್ರಯೋಜನ ಆಗಿದೆ. ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರದಂತೆ ಮಾಡಲು ಬಿಜೆಪಿ ಸಣ್ಣತನದ ರಾಜಕೀಯ ಮಾಡಿತ್ತು. ಕೇಂದ್ರ ಆಹಾರ ನಿಗಮದಿಂದ ಅಕ್ಕಿ ಕೊಡಲು ಮುಂದೆ ಬಂದಿದ್ದರೂ, ಕೇಂದ್ರ ಸರಕಾರ ಅಕ್ಕಿ ಕೊಡಲು ನಿರಾಕರಿಸಿತ್ತು. ಆದರೆ ಸಿದ್ದರಾಮಯ್ಯ ಹೇಳಿದ ಮಾತಿನಂತೆ, ಜುಲೈ 1ರಿಂದಲೇ ಅಕ್ಕಿ ಬದಲು ಅದರ ಹಣ ಕೊಡುತ್ತೇವೆ ಎಂದಿದ್ದಾರೆ.
ಯುಪಿಎ ಸರಕಾರ ಇದ್ದಾಗ ಯಾವುದೇ ಕುಟುಂಬ ಅನ್ನ ಇಲ್ಲದೆ, ಹಸಿದ ಹೊಟ್ಟೆಯಲ್ಲಿ ಮಲಗಬಾರದು ಎಂದು ದೇಶಾದ್ಯಂತ ಬಡವರಿಗೆ 5 ಕೆಜಿ ಅಕ್ಕಿ ನೀಡುವ ಆಹಾರ ಭದ್ರತಾ ಕಾಯ್ದೆ ತರಲಾಗಿತ್ತು. ಅದರಿಂದಾಗಿ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಕಳೆದ ಬಾರಿ ಸಿದ್ದರಾಮಯ್ಯ ಸರಕಾರ 5 ಕೆಜಿ ಇದ್ದುದನ್ನು ಏಳು ಕೆಜಿಗೇರಿಸಿ, ಬಡವರ ಹೊಟ್ಟೆ ತಣಿಸುವ ಕೆಲಸ ಮಾಡಿದ್ದರು. ಆನಂತರ, ಬಿಜೆಪಿಯವರು ಅದನ್ನು ಮತ್ತೆ ಐದು ಕೇಜಿಗೆ ಇಳಿಸಿದ್ದರು. ಅನ್ನಭಾಗ್ಯ ಕೊಟ್ಟಿದ್ದಕ್ಕಾಗಿ ಸಿದ್ದರಾಮಯ್ಯ ಅವರನ್ನು ಜನರು ಅನ್ನರಾಮಯ್ಯ ಎಂದೂ ಕರೆದಿದ್ದರು. ಈಗ ಅದೇ ಕಾರಣಕ್ಕೆ ಕಾಂಗ್ರೆಸನ್ನು ಅಧಿಕಾರಕ್ಕೆ ತಂದಿದ್ದಾರೆ.
ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಜರೆದ ಬಿಜೆಪಿ ನಾಯಕರನ್ನು ಜನರೇ ಸೋಲಿಸಿದ್ದಾರೆ. ರಾಜ್ಯದಲ್ಲಿ ಹೀನಾಯ ಸೋತರೂ ಬಿಜೆಪಿ ಪಾಠ ಕಲಿತಿಲ್ಲ. ಈಗ ಬಿಜೆಪಿ ನಾಯಕರದ್ದೇ ಕಚ್ಚಾಟ ಜೋರಾಗಿದ್ದು, ಅವರದ್ದು ಮನೆಯೊಂದು ಮೂರು ಬಾಗಿಲಲ್ಲ. ಈಗ ಹತ್ತು ಬಾಗಿಲಾಗಿದೆ. ಹತ್ತು ಗುಂಪು ಆಗಿದೆ. ದೆಹಲಿಯಲ್ಲಿ ಕುಳಿತ 56 ಇಂಚಿನ ಎದೆಯವರಿಗೆ ಕರ್ನಾಟಕ ಬಿಜೆಪಿಯನ್ನು ನಿಯಂತ್ರಣಕ್ಕೆ ತರುವುದಕ್ಕೂ ಸಾಧ್ಯವಾಗುತ್ತಿಲ್ಲ. ನಾಗಪುರದ ಯುನಿವರ್ಸಿಟಿಯಲ್ಲಿ ಕಲಿತು ಬಂದರೆ ಸಾಲದು, ಕನಿಷ್ಠ ಪಕ್ಷ ಜಿಲ್ಲಾ ಮಟ್ಟದ ಕಾಲೇಜುಗಳಲ್ಲಾದ್ರೂ ಶಿಕ್ಷಣ ಪಡೆದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದರು. ಮಾಜಿ ಸಚಿವ ಅಭಯಚಂದ್ರ ಜೈನ್, ನವೀನ್ ಡಿಸೋಜ ಮತ್ತಿತರರಿದ್ದರು.
Mangalore BJP should tell their party workers not to avail Congress freebies slams Harish Kumar. The BJP lost the state assembly elections, but still not learnt a lesson. Now they are challenging the guts of the Congress leaders.
19-07-25 03:05 pm
Bangalore Correspondent
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 10:01 pm
Mangalore Correspondent
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
Yakshagana Pataala Venkataramana Bhat: ಯಕ್ಷಗಾ...
19-07-25 02:32 pm
19-07-25 09:25 pm
Mangalore Correspondent
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am