Mangalore Leopard moray eel fish found at Surathkal: ಸುರತ್ಕಲ್ ಬಳಿ ಅಪರೂಪದ ಈಲ್‌ ಮೀನು ಪತ್ತೆ ; ವಿಷಯುಕ್ತ ಮೀನಿನ ಬಗ್ಗೆ ಕುತೂಹಲ 

18-07-23 11:05 am       Mangalore Correspondent   ಕರಾವಳಿ

ಸಮುದ್ರದ ಆಳದಲ್ಲಿ ವಾಸಿಸುವ ಅಪರೂಪದ ಮೀನು ಒಂದನ್ನು ಸುರತ್ಕಲ್ ಸಮೀಪದ ಗುಡ್ಡೆಕೊಪ್ಲ ಬಳಿ ಮೀನುಗಾರರು ಪತ್ತೆ ಮಾಡಿದ್ದಾರೆ. 

ಮಂಗಳೂರು, ಜುಲೈ 18: ಸಮುದ್ರದ ಆಳದಲ್ಲಿ ವಾಸಿಸುವ ಅಪರೂಪದ ಮೀನು ಒಂದನ್ನು ಸುರತ್ಕಲ್ ಸಮೀಪದ ಗುಡ್ಡೆಕೊಪ್ಲ ಬಳಿ ಮೀನುಗಾರರು ಪತ್ತೆ ಮಾಡಿದ್ದಾರೆ. 

ಕನ್ನಡದಲ್ಲಿ ಅರೋಳಿ ಮೀನು ಎಂದು ಕರೆಯಲ್ಪಡುವ ಅಪರೂಪದ ಮೀನು ಇದಾಗಿದ್ದು ತುಳು ಭಾಷೆಯಲ್ಲಿ ಇದನ್ನು ಮರಞ್ಞ ಮೀನು ಎಂದು ಕರೆಯುತ್ತಾರಂತೆ. ಲಿಯೊಪೋರ್ಡ್‌ ಹನಿಕೋಂಬ್‌ ಈಲ್‌ ಎಂದು ಈ ಮೀನಿಗೆ ವೈಜ್ಞಾನಿಕ ಹೆಸರಿದೆಯಂತೆ. 

ಮೇಲ್ನೋಟಕ್ಕೆ ಅಕ್ವೇರಿಯಂನಲ್ಲಿ ಸಾಕುವ ಮೀನಿನಂತೆ ಕಂಡಬರುತ್ತಿದ್ದು ಹಾವಿನಂತೆ ಉದ್ದಕ್ಕೆ ಬೆಳೆಯುತ್ತದೆ. ಸ್ವಲ್ಪ ಮಟ್ಟಿಗೆ ವಿಷಪೂರಿತ ಆಗಿರುವುದರಿಂದ ಸ್ಥಳೀಯರು ಇದನ್ನು ತಿನ್ನುವುದಿಲ್ಲ. ಹೆಚ್ಚಾಗಿ ಕಲ್ಲುಗಳ ಎಡೆಯಲ್ಲಿ ಇದು ವಾಸವಿರುತ್ತದೆ. ಸಣ್ಣ ಮೀನುಗಳನ್ನು ಭಕ್ಷಿಸುತ್ತಾ ಕಲ್ಲುಗಳ ಎಡೆಯಲ್ಲಿ ಬದುಕುತ್ತದೆ. ಗುಡ್ಡಕೊಪ್ಲ ಬಳಿಯ ಸಮುದ್ರ ತೀರದಲ್ಲಿ ಮೂರ್‍ನಾಲ್ಕು ಅಡಿ ಉದ್ದದ ಮೀನು ಪತ್ತೆಯಾಗಿದ್ದು, ಸ್ಥಳೀಯರಾದ ಅನುಪಮ ಶಿವರಾಂ ಅವರು ಗಮನಿಸಿ ಮಾಹಿತಿ ನೀಡಿದ್ದಾರೆ.

ಮಲ್ಪೆಯ ಮೀನುಗಾರರ ಪ್ರಕಾರ ಮಲ್ಪೆ ಬಳಿ ಇದು ಅಪರೂಪಕ್ಕೆ ಗಾಳಕ್ಕೆ ಬೀಳುತ್ತದೆ. ಕಲ್ಲು ಬಂಡೆಗಳಿರುವಲ್ಲಿ ಮಾತ್ರ ಈ ಮೀನು ಇರುತ್ತದೆ. ಹಲ್ಲುಗಳು ಹರಿತವಾಗಿರುತ್ತವೆ ಎಂದಿದ್ದಾರೆ.

Mangalore Leopard moray eel fish found at Surathkal. Meoray eel is said to be a rare fish.