ಬ್ರೇಕಿಂಗ್ ನ್ಯೂಸ್
27-07-23 04:21 pm Mangalore Correspondent ಕರಾವಳಿ
ಮಂಗಳೂರು, ಜುಲೈ 27: ಮಣಿಪುರದಲ್ಲಿ ಮೂರು ತಿಂಗಳಿನಿಂದ ಗಲಭೆ, ಹೆಣ್ಮಕ್ಕಳ ಅತ್ಯಾಚಾರ, ಕೊಲೆಗಳಾಗುತ್ತಿವೆ. ಕೇವಲ 33 ಲಕ್ಷ ಜನಸಂಖ್ಯೆ ಇರುವ ಸಣ್ಣ ರಾಜ್ಯದಲ್ಲಿ ಗಲಭೆ ಹತ್ತಿಕ್ಕಲು ಮೋದಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷ ಒತ್ತಾಯಿಸಿದರೆ, ಮೋದಿ ಹೆದರುತ್ತಿದ್ದಾರೆ. ಹೆಣ್ಮಕ್ಕಳನ್ನು ಅಲ್ಲಿ ಬೆತ್ತಲೆ ಮೆರವಣಿಗೆ ಮಾಡಿದರೂ ರಾಷ್ಟ್ರೀಯ ಮಹಿಳಾ ಆಯೋಗ, ಮಕ್ಕಳ ಆಯೋಗ, ಮಾನವ ಹಕ್ಕು ಆಯೋಗದವರು ಯಾಕೆ ಸುಮ್ಮನಿದ್ದಾರೆ ಎಂದು ಮಾಜಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ, ಕಾಂಗ್ರೆಸ್ ನಾಯಕಿ ಕೃಪಾ ಅಮರ್ ಆಳ್ವ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮಣಿಪುರದಲ್ಲಿ ಎ.19ರಿಂದ ಬೆಂಕಿ ಹೊತ್ತುಕೊಂಡಿದೆ. ಕುಕ್ಕೀಸ್ ಬುಡಕಟ್ಟು ಪಂಗಡಕ್ಕೆ ಮೇಥೀಸ್ ಸಮುದಾಯವನ್ನು ಸೇರಿಸಿದ್ದಕ್ಕೆ ಗಲಭೆ ಆರಂಭ ಆಗಿತ್ತು. ಇದೀಗ ಇಬ್ಬರು ಹೆಣ್ಮಕ್ಕಳನ್ನು ಬೆತ್ತಲೆ ಮೆರವಣಿಗೆ ಮಾಡಿರುವುದನ್ನು ನೋಡಿ ಇಡೀ ಪ್ರಪಂಚ ಬೆಚ್ಚಿಬಿದ್ದಿದೆ. ಅದರಲ್ಲಿ ಒಬ್ಬರು 42 ಮಹಿಳೆ ಕಾರ್ಗಿಲ್ ಯೋಧನ ಪತ್ನಿ. ಅಧಿಕೃತ ಮಾಹಿತಿ ಪ್ರಕಾರ, 150 ಜನರ ಹತ್ಯೆಯೆಂದು ಹೇಳುತ್ತಿದ್ದಾರೆ. ಆದರೆ ಮುನ್ನೂರಕ್ಕೂ ಹೆಚ್ಚು ಜನರು ಪ್ರಾಣ ಕಳಕೊಂಡಿದ್ದಾರೆ. ಎಲ್ಲವನ್ನೂ ಮುಚ್ಚಿ ಹಾಕುತ್ತಿದ್ದಾರೆ. ಅಲ್ಲಿ ಇಂಟರ್ನೆಟ್ ಬ್ಯಾನ್ ಮಾಡಿದ್ದು ವಿಡಿಯೋಗಳು ಹೊರಗೆ ಬಾರದಂತೆ ಮಾಡಿದ್ದಾರೆ. ಮೂರು ತಿಂಗಳ ಹಿಂದಿನ ವಿಡಿಯೋ ಈಗ ಹೊರಗೆ ಬಂದಿದೆ.
ಅಲ್ಲಿನ ಮಕ್ಕಳು ಮೂರು ತಿಂಗಳಿನಿಂದ ಶಾಲೆಗೆ ಹೋಗುತ್ತಿಲ್ಲ, ಭಯದಲ್ಲಿದ್ದಾರೆ. ಇಡೀ ರಾಜ್ಯದಲ್ಲಿ ಅರಾಜಕ ಸ್ಥಿತಿಯಿದೆ. ಒಂದೊತ್ತಿನ ಊಟ ಮಾಡಿ ಜನ ಬದುಕುತ್ತಿದ್ದಾರೆ. ಯಾಕೆ ಇದರ ಬಗ್ಗೆ ರಾಷ್ಟ್ರೀಯ ಮಕ್ಕಳ ಆಯೋಗದ ಸದಸ್ಯರು ಮಾತನಾಡುತ್ತಿಲ್ಲ. ಮಹಿಳಾ ಆಯೋಗದ ಸ್ಮೃತಿ ಇರಾನಿ, ಖುಷ್ಬು ಸುಂದರ್ ಯಾಕೆ ಅಲ್ಲಿಗೆ ಹೋಗಿಲ್ಲ. ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿಕೆ ಕೊಡುವುದಕ್ಕೂ ಹೆದರುತ್ತಿದ್ದಾರೆ ಯಾಕೆ ? ಪ್ರತಿಪಕ್ಷಗಳ ಪ್ರಶ್ನೆಗಳ ಬಗ್ಗೆ ಮೋದಿ ಭಯ ಪಡುತ್ತಿದ್ದಾರೆಯೇ?ಸಂತ್ರಸ್ತರು ಕುಕ್ಕಿ ಬುಡಕಟ್ಟು ಸಮುದಾಯದ ಅತ್ಯಂತ ಕೆಳ ವರ್ಗದ ಜನರೆಂದು ಅಸಡ್ಡೆಯೇ ಎಂದು ಕೃಪಾ ಅಮರ್ ಆಳ್ವ ಪ್ರಶ್ನೆ ಮಾಡಿದ್ದಾರೆ.
ಅಮೆರಿಕದಲ್ಲಿ ಮೋದಿ ಹೋದಾಗ ಮಣಿಪುರದ ವಿಚಾರದ ಬಗ್ಗೆ ಪ್ರತಿಭಟನೆ ನಡೆದಿತ್ತು. ಅದು ಹೆಡ್ ಲೈನ್ ಆಗದ ಹಾಗೆ ನೋಡಿಕೊಂಡಿದ್ದರು. ಮಣಿಪುರದ ಗಲಭೆ ನೋಡಿದಾಗ ಗೋಧ್ರಾ ಗಲಭೆ ನೆನಪಿಗೆ ಬರುತ್ತದೆ. ಇಬ್ಬರು ಹೆಣ್ಮಕ್ಕಳ ಬೆತ್ತಲೆ ಮೆರವಣಿಗೆ, ಎಂಟು ರೇಪ್, ಅದಕ್ಕೂ ಹೆಚ್ಚು ದೌರ್ಜನ್ಯ ಆಗಿದೆ ಎಂದು ಹೇಳಿದ ಕೃಪಾ ಆಳ್ವ, ಉಡುಪಿ ಘಟನೆಯಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ, ಆದ್ರೂ ಆಯೋಗದ ಸದಸ್ಯರು ಓಡಿ ಬಂದಿದ್ದಾರೆ. ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಿದ್ದಾರೆ. ಇಲ್ಲಿ ಬಿಜೆಪಿ ಸರ್ಕಾರ ಇದ್ದರೆ ಮಹಿಳಾ ಆಯೋಗ ಬರುತ್ತಿರಲಿಲ್ಲ. ಮಣಿಪುರದಲ್ಲಿ ಬಿಜೆಪಿ ಸರ್ಕಾರ ಇದೆಯೆಂದು ಎಲ್ಲವನ್ನೂ ಮುಚ್ಚಿ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅಮೆರಿಕ, ಫ್ರಾನ್ಸ್ ಎಲ್ಲ ಕಡೆ ಹೋದರು. ಆದರೆ ಮಣಿಪುರದ ಘಟನೆ ಬಗ್ಗೆ ಒಂದು ಆತ್ಮವಿಶ್ವಾಸದ ಮಾತು ಹೇಳಿಲ್ಲ. ಸಂಸತ್ತಿನಲ್ಲಿ ಮಾತನಾಡುವುದಕ್ಕು ನಿರಾಕರಿಸಿದ್ದಾರೆ. ಚೀನಾ ಊಹಿಸಲು ಆಗದಷ್ಟು ದೇಶದೊಳಗೆ ಬಂದು ಮನೆ, ಕಟ್ಟಡ ಕಟ್ಟುತ್ತಿದ್ದಾರೆ. ಆದರೂ ಮೋದಿ ಮೌನವಾಗಿದ್ದಾರೆ. ಯುಕೆ ಪಾರ್ಲಿಮೆಂಟಿನಲ್ಲಿ ಮಣಿಪುರದ ವಿಚಾರ ಚರ್ಚೆಯಾಗಿದೆ. ಜಾಗತಿಕ ಮಟ್ಟದಲ್ಲಿ ಚರ್ಚೆಯಲ್ಲಿದೆ. ಅಮಿತ್ ಷಾ ಅಲ್ಲಿ ಹೋಗಿ ಭರವಸೆ ನೀಡಿ ಬಂದರೂ ಒಂದನ್ನೂ ಈಡೇರಿಸಿಲ್ಲ. ಮೋದಿ ಮಾತ್ರ ಬಾಯಿಗೆ ಪ್ಲಾಸ್ಟರ್ ಹಾಕಿ ಕೂತಿದ್ದಾರೆ ಎಂದು ಟೀಕಿಸಿದರು.
ನೀವು ಉಡುಪಿ ಘಟನೆಯನ್ನು ಖಂಡಿಸುತ್ತೀರಾ ಎಂಬ ಪ್ರಶ್ನೆಗೆ, ಫಾರೆನ್ಸಿಕ್ ಪರೀಕ್ಷೆಯಲ್ಲಿ ರಿಪೋರ್ಟ್ ಬರಲಿ, ಅದರಲ್ಲಿ ಸಾಬೀತಾದರೆ ಖಂಡಿಸುತ್ತೇನೆ ಎಂದು ಹೇಳಿದರು.
Manipur Video Of Women Paraded Naked, why National Commission for Women is silent, Kripa Amar Alva slams Union govt in Mangalore. Two women were paraded naked in Manipur. It is really a shameful incident. The Prime Minister spoke for only a minute on the incident,” said KPCC general secretary Kripa Amar Alva.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm