ಹೆಚ್ಚಿನ ಕೊಲೆ ಕೃತ್ಯಗಳಲ್ಲಿ ಬಿಜೆಪಿಯವರೇ ಇದ್ದಾರೆ, ಕೊಲೆ ಹಿಂದಿನ ಪಿತೂರಿದಾರರಿಗೆ ಶಿಕ್ಷೆಯಾದರೆ, ಕೊಲೆ ರಾಜಕೀಯ ನಿಲ್ಲುತ್ತದೆ ; ರಮಾನಾಥ ರೈ

17-07-23 04:29 pm       Mangalore Correspondent   ಕರಾವಳಿ

ಕರಾವಳಿಯಲ್ಲಿ ಆಗಿರುವ ಎಲ್ಲ ಕೊಲೆ ಪ್ರಕರಣಗಳಲ್ಲೂ ಬಿಜೆಪಿ ಪಕ್ಷದ ಕಾರ್ಯಕರ್ತರು ಆರೋಪಿಗಳಿದ್ದಾರೆ. ಕೊಲೆ ಪ್ರಕರಣದ ಹಿಂದಿನ ಪಿತೂರಿದಾರರು ಯಾರಿದ್ದಾರೆಂದು ಪತ್ತೆಹಚ್ಚಿ ಅಂಥವರಿಗೆ ಶಿಕ್ಷೆ ಆಗಬೇಕು.

ಮಂಗಳೂರು, ಜುಲೈ 17: ಕರಾವಳಿಯಲ್ಲಿ ಆಗಿರುವ ಎಲ್ಲ ಕೊಲೆ ಪ್ರಕರಣಗಳಲ್ಲೂ ಬಿಜೆಪಿ ಪಕ್ಷದ ಕಾರ್ಯಕರ್ತರು ಆರೋಪಿಗಳಿದ್ದಾರೆ. ಕೊಲೆ ಪ್ರಕರಣದ ಹಿಂದಿನ ಪಿತೂರಿದಾರರು ಯಾರಿದ್ದಾರೆಂದು ಪತ್ತೆಹಚ್ಚಿ ಅಂಥವರಿಗೆ ಶಿಕ್ಷೆ ಆಗಬೇಕು. ಆಗ ಮಾತ್ರ ಈ ರೀತಿಯ ಕೊಲೆ ರಾಜಕೀಯ, ಅದರಿಂದ ಬೇಳೆ ಬೇಯಿಸುವ ಕೃತ್ಯ ನಿಲ್ಲುತ್ತದೆ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈಗ ನಡೆಯುತ್ತಿರುವ ಕೊಲೆಗಳಿಗೆಲ್ಲ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆರೋಪ ಮಾಡುತ್ತಾರೆ. ಕರಾವಳಿಯಲ್ಲಿ ಕೋಮು ದ್ವೇಷ ಹರಡಿಸಲು ಕಡಿಯಿರಿ, ಬಡಿಯಿರಿ ಎಂದು ಹೇಳಿ ಪ್ರಚೋದನಕಾರಿ ಹೇಳಿಕೆ ಕೊಟ್ಟವರು ಯಾರೆಂದು ಜನರಿಗೆ ಗೊತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವ ಕೊಲೆ ಕೃತ್ಯಗಳಲ್ಲಿ ಹೆಚ್ಚಿನವರು ಬಿಜೆಪಿಯವರೇ ಇದ್ದಾರೆ. ಫಾಜಿಲ್, ಮಸೂದ್, ಜಲೀಲ್, ಹರೀಶ್ ಪೂಜಾರಿ, ಅಶ್ರಫ್ ಹೀಗೆ ಯಾರೆಲ್ಲ ಕೋಮು ದ್ವೇಷಕ್ಕೆ ಬಲಿಯಾಗಿದ್ದಾರೋ ಅಂಥ ಪ್ರಕರಣಗಳಲ್ಲಿ ಬಿಜೆಪಿಯವರೇ ಆರೋಪಿಗಳು. ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಆರೋಪಿಯಿಲ್ಲ. ಆದರೂ ಕೊಲೆಗಳನ್ನು ಕಾಂಗ್ರೆಸಿನವರ ತಲೆಗೆ ಕಟ್ಟುವ ಕೆಲಸ ಮಾಡ್ತಿದ್ದಾರೆ.

what are the Congress 5 guarantee and congress 5 guarantee implementation |  ಕಾಂಗ್ರೆಸ್‌ನ ʼ5ʼ ಗ್ಯಾರಂಟಿಗಳು ಯಾವುವು ಅಂತ ನಿಮ್ಗೆ ಗೊತ್ತಾ..! ಇಲ್ಲಿವೆ ನೋಡಿ  Karnataka Assembly Election News in Kannada

ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರಿಂದ ಬಿಜೆಪಿ ನಾಯಕರು ನೀರಿನಿಂದ ತೆಗೆದ ಮೀನಿನಂತಾಗಿದ್ದಾರೆ. ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತಿದ್ದು, ಗ್ಯಾರಂಟಿ ಸ್ಕೀಮ್ ಜಾರಿಗೆ ತರುತ್ತಿರುವುದನ್ನು ಕಂಡು ವಿಲ ವಿಲ ಒದ್ದಾಡುತ್ತಿದ್ದಾರೆ. ಅಕ್ಕಿ ಕೊಡುವುದಕ್ಕೆ ಅಡ್ಡಗಾಲಿಟ್ಟು ಯೋಜನೆ ಜಾರಿಯಾಗದಂತೆ ಪ್ರಯತ್ನ ಮಾಡಿದರು. ಈಗ ರಾಜಕೀಯ ಮಾಡುವುದಕ್ಕೂ ಏನೂ ವಿಚಾರ ಇಲ್ಲದೆ, ಲೋಕಸಭೆ ಚುನಾವಣೆ ಹತ್ತಿರ ಬರುವಾಗ ಅಪಪ್ರಚಾರ ಮಾಡಿ, ಜನರನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇನ್ಮುಂದೆ ಹೆಣ ಮುಂದಿಟ್ಟು ರಾಜಕೀಯ ಮಾಡುವುದನ್ನು ಬಿಡಬೇಕು. ಈ ರೀತಿಯ ಕೊಲೆ ಪ್ರಕರಣಗಳಲ್ಲಿ ಹಿಂದೆ ಯಾರಿದ್ದಾರೆ, ಪಿತೂರಿ ಮಾಡಿದ್ದು ಯಾರೆಂದು ಪತ್ತೆ ಮಾಡಲು ಎಸ್ಐಟಿ ರಚನೆ ಆಗಬೇಕು. ಈ ಬಗ್ಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಒತ್ತಾಯಿಸುತ್ತೇನೆ ಎಂದು ಹೇಳಿದರು. ರಾಜಕೀಯ ಲಾಭಕ್ಕಾಗಿ ಕೊಲೆ ಮಾಡುವ ಸ್ಥಿತಿ ಇರುವುದರಿಂದ ಕರಾವಳಿಯಲ್ಲಿ ಜನರು ಎಚ್ಚರ ಇರಬೇಕು. ಎಲ್ಲ ಧರ್ಮದ ಜನರು ರಾತ್ರಿ ವೇಳೆ ತಿರುಗಾಡುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಮೊನ್ನೆ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತ ಕೊಲೆ ನಡೆಸಿದ್ದರಲ್ಲಿಯೂ ಬಿಜೆಪಿ ಕಾರ್ಪೊರೇಟರ್ ತಮ್ಮನೆಂದು ತನಿಖೆಯಲ್ಲಿ ತಿಳಿದುಬಂದಿತ್ತು ಎಂದು ರಮಾನಾಥ ರೈ ಹೇಳಿದರು.   

BJP state President Kateel owns responsibility for defeat | Deccan Herald

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮುಖ್ಯಮಂತ್ರಿ ಬಗ್ಗೆ ಆರೋಪ ಮಾಡಿದ್ದು ಅವರ ಮೇಲೆ ಕ್ರಮ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಶಾಂತಿ ಕದಡಿದಲ್ಲಿ ಸರಕಾರ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತದೆ. ಮುಖ್ಯಮಂತ್ರಿ ಬಗ್ಗೆ ಆರೋಪ ಮಾಡಿದ್ದಕ್ಕೆ ಏನು ಮಾಡಬೇಕೆಂದು ಚಿಂತನೆ ಮಾಡುತ್ತೇವೆ ಎಂದರು. ಬೆಳ್ತಂಗಡಿ, ಕಡಬ, ಸುಳ್ಯದಲ್ಲಿ ಚುನಾವಣೆ ಸೋಲಿನ ಬಳಿಕ ಕಾರ್ಯಕರ್ತರು ಗಲಾಟೆ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಜಿಲ್ಲಾ ಕಾಂಗ್ರೆಸ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಲು ಬಯಸುತ್ತೇನೆ. ಈ ರೀತಿಯ ನಡೆಯನ್ನು ಒಪ್ಪುವುದಿಲ್ಲ. ಪಕ್ಷ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡುತ್ತೇನೆ ಎಂದರು. ಸುದ್ದಿಗೋಷ್ಟಿಯಲ್ಲಿ ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಗಣೇಶ್ ಪೂಜಾರಿ ಮತ್ತಿತರರು ಇದ್ದರು.

Mangalore, Many BJP members involved in killings slams Congress leader Ramanth Rai.