ಬ್ರೇಕಿಂಗ್ ನ್ಯೂಸ್
07-07-23 10:32 pm Mangaluru Correspondent ಕರಾವಳಿ
ಮಂಗಳೂರು, ಜುಲೈ 7: ಅಸಮರ್ಥ ಸಂಸದನೆಂದು ಬಿಜೆಪಿ ಕಾರ್ಯಕರ್ತರಿಂದಲೇ ಉಗಿಸಿಕೊಳ್ಳುತ್ತಿರುವ ಸಂಸದ ನಳಿನ್ ಕುಮಾರ್ ಸಾಧನೆಗೆ ಕನ್ನಡಿ ಹಿಡಿಯುತ್ತದೆ ಬಿಸಿ ರೋಡ್ – ಮಾಣಿ- ಉಪ್ಪಿನಂಗಡಿಯ ಹೆದ್ದಾರಿಯ ಸದ್ಯದ ಸ್ಥಿತಿ. ಅಲ್ಲಿ ರಸ್ತೆಯೇ ಇಲ್ಲ. ನಾಲ್ಕು ದಿನದ ಮಳೆಯ ಬಳಿಕ ಉಳಿದುಕೊಂಡಿದ್ದು ಕೆಸರು ಮತ್ತು ನೀರು ತುಂಬಿದ ಹೊಂಡಗಳು ಮಾತ್ರ.
ಹೆಸರಿಗೆ ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ. ದಿನವೂ ಸಾವಿರಾರು ವಾಹನಗಳು ಈ ಹೆದ್ದಾರಿಯಲ್ಲಿ ಸಾಗುತ್ತವೆ. ಆದರೆ, ನಾಲ್ಕು ದಿನದ ಮಳೆಯ ಬಳಿಕ ಹೆದ್ದಾರಿಯಲ್ಲಿ ಕೆಸರು, ಹೊಂಡಗಳಷ್ಟೇ ಉಳಿದುಕೊಂಡಿದ್ದು ಜನರು ಜನಪ್ರತಿನಿಧಿಗಳು ಶಪಿಸಿಕೊಂಡು ಸಾಗುವ ಸ್ಥಿತಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬಿರುಸು ಪಡೆದಿದ್ದ ಹೆದ್ದಾರಿಯ ಕಾಮಗಾರಿ ಈಗ ಅಕ್ಷರಶಃ ನರಕಸದೃಶ. ರಸ್ತೆಯಲ್ಲಿ ವಾಹನ ಪ್ರಯಾಣಿಕರು ಎದ್ದು ಬಿದ್ದು ಸೊಂಟ ಮುರಿದುಕೊಂಡು ಹೋಗಬೇಕಾದ ಸ್ಥಿತಿಯಾಗಿದೆ. ಗುತ್ತಿಗೆ ವಹಿಸಿಕೊಂಡ ಕಂಪನಿಯಲ್ಲಿ ಕೆಲಸ ಮಾಡಿಸುವುದಕ್ಕೆ ಆಗದ ಸಂಸದ ನಳಿನ್ ಕುಮಾರ್, ನೆನಪಾದಾಗ ಮಂಗಳೂರಿನಲ್ಲಿ ಹೆದ್ದಾರಿ ಅಧಿಕಾರಿಗಳ ಸಭೆ ನಡೆಸುತ್ತಾರೆ. ಅಧಿಕಾರಿಗಳ ಮುಂದೆ ಟಾರ್ಗೆಟ್ ಕೊಡುತ್ತಾರೆ. ಅದು ಬಿಟ್ಟರೆ, ಹೆದ್ದಾರಿ ಕಾಮಗಾರಿ ಯಾಕೆ ಆಗ್ತಿಲ್ಲ ಅಂತ ಪರಿಶೀಲನೆಗೆ ಮುಂದಾಗಿಲ್ಲ.
ಏಳು ವರ್ಷಗಳ ಹಿಂದೆ ಬಿಸಿ ರೋಡ್ - ಅಡ್ಡಹೊಳೆ ವರೆಗಿನ ಹೆದ್ದಾರಿಯ ಕಾಮಗಾರಿ ಶುರುವಾಗುವ ವೇಳೆ ಎಲ್ ಅಂಡ್ ಟಿ ಎಂಬ ಪ್ರತಿಷ್ಠಿತ ಕಂಪನಿ ಗುತ್ತಿಗೆ ವಹಿಸಿಕೊಂಡಿತ್ತು. ಆರೇ ತಿಂಗಳಲ್ಲಿ ಪೆರ್ನೆ, ಮಾಣಿಯ ಗುಡ್ಡಗಳನ್ನು ಕಡಿದು ಸಮತಟ್ಟು ಮಾಡಿತ್ತು. ಹೆದ್ದಾರಿ ಹೇಗಿರಬೇಕು ಅನ್ನುವುದಕ್ಕೆ ನಿಶ್ಚಿತ ರೂಪುರೇಷೆಯನ್ನೂ ಹಾಕಿತ್ತು. ಆದರೆ, ಉಪ್ಪಿನಂಗಡಿ ನಂತರದಲ್ಲಿ ಅರಣ್ಯ ಇಲಾಖೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಜನಪ್ರತಿನಿಧಿಗಳಾದವರು ಮಾಡಿಸಿಕೊಟ್ಟಿಲ್ಲ ಎಂದು ಆ ಕಂಪನಿಯವರು ಕಾಮಗಾರಿಯನ್ನೇ ಬಿಟ್ಟು ಹೋಗಿದ್ದರು. ಆನಂತರ, ಅರ್ಧಕ್ಕೆ ನಿಂತಿದ್ದ ಕಾಮಗಾರಿಯನ್ನು ಎರಡು ವರ್ಷಗಳ ಹಿಂದೆ ಮತ್ತೊಂದು ಕಂಪನಿಗೆ ವಹಿಸಲಾಗಿತ್ತು. ಆ ಕಂಪನಿ ಬಂದು ಕಲ್ಲಡ್ಕದಲ್ಲಿ ಫ್ಲೈಓವರ್, ಮೆಲ್ಕಾರಿನಲ್ಲಿ ಫ್ಲೈಓವರ್ ಎಂದು ಅಗೆದು ಹಾಕಿದ್ದು, ಅರೆಬರೆ ಕೆಲಸ ಮಾಡಿದ್ದು ಬಿಟ್ಟರೆ, ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆಯನ್ನೇ ಮಾಡಿಲ್ಲ.
ವಾರದ ಹಿಂದೆ ಮಳೆಗಾಲದ ಅನುಭವ ಆದಬಳಿಕ ಬಿಸಿ ರೋಡ್ ಕಳೆದು ಪಾಣೆಮಂಗಳೂರು, ಮೆಲ್ಕಾರ್ ಮೂಲಕ ಸಾಗುವುದೇ ಸಾಹಸ ಅನ್ನುವಂತಾಗಿದೆ. ಪಾಣೆಮಂಗಳೂರಿನಲ್ಲೂ ಅಂಡರ್ ಪಾಸ್, ಫ್ಲೈಓವರ್, ಮೆಲ್ಕಾರಿನಲ್ಲೂ ಫ್ಲೈಓವರ್ ಆಗ್ತಾ ಇದೆ. ಕಲ್ಲಡ್ಕದಲ್ಲಿ ರಸ್ತೆಯನ್ನು ಅಗೆದು ನಡು ನಡುವೆ ಪಿಲ್ಲರ್ ಹಾಕಿದ್ದು ಬಿಟ್ಟರೆ ಎರಡು ವರ್ಷಗಳಲ್ಲಿ ಬೇರೆ ಯಾವುದೇ ಕೆಲಸ ಆಗಿಲ್ಲ. ಕಲ್ಲಡ್ಕ, ಮೆಲ್ಕಾರ್ ಪರಿಸ್ಥಿತಿ ಎಷ್ಟರ ಮಟ್ಟಿಗಿದೆ ಅಂದ್ರೆ, ಸ್ಥಳೀಯರಿಗೂ ಅತ್ತಿತ್ತ ನಡೆದು ಹೋಗಲಾಗದಷ್ಟು ರಸ್ತೆ ಕೆಟ್ಟು ಹೋಗಿದೆ. ಗುಂಡಿ, ಹೊಂಡ, ಕೆಸರು ಅಷ್ಟೇ ಉಳಿದಿದೆ. ಇದಕ್ಕಿಂತ ಹಳ್ಳಿ ಕಡೆಯ ಮಣ್ಣಿನ ರಸ್ತೆಯಾದರೂ ವಾಸಿ ಅನ್ನುವಷ್ಟು ಕೆಟ್ಟು ಹೋಗಿದೆ. ಸಂಸದ ಅಥವಾ ಶಾಸಕರು ಈ ಹೆದ್ದಾರಿಯಲ್ಲಿ ನಿಜಕ್ಕೂ ಸಾಗುತ್ತಿದ್ದರೆ, ಈ ರೀತಿಯ ಸ್ಥಿತಿ ಆಗಲು ಬಿಡುತ್ತಿದ್ದರೇ ಅನ್ನುವ ಪ್ರಶ್ನೆಯನ್ನು ಪ್ರಯಾಣಿಕರು ಮುಂದಿಡುತ್ತಾರೆ.
ಕಾಸರಗೋಡು ಹೆದ್ದಾರಿ ನೋಡಿಕೊಂಡು ಬನ್ನಿ..
ಸ್ವಂತ ವರ್ಚಸ್ಸು ಇಲ್ಲದಿದ್ದರೂ, ಮೋದಿ ಹೆಸರಲ್ಲಿ ಓಟು ಗಿಟ್ಟಿಸಿ ಮೂರು ಬಾರಿ ಗೆದ್ದಿರುವ ಈ ಭಾಗದ ಸಂಸದ ನಳಿನ್ ಕುಮಾರ್, ಒಂದು ಬಾರಿ ಗಡಿಭಾಗ ಕೇರಳದ ಕಾಸರಗೋಡಿನಲ್ಲಿ ಆಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕೆಲಸವನ್ನು ನೋಡಿ ಬರಬೇಕು. ಒಂದು ಹಿಡಿ ಮಣ್ಣಿನ ಧೂಳು, ಕೆಸರು ವಾಹನಗಳಿಗೆ ರಾಚದ ರೀತಿ ಹೆದ್ದಾರಿ ಕೆಲಸ ಮಾಡಿಸುವುದಕ್ಕೆ ಅಲ್ಲಿ ಸಾಧ್ಯವಾದರೆ ಇಲ್ಲಿ ಯಾಕೆ ಸಾಧ್ಯವಿಲ್ಲ. ಅಲ್ಲಿಯೂ ಕೇಂದ್ರ ಸರಕಾರದ್ದೇ ಹೆದ್ದಾರಿ. ಕೆಲಸ ಮಾಡುತ್ತಿರುವುದು ಇನ್ನಾವುದೋ ಕಂಪನಿ. ಆದರೆ, ಕರ್ನಾಟಕದ ರಸ್ತೆಗೂ ಮಂಜೇಶ್ವರ, ಕಾಸರಗೋಡಿನ ರಸ್ತೆಗೂ ಅಜಗಜಾಂತರ ವ್ಯತ್ಯಾಸ ಯಾಕೆ ಅನ್ನುವ ಪ್ರಶ್ನೆಯನ್ನು ಸಂಸದರ ಮುಂದಿಡಲೇಬೇಕಾಗುತ್ತದೆ.
ಪಂಪ್ವೆಲ್ ರಸ್ತೆಯ ಅವ್ಯವಸ್ಥೆಗೆ ಇಂಜಿನಿಯರ್ ಗಳು ಕಾರಣ, ನಳಿನ್ ಕುಮಾರ್ ಒಬ್ಬರೇ ಅಲ್ಲ ಎಂದು ಸಂಸದರ ಪಟಾಲಂ ಸಮರ್ಥನೆ ಹೇಳುತ್ತಿದ್ದಾರೆ. ಈಗ ಆಗುತ್ತಿರುವ ಕಲ್ಲಡ್ಕ ಭಾಗದ ರಸ್ತೆಯ ಅವ್ಯವಸ್ಥೆಗೂ ಇಂಜಿನಿಯರುಗಳೇ ಕಾರಣ ಆಗಿದ್ದರೆ, ಅವರನ್ನು ಕೆಲಸ ಮಾಡಿಸುವುದು, ಕನಿಷ್ಠ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿಸುವುದು, ಕಾಮಗಾರಿಗೆ ಚುರುಕು ಮುಟ್ಟಿಸುವುದು ಸಂಸದರ ಜವಾಬ್ದಾರಿ ಅಲ್ಲವೇ.? ಈ ಹೆದ್ದಾರಿಯಿಂದಾಗಿ ಎಷ್ಟು ಮಂದಿ ಬೆನ್ನು ಮೂಳೆ ಮುರಿದುಕೊಂಡರು, ಎಷ್ಟು ಜನ ಆಸ್ಪತ್ರೆ ಸೇರಿದರು, ಪ್ರಾಣ ತೆತ್ತಿದ್ದು ಎಷ್ಟು ಜನ ಅನ್ನುವ ಕನಿಷ್ಠ ಜ್ಞಾನ ಆಡಳಿತ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಜಿಲ್ಲೆಯ ಸಂಸದರಾಗಿರುವ ವ್ಯಕ್ತಿಗೆ ಇದೆಯೇ ಅನ್ನುವ ಪ್ರಶ್ನೆ ಕೇಳಬೇಕಾಗಿದೆ.
Mangalore Kalladka Highway raod turns nightmare for travellers after hevavy rains lashes in Dakshina Kannada. Huge dangerous pot holes are making travellers to move with fear.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 11:27 am
Mangalore Correspondent
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm