ಬ್ರೇಕಿಂಗ್ ನ್ಯೂಸ್
15-08-23 08:29 pm Giridhar Shetty, Mangaluru ಕರಾವಳಿ
ಮಂಗಳೂರು, ಆಗಸ್ಟ್ 15: ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮತ್ತು ಬಲ್ಮಠದ ಜಿಲ್ಲಾಧಿಕಾರಿ ಬಂಗಲೆಯ ಎದುರಲ್ಲಿ ಪ್ರತಿವರ್ಷ ಸ್ವಾತಂತ್ರ್ಯೋತ್ಸವ ದಿನ ಜಿಲ್ಲಾಧಿಕಾರಿಯೇ ಧ್ವಜಾರೋಹಣ ನಡೆಸುತ್ತಾರೆ. ಬ್ರಿಟಿಷರ ಕಾಲದಿಂದ ಬಳುವಳಿಯಾಗಿ ಬಂದಿರುವ ಈ ಕಟ್ಟಡಗಳನ್ನು ಸ್ಮಾರಕವಾಗಿ ಉಳಿಸಿಕೊಳ್ಳಲಾಗಿದೆ. ಇಷ್ಟಕ್ಕೂ ಇವೆರಡು ಕಟ್ಟಡಗಳ ಹಿನ್ನೆಲೆ, ಇತಿಹಾಸ ನೋಡಿದರೆ ಅಚ್ಚರಿಯ ಮಾಹಿತಿಗಳು ಹೊರಬರುತ್ತವೆ.
ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯಿರುವ ಹಳೆ ಜಿಲ್ಲಾಧಿಕಾರಿ ಕಚೇರಿ ಈಗ ಪಾಳು ಬಿದ್ದ ಬಂಗಲೆಯಂತಿದ್ದರೂ, ಧ್ವಜ ಸ್ತಂಭ ಇರುವ ಬಳಿಯಲ್ಲೇ ಬೃಹತ್ ಗೋಪುರ ಮಾದರಿಯ ಕಟ್ಟಡ ಇದೆ. ಅದರ ಎದುರಿನ ಕಿಂಡಿಯ ರೀತಿಯ ಭಾಗದಲ್ಲಿ ಹೀಗೆಂದು ಬರೆಯಲಾಗಿದೆ. From this village 88 men went to the Great War 1914-1919 of these 2 gave up their lives ಎಂದು ಬರೆದಿರುವುದನ್ನು ನೋಡಿದರೆ ಯುದ್ಧ ಸ್ಮಾರಕ ಅನ್ನುವುದು ಕಂಡುಬರುತ್ತದೆ. ಇದರಂತೆ, 1914ರಿಂದ 19ರ ವರೆಗೆ ನಡೆದ ಒಂದನೇ ಜಾಗತಿಕ ಮಹಾಯುದ್ಧದಲ್ಲಿ ಮಂಗಳೂರಿನ ಕಸಬಾ ಗ್ರಾಮದಿಂದ 88 ಸೈನಿಕರು ಭಾಗವಹಿಸಿದ್ದರು. ಆ ಪೈಕಿ ಇಬ್ಬರು ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಇದರ ಪ್ರತೀಕವಾಗಿ ಇಲ್ಲಿದ್ದ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದ ಈ ಭಾಗವನ್ನು ಯುದ್ಧ ಸ್ಮಾರಕ ಎನ್ನುವಂತೆ ತೋರಿಸಿದ್ದಾರೆ. ಇತಿಹಾಸ ಪುಸ್ತಕಗಳಲ್ಲಿ ಇಬ್ಬರು ಮೃತಪಟ್ಟ ಸೈನಿಕರು ಯಾರೆಂದು ಮಾಹಿತಿ ಇಲ್ಲ. ಇಂಗ್ಲಿಷ್ ನಲ್ಲಿ ಕೊಟ್ಟಿರುವ ಫಲಕದಲ್ಲಿ ಮೇಲ್ಗಡೆ, GRI ಎಂದು ಬರೆಯಲಾಗಿದ್ದು ಅದನ್ನು ಜನರಲ್ ರೆಜಿಮೆಂಟ್ ಆಫ್ ಇಂಡಿಯಾ ಎಂದಿರಬಹುದು ಎಂದು ಜಿಲ್ಲಾಡಳಿತದಿಂದ ಪ್ರಕಟಿಸಿದ ಮಂಗಳೂರು ದರ್ಶನ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. (ಮಂಗಳೂರು ದರ್ಶನ- ಸಂಪುಟ 2)
ಬ್ರಿಟಿಷರು ಆಡಳಿತಕ್ಕೂ ಬರುವ ಪೂರ್ವದಲ್ಲಿ ಈ ಪ್ರದೇಶ ಕೋಟೆಯಾಗಿತ್ತು. 1645ರಲ್ಲಿ ಈ ಭಾಗದಲ್ಲಿ ಆಳ್ವಿಕೆ ಮಾಡುತ್ತಿದ್ದ ಶಿವಪ್ಪ ನಾಯಕ ಮಂಗಳೂರು ಕೋಟೆ ಎಂಬುದಾಗಿ ಇಲ್ಲಿ ನಿರ್ಮಾಣ ಮಾಡಿದ್ದ ಎಂಬ ಉಲ್ಲೇಖ ಇದೆ. ಶಿವಪ್ಪ ನಾಯಕನ ಮರಣಾ ನಂತರ ಗೋವಾದ ಪೋರ್ಚುಗೀಸರು ದಂಡೆತ್ತಿ ಬಂದು ಈ ಕೋಟೆಯನ್ನು ವಶಕ್ಕೆ ಪಡೆದಿದ್ದರು. 1784ರಲ್ಲಿ ಹೈದರಾಲಿಯ ಬಳಿಕ ಆಳ್ವಿಕೆ ಶುರು ಮಾಡಿದ್ದ ಟಿಪ್ಪು ಸುಲ್ತಾನ್, ಮಂಗಳೂರಿನಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷರನ್ನು ಸೋಲಿಸಿ ಕೆಲವು ಕಾಲ ಇದೇ ಜಾಗದ ಮಂಗಳೂರಿನ ಕೋಟೆಯಲ್ಲಿದ್ದುಕೊಂಡು ರಾಜಾಳ್ವಿಕೆ ನಡೆಸಿದ್ದ ಅನ್ನುವ ಉಲ್ಲೇಖ ಇದೆ. 1799ರಲ್ಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ಜೊತೆಗಿನ ಯುದ್ಧದಲ್ಲಿ ಮಡಿದ ಬಳಿಕ ಮಂಗಳೂರಿನಲ್ಲಿ ಬ್ರಿಟಿಷ್ ಅಧಿಕಾರಿ ಸರ್ ಥಾಮಸ್ ಮುನ್ರೋ ಮೊದಲ ಜಿಲ್ಲಾ ಕಲೆಕ್ಟರ್ ಆಗಿ ಅಧಿಕಾರ ನಡೆಸಿದ್ದರು. ಆಗ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿ ಗೋವಾ ಗಡಿಭಾಗ ಕಾರವಾರದ ಮಾಜಾಳಿಯಿಂದ ಹಿಡಿದು ಕಾಸರಗೋಡಿನ ಮಲಬಾರು ಗಡಿಯ ತ್ರಿಕ್ಕರಿಪುರದ ವರೆಗೆ ಇತ್ತು. 1862ರಲ್ಲಿ ಬ್ರಿಟಿಷರು ಆಡಳಿತದ ಕಾರಣಕ್ಕೆ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯೆಂದು ವಿಭಜಿಸಿದ್ದರು.
ಆದರೆ, ಅಂದಿನಿಂದ ಸ್ವಾತಂತ್ರ್ಯೋತ್ತರ ಭಾರತದ ಈವತ್ತಿನ ವರೆಗೂ ಜಿಲ್ಲಾಧಿಕಾರಿ ಕಚೇರಿ ಇದೇ ಜಾಗದಲ್ಲಿದೆ. ಹದಿನೈದು ವರ್ಷಗಳ ಹಿಂದೆ ಅದೇ ಆವರಣದಲ್ಲಿ ಹೊಸತಾಗಿ ನಿರ್ಮಾಣಗೊಂಡ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ಕಚೇರಿ ವ್ಯವಹಾರಗಳು ಸ್ಥಳಾಂತರಗೊಂಡರೂ, ಕೋಟೆ ಮಾದರಿಯ ಹಳೆ ಜಿಲ್ಲಾಧಿಕಾರಿ ಕಟ್ಟಡ ಹಾಗೆಯೇ ಇದೆ. 1904-05ರಲ್ಲಿ ಜಿಲ್ಲಾ ಕಲೆಕ್ಟರ್ ಆಗಿ ಬಂದ ಸರ್ ಎಂ.ಇ.ಕೋಚ್ ಮನ್, ಮೊದಲ ಬಾರಿಗೆ ಜಿಲ್ಲೆಯ ಎಲ್ಲಾ ಜಮೀನುಗಳನ್ನು ಅಳತೆ ಮಾಡಿ ಸರ್ವೆ ನಂಬರ್ ಕೊಟ್ಟು ಪಟ್ಟಾ ಜಮೀನು, ಪರಂಬೋಕು ಸ್ಥಳವೆಂದು ವಿಂಗಡಿಸಿ ಜಮೀನು ಗುರುತಿಸಿ ಅದಕ್ಕೆ ಪ್ರತ್ಯೇಕ ಕಂದಾಯ ಪದ್ಧತಿ ಜಾರಿಗೊಳಿಸಿದ್ದರು.
ಇದೇ ಭಾಗದ ಹಳೆಯ ಜಿಲ್ಲಾ ಕಲೆಕ್ಟರ್ ಕಚೇರಿಯ ಬಲಬದಿಯಲ್ಲಿ ಎರಡು ನ್ಯಾಯಾಲಯ ಕಟ್ಟಡಗಳು ಇದ್ದವು. 1900ರ ಕಾಲದಲ್ಲಿ ಅಂದಿನ ಕಲೆಕ್ಟರ್ ಆ ಕಟ್ಟಡಗಳನ್ನು ಕೆಡವಿ ನ್ಯಾಯಾಲಯ ಕಟ್ಟಡವನ್ನು ಈಗ ಇರುವ ಶೇಡಿಗುಡ್ಡೆ ಪ್ರದೇಶದಲ್ಲಿ ಹೊಸತಾಗಿ ಸ್ಥಾಪನೆ ಮಾಡಿದ್ದರು. ಹಳೆಯ ಕೋಟೆ ಮಾದರಿಯ ಕಟ್ಟಡಗಳನ್ನು ಕೆಡವಿದ ಸಂದರ್ಭದಲ್ಲಿ ಮಹೇಶ್ವರನ ಕಂಚಿನ ಮೂರ್ತಿ ಪತ್ತೆಯಾಗಿತ್ತು. ಆಗ ಕಲೆಕ್ಟರ್ ಜೊತೆಗೆ ದಫೇದಾರ್ ಆಗಿದ್ದ ಮೋನಪ್ಪ ಅವರು ಸದ್ರಿ ಮೂರ್ತಿಯನ್ನು ಪಡೆದು ಪೂಜಿಸಲು ಆರಂಭಿಸಿದ್ದರು. ಸದ್ರಿ ಮೂರ್ತಿ ಈಗ ಅತ್ತಾವರದ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಪೂಜೆಗೊಳ್ಳುತ್ತಿದೆ. ನ್ಯಾಯಾಲಯ ಕಟ್ಟಡ ಕೆಡಹುವ ಸಂದರ್ಭದಲ್ಲಿ ಆ ಜಾಗದಲ್ಲಿ ಹಿಂದಿನ ಅರಮನೆಗೆ ಸಂಬಂಧಿಸಿದ ದೇವಸ್ಥಾನಗಳು ಇದೇ ಪ್ರದೇಶದಲ್ಲಿದ್ದವು ಅನ್ನುವುದನ್ನು ಇತಿಹಾಸಕಾರರು ಊಹಿಸಿದ್ದಾರೆ.
ಪೋರ್ಚುಗೀಸರ ಕಾಲದ ಬಂಗಲೆ
ಬಲ್ಮಠದಲ್ಲಿರುವ ಜಿಲ್ಲಾಧಿಕಾರಿಯ ಬಂಗಲೆ ಅಂದಾಜು ಐದು ಎಕರೆ ವ್ಯಾಪ್ತಿಯಲ್ಲಿದೆ. ಸುಮಾರು 250 ವರ್ಷಗಳ ಹಿಂದಿನಿಂದಲೂ ಇದೇ ಜಾಗದಲ್ಲಿ ಮಂಗಳೂರಿನ ಜಿಲ್ಲಾ ಕಲೆಕ್ಟರ್ ಆಗಿದ್ದ ಅಧಿಕಾರಿ ಇದೇ ಬಂಗಲೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಅಂದಿನಿಂದ ಈಗಿನ ವರೆಗೂ ಅದೇ ಕಟ್ಟಡ ಜಿಲ್ಲಾಧಿಕಾರಿಯ ಅರಮನೆಯಾಗಿದೆ. ಸದ್ರಿ ಕಟ್ಟಡದ ಹಂಚುಗಳನ್ನು ನೋಡಿದರೆ, ಗೋವಾದಲ್ಲಿರುವ ಹಳೆ ಕಟ್ಟಡದ ಹಂಚುಗಳನ್ನು ಹೋಲುತ್ತದೆ. ಈ ಕಟ್ಟಡದ ನೆಲಮಾಳಿಗೆಯಲ್ಲಿ ಬ್ರಿಟಿಷರ ಕಾಲದಲ್ಲಿ ವಿಚಾರಣಾ ಕೈದಿಗಳನ್ನು ಕೂಡಿ ಹಾಕಿ ಶಿಕ್ಷೆ ನೀಡುತ್ತಿದ್ದಿರಬಹುದು. ಈ ಕಟ್ಟಡವು ಪೋರ್ಚುಗೀಸರ ಕಾಲದಲ್ಲಿ ನಿರ್ಮಾಣ ಆಗಿರಬಹುದು ಎಂದು ಮಂಗಳೂರು ದರ್ಶನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಹಿಂದಿನ ಕಾಲದಲ್ಲಿ ಹತ್ತು ಎಕರೆ ವ್ಯಾಪ್ತಿಯಲ್ಲಿ ಮಂಗಳೂರಿನ ಎತ್ತರ ಪ್ರದೇಶದ ದೊಡ್ಡ ಬಂಗಲೆಯಾಗಿದ್ದ ಇಲ್ಲಿನ ಜಾಗ ಇತ್ತೀಚೆಗೆ ಸುತ್ತಮುತ್ತ ಅತಿಕ್ರಮಣಗೊಂಡು ಐದು ಎಕರೆ ವ್ಯಾಪ್ತಿಗೆ ಬಂದು ನಿಂತಿದೆ.
The Deputy Commissioner hoists the national flag in front of the old Deputy Commissioner's office and the Deputy Commissioner's bungalow in Balmath on Independence Day every year. These buildings, which have been inherited from the British era, have been preserved as monuments. After all, if you look at the background and history of these two buildings, you will get some surprising information.
22-07-25 11:10 pm
Bangalore Correspondent
GST Notices: ಜಿಎಸ್ಟಿ ತೆರಿಗೆ ನೋಟಿಸ್ ; ವ್ಯಾಪಾರಸ...
22-07-25 10:41 pm
GST Notice, Union Minister Pralhad Joshi: ರಾಜ...
22-07-25 10:30 pm
Mandya Bakery, Cake, Sealed: ಕಲರ್ ಫುಲ್ ಕೇಕ್ ನ...
22-07-25 03:02 pm
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
22-07-25 07:21 pm
HK News Desk
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
22-07-25 11:13 pm
Mangalore Correspondent
ಧರ್ಮಸ್ಥಳ ಕೇಸ್ ; ಸಹಾಯವಾಣಿ ಆರಂಭಿಸುವಂತೆ ರಾಜ್ಯ ಸರ...
22-07-25 10:57 pm
Mangalore Yathicorp AI: ಯತಿಕಾರ್ಪ್ ಸಂಸ್ಥೆಯಿಂದ...
22-07-25 09:42 pm
Mangalore Hotel Kodakkene Owner Suicide: ಹೊಟೇ...
22-07-25 01:27 pm
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
22-07-25 09:45 pm
Mangalore Correspondent
Kalaburagi Jewellery Robbery, Arrest: ಕಲಬುರಗಿ...
22-07-25 12:38 pm
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm