ಬ್ರೇಕಿಂಗ್ ನ್ಯೂಸ್
21-07-23 05:24 pm Dinesh Nayak, Mangaluru Correspondent ಕರಾವಳಿ
ಉಳ್ಳಾಲ, ಜು.21: ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಒಡೆತನದ ಉಳ್ಳಾಲದ ಅಬ್ಬಕ್ಕ ಸರ್ಕಲ್ ನಲ್ಲಿ ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಕಟ್ಟಡದ ನಾಲ್ಕನೇ ಅಂತಸ್ತಿನಿಂದ ಕೂಲಿ ಕಾರ್ಮಿಕ ಕೆಳಗೆ ಬಿದ್ದು ಕೈ, ಕಾಲು ಮುರಿದುಕೊಂಡ ಘಟನೆ ನಡೆದಿದ್ದು, ಸರಕಾರಿ ಆಸ್ಪತ್ರೆಗೆ ಚಿತ್ರೀಕರಣಕ್ಕೆ ತೆರಳಿದ್ದ ಮಾಧ್ಯಮ ವರದಿಗಾರನ ಮೊಬೈಲ್ ಕಸಿಯಲು ಮುಂದಾಗಿರುವ ಘಟನೆ ನಡೆದಿದೆ.
ಬಿಹಾರ ಮೂಲದ ಶಾಹಿದ್ (25) ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡ ಕೂಲಿ ಕಾರ್ಮಿಕ. ಅಬ್ಬಕ್ಕ ಸರ್ಕಲ್ ನಲ್ಲಿದ್ದ ಶಿಥಿಲಗೊಂಡಿದ್ದ ಕಟ್ಟಡವನ್ನ ಎಂಎಲ್ಸಿ ಫಾರೂಕ್ ಖರೀದಿಸಿದ್ದು ಶಿಥಿಲ ಕಟ್ಟಡಕ್ಕೆ ಮಹಡಿಗಳನ್ನ ಹಾಕಲು ಮುಂದಾಗಿದ್ದರು. ಕಟ್ಟಡಕ್ಕೆ ಒಂದಡಿ ಪಾರ್ಕಿಂಗ್ ವ್ಯವಸ್ಥೆಯಾಗಲೀ, ಸೆಟ್ ಬ್ಯಾಕ್ ಆಗಲಿ ಇಲ್ಲ. ಸಾರ್ವಜನಿಕರ ದೂರಿನ ಮೇರೆಗೆ ಹಿಂದಿನ ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಕಟ್ಟಡ ಕಾಮಗಾರಿಯನ್ನ ತಡೆದಿದ್ದರು. ಆದರೆ ಕೋಟಿ ಕುಳ ಫಾರೂಕ್ ತನ್ನೆಲ್ಲ ಪವರ್ ಬಳಸಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೂ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿದ್ದಾರೆ.
ನಿಯಮ ಮೀರಿ ಕಟ್ಟುತ್ತಿರುವ ಕಟ್ಟಡದ ಕಾಮಗಾರಿಯಲ್ಲಿ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸದೇ ದುಡಿಮೆಯಲ್ಲಿ ತೊಡಗಿದ್ದ ಕಾರ್ಮಿಕ ಶಾಹಿದ್ ಕಟ್ಟಡದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ.
ವರದಿಗಾರನ ಮೊಬೈಲ್ ಕಸಿಯಲು ಬಂದ ಫಾರೂಕ್ ಬಂಟ !
ಕಟ್ಟಡದಿಂದ ಕೆಳಗೆ ಬಿದ್ದ ಶಾಹಿದ್ ನನ್ನ ಮೊದಲಿಗೆ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಿದ್ದು ಈ ವೇಳೆ ಆಸ್ಪತ್ರೆಗೆ ಚಿತ್ರೀಕರಣಕ್ಕೆ ತೆರಳಿದ್ದ ಹೆಡ್ ಲೈನ್ ಕರ್ನಾಟಕ ವರದಿಗಾರ ದಿನೇಶ್ ನಾಯಕ್ ಅವರನ್ನ ಎಂಎಲ್ಸಿ ಫಾರೂಕ್ ಬಂಟನೋರ್ವ ತಡೆದಿದ್ದು, ಇಲ್ಲಿ ಚಿತ್ರೀಕರಣ ನಡೆಸಲು ಅವಕಾಶ ಇಲ್ಲ. ತೆಗೆದ ಫೋಟೊಗಳನ್ನ ಡಿಲೀಟ್ ಮಾಡುವಂತೆ ಮೊಬೈಲ್ ಕಸಿಯಲು ಮುಂದಾಗಿದ್ದಾನೆ. ಮೊಬೈಲ್ ಕಸಿಯಲು ಬಂದವ ಲತೀಫ್ ಎಂದು ತಿಳಿದು ಬಂದಿದೆ.
ಸರಕಾರಿ ಆಸ್ಪತ್ರೆಯಲ್ಲಿ ಚಿತ್ರೀಕರಣ ಮಾಡಬೇಡ ಅನ್ನಲು ನೀನ್ಯಾರು ಅಂತ ವರದಿಗಾರ ಮರು ಪ್ರಶ್ನಿಸಿದಾಗ ಲತೀಫ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಗಾಯಾಳು ಕಾರ್ಮಿಕನನ್ನ ಬೇರೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಜನಪ್ರತಿನಿಧಿಯಾಗಿರುವ ಬಿ.ಎಂ. ಫಾರೂಕ್ ಅವರೇ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮ ಕಟ್ಟಡ ಕಟ್ಟುತ್ತಿರುವ ಬಗ್ಗೆ ಹೆಡ್ ಲೈನ್ ಕರ್ನಾಟಕ ಈ ಹಿಂದೆಯೇ ವರದಿ ಮಾಡಿತ್ತು. ಶಾಸಕನ ಹಣ ಬಲದ ಮುಂದೆ ಸ್ಥಳೀಯ ಉಳ್ಳಾಲದ ನಗರಾಡಳಿತವೂ ಮಂಡಿಯೂರಿದೆ. ಬಡವರು ಒಂದು ಮನೆ ಕಟ್ಟಲು ಡೋರ್ ನಂಬರ್ ಕೇಳಿದರೆ ಹಣ ಕೇಳುವ ಲಜ್ಜೆಗೆಟ್ಟ ಅಧಿಕಾರಿಗಳು ನಗರಸಭೆಯಲ್ಲಿ ಬಡ್ತಿ ಪಡೆದು ರಾಜ್ಯಭಾರ ಮಾಡುತ್ತಿದ್ದು ಇದಕ್ಕೆಲ್ಲ ಸಪೋರ್ಟ್ ಇದ್ದಾರೆಂ ಆರೋಪ ಕೇಳಿಬಂದಿದೆ.
A labourer slips and falls from MLC B M Farooq's unauthorised building in Ullal, Mangalore. Supervisor threatens Headline Karnataka Ullal reporter to delete videos that were shot.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
20-07-25 10:35 pm
Mangalore Correspondent
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm