ಬ್ರೇಕಿಂಗ್ ನ್ಯೂಸ್
03-11-20 01:16 pm Mangalore Correspondent ಕರಾವಳಿ
ಉಳ್ಳಾಲ, ನವಂಬರ್ 03 : ಹೇಳುವುದೊಂದು, ಮಾಡುವುದು ಇನ್ನೊಂದು ಅಂತಾರಲ್ಲ.. ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕೇಸ್ ಹಾಕುವ ಟ್ರಾಫಿಕ್ ಪೊಲೀಸರೇ ಕಾನೂನು ಉಲ್ಲಂಘಿಸಿದ ಪ್ರಸಂಗ ತೊಕ್ಕೊಟ್ಟಿನಲ್ಲಿ ನಡೆದಿದೆ.
ತೊಕ್ಕೊಟ್ಟು ಮೇಲ್ಸೇತುವೆ ಕೊನೆಯಲ್ಲಿ ಇತ್ತೀಚೆಗೆ ಅಪಘಾತ ನಡೆದ ಬಳಿಕ ಟ್ರಾಫಿಕ್ ಪೊಲೀಸರು ನಿಗಾ ಇಟ್ಟಿದ್ದಾರೆ. ಅಬಳಿಕ ಉಳ್ಳಾಲಕ್ಕೆ ತಿರುಗುತ್ತಿದ್ದ ಪಾಸಿಂಗ್ ಸೌಲಭ್ಯವನ್ನು ಬಂದ್ ಮಾಡಿದ್ದು ಮುಂದೆ ಹೋಗಿ ತಿರುವು ಪಡೆಯಲು ಅವಕಾಶ ಕೊಡಲಾಗಿದೆ. ಹೀಗಾಗಿ ಉಳ್ಳಾಲದತ್ತ ಹೋಗುವ - ಬರುವ ಜನರು ಸಂಕಷ್ಟ ಪಡುತ್ತಿದ್ದಾರೆ.
ಈ ಮಧ್ಯೆ, ತೊಕ್ಕೊಟ್ಟು- ಕಾಪಿಕಾಡು ಹೆದ್ದಾರಿಯಲ್ಲಿ ( ಕೊಲ್ಯದಿಂದ- ತೊಕ್ಕೊಟ್ಟಿನ ಕಡೆಗೆ) ಪೊಲೀಸರ ವಾಹನ ವಿರುದ್ಧ ದಿಕ್ಕಿನಲ್ಲಿ ಚಲಿಸಿದೆ. ಜನಸಾಮಾನ್ಯರು ಇಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದರೆ ಕಾನೂನು ಪಾಠ ಹೇಳುವ ಪೊಲೀಸರೇ ರೂಲ್ಸ್ ಬ್ರೇಕ್ ಮಾಡಿರುವುದನ್ನ ಕಂಡ ಜನರು ಜನರಿಗೊಂದು, ಪೊಲೀಸರಿಗೊಂದು ಕಾನೂನೇ ಎಂದು ಪ್ರಶ್ನಿಸುವಂತಾಗಿದೆ.


ತೊಕ್ಕೊಟ್ಟು ಓವರ್ ಬ್ರಿಡ್ಜ್ ಕಡೆಯಿಂದ ಎರಡನೇ ಕೊಲ್ಯದ ವರೆಗಿನ ಸುಮಾರು 2 ಕಿ.ಮೀ ರಸ್ತೆಯಲ್ಲಿ ವಾಹನಗಳು ಹೆದ್ದಾರಿ ಕ್ರಾಸ್ ಮಾಡಲು ಯಾವುದೇ ತಿರುವುಗಳಿಲ್ಲ. ಸಂಬಂಧ ಪಟ್ಟ ನವಯುಗ ಕನ್ಸ್ಟ್ರಕ್ಷನ್ ಕಂಪನಿಯವರು ಇದುವರೆಗೂ ಇಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿಲ್ಲ. ಪರಿಣಾಮ ಕೊಲ್ಯದಿಂದ- ಓವರ್ ಬ್ರಿಡ್ಜ್ ನ ನಡುವೆ ಓಡಾಡುವ ವಾಹನ ಸವಾರರು ಸಮಯದ ಅಭಾವದಿಂದಲೋ, ದುಬಾರಿ ಇಂಧನ ಉಳಿಸುವ ಆಸೆಯಿಂದಲೋ ಇಲ್ಲಿ ನಿತ್ಯವೂ ರಾಂಗ್ ಸೈಡ್ ನಿಂದ ಸಂಚರಿಸಿ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದು ಫೈನ್ ಕಟ್ಟಿಸಿಕೊಳ್ತಾರೆ.
ಈ ಪ್ರದೇಶದಲ್ಲಿ ಸರ್ವಿಸ್ ರಸ್ತೆ ಇಲ್ಲದೇ ಇರುವುದೇ ವಾಹನ ಸವಾರರು ರಾಂಗ್ ಸೈಡ್ ಚಲಿಸಲು ಮುಖ್ಯ ಕಾರಣವಾಗಿದ್ದರೂ, ಪೊಲೀಸರು ಸಂಬಂಧ ಪಟ್ಟ ನವಯುಗ ಕಂಪನಿಯ ವಿರುದ್ಧ ಕೇಸ್ ಹಾಕುವ ಧೈರ್ಯ ಮಾಡದೆ ಬಡ ವಾಹನ ಸವಾರರ ಮೇಲೆ ಫೈನ್ ಹಾಕಿ ದರ್ಪ ತೋರಿಸುತ್ತಾರೆ !
ಇಂದು ಟ್ರಾಫಿಕ್ ಪೊಲೀಸರೇ ಈ ರಸ್ತೆಯಲ್ಲಿ ರಾಂಗ್ ಸೈಡಲ್ಲಿ ಸಂಚರಿಸಿ, ಟ್ರಾಫಿಕ್ ಉಲ್ಲಂಘಿಸುವ ಮಂದಿಗೆ ಮಾದರಿಯಾಗಿದ್ದಾರೆ !!
A Traffic Police Jeep violating traffic rules by going on the opposite direction at Thokottu near the bridge has gone viral on social media.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 02:55 pm
HK News Staffer
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
25-08-26 12:46 pm
HK News Staffer
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm