ಬ್ರೇಕಿಂಗ್ ನ್ಯೂಸ್
14-07-23 10:05 pm Mangalore Correspondent ಕರಾವಳಿ
ಸುಳ್ಯ, ಜುಲೈ 14: ಸುಳ್ಯ ಕಾಂಗ್ರೆಸ್ ಘಟಕದಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದ್ದು, ಸೋಲಿನ ಪರಾಮರ್ಶೆ ಸಭೆಯ ಹೆಸರಲ್ಲಿ ಪ್ರಮುಖ ನಾಯಕರೇ ಹೊಡೆದಾಟಕ್ಕೆ ಮುಂದಾಗಿದ್ದಾರೆ. ಪರಾಜಿತ ಅಭ್ಯರ್ಥಿ ಜಿ. ಕೃಷ್ಣಪ್ಪ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಭರತ್ ಮುಂಡೋಡಿ ಕಾರ್ಯಕರ್ತರ ವಿರುದ್ಧ ರೇಗಾಡಿದ್ದು ಏಕವಚನದಲ್ಲಿ ಬೈದಾಡುತ್ತಾ ಸಭೆಯಲ್ಲಿ ರಂಪಾಟ ನಡೆಸಿದ್ದಾರೆಂದು ನಂದಕುಮಾರ್ ಪರ ಇದ್ದವರು ಆರೋಪಿಸಿದ್ದಾರೆ.
ಕಡಬದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ಸಭೆ ನಡೆದಿತ್ತು. ಸೋಲಿನ ಕುರಿತು ಚರ್ಚಿಸಲು ಜಿಲ್ಲಾ ಪರಾಮರ್ಶೆ ಸಮಿತಿಯ ಅಧ್ಯಕ್ಷರಾಗಿ ಮಾಜಿ ರಾಜ್ಯಸಭೆ ಸದಸ್ಯ ಬಿ.ಇಬ್ರಾಹಿಂ, ಬಂಟ್ವಾಳದ ಕೆಪಿಸಿಸಿ ಸದಸ್ಯ ಅಶ್ವಿನ್ ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಜಿಪಂ ಸದಸ್ಯೆ ಮಮತಾ ಗಟ್ಟಿ ಸಭೆಗೆ ಬಂದಿದ್ದರು. ಸಭೆಯ ಆರಂಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಪಕ್ಷದ ಸೋಲಿನ ಬಗ್ಗೆ ಮಾತ್ರ ಅಭಿಪ್ರಾಯ ಮಂಡನೆ ಮಾಡಬೇಕೆಂದು ಹೇಳಿದರು.
ಇದೇ ವೇಳೆ, ಚುನಾವಣೆ ಸಂದರ್ಭದಲ್ಲಿ ನಂದಕುಮಾರ್ ಪರವಾಗಿದ್ದವರು ತಮ್ಮ ಅಭಿಪ್ರಾಯ ಹೇಳಲು ಮುಂದಾಗಿದ್ದಾರೆ. ಆದರೆ, ಭರತ್ ಮುಂಡೋಡಿ ಮತ್ತು ಪರಾಜಿತ ಅಭ್ಯರ್ಥಿ ಕೃಷ್ಣಪ್ಪ, ನಿಮ್ಮನ್ನು ಯಾರ್ರೀ ಸಭೆಗೆ ಬರಲು ಹೇಳಿದ್ದು, ನೀವು ಸಭೆಗೆ ಹೇಗೆ ಬಂದ್ರಿ. ನಿಮ್ಮನ್ನು ಉಚ್ಚಾಟನೆ ಮಾಡಿದ್ದೀವಲ್ಲಾ.. ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ರೇಗುತ್ತಾ ಎದ್ದು ಬಂದಿದ್ದಾರೆ. ಇದಕ್ಕೆ ಬಾಲಕೃಷ್ಣ ಬಳ್ಳೇರಿ, ಗೋಕುಲದಾಸ್ ಸೇರಿದಂತೆ ವಿರುದ್ಧವಾಗಿ ಮಾತನಾಡಿದ್ದು, ನಮ್ಮನ್ನು ಯಾರೂ ಉಚ್ಚಾಟನೆ ಮಾಡಿಲ್ಲ. ಅಮಾನತು ಮಾಡಿದ್ದು ಅಷ್ಟೇ, ನಾವು ಈಗಲೂ ಕಾಂಗ್ರೆಸ್ ಕಾರ್ಯಕರ್ತರಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಅಷ್ಟರಲ್ಲಿ ಎರಡೂ ಕಡೆಯ ಕಾರ್ಯಕರ್ತರು ಎದ್ದು ಮಾತಿಗೆ ಮಾತು ಬೆಳೆಸಿದ್ದು ತೀವ್ರ ವಾಗ್ವಾದ ನಡೆಸಿದರು. ಕಡಬ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ರಾಯ್ ಅಬ್ರಹಾಂ, ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ ತಾವು ಕುಳಿತಿದ್ದ ಕುರ್ಚಿಯನ್ನು ಎತ್ತಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೆ, ಮಾಜಿ ತಾಪಂ ಸದಸ್ಯೆ ಉಷಾ ಲಕ್ಷ್ಮಣ್ ಅವರನ್ನು ಮಹಿಳೆಯೆಂದು ನೋಡದೆ, ಕೃಷ್ಣಪ್ಪ ಅವಾಚ್ಯವಾಗಿ ನಿಂದಿಸಿದ್ದಾರೆಂದು ಸಭೆಗೆ ತೆರಳಿದ್ದವರು ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರನ್ನು ಕರೆಸಿ, ಸಭೆ ನಡೆಸಲಾಗಿದ್ದು, ವೀಕ್ಷಕರಾಗಿ ಬಂದವರು ಎರಡೂ ಕಡೆಯ ಪ್ರಮುಖರನ್ನು ಕರೆದು ಅಭಿಪ್ರಾಯ ಆಲಿಸಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷ ಇನ್ನಿತರ ಪ್ರಮುಖ ಸ್ಥಾನಗಳಲ್ಲಿದ್ದವರ ಪಂಚಾಯತ್, ಬೂತ್ ವ್ಯಾಪ್ತಿಯಲ್ಲೇ ಕಾಂಗ್ರೆಸಿಗೆ ಕಡಿಮೆ ಮತ ಬಂದಿರುವುದನ್ನು ಉಲ್ಲೇಖಿಸಿ ನಂದಕುಮಾರ್ ಪರ ಇದ್ದವರು ದಾಖಲೆ ಸಹಿತ ದೂರು ನೀಡಿದ್ದಾರೆ.
17 ಮಂದಿ ಅಮಾನತು ಮಾಡಿದ್ದ ಶಿಸ್ತು ಸಮಿತಿ
ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಹೇಳಿ ಹಿರಿಯ ಕಾಂಗ್ರೆಸ್ ನಾಯಕರಾದ ವೆಂಕಪ್ಪ ಗೌಡ, ಬಾಲಕೃಷ್ಣ ಬಳ್ಳೇರಿ, ಗೋಕುಲದಾಸ್, ಭವಾನಿಶಂಕರ್, ಸಚಿನ್ ರಾಜ್ ಶೆಟ್ಟಿ ಸಹಿತ 17 ಮಂದಿಯನ್ನು ರಾಜ್ಯ ಶಿಸ್ತು ಕಮಿಟಿ, ತನಿಖೆ ನಡೆಸುವ ನೆಪದಲ್ಲಿ ಇತ್ತೀಚೆಗೆ ಅಮಾನತು ಮಾಡಿತ್ತು. ಆದರೆ ಸುಳ್ಯದಲ್ಲಿ ಕೃಷ್ಣಪ್ಪ ಪರವಾಗಿದ್ದವರು 17 ಮಂದಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾಗಿ ಹೇಳುತ್ತ ತಿರುಗಾಡಿದ್ದರು. ಇದೀಗ ಸೋಲಿನ ಪರಾಮರ್ಶೆ ಸಭೆಯಲ್ಲಿಯೂ ಅದೇ ಮಾತು ಹೇಳಿ ನಿಂದಿಸಿದ್ದು ಗಲಾಟೆಗೆ ಕಾರಣವಾಗಿದೆ.
ಬಗಹರಿಸದಿದ್ದರೆ ಲೋಕಸಭೆ ಚುನಾವಣೆಗೆ ಪೆಟ್ಟು
ಪಕ್ಷಕ್ಕೆ ಈ ಹಿಂದೆ ಸೋಲಾಗಿದ್ದರೂ, ಸುಳ್ಯದಲ್ಲಿ ಈ ರೀತಿ ಆಗಿರಲಿಲ್ಲ. ಚುನಾವಣೆಗೆ ಒಂದು ವರ್ಷ ಇರುವಾಗ ರಾಜ್ಯ ಸಮಿತಿಯಿಂದ ಇಬ್ಬರು ಉಸ್ತುವಾರಿಗಳನ್ನು ಸುಳ್ಯಕ್ಕೆ ಕೊಟ್ಟಿದ್ದೇ ತಪ್ಪು. ಅವರಿಬ್ಬರೂ ತಾವೇ ಅಭ್ಯರ್ಥಿಗಳೆಂದು ಹೇಳಿ ತಮ್ಮ ಬಣಗಳನ್ನು ಕಟ್ಟಿಕೊಂಡಿದ್ದರು. ಇದರಿಂದಾಗಿ ಚುನಾವಣೆ ಸಂದರ್ಭದಲ್ಲಿ ಎರಡು ಬಣಗಳಾಗಿದ್ದು ಮತ್ತು ಈಗ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ. ಹಿಂದೆ ಡಾ.ರಘು ಅಭ್ಯರ್ಥಿಯಾಗಿ ಸೋತರೂ ಸುಳ್ಯದಲ್ಲಿ ಇಂಥ ಸ್ಥಿತಿ ಆಗಿರಲಿಲ್ಲ. ಪಕ್ಷ ಈ ಸ್ಥಿತಿಗೆ ತಲುಪಿದ್ದು ತುಂಬ ನೋವಿನ ಸಂಗತಿ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಲೇ ಗಮನ ಹರಿಸದಿದ್ದರೆ ಲೋಕಸಭೆ ಚುನಾವಣೆ ಮೇಲೆ ಇದರಿಂದ ದೊಡ್ಡ ಪೆಟ್ಟು ಬೀಳಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ವೆಂಕಪ್ಪ ಗೌಡ ಪ್ರತಿಕ್ರಿಯಿಸಿದ್ದಾರೆ.
ಹೊರಗಿನಿಂದ ಬಂದವರಿಂದಲೇ ಗಲಾಟೆ
ನಂದಕುಮಾರ್ ಬಣದಲ್ಲಿ ಗುರುತಿಸಿದ್ದ ಗೋಕುಲದಾಸ್ ಪ್ರತಿಕ್ರಿಯಿಸಿ, ಇಲ್ಲಿ ಹೊರಗಿನಿಂದ ಬಂದವರೇ ಗಲಾಟೆ ಮಾಡುತ್ತಿದ್ದಾರೆ. ಕೃಷ್ಣಪ್ಪ ಬೆಂಗಳೂರಿನವರು. ಅವರ ರಾಜಕೀಯ, ದೌಲತ್ತನ್ನು ಬೆಂಗಳೂರಿನಲ್ಲೇ ಇಟ್ಟುಕೊಳ್ಳಲಿ. ಇಲ್ಲಿ ಬಂದು ಯಾಕೆ ನಮ್ಮ ಮೇಲೆ ದರ್ಪ ತೋರಿಸಬೇಕು. ನಾವು ಹಿಂದಿನಿಂದಲೂ ಕಾಂಗ್ರೆಸಿನಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
Sullia congress meeting turns voilent, Jigani Krishnappa turns angry over members. The meeting was of congress losing power in Sullia which later turned voilent and members were found beating one an other.
26-01-25 10:57 pm
HK News Desk
Actor Anant Nag award: ಹಿರಿಯ ನಟ ಅನಂತನಾಗ್ ಪದ್...
25-01-25 11:10 pm
ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮ ಸೈಟ್ ಹಂಚಿಕೆ ; ಮುಡಾ...
25-01-25 11:00 pm
Padma Shri awards 2025, Karnataka: ಪದ್ಮಶ್ರೀ ಪ...
25-01-25 09:58 pm
Vijayendra, B L Santosh: ರಾಜ್ಯ ಬಿಜೆಪಿ ಬಣ ಸಂಘರ...
25-01-25 06:17 pm
26-01-25 09:37 pm
HK News Desk
ಅಕ್ಬರ್, ಔರಂಗಜೇಬ್ ಬಗ್ಗೆ ಓದುತ್ತೇವೆ, ನಮ್ಮದೇ ವೀರರ...
26-01-25 01:20 pm
ಧ್ವನಿವರ್ಧಕಗಳ ಬಳಕೆ ಯಾವುದೇ ಧರ್ಮದ ಅತ್ಯಗತ್ಯ ಭಾಗವಲ...
25-01-25 11:48 am
ಪರಾಟ ತಿಂದು ಸಿಕ್ಕಿಬಿದ್ದ ನಟ ಸೈಫ್ ಆಲಿ ಖಾನ್ ಹಲ್ಲೆ...
21-01-25 11:02 pm
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
26-01-25 08:18 pm
Mangalore Correspondent
Journalist Guruvappa Balepuni, Mangalore: 'ಬಡ...
26-01-25 07:51 pm
Mangalore, Crime, Court: 2016ರಲ್ಲಿ ವೃದ್ಧ ದಂಪತ...
25-01-25 07:00 pm
Anand Kateel, Yakshagana, Accident Mangalore:...
25-01-25 05:05 pm
Mangalore Kotekar bank robbery, News Update:...
25-01-25 05:03 pm
26-01-25 11:22 pm
Mangaluru Correspondent
Mysuru Prostitution, Crime: ಮೈಸೂರಿನಲ್ಲಿ ಥೈಲ್ಯ...
26-01-25 06:08 pm
Karwar Court, Rape, Crime: ಮದುವೆಯಾಗುವುದಾಗಿ ನಂ...
26-01-25 05:07 pm
St Joseph Vaz church Mudipu, Theft, Mangalore...
25-01-25 10:57 pm
Kotekar bank robbery, Gold recovery, Update:...
24-01-25 10:27 pm