ಬ್ರೇಕಿಂಗ್ ನ್ಯೂಸ್
09-07-23 07:00 pm Giridhar Shetty, Mangaluru ಕರಾವಳಿ
ಮಂಗಳೂರು, ಜುಲೈ 9: ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಭವಿಷ್ಯಕ್ಕೆ ತೀವ್ರ ಕುತ್ತು ಬಂದಿದೆ. ಇಂಗ್ಲಿಷ್ ಮೀಡಿಯಂ ಶಾಲೆಗಳ ಹಾವಳಿಯಿಂದಾಗಿ ಹಳ್ಳಿ ಪ್ರದೇಶಗಳಲ್ಲಿಯೂ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸೇರ್ಪಡೆಯಾಗುವ ಮಕ್ಕಳ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಸರಕಾರದ ಮಾಹಿತಿ ಪ್ರಕಾರ, ಈ ಎರಡು ಜಿಲ್ಲೆಗಳ 55 ಶಾಲೆಗಳಲ್ಲಿ ಈ ಬಾರಿ ಒಂದನೇ ತರಗತಿಗೆ ಒಂದು ಮಗುವೂ ಸೇರ್ಪಡೆಯಾಗಿಲ್ಲ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ 55 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯೇ ಆಗಿಲ್ಲ. ಕೆಲವು ಶಾಲೆಗಳಲ್ಲಷ್ಟೇ ಬೆರಳೆಣಿಕೆ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಆಗಿದೆ. ಇದೇ ರೀತಿ ಟ್ರೆಂಡ್ ಮುಂದುವರಿದರೆ, ಇವೆರಡು ಜಿಲ್ಲೆಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳೇ ಭವಿಷ್ಯದಲ್ಲಿ ಮುಚ್ಚಿ ಹೋಗುವ ಸ್ಥಿತಿ ಬರಲಿದೆ.
ಗ್ರಾಮಾಂತರ ಪ್ರದೇಶದಲ್ಲೇ ಹೆಚ್ಚು ;
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 24 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದೆ. ಬಂಟ್ವಾಳ ತಾಲೂಕಿನಲ್ಲಿ ನಾಲ್ಕು, ಬೆಳ್ತಂಗಡಿಯಲ್ಲಿ ಮೂರು, ಪುತ್ತೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಕ್ಷೇತ್ರಗಳಲ್ಲಿ ತಲಾ ಎರಡು, ಮೂಡುಬಿದ್ರೆಯಲ್ಲಿ ಮೂರು ಶಾಲೆ ಮತ್ತು ಸುಳ್ಯ ತಾಲೂಕಿನಲ್ಲಿ ಎಂಟು ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಆಗಿಲ್ಲ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪ ನಿರ್ದೇಶಕ (ಡಿಡಿಪಿಐ) ಆರ್. ದಯಾನಂದ್ ಬಳಿ ಕೇಳಿದಾಗ, ಇನ್ನೂ ಮಕ್ಕಳ ಸೇರ್ಪಡೆಗೆ ಅವಕಾಶ ಇದೆ. ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಇನ್ನೂ ಆಗುತ್ತಿದೆ. ತರಗತಿವಾರು ಅಂಕಿ ಸಂಖ್ಯೆ ದಾಖಲಾತಿ ಪ್ರಕ್ರಿಯೆ ಹಂತದಲ್ಲಿದೆ. ಆಶಾವಾದ ಹೊಂದಿದ್ದೇವೆ ಎಂದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 31 ಶಾಲೆಗೆ ಶೂನ್ಯ ದಾಖಲು ;
ಉಡುಪಿ ಜಿಲ್ಲೆಯಲ್ಲಿ 31 ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಆಗಿಲ್ಲ. ಉಡುಪಿಯಲ್ಲಿ ನಾಲ್ಕು, ಬ್ರಹ್ಮಾವರದಲ್ಲಿ ನಾಲ್ಕು, ಕುಂದಾಪುರದಲ್ಲಿ ಐದು, ಬೈಂದೂರಿನಲ್ಲಿ 9 ಹಾಗೂ ಕಾರ್ಕಳ ತಾಲೂಕಿನಲ್ಲಿ 9 ಶಾಲೆಗಳಲ್ಲಿ ದಾಖಲಾತಿ ಆಗಿಲ್ಲ. ಈ ಬಗ್ಗೆ ಉಡುಪಿ ಜಿಲ್ಲೆಯ ಡಿಡಿಪಿಐ ಗಣಪತಿ ಅವರಲ್ಲಿ ಪ್ರತಿಕ್ರಿಯೆ ಬಯಸಿದಾಗ, ಸರಕಾರಿ ಶಾಲೆಯ ಸ್ಥಿತಿಗತಿ ಉತ್ತಮವಾಗಿದೆ. ಒಳ್ಳೆ ಕಟ್ಟಡ, ಮೂಲಸೌಕರ್ಯ ಎಲ್ಲ ಇದ್ದರೂ ಮಕ್ಕಳು ಬರುತ್ತಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಅಲ್ಲದೆ, ಪ್ರತಿ ಗ್ರಾಮದಲ್ಲಿಯೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುವ ಬಗ್ಗೆ ಜನರೇ ಅಭಿಯಾನ ಆರಂಭಿಸಬೇಕು ಎಂದರು.
ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಕೊರಗಿನ ಮಧ್ಯೆ ಪ್ರತಿ ಗ್ರಾಮದಲ್ಲಿಯೂ ಹುಟ್ಟಿಕೊಳ್ಳುತ್ತಿರುವ ಇಂಗ್ಲಿಷ್ ಮೀಡಿಯಂ ಶಾಲೆಗಳು ಜನರಿಗೆ ಆಕರ್ಷಕವಾಗಿ ಕಾಣುತ್ತಿವೆ. ಸ್ಕೂಲ್ ಬಸ್ ಸೇರಿದಂತೆ ಎಲ್ಲ ಸೌಕರ್ಯಗಳನ್ನೂ ಕೊಡುತ್ತಿರುವುದು, ಇಂಗ್ಲಿಷ್ ಮೀಡಿಯಂ ಶಿಕ್ಷಣದಿಂದಾಗಿ ಪೋಷಕರು ಸರ್ಕಾರಿ ಶಾಲೆಯ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತೀವ್ರತೆ ಪಡೆಯುತ್ತಿದ್ದು ಸರ್ಕಾರಿ ಶಾಲೆಗಳ ಭವಿಷ್ಯಕ್ಕೆ ಕುತ್ತು ತಂದಿದೆ.
Many government primary schools in the twin districts of Dakshina Kannada and Udupi are facing a situation in which not a single student has enrolled for Class I (first grade) during the current academic year. Sources at the Directorate of Public Instruction said the statistics till June 30 have confirmed that no student has applied for admission to first grade in 55 government primary schools in DK and Udupi.
29-11-24 05:01 pm
Bangalore Correspondent
Belagavi, Malamaruthi police station, Pooja:...
29-11-24 04:12 pm
BK HariPrasad Congress: ಸಚಿವ ಸ್ಥಾನಕ್ಕೇರುತ್ತಾರ...
28-11-24 10:41 pm
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
29-11-24 10:09 pm
HK News Desk
Heart Attack, Hyderabad: 10 ವರ್ಷದ ಬಾಲಕಿಗೆ ಹೃದ...
29-11-24 10:04 pm
ಮಹಾರಾಷ್ಟ್ರದಲ್ಲಿ ಮುಂದುವರಿದ ಬಿಕ್ಕಟ್ಟು ; ಪ್ರಮುಖ...
29-11-24 06:26 pm
Sambhal Mosque, Fight: ಸಂಭಾಲ್ ಮಸೀದಿ ಸರ್ವೆ ಆದೇ...
29-11-24 06:22 pm
Raj Kundra Raid, Shilpa Shetty: ಬೆತ್ತಲೆ ಜಗತ್ತ...
29-11-24 02:32 pm
29-11-24 11:09 pm
Udupi Correspondent
VHP protest, Bangladesh violence, Mangalore:...
29-11-24 06:19 pm
Babu Pilar, U T Khader, Mangalore: ತೊಕ್ಕೊಟ್ಟಿ...
28-11-24 09:58 pm
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
29-11-24 10:49 pm
Bangalore Correspondent
Dharmasthala Robbery, Mangalore crime: ಧರ್ಮಸ್...
29-11-24 12:20 pm
Mangalore Mukka Srinivas College, Ragging: ಮು...
29-11-24 12:02 pm
Murder, Mulki, Mangalore Crime: ಮುಲ್ಕಿಯಲ್ಲಿ ಬ...
27-11-24 03:36 pm
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm