ಬ್ರೇಕಿಂಗ್ ನ್ಯೂಸ್
24-07-23 08:20 pm Mangalore Correspondent ಕರಾವಳಿ
ಮಂಗಳೂರು, ಜುಲೈ 24: ಒಂದು ಕೈಲಿ ಮೊಬೈಲ್ ಹಿಡ್ಕೊಂಡು ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ತಿರುಗಿಸುವ ಸಿಟ್ ಬಸ್ ಚಾಲಕರು ಮಂಗಳೂರಿನಲ್ಲಿ ಹಲವರಿದ್ದಾರೆ. ಈ ಬಗ್ಗೆ ಪ್ರಯಾಣಿಕರು ಚಾಲಕರು, ನಿರ್ವಾಹಕರ ಜೊತೆ ವಾಗ್ವಾದ ನಡೆಸಿದ್ದೂ ಇದೆ. ತಲಪಾಡಿಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ಮೊಬೈಲ್ ಹಿಡ್ಕೊಂಡು ನಿರ್ಲಕ್ಷ್ಯದಿಂದ ಡ್ರೈವಿಂಗ್ ಮಾಡ್ತಿದ್ದ ಚಾಲಕನ ವಿಡಿಯೋ ಸೆರೆಯಾಗಿತ್ತು.
ಈ ಬಗ್ಗೆ ಹೆಡ್ ಲೈನ್ ಕರ್ನಾಟಕ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಗದಾಪ್ರಹಾರ ಮಾಡಿದ್ದಾರೆ. ಬಸ್ಸನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಜಪ್ತಿ ಮಾಡಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಬಸ್ ಚಾಲಕನ ಚಾಲನಾ ಪರವಾನಗಿಯನ್ನು ರದ್ದುಪಡಿಸುವಂತೆ ಆರ್ಟಿಓ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಬಸ್ ಚಾಲಕ ತನ್ನ ಆಂಡ್ರಾಯ್ಡ್ ಮೊಬೈಲನ್ನು ನೋಡುತ್ತ ಸ್ಟೇರಿಂಗ್ ತಿರುಗಿಸುತ್ತಾ, ಬಸ್ಸಿನಲ್ಲಿದ್ದ ಪ್ರಯಾಣಿಕರ ಜೀವದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಪೊಲೀಸ್ ಕಮಿಷನರ್ ತುರ್ತು ಕ್ರಮ ಜರುಗಿಸುವ ಮೂಲಕ ನಿರ್ಲಕ್ಷ್ಯದ ಚಾಲನೆ ಮಾಡುವ ಬಸ್ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ಮಂಗಳೂರು- ಮೂಡುಬಿದ್ರೆ ಸಂಚರಿಸುವ ಎಕ್ಸ್ ಪ್ರೆಸ್ ಬಸ್ಸುಗಳ ಚಾಲಕರು ಕೂಡ ಈ ರೀತಿ ಮೊಬೈಲ್ ನೋಡುತ್ತ ಬಸ್ ಚಲಾಯಿಸುವ ಬಗ್ಗೆ ಇತ್ತೀಚೆಗೆ ಪ್ರಯಾಣಿಕರು ದೂರಿಕೊಂಡಿದ್ದರು. ವಿಡಿಯೋ, ಫೋಟೋ ಸಾಕ್ಷ್ಯ ಇದ್ದರೆ, ಕ್ರಮ ಜರುಗಿಸಬಹುದೆಂದು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದರು. ಇದೀಗ ತಮ್ಮ ಮೊಬೈಲನ್ನೇ ಚಾಲಕನ ನಿರ್ಲಕ್ಷ್ಯದ ವಿರುದ್ಧ ಪ್ರಯಾಣಿಕರು ಪ್ರಯೋಗಿಸಿದ್ದು ವಿಡಿಯೋ ಸೆರೆ ಹಿಡಿದು ಜಾಲತಾಣವನ್ನೇ ಮಾಧ್ಯಮ ಮಾಡಿಕೊಂಡಿದ್ದಾರೆ. ಬಸ್, ಇನ್ನಿತರ ವಾಹನಗಳಲ್ಲಿ ಮೊಬೈಲಿನಲ್ಲಿ ಮಾತನಾಡುತ್ತ, ನಿರ್ಲಕ್ಷ್ಯದಿಂದ ಸಾಗುವ ವಾಹನ ಚಾಲಕರಿಗೆ ಪೊಲೀಸ್ ಕಮಿಷನರ್ ನೀಡಿರುವ ಪ್ರಹಾರ ಬೆನ್ನಿಗೆ ಬರೆ ಎಳೆದಂತಾಗಿದೆ.
We appreciate #Mangalore City #Police Commissioner #KuldeepJains prompt action against the bus driver of route no. 42 for using his mobile device for kilometres while operating the vehicle. The bus has been seized, and DL to be cancelled. @alokkumar6994 @compolmlr pic.twitter.com/Pt19pkrh4I
— Headline Karnataka (@hknewsonline) July 24, 2023
Headline Karnataka Impact, Antony travels Bus seized after bus driver seen using mobile phone, Licence to be cancelled. Headline Karnataka reported news where a bus driver was seen using a mobile phone while driving route no. 42 bus to Talapady from Mangalore. Police Commissioner Kuldeep Jain, seized the bus right away, he stated that the bus driver's licence would be suspended.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm