Mangalore Airport, Fight: ದುಬೈ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ಸ್ಥಗಿತ ; ರಾತ್ರಿ ಪೂರ್ತಿ ನಿದ್ದೆಯಿಲ್ಲದೆ ರಾತ್ರಿ ಕಳೆದ ಪ್ರಯಾಣಿಕರು, ಅಧಿಕಾರಿಗಳ ಜೊತೆ ವಾಗ್ವಾದ 

11-07-23 11:32 am       Mangalore Correspondent   ಕರಾವಳಿ

ಮಂಗಳೂರಿನಿಂದ ದುಬೈ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ತೊಂದರೆಯಿಂದ ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದ್ದು ಸಿಕ್ಕಿಬಿದ್ದ ಪ್ರಯಾಣಿಕರು ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದ್ದಾರೆ. 

ಮಂಗಳೂರು, ಜುಲೈ 11:  ಮಂಗಳೂರಿನಿಂದ ದುಬೈ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ತೊಂದರೆಯಿಂದ ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದ್ದು ಸಿಕ್ಕಿಬಿದ್ದ ಪ್ರಯಾಣಿಕರು ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದ್ದಾರೆ. 

ನಿನ್ನೆ ರಾತ್ರಿ 11.15 ಕ್ಕೆ ಮಂಗಳೂರು ಏರ್ಪೋರ್ಟ್ ನಿಂದ ದುಬೈ ತೆರಳಬೇಕಿದ್ದ ವಿಮಾನ ಕೊನೆಕ್ಷಣದಲ್ಲಿ ತಾಂತ್ರಿಕ ತೊಂದರೆಗೀಡಾಗಿತ್ತು. ತಾಂತ್ರಿಕ ತೊಂದರೆ ಎದುರಾಗಿದ್ದರಿಂದ ಸರಿಪಡಿಸಲು ತಿರುವನಂತಪುರದ ಏರ್ ಇಂಡಿಯಾ ಬೇಸ್ ಗೆ ರಾತ್ರಿಯೇ ವಿಮಾನವನ್ನು ಕಳುಹಿಸಿ ಕೊಡಲಾಗಿತ್ತು. ಇದರಿಂದ ನಿನ್ನೆ ರಾತ್ರಿಯಿಂದ ಆ ವಿಮಾನದಲ್ಲಿ ದುಬೈ ತೆರಳಬೇಕಿದ್ದ 180ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. 

ಏರ್ಪೋರ್ಟ್ ಲಾಂಜ್ ನಲ್ಲಿ ಉಳಿದುಕೊಂಡ ಪ್ರಯಾಣಿಕರು ಏರ್ ಇಂಡಿಯಾ ಅಧಿಕಾರಿಗಳನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ತಾಂತ್ರಿಕ ತೊಂದರೆ ನಿವಾರಿಸಿ ವಿಮಾನ ಬರುತ್ತೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದರು. ಆದರೆ  ವಿಮಾನ ಬೆಳಗ್ಗೆ ಹತ್ತು ಗಂಟೆ ಕಳೆದರೂ ಬರದೇ ಇದ್ದುದರಿಂದ ಮತ್ತು ಬದಲಿ ವಿಮಾನ ವ್ಯವಸ್ಥೆಯನ್ನೂ ಮಾಡದ ಬಗ್ಗೆ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಸಿಐಎಸ್ಎಫ್ ಭದ್ರತಾ ಸಿಬಂದಿ ಜೊತೆಗೂ ವಾಗ್ವಾದ ನಡೆಸಿದ್ದು ತಮ್ಮ ಟಿಕೆಟ್ ಹಣವನ್ನು ಮರಳಿಸುವಂತೆ ಜೋರು ಮಾಡಿದ್ದಾರೆ.‌

Passengers create ruckus fight at Mangalore airport after Dubai bound Air India flight gets cancelled. Passengers fight with CISF staffs after flight that was supposed to leave at 11:15 night cancelled due to technical issues. More than 180 passengers had to spend whole night at the airport.