ಬ್ರೇಕಿಂಗ್ ನ್ಯೂಸ್
19-07-23 12:07 pm Mangalore Correspondent ಕರಾವಳಿ
ಮಂಗಳೂರು, ಜುಲೈ 19: ತುಳು ಭಾಷೆಯನ್ನು ರಾಜ್ಯ ಭಾಷೆಯಾಗಿಸುವ ವಿಚಾರದಲ್ಲಿ ಪುತ್ತೂರಿನ ಶಾಸಕ ಅಶೋಕ್ ರೈ ವಿಧಾನಸಭೆಯಲ್ಲಿ ತುಳುವಿನಲ್ಲೇ ಮಾತನಾಡಿ ಕರಾವಳಿ ಜನರ ಗಮನ ಸೆಳೆದಿದ್ದಾರೆ. ತುಳು ಭಾಷೆಯ ಬಗ್ಗೆ ಈಗಾಗಲೇ ಡಾ.ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಅದನ್ನು ಸರಕಾರ ಸದನದಲ್ಲಿ ಮಂಡಿಸಬೇಕಾಗಿದೆ ಎಂದು ಹೇಳಿದ್ದಾರೆ.
ಈ ವೇಳೆ, ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮಂಗಳೂರಿನವರೇ ಆಗಿರುವುದರಿಂದ ಅವರನ್ನುದ್ದೇಶಿಸಿ ಅಶೋಕ್ ರೈ ತುಳುವಿನಲ್ಲೇ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಈ ಸಂದರ್ಭದಲ್ಲಿ ಖಾದರ್ ಕೂಡ ತುಳುವಿನಲ್ಲೇ ಪ್ರತಿಕ್ರಿಯೆ ನೀಡಿದ್ದು, ಸಚಿವರು ಇದಕ್ಕೆ ಉತ್ತರ ನೀಡಲಿದ್ದಾರೆ ಎಂದರು. ಇದೇ ವೇಳೆ, ಅಶೋಕ್ ರೈ ಪ್ರಸ್ತಾಪಕ್ಕೆ ದನಿಗೂಡಿಸಿದ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ತುಳುವಿನಲ್ಲೇ ಮಾತನಾಡಲು ಮುಂದಾಗಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಸಚಿವ ಬಸವರಾಜ ರಾಯರೆಡ್ಡಿ, ತುಳು ಸಂವಿಧಾನಕ್ಕೆ ಸೇರ್ಪಡೆಯಾಗಿಲ್ಲ. ಹೀಗಾಗಿ ನೀವೆಲ್ಲ ತುಳುವಿನಲ್ಲಿ ಮಾತನಾಡಿದ್ದು ನಮಗೆ ಅರ್ಥವೂ ಆಗಲ್ಲ. ಜೊತೆಗೆ ಇಲ್ಲಿ ದಾಖಲೀಕರಣ ಮಾಡುವುದಕ್ಕೂ ಸಾಧ್ಯವಾಗಲ್ಲ ಎಂದರು.
ಸ್ಪೀಕರ್ ಖಾದರ್, ವೇದವ್ಯಾಸ್ ಬಳಿ ನೀವು ಕನ್ನಡದಲ್ಲಿಯೇ ಮಾತನಾಡುವಂತೆ ಸೂಚಿಸಿದರು. ಮೋಹನ ಆಳ್ವರ ವರದಿಯನ್ನು ಕಳೆದ ಫೆಬ್ರವರಿ ತಿಂಗಳಲ್ಲಿ ಸರಕಾರಕ್ಕೆ ಸಲ್ಲಿಸಲಾಗಿದೆ. ಕಾನೂನು ಇಲಾಖೆಯಿಂದ ಅನುಮತಿ ಪಡೆಯಲಾಗಿದ್ದು, ಇತರೇ ಇಲಾಖೆಗಳ ವರದಿ ಪಡೆಯುವ ಅಗತ್ಯವಿಲ್ಲ. ವರದಿಯನ್ನು ಕ್ಯಾಬಿನೆಟ್ ಸಭೆಯಲ್ಲಿಟ್ಟು ಜಾರಿಗೊಳಿಸುವುದಷ್ಟೇ ಬಾಕಿ ಎಂದು ವೇದವ್ಯಾಸ ಕಾಮತ್ ಹೇಳಿದರು. ನಿಮ್ಮ ಸರಕಾರ ಇದ್ದಾಗ ಯಾಕೆ ಅದನ್ನು ಮಾಡಿಲ್ಲ ಎಂದು ಸ್ಪೀಕರ್ ಖಾದರ್ ಟಾಂಗ್ ಇಟ್ಟರು.
ಅಮೆರಿಕದಲ್ಲಿದೆ ತುಳು ಭಾಷೆಗೆ ಸ್ಥಾನ
ವಿಚಾರ ಮಂಡನೆ ಮುಂದವರಿಸಿದ ಶಾಸಕ ಅಶೋಕ್ ರೈ, ಪಶ್ಚಿಮ ಬಂಗಾಳದಲ್ಲಿ 12 ಭಾಷೆಗಳನ್ನು ರಾಜ್ಯದ ಅಧಿಕೃತ ಭಾಷೆಗಳನ್ನಾಗಿ ಮಾಡಲಾಗಿದೆ. ಕೇರಳದಲ್ಲಿ ಹತ್ತು ಭಾಷೆಗಳನ್ನು ಅಧಿಕೃತ ಭಾಷೆ ಎಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲಿ ತುಳುವನ್ನು ಎರಡನೇ ಅಧಿಕೃತ ಭಾಷೆಯಾಗಿ ಮಾಡುವುದಕ್ಕೆ ಹಣಕಾಸಿನ ಅಗತ್ಯ ಬರುವುದಿಲ್ಲ. ತುಳು ಭಾಷೆಯನ್ನು ಅಮೆರಿಕದಲ್ಲಿ ಪರಿಗಣಿಸಲಾಗಿದ್ದು, ಅಲ್ಲಿನ ಯುನಿವರ್ಸಿಟಿ ಒಂದರಲ್ಲಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು 132 ಭಾಷೆಗಳಲ್ಲಿ ಅವಕಾಶ ಇದೆ. ಅದರಲ್ಲಿ 17 ಭಾರತೀಯ ಭಾಷೆಗಳಿದ್ದು, ಆ ಪೈಕಿ ತುಳು ಕೂಡ ಒಂದು. ಹಾಗಾಗಿ, ರಾಜ್ಯದಲ್ಲಿ ತುಳುವನ್ನು ಅಧಿಕೃತ ಭಾಷೆಯಾಗಿ ಮಾಡಿದರೆ, ನಾವು ತುಳುವಿನಲ್ಲೇ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಸಿಗುತ್ತದೆ. ನೀವು ಆಕ್ಷೇಪಿಸುವ ಪ್ರಮೇಯ ಬರುವುದಿಲ್ಲ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮೋಹನ ಆಳ್ವರ ಸಮಿತಿ ವರದಿ ನೀಡಿರುವುದು ಸಿಕ್ಕಿದೆ. ಅದನ್ನು ಪರಿಶೀಲಿಸಿ ಬೇರೆ ಇಲಾಖೆಗಳ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿದರು. ಒಟ್ಟಿನಲ್ಲಿ ಇಬ್ಬರು ಶಾಸಕರು ಮತ್ತು ಸ್ಪೀಕರ್ ವಿಧಾನಸಭೆ ಅಧಿವೇಶನದಲ್ಲಿ ಮೊದಲ ಬಾರಿಗೆ ತುಳುವಿನಲ್ಲೇ ಚರ್ಚೆ ಮಾಡಿರುವುದು ಕುತೂಹಲಕ್ಕೀಡು ಮಾಡಿತು.
ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆ ಮಾಡಬೇಕು ಎನ್ನುವುದು ಕರಾವಳಿ ಭಾಗದ ಜನರ ಒಕ್ಕೊರಲ ಬೇಡಿಕೆ. ಆದರೆ, ಈ ಹಿಂದಿನ ಸರಕಾರದಲ್ಲಿಯೂ ಸಚಿವ ಸುನಿಲ್ ಕುಮಾರ್ ಅವರಿಗೆ ಈ ಬಗ್ಗೆ ಮನವಿ ನೀಡಿದ್ದರೂ, ಚುನಾವಣೆ ಘೋಷಣೆಗೆ ಎರಡು ತಿಂಗಳಿರುವಾಗ ತಜ್ಞರ ಸಮಿತಿ ರಚಿಸಿದ್ದರು. ಆನಂತರ, ತಜ್ಞರ ಸಮಿತಿ ತರಾತುರಿಯಲ್ಲಿ ವರದಿಯನ್ನೂ ಸಲ್ಲಿಸಿತ್ತು. ಕೊನೆಗೆ, ಸದನದಲ್ಲಿ ಮಂಡಿಸಲು ಮತ್ತು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರಕ್ಕೆ ಬರಲು ಬಿಜೆಪಿ ಸರಕಾರ ವಿಫಲವಾಗಿತ್ತು.
The Legislative Assembly on Tuesday witnessed some lighter moments when Speaker U.T. Khader and Puttur MLA Ashok Kumar Rai interacted in Tulu for some time. They were stopped by some members, who said that the Assembly Secretariat did not understand Tulu and would find it difficult to record the interaction.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm