Mangalore Rain, School College Holiday on July 7th: ಸತತ ನಾಲ್ಕನೇ ದಿನವೂ ರಜೆ ಘೋಷಣೆ ; ರೆಡ್ ಅಲರ್ಟ್ ಹಿನ್ನೆಲೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಲೆ, ಕಾಲೇಜಿಗೆ ರಜೆ ಆದೇಶ 

06-07-23 09:32 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಜುಲೈ 7ರ ಬೆಳಗ್ಗೆ ವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚನೆ ನೀಡಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಸತತ ನಾಲ್ಕನೇ ದಿನವೂ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿದೆ. 

ಮಂಗಳೂರು, ಜುಲೈ 6: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಜುಲೈ 7ರ ಬೆಳಗ್ಗೆ ವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚನೆ ನೀಡಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಸತತ ನಾಲ್ಕನೇ ದಿನವೂ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿದೆ. 

ಮಂಗಳವಾರದಿಂದ ನಾಳೆ ಶುಕ್ರವಾರದ ವರೆಗೂ ರಜೆ ನೀಡಲಾಗಿದ್ದು ಈ ಬಾರಿ ಮಳೆ ಹೆಸರಲ್ಲಿ ಭರ್ಜರಿ ರಜೆ ಸಿಕ್ಕಂತಾಗಿದೆ. ಗುರುವಾರ ಹಗಲಿನಲ್ಲಿ ಮಂಗಳೂರು ಭಾಗದಲ್ಲಿ ಮಳೆಯ ತೀವ್ರತೆ ಒಂದಷ್ಟು ಕಡಿಮೆಯಿತ್ತು‌.‌ ಆದರೆ ಮೂಡುಬಿದ್ರೆ, ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಭಾರೀ ಮಳೆ ದಾಖಲಾಗಿದೆ. ರಾತ್ರಿ ವೇಳೆ ನಿನ್ನೆಯ ರೀತಿಯಲ್ಲೇ ಭಾರೀ ಮಳೆಯ ನಿರೀಕ್ಷೆ ಇದೆ. ಹೀಗಾಗಿ ನದಿ, ತೊರೆಗಳಲ್ಲಿ ನೀರಿನ ಹರಿವು ಹೆಚ್ಚುವ ಸಾಧ್ಯತೆ ಮನಗಂಡು ದ.ಕ‌ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜಿಲ್ಲೆಯಾದ್ಯಂತ ರಜೆ ಕೊಟ್ಟು ಆದೇಶ ಮಾಡಿದ್ದಾರೆ. 

ಇದೇ ವೇಳೆ, ಉಡುಪಿ ಜಿಲ್ಲೆಯಲ್ಲಿಯೂ ಭಾರೀ ಮಳೆ ಮತ್ತು ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ನಾಳೆ (ಜುಲೈ 7) ಸತತ ನಾಲ್ಕನೇ ದಿನ ಜಿಲ್ಲೆಯಾದ್ಯಂತ ಶಾಲೆ, ಕಾಲೇಜಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಕೂರ್ಮ ರಾವ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಗುರುವಾರ ಉಡುಪಿಯಲ್ಲಿ ಭಾರೀ ಮಳೆಯಾಗಿದ್ದು ತಗ್ಗಿನ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

Heavy rain in Mangalore, School and colleges declared holiday again on July 7th. As red alert has been delcared in Mangalore since four days schools and colleges have been issued holiday and now holiday has been declared on July 7th too.