ಬ್ರೇಕಿಂಗ್ ನ್ಯೂಸ್
23-07-23 07:20 pm Mangalore Correspondent ಕರಾವಳಿ
ಉಳ್ಳಾಲ, ಜು.23: ಒಂದು ಕೈಲಿ ಮೊಬೈಲ್ ನೋಡ್ಕೊಂಡೇ ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ತಿರುಗಿಸುತ್ತ ಸಿಟಿ ಬಸ್ಸನ್ನ ಓಡಿಸುತ್ತಿದ್ದ ಚಾಲಕನ ನಿರ್ಲಕ್ಷ್ಯವನ್ನ ಬಸ್ ಪ್ರಯಾಣಿಕರೋರ್ವರು ವೀಡಿಯೋ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಮಂಗಳೂರಿನಿಂದ ತಲಪಾಡಿ ನಡುವೆ ಓಡಾಟ ನಡೆಸುವ 42 ರೂಟ್ ಸಂಖ್ಯೆಯ "ಸೈಂಟ್ ಆಂಟನಿ" ಸಿಟಿ ಬಸ್ಸಿನ ಚಾಲಕ ನಿರ್ಲಕ್ಷ್ಯದಿಂದ ಬಸ್ಸು ಚಲಾಯಿಸಿದ್ದಾನೆ. ಭಾನುವಾರ ಮಧ್ಯಾಹ್ನದ ವೇಳೆ ಪ್ರಯಾಣಿಕರು ತುಂಬಿದ್ದ ಬಸ್ಸು ಮಂಗಳೂರಿನಿಂದ ತಲಪಾಡಿಗೆ ಸಾಗುತ್ತಿದ್ದ ವೇಳೆ ಚಾಲಕ ಮೊಬೈಲನ್ನ ನೋಡ್ಕೊಂಡೇ ಒಂದು ಕೈಯಲ್ಲೇ ಸ್ಟೇರಿಂಗನ್ನ ತಿರುಗಿಸಿ ಬಸ್ಸು ಚಲಾಯಿಸಿದ್ದಾನೆ. ಬಸ್ಸಿನ ಎದುರಿನ ಕ್ಯಾಬಿನ್ ಸೀಟಲ್ಲಿ ಕುಳಿತುಕೊಂಡಿದ್ದ ಪ್ರಯಾಣಿಕರೋರ್ವರು ಚಾಲಕನ ನಡೆಯಿಂದ ಕುಪಿತಗೊಂಡಿದ್ದು ಜಪ್ಪಿನಮೊಗರುವಿಗೆ ಬಸ್ಸು ತಲುಪಿದಾಗ ತನ್ನ ಮೊಬೈಲಲ್ಲಿ ಅಜಾಗರೂಕತೆಯ ಚಾಲನೆಯನ್ನ ವೀಡಿಯೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.
ಚಾಲಕನನ್ನ ನಂಬಿಯೇ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ನಂಬಿಕಸ್ಥ ಚಾಲಕನೇ ಈ ರೀತಿ ಯಾರ ಗೊಡವೆ ಇಲ್ಲದೆ ಮೊಬೈಲನ್ನ ನೋಡಿಕೊಂಡು ಬಸ್ಸು ಚಲಾಯಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಚಾಲನೆಯಲ್ಲಿ ಮೊಬೈಲ್ ಬಳಸಿದರೆ ಅಂಥವರ ಡ್ರೈವಿಂಗ್ ಲೈಸೆನ್ಸ್ ರದ್ದು ಪಡಿಸುವ ಹಕ್ಕು ಆರ್ ಟಿಓ ಅಧಿಕಾರಿಗಳಿಗೆ ಇದೆ. ಇಂತಹ ಬೇಜವ್ದಾರಿ ಚಾಲಕರ ಡ್ರೈವಿಂಗ್ ಲೈಸನ್ಸ್ ರದ್ದು ಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
St Antony Travels Route No. 42 bus driver in #Mangalore uses his #mobile while operating the #bus for kilometres through the city without thinking twice about endangering the lives of the passengers. One of the travellers films the trip. #BreakingNews
— Headline Karnataka (@hknewsonline) July 23, 2023
@compolmlr @alokkumar6994 pic.twitter.com/yqswLeETDk
St Antony Travels Route No. 42 bus driver in Mangalore uses his mobile while operating the bus for kilometres through the city without thinking twice about endangering the lives of the passengers. One of the travellers films the trip.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm