ಬ್ರೇಕಿಂಗ್ ನ್ಯೂಸ್
04-08-23 10:56 pm Giridhar Shetty, Mangaluru Corresopondent ಕರಾವಳಿ
ಮಂಗಳೂರು, ಆಗಸ್ಟ್ 4: ಮಂಗಳೂರಿನ ಕಂಕನಾಡಿ ಜಂಕ್ಷನ್ ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಯೋಜನೆಗೆ ಪ್ರಧಾನಿ ಮೋದಿ ಶಿಲಾನ್ಯಾಸ ಮಾಡಲಿದ್ದಾರೆಂದು ಸಂಸದ ನಳಿನ್ ಕುಮಾರ್ ಫ್ಲೆಕ್ಸ್ ಹಾಕಲಾಗಿದೆ. ಅಲ್ಲದೆ, ಇದಕ್ಕಾಗಿ 19 ಕೋಟಿ ರೂಪಾಯಿ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಕಟಣೆ ನೀಡಿದ್ದಾರೆ. ವಾಸ್ತವ ಏನಂದ್ರೆ, ಅಮೃತ್ ಭಾರತ್ ಯೋಜನೆಯಡಿ ದೇಶಾದ್ಯಂತ 508 ರೈಲ್ವೇ ನಿಲ್ದಾಣಗಳನ್ನು ಗುರುತಿಸಿ ಆದರ್ಶ ರೈಲು ನಿಲ್ದಾಣ ಮಾಡುವ ಉದ್ದೇಶದಿಂದ ಒಂದಷ್ಟು ಸೌಲಭ್ಯಗಳನ್ನು ನೀಡಲು ಪ್ರಧಾನಿ ಮೋದಿ ಆಗಸ್ಟ್ 6ರಂದು ಅಡಿಗಲ್ಲು ಹಾಕಲಿದ್ದಾರೆ.
2023ರ ಬಜೆಟ್ ಘೋಷಣೆಯಲ್ಲಿ ಅಮೃತ್ ಭಾರತ್ ಯೋಜನೆಯಡಿ 1275 ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವುದಾಗಿ ಘೋಷಣೆ ಮಾಡಲಾಗಿತ್ತು. ಅದರಲ್ಲಿ ಕರ್ನಾಟಕದ 56 ರೈಲು ನಿಲ್ದಾಣಗಳನ್ನು ಗುರುತಿಸಲಾಗಿದೆ. ಆ ಪೈಕಿ ಸದ್ಯಕ್ಕೆ 13 ರೈಲು ನಿಲ್ದಾಣಗಳ ಅಭಿವೃದ್ಧಿಗೆ ಶಿಲಾನ್ಯಾಸ ಮಾಡಲಾಗುತ್ತಿದ್ದು, ಅದರಲ್ಲಿ ಮೈಸೂರು, ಮಂಗಳೂರು ಜಂಕ್ಷನ್ ರೈಲ್ವೇ ಸ್ಟೇಶನ್ ಒಳಗೊಂಡಿದೆ. ಉಳಿದಂತೆ, ಹಾಸನ ಜಿಲ್ಲೆಯ ಅರಸೀಕೆರೆ, ಗುಲ್ಬರ್ಗ ಜಿಲ್ಲೆಯ ವಾಡಿ, ಕಲುಬುರ್ಗಿ ಜಂಕ್ಷನ್, ಶಹಾಬಾದ್, ದಾವಣಗೆರೆ ಜಿಲ್ಲೆಯ ಹರಿಹರ, ಬೀದರ್, ಗದಗ, ಕೊಪ್ಪಳ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಜಂಕ್ಷನ್, ಬೆಳಗಾವಿ ಜಿಲ್ಲೆಯ ಘಟಪ್ರಭಾ, ಧಾರವಾಡ ಜಿಲ್ಲೆಯ ಆಲ್ನಾವರ ಮತ್ತು ಗೋಕಾಕ್, ಬಳ್ಳಾರಿ ಜಿಲ್ಲೆಯ ಬಳ್ಳಾರಿ ಸ್ಟೇಶನ್ ಒಳಗೊಂಡಿದೆ. ಒಟ್ಟು ಕರ್ನಾಟಕದಲ್ಲಿ 312 ಕೋಟಿ ಮೊತ್ತದ ಯೋಜನೆಯನ್ನು 13 ರೈಲು ನಿಲ್ದಾಣಗಳಿಗೆ ಹಂಚಲಾಗಿದೆ.
ಮಂಗಳೂರಿನಲ್ಲಿ ಕಂಕನಾಡಿ ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ಅನ್ನುವ ಎರಡು ರೈಲು ನಿಲ್ದಾಣ ಇದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ರೈಲು ನಿಲ್ದಾಣಗಳು ಓಬಿರಾಯನ ಕಾಲದ ವ್ಯವಸ್ಥೆಯಲ್ಲೇ ಇವೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಒಂದಷ್ಟು ಆಧುನಿಕತೆಗೆ ತೆರೆದುಕೊಂಡಿದ್ದರೂ, ಕಂಕನಾಡಿ ಜಂಕ್ಷನ್ ಅದೇ ಹಳೆ ಮಾದರಿಯಲ್ಲೇ ಇದೆ. ಅಲ್ಲದೆ, ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯೇ ಸರಿಯಿಲ್ಲ. ದಿನವೂ ಸಾವಿರಾರು ವಾಹನಗಳು ರೈಲು ನಿಲ್ದಾಣಕ್ಕೆ ಬಂದು ಹೋಗುವ ರಸ್ತೆಯೇ ಕಿರಿದಾಗಿದ್ದು, ಅದನ್ನೂ ಸರಿಪಡಿಸಲು ಆಗಿಲ್ಲ. ಕಂಕನಾಡಿ ರೈಲು ನಿಲ್ದಾಣದಲ್ಲಿ ಹಿಂದಿನಿಂದಲೂ ಎರಡು ಪ್ಲಾಟ್ ಫಾರಂ ಇದ್ದು, ಅವು ಬಿಟ್ಟರೆ ಬೇರೆ ಯಾವುದೇ ಪ್ರಗತಿ ಆಗಿಲ್ಲ.
ಮಂಗಳೂರಿನ ಈ ಎರಡು ರೈಲು ನಿಲ್ದಾಣಗಳೂ ಪಾಲ್ಘಾಟ್ ದಕ್ಷಿಣ ರೈಲ್ವೇ ವಿಭಾಗಕ್ಕೆ ಬರುತ್ತಿದ್ದು ಅದನ್ನು ಪ್ರತ್ಯೇಕಗೊಳಿಸಿ ಕರ್ನಾಟಕದ ಇತರೇ ರೈಲು ನಿಲ್ದಾಣಗಳ ವ್ಯಾಪ್ತಿಯ ನೈರುತ್ಯ ವಿಭಾಗಕ್ಕೆ ಸೇರಿಸಬೇಕೆನ್ನುವುದು ಹಳೆಯ ಬೇಡಿಕೆ. ಅದನ್ನು ಈಡೇರಿಸುವ ಬಗ್ಗೆ ರೈಲ್ವೇ ಬಳಕೆದಾರರು ಸುದೀರ್ಘ ಕಾಲದಿಂದ ಒತ್ತಡ ಹಾಕುತ್ತ ಬಂದಿದ್ದಾರೆ. ಕೇರಳದ ಪಾಲ್ಘಾಟ್ ವಿಭಾಗದಲ್ಲಿ ಬರುವುದರಿಂದ ಮಂಗಳೂರಿನಲ್ಲಿ ಅತಿ ಹೆಚ್ಚು ಮಲಯಾಳಿ ನೌಕರರೇ ಇದ್ದಾರೆ. ಇವೆಲ್ಲ ಕೊರತೆ, ಸಮಸ್ಯೆಗಳಿದ್ದರೂ, 2014ರಿಂದಲೂ ಮಂಗಳೂರಿನ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಘೋಷಣೆಯನ್ನು ಆಗಿಂದಾಗ್ಗೆ ಸಂಸದರು ಮಾಡುತ್ತ ಬಂದಿದ್ದರು.
ಇದೀಗ ದೇಶಾದ್ಯಂತ ಆಗುತ್ತಿರುವ ರೈಲ್ವೇ ಯೋಜನೆಗಳಲ್ಲಿ ಇದೂ ಒಂದು ಎಂಬಂತೆ ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣಕ್ಕೆ ಆಧುನಿಕತೆಯ ಸ್ಪರ್ಶ ನೀಡಲು ಕೇಂದ್ರ ಸರಕಾರ ಮುಂದಾಗಿದ್ದನ್ನು ವಿಶ್ವದರ್ಜೆಯ ರೈಲು ನಿಲ್ದಾಣ ಎಂದು ಬಿಂಬಿಸಿ ಸಂಸದ ನಳಿನ್ ಕುಮಾರ್ ಹೆಸರಲ್ಲಿ ಫ್ಲೆಕ್ಸ್ ಹಾಕಲಾಗಿದೆ. ಬರೀ 19 ಕೋಟಿ ಮೊತ್ತದ ಯೋಜನೆಯಲ್ಲಿ ವೈಫೈ ಸಂಪರ್ಕ, ವಿಕಲಾಂಗರಿಗೆ ಬಳಸಲು ಎಸ್ಕಲೇಟರ್, ಎಸಿ ವಿಶ್ರಾಂತಿ ಕೊಠಡಿ ಬರಲಿದೆ. ಉಳಿದಂತೆ ಹಳೆ ಕಾಲದ ಕಟ್ಟಡಕ್ಕೆ ಯಾವುದೇ ಹೊಸತನ ಬರಲ್ಲ. ಹಾಗಿದ್ದರೂ, ಚುನಾವಣೆ ಕಾಲದಲ್ಲಿ ಜನರ ಕಣ್ಣಿಗೆ ಮಣ್ಣೆರಚಲು ವಿಶ್ವದರ್ಜೆಯ ನಿಲ್ದಾಣ ಮಾಡುತ್ತಾರೆಂದು ಹೇಳಿ ಫ್ಲೆಕ್ಸ್, ಪೋಸ್ಟರ್ ಹಾಕಿ ಪ್ರಚಾರ ಪಡೆಯುತ್ತಿದ್ದಾರೆ. ಅಂದಹಾಗೆ, ಇದೇ ಅಮೃತ್ ಭಾರತ್ ಯೋಜನೆಯಡಿ ಮಂಗಳೂರು ಸೆಂಟ್ರಲ್, ಜಂಕ್ಷನ್, ಬಂಟ್ವಾಳ ಮತ್ತು ಸುಬ್ರಹ್ಮಣ್ಯ ರೈಲು ನಿಲ್ದಾಣವೂ ಮೇಲ್ದರ್ಜೆಗೇರಲಿದೆ.
ವಂದೇ ಭಾರತ್ ರೈಲು ಕರಾವಳಿಗೆ ಯಾಕಿಲ್ಲ ?
ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಕೇರಳ, ತಮಿಳುನಾಡಿನಲ್ಲಿ ವಂದೇ ಭಾರತ್ ರೈಲು ಜಾರಿಗೆ ಬಂದಿದೆ. ರಾಜ್ಯದ ಕರಾವಳಿಯಲ್ಲಿ ಕೊಂಕಣ ರೈಲ್ವೇಯಲ್ಲಿ ವಿದ್ಯುದ್ದೀಕರಣ ಆಗಿದ್ದರೂ, ವಂದೇ ಭಾರತ್ ರೈಲು ಯೋಜನೆ ಬಂದಿಲ್ಲ. ಸಂಸದ ನಳಿನ್ ಕುಮಾರ್ ಇತ್ತೀಚೆಗೆ ಪುತ್ತೂರಿನಲ್ಲಿ ಮಂಗಳೂರು- ಬೆಂಗಳೂರು ವಂದೇ ಭಾರತ್ ರೈಲು ಬರುವುದಕ್ಕೆ ಅರಣ್ಯ ಪ್ರದೇಶ ತೊಡಕಾಗಿದೆ. ಘಟ್ಟದ ಪ್ರದೇಶದಲ್ಲಿ ವಿದ್ಯುದೀಕರಣ ಆಗದೇ ಇರುವುದರಿಂದ ಸಮಸ್ಯೆ ಆಗಿದೆ ಎಂದಿದ್ದರು. ಮಂಗಳೂರು – ಬೆಂಗಳೂರು ಘಟ್ಟ ಪ್ರದೇಶವನ್ನು ಹತ್ತಿ ಹೋಗಬೇಕಿದ್ದರಿಂದ ವಿದ್ಯುತ್ತಿನಲ್ಲಿ ಚಲಿಸುವ ಎಕ್ಸ್ ಪ್ರೆಸ್ ರೈಲು ಸಾಗಲಾಗದು.
ಆದರೆ ಮಂಗಳೂರಿನಿಂದ ಗೋವಾಕ್ಕೆ, ಮುಂಬೈಗೆ ಅಥವಾ ಕೇರಳದ ಕಡೆಗೆ ವಿದ್ಯುತ್ ರೈಲನ್ನು ತರುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಈಗಾಗಲೇ ಮಂಗಳೂರಿನಿಂದ 50 ಕಿಮೀ ದೂರದ ಕೇರಳದ ಕಾಸರಗೋಡಿನಿಂದ ತಿರುವನಂತಪುರಕ್ಕೆ ವಂದೇ ಭಾರತ್ ರೈಲು ಚಲಿಸುತ್ತದೆ. ಉಳಿದೆಲ್ಲ ರೈಲುಗಳು ಕೇರಳ, ತಮಿಳುನಾಡಿಗೆ ಮಂಗಳೂರಿನಿಂದ ಹೊರಡುತ್ತಿದ್ದರೆ, ಇದು ಮಾತ್ರ ಪಕ್ಕದ ಕಾಸರಗೋಡಿನಲ್ಲಿ ಯಾಕೆ ಕೊನೆ ನಿಲ್ದಾಣ ಮಾಡಿಬಿಟ್ಟಿದೆ ಅನ್ನುವುದು ಯಕ್ಷಪ್ರಶ್ನೆ. ಈ ಭಾಗದ ಸಂಸದರ ನಿರ್ಲಕ್ಷ್ಯ, ಜನಪರ ಕಾಳಜಿ ರಹಿತ ನಡೆಗಳೇ ಕಾರಣ ಅಂದರೆ ತಪ್ಪಾಗಲಾರದು.
Prime Minister Narendra Modi will lay the foundation stone for a world-class project to upgrade Kankanady Junction railway station in Mangaluru. "I would like to congratulate Prime Minister Narendra Modi and Railway Minister Ashwini Vaishnaw for providing Rs 508 crore for this purpose. In fact, prime minister Narendra Modi will lay the foundation stone on August 6 to identify railway stations across the country under the Amrut Bharat scheme and provide some facilities to make them adarsh railway stations.
05-03-25 01:58 pm
Bangalore Correspondent
BJP MLAs Assembly adjourned: ಸದನ ಕಲಾಪ ನೇರ ಪ್ರ...
05-03-25 01:47 pm
DK Shivakumar, Mangalore Night life, Cabinet:...
04-03-25 07:20 pm
Kasaragod, Manjeshwar Accident: ಮಂಜೇಶ್ವರ ; ಹೆ...
04-03-25 01:37 pm
Bird Flu, Eggs: ಹಕ್ಕಿಜ್ವರ ಪೀಡಿತ ಕೋಳಿ, ಮೊಟ್ಟೆ...
04-03-25 12:14 pm
05-03-25 05:38 pm
HK News Desk
14ನೇ ಮಗುವಿಗೆ ತಂದೆಯಾದ ಉದ್ಯಮಿ ಎಲಾನ್ ಮಸ್ಕ್ ! ನಾಲ...
01-03-25 10:39 pm
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿ...
28-02-25 08:11 pm
05-03-25 10:58 pm
Mangalore Correspondent
Diganth Missing case, Assembly: ಸದನದಲ್ಲಿ ಪ್ರತ...
05-03-25 09:30 pm
Mangalore Jail, Food Poisoning: ಮಂಗಳೂರಿನ ಜೈಲಿ...
05-03-25 07:44 pm
Mangalore Director Vijay Kumar Kodialbail, Sh...
05-03-25 03:05 pm
Vitla blast, Mangalore, SP: ವಿಟ್ಲ ಬಳಿಯ ಕಲ್ಲಿನ...
04-03-25 10:58 pm
05-03-25 10:24 am
HK News Desk
ಆನ್ಲೈನ್ ಗೇಮ್ ಚಟ ; ಆಡದಂತೆ ವಿರೋಧಿಸಿದ್ದಕ್ಕೆ ತಂದ...
04-03-25 03:12 pm
ಹರ್ಯಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಕೊಲೆಗೈದು ಸೂಟ...
03-03-25 01:51 pm
Bangalore Falcon Ponzi scheme, Fraud: ಇನ್ ವಾಯ...
02-03-25 06:37 pm
Bangalore KR Puram Police, Bike Robbery, Crim...
01-03-25 05:54 pm