Rain in Mangalore, Shop on Fire: ರಾಣಿಪುರದಲ್ಲಿ ಅಪ್ಪಳಿಸಿದ ಭಾರೀ ಸಿಡಿಲು ; ಸುಟ್ಟು ಭಸ್ಮವಾದ ಜಿನಸಿ ಅಂಗಡಿ, ಮನೆಗೆ ವ್ಯಾಪಿಸುತ್ತಿದ್ದ ಬೆಂಕಿ ನಂದಿಸಿದ ಅಗ್ನಿಶಾಮಕದಳ

11-07-23 11:56 am       Mangalore Correspondent   ಕರಾವಳಿ

ನಸುಕಿನ ವೇಳೆ ಬಡಿದ ಭಾರೀ ಶಬ್ದದ ಸಿಡಿಲು ಉಳ್ಳಾಲದ ರಾಣಿಪುರದಲ್ಲಿ ಅಪ್ಪಳಿಸಿದ್ದು ಜಿನಸಿ ಅಂಗಡಿಯೊಂದು ಸುಟ್ಟು ಭಸ್ಮವಾಗಿದೆ. ಕಟ್ಟಡದಲ್ಲೇ ಇದ್ದ ಮನೆಗೂ ಬೆಂಕಿ ವ್ಯಾಪಿಸಿದ್ದು ಸ್ಥಳಕ್ಕೆ ತಕ್ಷಣ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ. 

ಉಳ್ಳಾಲ, ಜು.11: ನಸುಕಿನ ವೇಳೆ ಬಡಿದ ಭಾರೀ ಶಬ್ದದ ಸಿಡಿಲು ಉಳ್ಳಾಲದ ರಾಣಿಪುರದಲ್ಲಿ ಅಪ್ಪಳಿಸಿದ್ದು ಜಿನಸಿ ಅಂಗಡಿಯೊಂದು ಸುಟ್ಟು ಭಸ್ಮವಾಗಿದೆ. ಕಟ್ಟಡದಲ್ಲೇ ಇದ್ದ ಮನೆಗೂ ಬೆಂಕಿ ವ್ಯಾಪಿಸಿದ್ದು ಸ್ಥಳಕ್ಕೆ ತಕ್ಷಣ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ. 

ಮುನ್ನೂರು ಗ್ರಾಮದ ರಾಣಿಪುರ ಚರ್ಚ್ ಎದುರಿನ ಪೀಟರ್ ಆಪೊಸು ಎಂಬವರ ಜಿನಸಿ ಅಂಗಡಿಗೆ ಸಿಡಿಲು ಬಡಿದು ಭಸ್ಮವಾಗಿದೆ. ನಸುಕಿನ ನಾಲ್ಕು ಗಂಟೆ ವೇಳೆಗೆ ಭಾರೀ ಸಿಡಿಲು, ಮಿಂಚು ಉಂಟಾಗಿತ್ತು. ಘಟನೆ ವೇಳೆ ಪೀಟರ್ ತನ್ನ ಪತ್ನಿ ಅಸುಂತ ಮರಿಯ ಡಿಕ್ರೂಜ್ ಮತ್ತು ಮಗ ಪ್ರೀತಮ್ ಜೊತೆ ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದರು. ರಸ್ತೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಅಂಗಡಿ‌ಗೆ ಬೆಂಕಿ ಬಿದ್ದಿರುವುದನ್ನ ಕಂಡು ಮನೆ ಮಂದಿಗೆ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೀಟರ್ ಕುಟುಂಬ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದು ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿಗಳು ಮನೆಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನ ನಂದಿಸಿದ್ದಾರೆ. 

ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಜಿನಸಿ ದಾಸ್ತಾನು ಸುಟ್ಟು ಕರಕಲಾಗಿದ್ದು ಮೂರು ರೆಫ್ರಿಜರೇಟರ್ ಸುಟ್ಟು ಹೋಗಿವೆ. ಇಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟು ಹೋಗಿವೆ. ಅಂಗಡಿ, ಮನೆ ಒಟ್ಟಿಗೆ ಇದ್ದು ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ. ಸ್ಥಳಕ್ಕೆ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿ ಸೋಜ, ಮಾಜಿ ಉಪಾಧ್ಯಕ್ಷ ನವೀನ್ ಡಿ ಸೋಜಾ, ಕಂದಾಯ ನಿರೀಕ್ಷರು, ಗ್ರಾಮಲೆಕ್ಕಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Provision store shop gutted in Ranipura Thokottu due to lightning in Mangalore.